MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಮಾವಿನ ಹಣ್ಣು ತಿಂತಿದ್ದಂಗೆ ಹೊಟ್ಟೆ ನೋವು ಬರುತ್ತಾ? ಸರಿಯಾದ ವಿಧಾನ ಗೊತ್ತಿದ್ರೆ ನೀವೇ ರಾಜ

ಮಾವಿನ ಹಣ್ಣು ತಿಂತಿದ್ದಂಗೆ ಹೊಟ್ಟೆ ನೋವು ಬರುತ್ತಾ? ಸರಿಯಾದ ವಿಧಾನ ಗೊತ್ತಿದ್ರೆ ನೀವೇ ರಾಜ

Health Tips : ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿನಿಂದ ಹೊಟ್ಟೆ ಹಾಳಾಗೋ ಭಯವಾ? ತಿನ್ನೋ ವಿಧಾನ ಗೊತ್ತಿದ್ರೆ ನೀವೇ ರಾಜಹಣ್ಣಿನ ರಾಜ ಮಾವು. ಒಂದು ಹಣ್ಣಿಗೆಲ್ಲ ಬಾಯಿ ಕೇಳೋದಿಲ್ಲ. ಒಂದಾದ್ಮೇಲೆ ಒಂದು ಹಣ್ಣು ತಿಂದ್ರೆ ಹೊಟ್ಟೆ ಹಾಳಾಗುತ್ತೆ. ಅದಕ್ಕೆ ಪರಿಹಾರ ಏನು ಗೊತ್ತಾ? 

2 Min read
Author : Roopa Hegde
Published : May 23 2026, 05:15 PM IST
Share this Photo Gallery
  • FB
  • TW
  • Linkdin
  • Whatsapp
17
ರುಚಿಕರ ಮಾವಿನ ಹಣ್ಣು
Image Credit : Ai

ರುಚಿಕರ ಮಾವಿನ ಹಣ್ಣು

ಮಾವಿನ ಹಣ್ಣಿನ ಹೆಸರು ಹೇಳ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಮಾವಿನ ಸೀಸನ್ ಯಾವಾಗ ಬರುತ್ತೆ ಅಂತ ಕಾಯ್ತಿರುವ ಜನರಿಗೆ ಬೇಸಿಗೆ ಹಬ್ಬದ ಖುಷಿ ನೀಡುತ್ತೆ. ಪ್ರತಿ ದಿನ ಮಾವಿನ ಹಣ್ಣನ್ನು ಮನಸೋಇಚ್ಛೆ ಸೇವನೆ ಮಾಡ್ತಾರೆ. ಕೆಲವರಿಗೆ ಹಣ್ಣು ತಿನ್ನುವ ಆಸೆ ಬೆಟ್ಟದಷ್ಟಿದ್ರೂ ತಿನ್ನೋದು ಕಷ್ಟ. ಒಂದೆರಡು ಮಾವಿನ ಹಣ್ಣು ತಿನ್ನುತ್ತಿದ್ದಂತೆ ಹೊಟ್ಟೆ ನೋವು ಶುರುವಾಗುತ್ತೆ. ಹಣ್ಣು ತಿಂದ್ರೂ ಆರೋಗ್ಯ ಹದಗೆಡಬಾರದು ಎನ್ನುವವರು ಕೆಲ ಟಿಪ್ಸ್ ಫಾಲೋ ಮಾಡ್ಬೇಕು.

Add Asianetnews Kannada as a Preferred SourcegooglePreferred
27
ಹೊಟ್ಟೆ ನೋವು
Image Credit : ai

ಹೊಟ್ಟೆ ನೋವು

ಮಾವಿನಹಣ್ಣು ತಿಂದ್ಮೇಲೆ ಹೊಟ್ಟೆ ನೋವು ಬರ್ತಿದ್ದರೆ ಅದು ಮಾವಿನಹಣ್ಣಿನ ತಪ್ಪಲ್ಲ. ಬದಲಾಗಿ ನಿಮ್ಮ ಆಹಾರ ಪದ್ಧತಿ ತಪ್ಪು. ಸಾಮಾನ್ಯವಾಗಿ ಮಾವಿನಹಣ್ಣಿ ಉಷ್ಣತೆ ಗುಣ ಹೊಂದಿರುತ್ತದೆ. ಫೈಬರ್ ಮತ್ತು ನೈಸರ್ಗಿಕ ಸಕ್ಕರೆ ಅಧಿಕವಾಗಿವೆ. ಒಂದೇ ಬಾರಿಗೆ ಹೆಚ್ಚು ಮಾವಿನಹಣ್ಣನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತದೆ. ಇದಲ್ಲದೆ, ಕ್ಯಾಲ್ಸಿಯಂ ಕಾರ್ಬೈಡ್ನಂತಹ ರಾಸಾಯನಿಕಗಳನ್ನು ಮಾವಿನಹಣ್ಣನ್ನು ಹಣ್ಣಾಗಿಸಲು ಬಳಸಲಾಗುತ್ತದೆ. ಇದು ಹೊಟ್ಟೆಯ ಸೋಂಕು ಮತ್ತು ಸೆಳೆತಕ್ಕೆ ಕಾರಣವಾಗಬಹುದು.

Related Articles

Related image1
ಬಿಸಾಕುವ ಖರ್ಜೂರದ ಬೀಜದಿಂದ ಕಾಫಿ ಮಾಡೋ ಸೀಕ್ರೆಟ್ ಗೊತ್ತಾ? ಈ ಡ್ರಿಂಕ್ ಈಗ ಫುಲ್ ಟ್ರೆಂಡ್!
Related image2
ಒಗ್ಗರಣೆಗೆ ಒಂದೇ ಒಂದು ಚಮಚ ಕಡಲೆ ಹಿಟ್ಟು ಹಾಕಿ ನೋಡಿ.. ಊಟದ ರುಚಿ ಡಬ್ಬಲ್ ಆಗೋದು ಗ್ಯಾರಂಟಿ
37
ನೀರಿನಲ್ಲಿ ನೆನೆಹಾಕಿ
Image Credit : ai

ನೀರಿನಲ್ಲಿ ನೆನೆಹಾಕಿ

ಮಾವಿನಹಣ್ಣು ತಿನ್ಬೇಕು ಅನ್ನಿಸಿದ ತಕ್ಷಣ ತಿನ್ಬೇಡಿ. ಅದನ್ನು ತಿನ್ನುವ ಮೊದಲು ಕನಿಷ್ಠ 1 ರಿಂದ 2 ಗಂಟೆಗಳ ಕಾಲ ತಣ್ಣನೆಯ ನೀರಿನಲ್ಲಿ ನೆನೆಸಿ. ಇದು ಮಾವಿನಲ್ಲಿರುವ ಹೆಚ್ಚುವರಿ ಉಷ್ಣವನ್ನು ಕಡಿಮೆ ಮಾಡುತ್ತೆ. ಅಲ್ದೆ ಸಿಪ್ಪೆಯಲ್ಲಿರುವ ಹೆಚ್ಚುವರಿ ರಾಸಾಯನಿಕವನ್ನು ತೆಗೆಯುತ್ತೆ.

47
ಮಿತವಾಗಿ ಸೇವನೆ ಮಾಡಿ
Image Credit : ai

ಮಿತವಾಗಿ ಸೇವನೆ ಮಾಡಿ

ಮಾವಿನ ಹಣ್ಣು ರುಚಿಯಾಗಿದೆ ಎನ್ನುವ ಕಾರಣಕ್ಕೆ ಅದನ್ನು ಬೇಗಾಬಿಟ್ಟಿ ತಿನ್ನಬೇಡಿ. ದಿನಕ್ಕೆ ನಾಲ್ಕೈದು ಮಾವಿನ ಹಣ್ಣು ತಿನ್ನೋದು ಆರೋಗ್ಯಕ್ಕೆ ಉತ್ತಮವಲ್ಲ. ಇದು ಹೊಟ್ಟೆ ನೋವಿಗೆ ಕಾರಣವಾಗುತ್ತೆ. ದಿನಕ್ಕೆ ಒಂದು ಅಥವಾ ಎರಡು ಮಾವಿನ ಹಣ್ಣನ್ನು ಮಾತ್ರ ನೀವು ತಿನ್ನಬೇಕು.

57
ತಿನ್ನುವ ಸಮಯ
Image Credit : Asianet News

ತಿನ್ನುವ ಸಮಯ

ಮಾವಿನ ಹಣ್ಣನ್ನು ನೀವು ಸರಿಯಾದ ಸಮಯದಲ್ಲಿ ತಿನ್ನಬೇಕು. ಬೆಳಿಗ್ಗೆ ಬ್ರೇಕ್ ಫಾಸ್ಟ್ ಅಥವಾ ಮಧ್ಯಾಹ್ನ ಇಲ್ಲ ರಾತ್ರಿ ಊಟದ ನಡುವೆ ಮಾವಿನಹಣ್ಣನ್ನು ಸೇವಿಸಿ. ಮಲಗುವ ಮುನ್ನ ಮಾವಿನಹಣ್ಣನ್ನು ತಿನ್ನುವುದು ಉತ್ತಮವಲ್ಲ. ಇದು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ತೂಕ ಹೆಚ್ಚಾಗಲು ಕಾರಣವಾಗುತ್ತದೆ.

67
ಹಾಲು ಮೊಸರಿನ ಜೊತೆ ಮಾವು ಬೇಡ
Image Credit : Asianet News

ಹಾಲು ಮೊಸರಿನ ಜೊತೆ ಮಾವು ಬೇಡ

ಆಯುರ್ವೇದದ ಪ್ರಕಾರ, ಹುಳಿ ಮಾವಿನಹಣ್ಣನ್ನು ಹಾಲಿನೊಂದಿಗೆ ಬೆರೆಸಬಾರದು. ಸಂಪೂರ್ಣವಾಗಿ ಮಾಗಿದ ಮತ್ತು ಸಿಹಿಯಾದ ಮಾವಿನಹಣ್ಣನ್ನು ಶೇಕ್ ಆಗಿ ಸೇವಿಸಬಹುದು. ಇದು ದೇಹವನ್ನು ತಂಪಾಗಿಸುತ್ತದೆ. ಹುಳಿ ಮೊಸರಿನ ಜೊತೆಯೂ ನೀವು ಮಾವಿನ ಹಣ್ಣನ್ನು ತಿನ್ನಬೇಡಿ. ಇದು ಆಮ್ಲೀಯತೆಯನ್ನು ಹೆಚ್ಚಿಸುತ್ತದೆ.

77
ಹೊಟ್ಟೆ ಉಬ್ಬರಕ್ಕೆ ಹೀಗೆ ಮಾಡಿ
Image Credit : Asianet News

ಹೊಟ್ಟೆ ಉಬ್ಬರಕ್ಕೆ ಹೀಗೆ ಮಾಡಿ

ಮಾವಿನಹಣ್ಣನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಉಬ್ಬಿಕೊಂಡರೆ, ನೇರಳೆ ಹಣ್ಣನ್ನು ನೀವು ತಿನ್ನಬೇಕು. ನೇರಳೆ ಹಣ್ಣು, ಮಾವಿನ ಹಣ್ಣಿನಿಂದಾಗುವ ಹೊಟ್ಟೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅದೇ ನೇರಳೆ ಹಣ್ಣನ್ನು ನೀವು ಹೆಚ್ಚಾಗಿ ತಿಂದಿದ್ದು ಜೀರ್ಣ ಆಗ್ತಿಲ್ಲ ಎಂದಾದ್ರೆ ಆಗ ಮಾವಿನ ಹಣ್ಣು ತಿನ್ನಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಆಹಾರ
ಆರೋಗ್ಯ

Latest Videos
Recommended Stories
Recommended image1
ಬಿಸಾಕುವ ಖರ್ಜೂರದ ಬೀಜದಿಂದ ಕಾಫಿ ಮಾಡೋ ಸೀಕ್ರೆಟ್ ಗೊತ್ತಾ? ಈ ಡ್ರಿಂಕ್ ಈಗ ಫುಲ್ ಟ್ರೆಂಡ್!
Recommended image2
ಒಗ್ಗರಣೆಗೆ ಒಂದೇ ಒಂದು ಚಮಚ ಕಡಲೆ ಹಿಟ್ಟು ಹಾಕಿ ನೋಡಿ.. ಊಟದ ರುಚಿ ಡಬ್ಬಲ್ ಆಗೋದು ಗ್ಯಾರಂಟಿ
Recommended image3
ತುಪ್ಪ ತಯಾರಿಸುವಾಗ ವೀಳ್ಯದೆಲೆ ಏಕೆ ಹಾಕ್ತಾರೆ? ಅಜ್ಜಿ ಕಾಲದ ಈ ಅದ್ಭುತ ಮನೆಮದ್ದಿನ ಹಿಂದಿರುವ ರಹಸ್ಯ ಇಲ್ಲಿದೆ
Related Stories
Recommended image1
ಬಿಸಾಕುವ ಖರ್ಜೂರದ ಬೀಜದಿಂದ ಕಾಫಿ ಮಾಡೋ ಸೀಕ್ರೆಟ್ ಗೊತ್ತಾ? ಈ ಡ್ರಿಂಕ್ ಈಗ ಫುಲ್ ಟ್ರೆಂಡ್!
Recommended image2
ಒಗ್ಗರಣೆಗೆ ಒಂದೇ ಒಂದು ಚಮಚ ಕಡಲೆ ಹಿಟ್ಟು ಹಾಕಿ ನೋಡಿ.. ಊಟದ ರುಚಿ ಡಬ್ಬಲ್ ಆಗೋದು ಗ್ಯಾರಂಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved