- Home
- Life
- Food
- Coconut Rice Recipe: ಒಮ್ಮೆ ತಿಂದ್ರೆ ಮತ್ತೆ ಮತ್ತೆ ಕೇಳ್ತಾರೆ, ಐದೇ ನಿಮಿಷದಲ್ಲಿ ಮಾಡಿ ತೆಂಗಿನಕಾಯಿ ಅನ್ನ
Coconut Rice Recipe: ಒಮ್ಮೆ ತಿಂದ್ರೆ ಮತ್ತೆ ಮತ್ತೆ ಕೇಳ್ತಾರೆ, ಐದೇ ನಿಮಿಷದಲ್ಲಿ ಮಾಡಿ ತೆಂಗಿನಕಾಯಿ ಅನ್ನ
Coconut Rice Recipe : ದಕ್ಷಿಣ ಭಾರತದ ಪ್ರಸಿದ್ಧ ರೆಸಿಪಿಗಳಲ್ಲಿ ತೆಂಗಿನಕಾಯಿ ಅನ್ನ ಕೂಡ ಒಂದು. ರುಚಿಯಲ್ಲಿ ಮುಂದಿರುವ, ತಯಾರಿಸೋಕೆ ಸುಲಭವಾಗಿರುವ ಈ ತೆಂಗಿನಕಾಯಿ ಅನ್ನ ತಯಾರಿಸೋದು ಹೇಗೆ? ಇಲ್ಲಿದೆ ಸುಲಭ ರೆಸಿಪಿ

ತೆಂಗಿನಕಾಯಿ ಅನ್ನ
ಈ ತೆಂಗಿನಕಾಯಿ ಅನ್ನವನ್ನು ನಾನಾ ಹೆಸರಿನಲ್ಲಿ ಕರೆಯಲಾಗುತ್ತದೆ. ದಕ್ಷಿಣ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ತೆಂಗೈ ಸದಮ್ ಮತ್ತು ಕೊಬ್ಬರಿ ಅನ್ನಮ್ ಎಂದು ಕರೆಯಲಾಗುತ್ತದೆ. ತೆಂಗಿನ ಅನ್ನವನ್ನು ನೀವು ಸುಲಭವಾಗಿ ತಯಾರಿಸಬಹುದು. ಅದಕ್ಕೆ ಹೆಚ್ಚಿನ ಪದಾರ್ಥದ ಅಗತ್ಯವಿಲ್ಲ. ಹಾಗೆ ಅದಕ್ಕೆ ಕರಿ, ಕುರ್ಮಾ ಬೇಕಾಗಿಲ್ಲ. ನೀವು ಹಪ್ಪಳ, ಸಲಾಡ್, ಮೊಸರು, ಉಪ್ಪಿನಕಾಯಿ ಜೊತೆ ಕೂಡ ತಿನ್ನಬಹುದು.
ತೆಂಗಿನಕಾಯಿ ಅನ್ನಕ್ಕೆ ಅಗತ್ಯವಿರುವ ಪದಾರ್ಥ
ಒಂದು ಕಪ್ ಅಕ್ಕಿ. ನೀವು ಯಾವುದೇ ಅಕ್ಕಿಯನ್ನು ಬಳಸಬಹುದು. ಎರಡು ಕಪ್ ನೀರು. ಒಂದರಿಂದ ಒಂದುವರೆ ಕಪ್ ತೆಂಗಿನ ತುರಿ. ಅರ್ಧ ಚಮಚ ಉಪ್ಪು. ಒಂದರಿಂದ ಎರಡು ಹಸಿರು ಮೆಣಸು. ಒಂದು ಕೆಂಪು ಮೆಣಸು. ಎರಡು ಚಮಚ ಎಣ್ಣೆ. ಅರ್ಧ ಚಮಚ ಸಾಸಿವೆ. ಅರ್ಧ ಚಮಚ ಜೀರಿಗೆ, ಒಂದು ಚಮಚ ಕಡಲೆ ಬೇಳೆ, ಅರ್ಧ ಟೀಸ್ಪೂನ್ ಉದ್ದಿನ ಬೇಳೆ, 10 - 15 ಗೋಡಂಬಿ, ಒಗ್ಗರಣೆಗೆ ಕರಿಬೇವು, ಒಂದು ಟೀಸ್ಪೂನ್ ಕತ್ತರಿಸಿದ ಶುಂಠಿ.
ತೆಂಗಿನಕಾಯಿ ಅನ್ನ ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆಯಬೇಕು. ಮೂರರಿಂದ ನಾಲ್ಕು ಬಾರಿ ಅಕ್ಕಿಯನ್ನು ಶುದ್ಧ ನೀರಿನಲ್ಲಿ ತೊಳೆಯಿರಿ. ಸ್ವಲ್ಪ ಸಮಯ ತೊಳದೆ ಅಕ್ಕಿಯನ್ನು ನೆನೆಸಿಡಿ. ನೀವು ಎರಡು ರೀತಿಯಲ್ಲಿ ಅನ್ನ ಬೇಯಿಸಬಹುದು. ಒಂದು ಕುಕ್ಕರ್ ಗೆ ಎರಡು ಕಪ್ ನೀರು ಹಾಗೂ ಅಕ್ಕಿಯನ್ನು ಹಾಕಿ ಎರಡು ಸೀಟಿ ಹೊಡೆಸಬೇಕು. ನೀವು ಒಂದು ಪಾತ್ರೆಗೆ ನೀರನ್ನು ಹಾಕಿ, ಅದು ಬಿಸಿಯಾದ್ಮೇಲೆ ಅಕ್ಕಿಯನ್ನು ಹಾಕಿ, ಅದು ಬೆಂದ ಮೇಲೆ ನೀರನ್ನು ಸೋಸಿ ಅನ್ನ ತಯಾರಿಸಬಹುದು. ಅನ್ನ ತಯಾರಾದ್ಮೇಲೆ ಈ ಅನ್ನದ ಬಿಸಿ ಆರಲು ಬಿಡಿ.
ಒಗ್ಗರಣೆ
ಬಾಣಲೆಗೆ 2 ಚಮಚ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಹಾಕಿ. ಒಗ್ಗರಣೆಗೆ ನೀವು ಕತ್ತರಿಸಿದ ಕೆಂಪು ಮೆಣಸಿನಕಾಯಿ ಹಾಕಿ ಅದನ್ನು ಹುರಿಯಿರಿ. ಬೇಳೆ ಗೋಲ್ಡನ್ ಬಣ್ಣಕ್ಕೆ ಬಂದ ಮೇಲೆ ಕರಿಬೇವು ಹಾಗೂ ಹಸಿರು ಮೆಣಸಿನಕಾಯಿ ಹಾಕಿ. ನಂತ್ರ ಕತ್ತರಿಸಿದ ಶುಂಠಿ ಹಾಕಿ ಮಿಕ್ಸ್ ಮಾಡಿ.
ನೀರು ಹಾಕೋದೇಕೆ?
ಈ ಒಗ್ಗರಣೆಗೆ 2 ರಿಂದ 3 ಚಮಚ ನೀರು ಹಾಕಬೇಕು. ನೀರು ಶೀಘ್ರದಲ್ಲೇ ಆವಿಯಾಗುತ್ತದೆ. ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಮೃದುವಾಗುತ್ತದೆ. ನೀವು ಬೇಳೆಯನ್ನು ಇನ್ನಷ್ಟು ಮೃದುಗೊಳಿಸಲು ಬಯಸಿದರೆ, ಇನ್ನೂ 2 ರಿಂದ 3 ಚಮಚ ನೀರು ಸೇರಿಸಿ. ನೀರು ಸಂಪೂರ್ಣವಾಗಿ ಆವಿಯಾದಾಗ, 1 ಚಿಟಿಕೆ ಹಿಂಗ್ ಸೇರಿಸಿ.
ತೆಂಗಿನ ತುರಿ ಹಾಕಿ ರುಚಿ ಹೆಚ್ಚಿಸಿ
ಒಗ್ಗರಣೆ ಸಿದ್ಧವಾದ್ಮೇಲೆ ನೀವು 1 ರಿಂದ 1 1/2 ಕಪ್ ತೆಂಗಿನಕಾಯಿ, 1/2 ಟೀಚಮಚ ಉಪ್ಪು ಮತ್ತು ತಣ್ಣಗಾದ ಅನ್ನವನ್ನು ಇದಕ್ಕೆ ಸೇರಿಸಬೇಕು. ಒಣ ತೆಂಗಿನಕಾಯಿ ತುರಿ ಬಳಸುತ್ತಿದ್ದರೆ, ಮೊದಲು ತೆಂಗಿನಕಾಯಿಯನ್ನು ಸ್ವಲ್ಪ ಹೊತ್ತು ಬಿಸಿಯಾಗುವವರೆಗೆ ಹುರಿಯಿರಿ. ನಂತರ ಅನ್ನ ಮತ್ತು ಉಪ್ಪು ಸೇರಿಸಿ. ನಂತ್ರ ಗ್ಯಾಸ್ ಬಂದ್ ಮಾಡಿ, ಎಲ್ಲ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು ಕಡಿಮೆ ಇದ್ರೆ ಸ್ವಲ್ಪ ಉಪ್ಪನ್ನು ಹಾಕಿ ಮಿಸ್ ಮಾಡಿ ಸರ್ವ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

