ಗೋಲ್ಗಪ್ಪಗೆ ಈ ವಿಧಾನದಿಂದ ಮನೆಯಲ್ಲೇ ಮಾಡಿ ಗರಿಗರಿ ಪುರಿ!
ಸೆವ್ ಪುರಿ, ದಹೀ ಪುರಿ ಮಸಲಾ ಪುರಿ ಅಥವಾ ಪಾನಿ ಪುರಿ ಆಗಿರಲಿ ಎಲ್ಲರ ಫೇವರೇಟ್ ಚಾಟ್. ವಿಶೇಷವಾಗಿ ಗೋಲ್ಗಪ್ಪ ಯಾ ಪಾನಿ ಪುರಿ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಹೊರಗೆ ಹೋಗಿ ನೀರು ತಿನ್ನುವುದು ತುಂಬಾ ಅಪಾಯಕಾರಿ. ಅದರಿಂದ ಹೆಚ್ಚಿನ ಜನರು ಮನೆಯಲ್ಲೇ ಪಾನಿಪುರಿ ತಯಾರಿಸಲು ಬಯಸುತ್ತಾರೆ. ಪುರಿ ಮಾಡುವಾಗ ಈ ವಿಧಾನ ಅನುಸರಿಸಿದರೆ ಮಾರುಕಟ್ಟೆಯಲ್ಲಿ ಸಿಗುವ ರೀತಿಯ ಗರಿ ಗರಿ ಪುರಿ ಮನೆಯಲ್ಲೇ ಈಸೀಯಾಗಿ ಮಾಡಬಹುದಾಗಿದೆ. ಮೈದಾ/ಗೋಧಿ ಹಿಟ್ಟು - 1 ಕಪ್ (150 ಗ್ರಾಂ), ರವೆ - 3 ಟೀಸ್ಪೂನ್ (30 ಗ್ರಾಂ), ಕರಿಯಲು ಎಣ್ಣೆ.

ಸಾಮಾನ್ಯವಾಗಿ ಗೋಲ್ಗಪ್ಪಗಳಲ್ಲಿ ಗೋಧಿ ಹಿಟ್ಟನ್ನು ಬಳಸಿ ಪುರಿ ತಯಾರಿಸಲಾಗುತ್ತದೆ. ಆದರೆ ಪುರಿ ಗರಿಗರಿಯಾಗಿ ಉಬ್ಬಲು ಅಲ್ಪ ಪ್ರಮಾಣದಲ್ಲಿ ರವೆ ಸೇರಿಸಬೇಕು.

ಒಂದು ಕಪ್ ಹಿಟ್ಟಿನಲ್ಲಿ 3 ಟೀಸ್ಪೂನ್ ರವೆ ಮಿಶ್ರಣ ಮಾಡಿ. ಈಗ ಅದಕ್ಕೆ ಎರಡು ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪುರಿ ಮಾಡಲು ಹಿಟ್ಟನ್ನು ತಯಾರಿಸಿ ಕೊಳ್ಳಿ (ಹಿಟ್ಟು ತುಂಬಾ ಗಟ್ಟಿ ಅಥವಾ ಮೃದುವಾಗಿರಬಾರದು).

ಕಲೆಸಿದ ಹಿಟ್ಟನ್ನು ಒದ್ದೆಯಾದ ಬಟ್ಟೆಯಲ್ಲಿ ಸುತ್ತಿ 30 ನಿಮಿಷಗಳ ಕಾಲ ಇರಿಸಿ.

ಇದರ ನಂತರ, ಕೈಗಳಿಗೆ ಎಣ್ಣೆ ಹಚ್ಚಿ ಹಿಟ್ಟನ್ನು ಚೆನ್ನಾಗಿ ನಾದಿ. ಈಗ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ.

ಅದನ್ನು ನಿಮ್ಮ ಕೈಯಿಂದ ಸುಮಾರು 2-3 ನಿಮಿಷಗಳ ಕಾಲ ಒತ್ತಿರಿ. ಈಗ ರೋಲಿಂಗ್ ಪಿನ್ ಸಹಾಯದಿಂದ ಪುರಿ ಆಕಾರಕ್ಕೆ ಲಟ್ಟಿಸಿ.

ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿಯಾದಾಗ, ಲಟ್ಟಿಸಿದ ಪುರಿಗಳನ್ನು ಹಾಕಿ. ಮೀಡಿಯಮ್ ಉರಿಯಲ್ಲಿ ಗೋಲ್ಡನ್ ಬಣ್ಣವಾಗುವವರೆಗೆ ಫ್ರೈ ಮಾಡಿ.

ತಿರುಗಿಸಿ ಇನ್ನೊಂದು ಬದಿಯನ್ನು 10 ಸೆಕೆಂಡುಗಳ ಕಾಲ ಕರಿದು ಎಣ್ಣೆಯಿಂದ ಹೊರ ತೆಗೆದರೆ ಗರಿ ಗರಿ ಪುರಿ ರೆಡಿ.

ಪುರಿಗಳು ತಣ್ಣಗಾದಾಗ, ಅವುಗಳಿಗೆ ಬೇಯಿಸಿದ ಆಲೂಗಡ್ಡೆ ಬಟಾಣಿ ಹಾಗೂ ಪಾನಿಯೊಂದಿಗೆ ಎಂಜಾಯ್ ಮಾಡಿ.