ಈ ಆಹಾರ ತಿನ್ನೋ ಮುನ್ನ ಇರಲಿ ಎಚ್ಚರ... ಕಾಡಬಹುದು ಅನಾರೋಗ್ಯ
ನಾವು ಸೇವಿಸುವ ಪ್ರತಿಯೊಂದೂ ಆಹಾರಗಳು ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಕೆಲವೊಮ್ಮೆ ಉತ್ತಮ ಆಹಾರ ಎಂದೆನಿಸಿ ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದುದರಿಂದ ತಿನ್ನುವ ಆಹಾರದ ಮೇಲೆ ಒಂದಿಷ್ಟು ಗಮನ ಹರಿಸಿದರೆ, ಅರೋಗ್ಯ ಚೆನ್ನಾಗಿರುತ್ತದೆ. ಅಂತಹ ಯಾವೆಲ್ಲಾ ಆಹಾರಗಳನ್ನು ಸೇವಿಸ ಬಾರದು. ಮಾಡುವುದರಿಂದ ಏನಾಗುತ್ತದೆ ನೋಡೋಣ...
ಅಣಬೆ: ಅಣಬೆ ಎಲ್ಲಾ ಆರೋಗ್ಯ ಪ್ರಿಯರಿಗೆ ಮತ್ತು ಸಸ್ಯಾಹಾರಿಗಳಿಗೆ ಇಷ್ಟವಾಗುವ ತರಕಾರಿ. ಆದರೆ, ಮೊದಲೇ ಬೇಯಿಸಿದ ಅಣಬೆಯನ್ನು ಮರು ಬಿಸಿ ಮಾಡುವುದರಿಂದ ತರಕಾರಿಯ ಪೌಷ್ಟಿಕಾಂಶಗಳನ್ನು ಕೊಲ್ಲಬಹುದು.
ಮಶ್ರೂಮ್ : ಇದರಲ್ಲಿರುವ ಕಾರ್ಸಿನೋಜೆನಿಕ್ ಕಂಪೌಂಡ್ಸ್ ಕ್ಯಾನ್ಸರ್‌ಗೆ ಕಾರಣವಾಗಿದೆ. ಆದುದರಿಂದ ಇದನ್ನು ಹಸಿಯಾಗಿ ಸೇವಿಸದೇ ಚೆನ್ನಾಗಿ ಬೇಯಿಸಿದ ನಂತರ ಸೇವಿಸಿ.
ಮೈದಾ : ಮೈದಾ ದೇಹಕ್ಕೆ ಅತಿ ಮಾರಕ. ಮೈದಾದಿಂದ ಮಾಡಿದ ಆಹಾರಗಳಾದ ಬ್ರೆಡ್, ಪರೋಟಾ, ಬಿಸ್ಕೆಟ್ ಹೆಚ್ಚಾಗಿ ಸೇವಿಸಿದರೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತದೆ. ಹೊಟ್ಟೆ ಹಾಳಾಗುತ್ತದೆ
ಮೈದಾದಲ್ಲಿರುವ ಬ್ಲೀಚಿಂಗ್ ಏಜೆಂಟ್ಸ್ ರಕ್ತವನ್ನು ತೆಳ್ಳಗೆ ಮಾಡುತ್ತದೆ. ಅಲ್ಲದೆ ಹಾರ್ಟ್ ಅಟ್ಯಾಕ್ ಉಂಟಾಗುವ ಸಾಧ್ಯತೆ ಇದೆ.
ಸಕ್ಕರೆ : ಚಹಾ, ಕಾಫಿ, ಜ್ಯೂಸ್ ಹೀಗೆ ಎಲ್ಲದರಲ್ಲಿಯೂ ಹೆಚ್ಚು ಹೆಚ್ಚು ಸಕ್ಕರೆ ಬೆರೆಸಿ ಸೇವಿಸುವವರು ಗಮನಿಸಿ. ಇದನ್ನು ಸೇವನೆ ಮಾಡಿದರೆ ಗ್ಲೈಕೋಜನ್ ಪ್ರಮಾಣ ಕಡಿಮೆಯಾಗುತ್ತದೆ.
ಸಕ್ಕರೆ ಸೇವನೆಯಿಂದ ಬೊಜ್ಜು, ಆಯಾಸ, ಮೈಗ್ರೇನ್, ಅಸ್ತಮಾ ಮತ್ತು ಡಯಾಬಿಟೀಸ್ ಮೊದಲಾದ ಸಮಸ್ಯೆಗಳು ಕಾಡುತ್ತವೆ.
ತಂಪು ಪಾನೀಯ: ಇದರಲ್ಲಿ ಸಕ್ಕರೆ ಮತ್ತು ಫಾಸ್ಪೋರಸ್ ಆ್ಯಸಿಡ್ ಹೆಚ್ಚಾಗಿರುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತೆ. ಜೊತೆಗೆ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ.
ಮೊಳಕೆ ಬಂದ ಆಲೂಗಡ್ಡೆ: ಆಲೂಗಡ್ಡೆಯಲ್ಲಿ ಸಣ್ಣ ಮೊಳಕೆ ಬಂದರೆ ಮೊಳಕೆ ತೆಗೆದು ಅಡುಗೆಗೆ ಬಳಸುತ್ತೇವೆ. ಆದರೆ ಇದರಲ್ಲಿರುವ ಗ್ಲೈಕೋಆಕ್ಲೆಲಾಯಿಡ್ಸ್ ಅಂಶ ಡೈರಿಯಾ ಸಮಸ್ಯೆ , ಅಲ್ಲದೆ ತಲೆನೋವು ಮೊದಲಾದ ಸಮಸ್ಯೆಯನ್ನುಂಟು ಮಾಡುತ್ತದೆ.
ಉಪ್ಪು: ಸೋಡಿಯಂ ಅಂಶ ಹೆಚ್ಚಾಗಿರುವ ಉಪ್ಪನ್ನು ಸೇವಿಸಿದರೆ, ಹೈ ಬಿಪಿ, ಹಾರ್ಟ್ ಅಟ್ಯಾಕ್ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕ್ಯಾನ್ಸರ್ ಮತ್ತು ಆಸ್ಟಿಯೋಪೊರೋಸಿಸ್ ಸಮಸ್ಯೆಗಳು ಬರುವ ಸಾಧ್ಯತೆ ಇದೆ.