ತವಾಗೆ ಸ್ವಲ್ಪನೂ ಅಂಟಿಕೊಳ್ಳದೆ ಗರಿಗರಿಯಾದ, ರೌಂಡಾಗಿ ದೋಸೆ ಬರಲು ಸುಲಭವಾದ ಟ್ರಿಕ್ಸ್
How to make dosa: ಹಿರಿಯರೊಬ್ಬರು ಹೇಳಿಕೊಟ್ಟ ಈ ಟ್ರಿಕ್ಸ್ ಅನ್ನು ಈಗಾಗಲೇ ಅಡುಗೆ ಪ್ರಿಯರು ಟೆಸ್ಟ್ ಮಾಡಿ, ಉತ್ತಮ ಫಲಿತಾಂಶ ಪಡೆದಿದ್ದಾರೆ. ನಿಜ ಹೇಳಬೇಕೆಂದರೆ ಇದು ತುಂಬಾ ಸುಲಭವಾದ, ಒಂದೇ ಒಂದು ಪದಾರ್ಥ ಹೊಂದಿರುವ, ದೋಸೆ ಅಂಟಿಕೊಳ್ಳದಂತೆ ಬರಲು ತುಂಬಾ ಸುಲಭವಾದ ಟ್ರಿಕ್ ಆಗಿದೆ.

ತವಾಗೆ ಅಂಟಿಕೊಳ್ಳಲ್ಲ
ದೋಸೆ.. ಹಿರಿಯರಿಂದ ಕಿರಿಯರವರೆಗೂ ಪ್ರತಿಯೊಬ್ಬರಿಗೂ ಇಷ್ಟವಾಗುವ ತಿಂಡಿ. ಮನೆಯಲ್ಲಿ ದಿನಾ ದೋಸೆ ತಿಂದರೂ ಹೋಟೆಲ್‌ಗೆ ಹೋದಾಗ ಅಲ್ಲಿಯೂ ದೋಸೆ ಆರ್ಡರ್ ಮಾಡಿ ತಿನ್ನುವ ಮಂದಿ ಇದ್ದಾರೆ. ಏಕೆಂದರೆ ಹೋಟೆಲ್‌ನಲ್ಲಿ ಮಾಡುವ ದೋಸೆಯ ರುಚಿಗೂ, ಆಕಾರಕ್ಕೂ ಮನೆಯಲ್ಲಿ ಮಾಡುವ ದೋಸೆಯ ರುಚಿಗೂ, ಆಕಾರಕ್ಕೂ ವ್ಯತ್ಯಾಸ ಇರುತ್ತದೆ. ಇದು ಬಹಳ ಬೇಗನೆ ರೆಡಿಯಾಗಬಹುದಾದ ತಿಂಡಿಯಾದರೂ, ಹುಯ್ಯವಾಗ ತವಾಗೆ ಅಂಟಿಕೊಳ್ಳುತ್ತದೆಯಲ್ಲ ಎಂಬುದೇ ಅನೇಕರಿಗೆ ದೊಡ್ಡ ಸಮಸ್ಯೆ.
ಗರಿ ಗರಿಯಾಗಿ ಬರಲು ಟಿಪ್ಸ್
ಈಗಷ್ಟೇ ಅಡುಗೆ ಕಲಿಯುತ್ತಿರುವವರಿಗಂತೂ ದೋಸೆಯನ್ನ ಹಂಚಿಗೆ ಅಂಟದಂತೆ ಮಾಡುವುದು ಕಷ್ಟಕರವಾದ ಸಮಸ್ಯೆಯಾಗಿದೆ. ಆದರೆ ಇತ್ತೀಚೆಗೆ afiqmomskitchen ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ದೋಸೆ ಗರಿ ಗರಿಯಾಗಿ ಬರಲು ಟಿಪ್ಸ್ ಶೇರ್ ಮಾಡಲಾಗಿದೆ. ನೀವು ಈ ರೀತಿಯಾಗಿ ದೋಸೆ ಮಾಡುವುದರಿಂದ ತವಾಗೆ ದೋಸೆ ಅಂಟಿಕೊಳ್ಳದೆ ಸುಲಭವಾಗಿ ತಿರುಗಿಸಬಹುದು. ಅಷ್ಟೇ ಅಲ್ಲ, ಆಕಾರವೂ ಚೆನ್ನಾಗಿರುವುದಲ್ಲದೆ, ಸರಿಯಾಗಿ ಬೇಯಿಸಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಬನ್ನಿ, ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಇಲ್ಲಿದೆ ನೋಡಿ ವಿಡಿಯೋ
ಇನ್‌ಸ್ಟಾ ವಿಡಿಯೋದಲ್ಲಿ ಪಾಕಶಾಲೆಯ ತಜ್ಞರು ಮತ್ತು ದೋಸೆ ಪ್ರಿಯರು ಹೇಳುವ ಹಾಗೆ, ದೋಸೆ ಕಲ್ಲಿಗೆ ಅಥವಾ ತವಾಗೆ ಬೆಂಡೆಕಾಯಿಯನ್ನ ಹೋಳು ಮಾಡಿ ಹಚ್ಚುವುದು ಸಿಕ್ಕಾಪಟ್ಟೆ ಸಿಂಪಲ್ ಟ್ರಿಕ್ಸ್ ಆಗಿದೆ. ಇದರಿಂದ ದೋಸೆ ಅಂಟಿಕೊಳ್ಳದೆ ಚೆನ್ನಾಗಿ ಬೇಯಲು ಅನುವು ಮಾಡಿಕೊಡುತ್ತದೆ.
ಇದು ಹೇಗೆ ಕೆಲಸ ಮಾಡುತ್ತೆ?
ಬೆಂಡೆಕಾಯಿಯಲ್ಲಿರುವ ಒಗರು ಮತ್ತು ಅದರ ಹಸಿರು ಹೊರ ಪದರದಲ್ಲಿರುವ ಪೋಷಕಾಂಶಗಳು ದೋಸೆ ಹಿಟ್ಟು ದೋಸೆ ಕಲ್ಲಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ಅಷ್ಟೇ ಅಲ್ಲ, ದೋಸೆಯನ್ನು ಸುಲಭವಾಗಿ ತಿರುಗಿಸಬಹುದು. ದೋಸೆ ಸುಂದರವಾಗಿ ಮತ್ತು ಸರಿಯಾದ ಆಕಾರದಲ್ಲಿ ಹೊರಬರುತ್ತದೆ. ಅಡುಗೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ಇತರ ಟಿಪ್ಸ್
*ದೋಸೆ ಕಲ್ಲನ್ನು ಹೆಚ್ಚಿನ ಉರಿಯಲ್ಲಿ ಬಿಸಿ ಮಾಡಬೇಡಿ. ಮಧ್ಯಮ ಉರಿ ಸಾಕು.
*ಬೆಂಡೆಕಾಯಿ ತುಂಡುಗಳನ್ನು ಮಾತ್ರ ಬಳಸಿ. ಇಡೀ ಬೆಂಡೆಕಾಯಿ ಅಥವಾ ಇತರ ತರಕಾರಿಗಳು ಕೆಲಸ ಮಾಡುವುದಿಲ್ಲ.
*ದೋಸೆ ಹಿಟ್ಟನ್ನು ಆಗಾಗ್ಗೆ ಬೆರೆಸದೆ ಬಳಸಿ. ಇದು ದೋಸೆ ಅಂಟಿಕೊಳ್ಳುವುದನ್ನು ತಡೆಯುತ್ತದೆ.
ನೆಟ್ಟಿಗರು ಹೇಳಿದ್ದೇನು?
ಈ ಐಡಿಯಾ ಪ್ರಯತ್ನಿಸಿದ ಅನೇಕ ಅಡುಗೆ ಪ್ರಿಯರು ಉತ್ತಮ ಫಲಿತಾಂಶ ಪಡೆದಿದ್ದಾರೆ. "ದೋಸೆಯನ್ನು ತಿರುಗಿಸುವಾಗ ಸುಲಭವಾಯಿತು. ದೋಸೆಯ ಆಕಾರವು ಸುಂದರವಾಗಿ ಬಂದಿತು. ಕಡಿಮೆ ಪದಾರ್ಥಗಳು, ಕಡಿಮೆ ಸಮಯ, ಹೆಚ್ಚಿನ ಪ್ರಯೋಜನಗಳು. ಅದುವೇ ಇದರ ರಹಸ್ಯ. ಇದು ದಿನನಿತ್ಯ ದೋಸೆ ಮಾಡುವವರಿಗೆ ಗುಡ್ ಐಡಿಯಾ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಅಡುಗೆ ಪ್ರಿಯರು ಈ ಬೆಂಡೆಕಾಯಿ ಟ್ರಿಕ್ಸ್ ಪ್ರಯತ್ನಿಸಿದ್ದೇ ಆದಲ್ಲಿ ದೋಸೆ ಮಾಡುವ ಕೆಲಸ ಹೆಚ್ಚು ಸುಲಭವಾಗುತ್ತದೆ. ಮನೆಯಲ್ಲಿ ರುಚಿಕರವಾದ ದೋಸೆಯನ್ನು ಸುಲಭವಾಗಿ ತಯಾರಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹೆಚ್ಚು ಸುಲಭ
ಅಡುಗೆ ಪ್ರಿಯರು ಈ ಬೆಂಡೆಕಾಯಿ ಟ್ರಿಕ್ಸ್ ಪ್ರಯತ್ನಿಸಿದ್ದೇ ಆದಲ್ಲಿ ದೋಸೆ ಮಾಡುವ ಕೆಲಸ ಹೆಚ್ಚು ಸುಲಭವಾಗುತ್ತದೆ. ಮನೆಯಲ್ಲಿ ರುಚಿಕರವಾದ ದೋಸೆಯನ್ನು ಸುಲಭವಾಗಿ ತಯಾರಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.