ಆನೆ ಲದ್ದಿ ಕಾಫೀ ಬಗ್ಗೆ ಕೇಳಿದ್ರಾ..? ಸಿಕ್ಕಾಪಟ್ಟೆ ಕಾಸ್ಟ್ಲಿಇದು
ಇತ್ತೀಚೆಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆನೆ ಲದ್ದಿ ಟೀ ಕುಡಿದು ಭಾರೀ ಸುದ್ದಿ ಮಾಡಿದ್ದರು. ಇದು ಸಿಕ್ಕಾ ಪಟ್ಟೆ ಕಾಸ್ಲ್ಟಿ ಅಂತೆ. ಇದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಇತ್ತೀಚೆಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆನೆ ಲದ್ದಿ ಟೀ ಕುಡಿದು ಭಾರೀ ಸುದ್ದಿ ಮಾಡಿದ್ದರು.
ಬೇರ್ ಗ್ರಿಲ್ಸ್ ಜೊತೆ ಇಂಟು ದಿ ವೈಲ್ಡ್ ಎಪಿಸೋಡ್‌ಗಾಗಿ ಶೂಟ್ ಮಾಡಿದ ಸಂದರ್ಭ ಆನೆ ಲದ್ದಿ ಟೀ ಕುಡಿದಿದ್ದಾರೆ.
ಅಂದ ಹಾಗೆ ಇದು ಸಿಕ್ಕಾ ಪಟ್ಟೆ ಕಾಸ್ಲ್ಟಿ ಅಂತೆ. ಇದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಆನೆ ಲದ್ದಿ ಟೀ ಮಾಡೋದು ಹೇಗೆ ಅಂತ ವಿಡಿಯೋದಲ್ಲಿ ತೋರಿಸುವುದಿಲ್ಲ.
ವೇಸ್ಟ್ ಆಗೋ ಆನೆ ಲದ್ದಿಯಿಂದ ತಯಾರಿಸೋ ಕಾಫಿ ಅಥವಾ ಟೀಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
ಈ ಲದ್ದಿಯಿಂದಲೇ ಹೈಬ್ರೀಡ್ ಕಾಫಿ ಅಥವಾ ಟೀ ತಯಾರಿಸಲಾಗುತ್ತದೆ.
ಆನೆ ಲದ್ದಿ ಕಾಫಿ ಅಥವಾ ಟೀ ಬಗ್ಗೆ ನೀವರಿಯದ ವಿಚಾರಗಳು ಇಲ್ಲಿವೆ. ಕೇಳಿದ್ರೆ ಅಬ್ಬಾ ಅನ್ಸುತ್ತೆ. ಅಂದ ಹಾಗೆ ಇದು ತುಂಬಾ ಟೇಸ್ಟಿ.!
ಆನೆ ಲದ್ದಿಯಿಂದ ಟೀ, ಕಾಫಿ ಮಾಡೋ ಐಡಿಯಾ ಹುಟ್ಟುಕೊಂಡಿದ್ದು ಥಾಯ್‌ಲೆಂಡ್‌ನಲ್ಲಿ.
ಇದಕ್ಕಾಗಿ ಆನೆಗಳಿಗೆ ಅವುಗಳ ಮಾಮೂಲು ಆಹಾರದಲ್ಲಿ ಥಾಯ್ ಅರೆಬಿಕಾ ಚೆರಿಯನ್ನು ಮೊದಲು ತಿನ್ನಿಸಲಾಗುತ್ತದೆ.
ಇವು ಸಸ್ಯಹಾರಿ ಪ್ರಾಣಿಗಳಾಗಿದ್ದು ತಮ್ಮ ಆಹಾರದಲ್ಲಿರುವ ಸೆಲ್ಯುಲೋಸ್ ಒಡೆಯಲು ಅವು ಬಳಸುವ ಪ್ರಕ್ರಿಯೆಯು ತ್ಯಾಜ್ಯದಲ್ಲಿ ಸಿಹಿ, ಹಣ್ಣಿನ ಸುವಾಸನೆಯನ್ನು ಹೊರತರುತ್ತದೆ.
ಈ ಮೂಲಕ ಕಾಫಿಗೆ ಚಾಕಲೇಟ್, ಚೆರಿ ಟೇಸ್ಟ್ ಸಿಗುತ್ತದೆ.
ಆನೆ ಚೆರಿಯನ್ನು ವಿಸರ್ಜಿಸಿದಾಗ ಅದನ್ನು ಹೆಕ್ಕಿ ಸಂಗ್ರಹಿಸಲಾಗುತ್ತದೆ. ಅವುಗಳನ್ನು ತೊಳೆದು ಒಣಗಿಸಲಾಗುತ್ತದೆ.
ಅವುಗಳನ್ನು ಯಂತ್ರದ ಸಹಾಯದಿಂದ ಪ್ರತ್ಯೇಕಿಸಿ ಅಂತಿಮವಾಗಿ ಹುರಿಯಲಾಗುತ್ತದೆ. ಈ ಕಾಫಿ ಬ್ಲಾಕ್ ಐವರಿ ಕಾಫಿ ಎಂದೇ ಫೇಮಸ್.
ಇದನ್ನು ಮೊದಲು ತಯಾರಿಸಿದ್ದು, ಆನೆಗಳ ನಿರಾಶ್ರಿತ ಕೇಂದ್ರ ಚಿಯಾಂಗ್ ಸಯೇನ್‌ನ ಗೋಲ್ಡನ್ ಟ್ರಿಯಾಂಗಲ್ ಏಷ್ಯನ್ ಎಲಿಫೆಂಟ್ ಫೌಂಡೇಶನ್ ಹೆಸರಿನ ಕಂಪನಿಯಲ್ಲಿ.
ಇದು ಜಗತ್ತಿನ ಅಪರೂಪದ ಮತ್ತು ದುಬಾರಿ ಕಾಫಿಗಳಲ್ಲಿ ಒಂದು. ಮುಖ್ಯವಾಗಿ ಫೈಸ್ಟಾರ್ ಹೋಟೆಲ್‌ಗಳಲ್ಲಿಯೇ ಇದನ್ನು ಮಾರಲಾಗುತ್ತದೆ.
ಒಂದು ಕೆಜಿ ಕಾಫಿ ತಯಾರಿಸಲು ಬರೋಬ್ಬರಿ 33 ಕೆಜಿ ಕಾಫಿ ಚೆರಿಗಳು ಬೇಕಾಗುತ್ತೆ.
35 ಗ್ರಾಂನಷ್ಟು ಬ್ಲಾಕ್ ಐವರಿ ಕಾಫಿ ಬೆಲೆ 100 ಅಮೆರಿಕನ್ ಡಾಲರ್. ಅಂದರೆ ಬರೋಬ್ಬರಿ 7,357 ರೂಪಾಯಿ