Kitchen tips :ಉಪ್ಪಿನಕಾಯಿ ಮಾಡುವಾಗ ಈ ತಪ್ಪು ಮಾಡಬೇಡಿ
ಉಪ್ಪಿನಕಾಯಿ ಎಂದ ಕೂಡಲೇ ಬಾಯಲ್ಲಿ ನೀರೂರುತ್ತೆ. ಅದು ಮಾವಿನಕಾಯಿ (mango pickle), ನಿಂಬೆ ಹಣ್ಣು, ನೆಲ್ಲಿಕಾಯಿ ಯಾವುದೇ ಉಪ್ಪಿನಕಾಯಿ ಇರಲಿ, ಟೇಸ್ಟ್ ಮಾತ್ರ ಬಾಯಲ್ಲಿ ನೀರೂವಂತಿರುತ್ತೆ. ಇನ್ನು ಬೇಸಿಗೆಯ ದಿನಗಳಲ್ಲಿ, ಹೆಚ್ಚಿನ ಜನರು ಇಡೀ ವರ್ಷಕ್ಕೆ ಸಾಕಾಗುವಷ್ಟು ಉಪ್ಪಿನಕಾಯಿ ತಯಾರಿಸುತ್ತಾರೆ. ಇಂದು ನಾವು ನಿಮಗೆ ಉಪ್ಪಿನಕಾಯಿ ಮಾಡೋ ವಿಧಾನದ ಬಗ್ಗೆ ಅಜ್ಜಿ ಹೇಳಿದ ಸೂತ್ರಗಳನ್ನು ತಿಳಿಸುತ್ತೇವೆ.
ಮಾರುಕಟ್ಟೆಗಳಲ್ಲಿ ಅನೇಕ ರೀತಿಯ ಉಪ್ಪಿನಕಾಯಿಗಳು ಲಭ್ಯವಿವೆ. ಮಾವಿನಹಣ್ಣಿನಿಂದ ಹಿಡಿದು ಹಸಿಮೆಣಸಿನಕಾಯಿ, ಹಲಸು, ಕೆಂಪು ಮೆಣಸಿನಕಾಯಿ, ಕ್ಯಾರೆಟ್, ಮೂಲಂಗಿಯವರೆಗಿನ ವಿವಿಧ ಉಪ್ಪಿನಕಾಯಿ ಲಭ್ಯವಿದೆ. ಆದರೆ ಮನೆಯಲ್ಲಿ ತಯಾರಿಸಿದ ಮಾವಿನ ಉಪ್ಪಿನಕಾಯಿಯನ್ನು (pickle) ತಿನ್ನುವ ಮಜಾನೆ ಬೇರೆ ಆಗಿದೆ ಮತ್ತು ವಿಶೇಷವಾಗಿ ಹಳ್ಳಿಯಲ್ಲಿ ಅಜ್ಜಿ ತಯಾರಿಸುತ್ತಿದ್ದ ಉಪ್ಪಿನಕಾಯಿ ಬಾಯಲ್ಲಿ ನೀರೂರಿಸುತ್ತೆ.
ಇಂದಿನ ಬಿಡುವಿಲ್ಲದ ಜೀವನದಲ್ಲಿ, ಯಾರೂ ಕಷ್ಟಪಟ್ಟು ಕೆಲಸ ಮಾಡಲು ಬಯಸೋದಿಲ್ಲ. ಈ ಕಾರಣದಿಂದಾಗಿ ಜನ ಮಾರ್ಕೆಟ್ ನಿಂದಲೇ ಉಪ್ಪಿನಕಾಯಿ ಖರೀದಿಸುತ್ತಾರೆ. ಇದು ಅಷ್ಟೊಂದು ರುಚಿಯೂ ಇರಲ್ಲ ಮತ್ತು ಬೇಗನೆ ಹಾಳಾಗುತ್ತದೆ. ಹಾಗಾಗಿ ನಾವು ನಿಮಗೆ ಅಜ್ಜಿಯ ರೆಸಿಪಿ (grandmothers recipe) ಹೇಳುತ್ತೇವೆ, ಅಜ್ಜಿ ಮಾಡಿದ ಈ ಉಪ್ಪಿನಕಾಯಿ ಒಂದು ವರ್ಷದವರೆಗೆ ಹಾಳಾಗೋದಿಲ್ಲ. ಇದನ್ನು ಹೇಗೆ ಮಾಡೋದು ನೋಡೋಣ…
ಉಪ್ಪಿನಕಾಯಿಯ ಮಸಾಲೆಯನ್ನು ತಯಾರಿಸಲು ನಿಮಗೆ ಅಗತ್ಯವಿದೆ-
2 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಮೆಂತ್ಯ
1 ಟೀಸ್ಪೂನ್ ಸೋಂಪು
1/2 ಟೀಸ್ಪೂನ್ ಇಂಗು
10 ಕೆಂಪು ಮೆಣಸು
1 ಟೀಸ್ಪೂನ್ ಸಾಸಿವೆ
2 ಟೀಸ್ಪೂನ್ ಉಪ್ಪು
1 ಟೀಸ್ಪೂನ್ ಅರಿಶಿನ ಪುಡಿ
10 ಟೀಸ್ಪೂನ್ ಎಣ್ಣೆ
ತಯಾರಿಸುವ ವಿಧಾನ
ಉಪ್ಪಿನಕಾಯಿ ಮಸಾಲವನ್ನು ತಯಾರಿಸಲು, ಮೊದಲನೆಯದಾಗಿ, ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಸರಿಯಾದ ಪ್ರಮಾಣದಲ್ಲಿ ತೆಗೆದಿರಿಸಿ. ಈಗ ಒಂದು ಬಾಣಲೆಯನ್ನು ಗ್ಯಾಸ್ ಮೇಲೆ ಇರಿಸಿ ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಬಿಸಿಯಾಗಲು ಬಿಡಿ.
- ಈಗ ಎಲ್ಲಾ ಮಸಾಲೆಗಳನ್ನು ಒಂದೊಂದಾಗಿ ಸೇರಿಸಿ ಮತ್ತು ನಿರಂತರವಾಗಿ ಕೈಯಾಡಿಸುತ್ತಿರಿ. ಈ ಮಸಾಲೆಗಳು ಹಗುರವಾಗಿ ಒಡೆಯಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ (gas off) ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ.
- ಎಲ್ಲಾ ಮಸಾಲೆಗಳು ತಣ್ಣಗಾದ ನಂತರ, ಅದನ್ನು ಮಿಕ್ಸಿಯ ಜಾರಿಗೆ ಹಾಕಿ ಮತ್ತು ಅರಿಶಿನ ಮತ್ತು ಇಂಗು ಪುಡಿ ಬೆರೆಸಿ ರುಬ್ಬಿಕೊಳ್ಳಿ. ಇವೆಲ್ಲವೂ ಚೆನ್ನಾಗಿ ಪುಡಿ ಆಗುವಂತೆ ನೋಡಿ. ನೀರನ್ನು ಸೇರಿಸಬೇಡಿ. ಡ್ರೈ ಪೌಡರ್ (dry powder) ಮಾಡಿ.
- ಈಗ ಉಪ್ಪಿನಕಾಯಿಯನ್ನು ಮಸಾಲೆ ಮಾಡಲು ಸಿದ್ಧ. ಈ ಮಸಾಲೆಯೊಂದಿಗೆ ನೀವು ಮಾವಿನ ಹಣ್ಣಿನಿಂದ ಹಿಡಿದು ಹಲಸು, ಮೆಣಸಿನಕಾಯಿ, ಕ್ಯಾರೆಟ್ ವರೆಗಿನ ಎಲ್ಲಾ ತರಕಾರಿಗಳ ಉಪ್ಪಿನಕಾಯಿ ಮಾಡಬಹುದು. ಗಾಳಿಯಾಡದ ಡಬ್ಬದಲ್ಲಿ ಅದನ್ನು ತುಂಬುವ ಮೂಲಕ, ನೀವು ಅದನ್ನು ಹಲವಾರು ತಿಂಗಳುಗಳವರೆಗೆ ಸಂಗ್ರಹಿಸಬಹುದು.
ಉಪ್ಪಿನಕಾಯಿ ಮಾಡುವಾಗ ತಪ್ಪು ಮಾಡಲು ಮರೆಯಬೇಡಿ.
ನೀವು ಉಪ್ಪಿನಕಾಯಿಯನ್ನು ಒಂದು ವರ್ಷದವರೆಗೆ ಕೂಡ ಇಟ್ಟುಕೊಳ್ಳಬಹುದು. ಆದರೆ, ಅದು ಹಾಳಾಗಬಾರದು ಎಂದಾದರೆ ಉಪ್ಪಿನಕಾಯಿ (pickle) ತಯಾರಿಸುವಾಗ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಇದರಿಂದ ಅದು ಬೇಗನೆ ಹಾಳಾಗೋದಿಲ್ಲ-
ಉಪ್ಪಿನಕಾಯಿ ತಯಾರಿಸಲು ಯಾವಾಗಲೂ ಮಣ್ಣಿನ ಭರಣಿಯನ್ನು ಬಳಸಿ. ನೀವು ಬಯಸಿದರೆ ಸೆರಾಮಿಕ್ (ceramic) ಅಥವಾ ಗಾಜಿನ ಪಾತ್ರೆಯಲ್ಲಿ ಉಪ್ಪಿನಕಾಯಿಯನ್ನು ಸಹ ಮಾಡಬಹುದು. ಆದರೆ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ನಿಷೇಧಿಸಿ.
ಉಪ್ಪಿನಕಾಯಿ ತಯಾರಿಸುವಾಗ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಿ, ಏಕೆಂದರೆ ಉಪ್ಪು ಸಂರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಉಪ್ಪಿನಕಾಯಿಯ ಶೆಲ್ಫ್ ಲೈಫ್ (shelf life) ಅನ್ನು ಹೆಚ್ಚಿಸುತ್ತದೆ. ಇದು ದೀರ್ಘಕಾಲ ಉಪ್ಪಿನಕಾಯಿ ಹಾಳಾಗದಂತೆ ಉಳಿಯಲು ಸಹಾಯ ಮಾಡುತ್ತೆ.
ಉಪ್ಪಿನಕಾಯಿ ತಯಾರಿಸುವಾಗ, ನೀವು ಉಪ್ಪಿನಕಾಯಿ ಹಾಕುತ್ತಿರುವ ಮಾವಿನ ಅಥವಾ ಯಾವುದೇ ತರಕಾರಿಯ (vegetable) ನೀರನ್ನು ಒಣಗಿಸಿ, ಸಂಪೂರ್ಣವಾಗಿ ಡ್ರೈ ಮಾಡಿ ಹಾಕಿ. ಇಲ್ಲದಿದ್ದರೆ ಅದು ಉಪ್ಪಿನಕಾಯಿಯನ್ನು ಹಾಳುಮಾಡಬಹುದು.
ನೀವು ಉಪ್ಪಿನಕಾಯಿ ಹಾಕುವಾಗ ಸ್ವಲ್ಪ ವಿನೆಗರ್ (vinegar) ಬಳಸಿದರೆ, ಅದು ಉಪ್ಪಿನಕಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದೀರ್ಘಕಾಲ ಉಪ್ಪಿನಕಾಯಿ ಉಳಿಯುವಂತೆ ಮಾಡುತ್ತೆ. ಇನ್ನು ಉಪ್ಪಿನಕಾಯಿ ಪೆಟ್ಟಿಗೆಯಲ್ಲಿ ಒದ್ದೆಯಾದ ಸ್ಪೂನ್ ಅಥವಾ ಏನನ್ನೂ ಹಾಕಬೇಡಿ. ಪ್ರತಿದಿನ ಬಳಸುವ ಉಪ್ಪಿನಕಾಯಿಯನ್ನು ಒಂದು ಸಣ್ಣ ಪಾತ್ರೆಯಲ್ಲಿ ತುಂಬಿಸಿ. ಅದನ್ನು ಬಳಸಿದ್ರೆ ಉಪ್ಪಿನಕಾಯಿ ದೀರ್ಘಕಾಲ ಬಾಳಿಕೆ ಬರುತ್ತೆ.