MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • ಘಮ ಘಮ ಅನ್ನೋ ಅಮ್ಮ ರೀತಿಯೆ ಮನೆಯಲ್ಲಿಯೇ ತುಪ್ಪ ಮಾಡೋದು ಹೇಗೆ?

ಘಮ ಘಮ ಅನ್ನೋ ಅಮ್ಮ ರೀತಿಯೆ ಮನೆಯಲ್ಲಿಯೇ ತುಪ್ಪ ಮಾಡೋದು ಹೇಗೆ?

ಮನೆಯಲ್ಲೇ ತುಪ್ಪ ತಯಾರಿಸುವುದು ತುಂಬಾ ಸುಲಭ. ಕೇವಲ ಹತ್ತು ನಿಮಿಷದಲ್ಲಿ ಮಹಿಳೆಯೊಬ್ಬರು ತುಪ್ಪ ತಯಾರಿಸಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೈರಲ್ ಆಗಿದ್ದು, ತುಪ್ಪ ಮಾಡೋ ರೆಸಿಪಿ ಬಗ್ಗೆ ಅವರು ಹೇಳಿದ್ದೇನು?

2 Min read
Asianetnews Kannada Stories
Published : Aug 31 2024, 03:23 PM IST
Share this Photo Gallery
  • FB
  • TW
  • Linkdin
  • Whatsapp
16

ತುಪ್ಪ ಆರೋಗ್ಯಕ್ಕೆ ಎಷ್ಟು ಒಳ್ಳೆಯದೆಂಬುವುದು ಎಲ್ಲರಿಗೂ ಗೊತ್ತು. ಆದರೆ, ಅದು ಪ್ಯೂರ್ ಆಗಿರಬೇಕು ಎನ್ನುವುದು ಮುಖ್ಯ. ತುಪ್ಪದಲ್ಲಿ ಆರೋಗ್ಯಕರ ಕೊಬ್ಬುಗಳಿವೆ. ಮಿತವಾಗಿ ಸೇವಿಸಿದರೆ ಅದು ನಮಗೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಅದಕ್ಕಾಗಿಯೇ ಹೆಚ್ಚಿನವರು ತಮ್ಮ ಆಹಾರದಲ್ಲಿ ನಿಯಮಿತವಾಗಿ ತುಪ್ಪ ತಿನ್ನುತ್ತಾರೆ. ಆದರೀಗ ಮನೆಯಲ್ಲಿ ಯಾರೂ ತುಪ್ಪ ತಯಾರಿಸುವುದಿಲ್ಲ. ಹೆಚ್ಚಾಗಿ ಹೊರಗಡೆಯಿಂದ ಖರೀದಿಸುತ್ತಾರೆ. ಏಕೆಂದರೆ ತುಪ್ಪ ತಯಾರಿಸುವುದು ಅಷ್ಟು ಸುಲಭವಲ್ಲ. ನೀವು ದೀರ್ಘಕಾಲ ಒಲೆ ಬಳಿ ನಿಂತು, ಸಹನೆಯಿಂದ ಸ್ವಚ್ಛ ಬೆಣ್ಣೆಯಿಂದ ತುಪ್ಪ ತಯಾರಿಸಬೇಕು. ಅಷ್ಟು ಟೈಮ್ ಯಾರಿಗೆ ಇರುತ್ತೆ ಹೇಳಿ? ಆದರೆ, ಮಹಿಳೆಯೊಬ್ಬಳು ಕೇವಲ ಹತ್ತು ನಿಮಿಷದಲ್ಲಿ ತುಪ್ಪ ತಯಾರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ವೈರಲ್ ಆಗಿದೆ.
 

26

ಆ ವಿಡಿಯೋದಲ್ಲಿ, ಮಹಿಳೆ ತುಂಬಾ ಸರಳವಾಗಿ, ಕಡಿಮೆ ಟೈಮಲ್ಲಿ ತುಪ್ಪ ತಯಾರಿಸುವುದನ್ನು ತೋರಿಸಿದ್ದಾರೆ. ಪ್ರತಿದಿನ ನಾವು ಹಾಲಿನಿಂದ ಅಥವಾ ಮೊಸರಿನಿಂದ ಕೆನೆ ಸಂಗ್ರಹಿಸುತ್ತೇವೆ. ಹತ್ತು ದಿನಗಳ ನಂತರ, ನಾವು ಅದನ್ನು ಒಟ್ಟಿಗೆ ಬೆರೆಸುತ್ತೇವೆ. ಈ ವಿಡಿಯೋದಲ್ಲಿರುವ ಮಹಿಳೆ ಅದನ್ನೇ ಮಾಡಿದ್ದಾರೆ. ಸಂಗ್ರಹಿಸಿದ ಎಲ್ಲ ಕೆನೆಯನ್ನು ಬಟ್ಟಲಿನಲ್ಲಿ ತೆಗೆದುಕೊಂಡಿದ್ದಾರೆ. ಅದು ಸಾಮಾನ್ಯ ತಾಪಮಾನಕ್ಕೆ ಬರಲು ಕಾದು, ನಂತರ, ಕೆನೆಯನ್ನು ಕುಕ್ಕರ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿದ್ದಾರೆ. ನಂತರ, ಕುಕ್ಕರ್ ಮುಚ್ಚಳ ಮುಚ್ಚಿ ಒಂದು ಸೀಟಿ ಕೂಗಿಸಿದ್ದಾರೆ. ಅಷ್ಟೇ. ಅದರ ನಂತರ, ಅವಳು ಸೀಟಿಯನ್ನು ತೆಗೆದು ಇನ್ನೊಂದು ಪಾತ್ರೆಗೆ ಸುರಿದು ಒಲೆಯ ಮೇಲೆ ಇಟ್ಟು ಐದು ನಿಮಿಷ ಕುದಿಸಿದ್ದಾರೆ. 

ತುಪ್ಪ ತಯಾರಿಸುವ ವಿಧಾನದ ಕುರಿತು ವೀಡಿಯೊ ಇಲ್ಲಿದೆ..
 

36

ಹೀಗೆ ಬಿಸಿ ಮಾಡಿದಾಗ ನೀರೆಲ್ಲಾ ಆವಿಯಾಗಿ ಹೋಗುತ್ತದೆ. ನಂತರ ಕಾಲು ಚಮಚ ಬೇಕಿಂಗ್ ಪೌಡರ್ ಸೇರಿಸಿ ಕುದಿಸಿ. ತುಪ್ಪವನ್ನು ಫಿಲ್ಟರ್ ಮಾಡಿದ್ದಾರೆ. ಕೇವಲ ಹತ್ತು ನಿಮಿಷದಲ್ಲಿಯೇ ತಾಜಾ ತುಪ್ಪ ರೆಡಿ. ತುಪ್ಪ ತಯಾರಿಸಬೇಕಾದರೆ, ಕೆನೆಯಿಂದ ಮೊಸರು ಮಾಡಿ, ಬೆಣ್ಣೆ ತೆಗೆದು ನಂತರ ತುಪ್ಪ ತಯಾರಿಸಬೇಕು. ಆದರೆಸ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟಿನಲ್ಲಿ ಅಷ್ಟೊಂದು ಶ್ರಮವಿಲ್ಲ. ಇದು ಬೇಗ ಆಗುತ್ತದೆ. ಈ ವಿಧಾನಕ್ಕೆ ಸಾಕಷ್ಟು ಪ್ರಶಂಸೆಯೂ ಸಿಕ್ಕಿದೆ. ತುಪ್ಪವನ್ನು ಇಷ್ಟು ಸರಳವಾಗಿ ತಯಾರಿಸಬಹುದೆಂದು ನೆಟಿಜನ್‌ಗಳು ಆಶ್ಚರ್ಯಚಕಿತರಾಗಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ತುಪ್ಪ ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನೇಕರಿಗೆ ಸಂದೇಹ ಸಹಜ. ಆದರೆ, ಮನೆಯಲ್ಲಿಯೇ ಇಷ್ಟು ಸುಲಭವಾಗಿ ತುಪ್ಪ ತಯಾರಿಸಬಹುದು ಅಂದ್ರೆ ಯಾಕೆ ಟ್ರೈ ಮಾಡಬಾರದು? 
 

46
ತುಪ್ಪ ಎಣ್ಣೆ

ತುಪ್ಪ ಎಣ್ಣೆ

ತುಪ್ಪ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳು...

1. ಜೀರ್ಣಕ್ರಿಯೆ ಸುಧಾರಿಸುತ್ತದೆ..
ಪ್ರತಿದಿನ ಬೆಳ್ಳಂಬೆಳಗ್ಗೆ ಒಂದು ಚಮಚ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಅಜೀರ್ಣದ ಸಮಸ್ಯೆಯಿಂದ ಮುಕ್ತರಾಗಬಹುದು.  ಜೀರ್ಣಕ್ರಿಯೆಗೆ ತುಪ್ಪವೇ ಶಕ್ತಿ ಕೇಂದ್ರ. ಇದು ಹೊಟ್ಟೆಯುಬ್ಬರ, ಗ್ಯಾಸ್ ಟ್ರಬಲ್‌ನಂಥ ಸಮಸ್ಯೆಗೆ ಮುಕ್ತಿ ಹಾಡುತ್ತದೆ. ಏಕೆಂದರೆ ತುಪ್ಪ ಹೊಟ್ಟೆಯ ಆಮ್ಲಗಳ ಸ್ರವಿಸುವಿಕೆ ಉತ್ತೇಜಿಸುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಲಭಗೊಳಿಸಿ, ಆಹಾರ ಸರಾಗವಾಗಿ ಒಡೆಯುತ್ತದೆ. ನಂತರ ಆಹಾರ ಸುಲಭವಾಗಿ ಜೀರ್ಣವಾಗುವುದಲ್ಲದೇ, ಪೋಷಕಾಂಶಗಳು ನಮ್ಮ ದೇಹ ತಲುಪುತ್ತವೆ.

56

2. ವಿಷವನ್ನು ತೆಗೆದುಹಾಕುತ್ತದೆ...
ನಮ್ಮ ದೇಹದಿಂದ ಹಾನಿಕಾರಕ ವಿಷವನ್ನು ತೆಗೆದು ಹಾಕುವಲ್ಲಿ ತುಪ್ಪ ನಮಗೆ ಸಹಾಯ ಮಾಡುತ್ತದೆ. ಈ ಡಿಟಾಕ್ಸಿಫಿಕೇಷನ್ ಎಲ್ಲರನ್ನೂ ಆರೋಗ್ಯವಾಗಿ ಮತ್ತು ಫಿಟ್ ಆಗಿರಿಸುತ್ತದೆ
3. ಕರುಳಿನ ಆರೋಗ್ಯಕ್ಕೆ ಒಳ್ಳೆಯದು
ತುಪ್ಪ ಕರುಳಿನ ಆರೋಗ್ಯಕ್ಕೂ ಅತ್ಯಗತ್ಯ. ಕರುಳು ಆರೋಗ್ಯಕರವಾಗಿಲ್ಲದಿದ್ದರೆ, ಆಹಾರದಿಂದ ಅಗತ್ಯ ಪೋಷಕಾಂಶಗಳು ಹೀರಿಕೊಳ್ಳುವುದಿಲ್ಲ. ಪ್ರತಿದಿನ ತುಪ್ಪ ಸೇವಿಸಲು ಪ್ರಾರಂಭಿಸಿದರೆ, ಮೇಣ ಕರುಳಿನ ಒಳಪದರವನ್ನು ಸುಧಾರಿಸುತ್ತದೆ. ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.

66

4. ತೂಕ ಇಳಿಸಿಕೊಳ್ಳಬಹುದು.
ತುಪ್ಪ ತಿಂದ್ರೆ ತೂಕ ಹೆಚ್ಚುತ್ತದೆ ಅಂತ ಎಲ್ಲರೂ ಭಾವಿಸ್ತಾರೆ. ಆದರೆ.. ಪ್ರತಿದಿನ ಬೆಳಿಗ್ಗೆ ಒಂದು ಚಮಚ ತುಪ್ಪ ತಿನ್ನುವುದು ತೂಕ ಇಳಿಸಲು ಸಹಾಯ ಮಾಡುತ್ತದೆ. ತುಪ್ಪದಲ್ಲಿ ಕೊಬ್ಬಿನಾಮ್ಲವಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಪರೋಕ್ಷವಾಗಿ ನಿಮ್ಮ ತೂಕ ನಿರ್ವಹಣಾ ಪ್ರಯತ್ನವನ್ನು ಬೆಂಬಲಿಸುತ್ತದೆ. 

About the Author

AK
Asianetnews Kannada Stories
ತುಪ್ಪ
ಆಹಾರ
ಆರೋಗ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved