MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಉಳಿದ ಅನ್ನ ಎಸೆಯಬೇಡಿ, ಈ ರೀತಿ ಖಾದ್ಯ ಮಾಡಿ ಕೊಡಿ..ಮತ್ತೆ ಮತ್ತೆ ಕೇಳಿ ತಿಂತಾರೆ!

ಉಳಿದ ಅನ್ನ ಎಸೆಯಬೇಡಿ, ಈ ರೀತಿ ಖಾದ್ಯ ಮಾಡಿ ಕೊಡಿ..ಮತ್ತೆ ಮತ್ತೆ ಕೇಳಿ ತಿಂತಾರೆ!

ಇದು ಒಂದು ರುಚಿಕರವಾದ ಮತ್ತು ಪೌಷ್ಟಿಕ ಆಹಾರ ಅಂತಾನೆ ಹೇಳಬಹುದು. ಇದನ್ನು ಮಾಡುವುದು ತುಂಬಾ ಸುಲಭ ಮತ್ತು ಅದರಲ್ಲಿ ಬಳಸುವ ಪದಾರ್ಥಗಳು ಸಹ ಈಸಿಯಾಗಿ ದೊರೆಯಲಿವೆ.

2 Min read
Author : Ashwini HR
| Updated : Jul 30 2025, 04:07 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : facebook

ಎಲ್ಲರೂ ಊಟ ಮಾಡಿದ ನಂತರ ಮಿಕ್ಕ ಅನ್ನವನ್ನು ಏನು ಮಾಡಬೇಕೆಂಬುದು ಬಹುತೇಕರ ಸಮಸ್ಯೆ. ಕೆಲವರು ಆ ಅನ್ನವನ್ನು ಯಾರಿಗಾದರೂ ನೀಡಬಹುದು ಅಥವಾ ಅದು ಹಾಳಾಗಬಹುದು ಅಂದರೆ ಎಸೆಯಬಹುದು. ಆದರೆ ಇಂದು ನಾವು ಉಳಿದ ಅನ್ನದಿಂದ ಹೊಸ ಖಾದ್ಯವನ್ನು ತಯಾರಿಸುವುದನ್ನು ಹೇಳಿ ಕೊಡ್ತೇವೆ. ಅದನ್ನು ಮಾಡೋದು ಕೂಡ ಬಹಳ ಸುಲಭ.

26
Image Credit : Pinterest

ಉಳಿದ ಅನ್ನದಿಂದ ಈಗಾಗಲೇ ನೀವು ಬಹಳಷ್ಟು ರೆಸಿಪಿ ಟ್ರೈ ಮಾಡಿರುತ್ತೀರಿ. ಅದರೆ ದೋಸೆ ಟ್ರೈ ಮಾಡುವವರು ಬಲು ಅಪರೂಪ. ಹೌದು. ದೋಸೆಗೆ ಅಕ್ಕಿ ನೆನೆಸಿ, ರುಬ್ಬಿ, ಹುದುಗಿಸಿ ಮಾಡಬೇಕಿಂತಿಲ್ಲ. ಈ ರೀತಿಯೂ ಮಾಡಬಹುದು. ಇದು ಒಂದು ರುಚಿಕರವಾದ ಮತ್ತು ಪೌಷ್ಟಿಕ ಆಹಾರ ಅಂತಾನೆ ಹೇಳಬಹುದು.

36
Image Credit : Pinterest

ಇದನ್ನು ಮಾಡುವುದು ತುಂಬಾ ಸುಲಭ ಮತ್ತು ಅದರಲ್ಲಿ ಬಳಸುವ ಪದಾರ್ಥಗಳು ಸಹ ಈಸಿಯಾಗಿ ದೊರೆಯಲಿವೆ. ಆದ್ದರಿಂದ ಮುಂದಿನ ಬಾರಿ ನೀವು ಅನ್ನ ಉಳಿದಾಗ ದೋಸೆ ಮಾಡಲು, ಇಡೀ ಕುಟುಂಬದೊಂದಿಗೆ ರುಚಿಕರವಾದ ಖಾದ್ಯವನ್ನು ಆನಂದಿಸಲು ಮರೆಯಬೇಡಿ.

46
Image Credit : social media

ಬೇಕಾಗುವ ಪದಾರ್ಥಗಳು
1 ಬಟ್ಟಲು ಉಳಿದ ಅನ್ನ
1 ಬಟ್ಟಲು ರವೆ
1 ಬಟ್ಟಲು ಮೊಸರು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು
1/4 ಟೀಸ್ಪೂನ್ ಅಡುಗೆ ಸೋಡಾ

56
Image Credit : Pinterest

ತಯಾರಿಸುವ ವಿಧಾನ
1.ಉಳಿದ ಅನ್ನ, ರವೆ ಮತ್ತು ಮೊಸರನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಒಟ್ಟಿಗೆ ತೆಗೆದುಕೊಳ್ಳಿ.
2.ಈಗ ಈ ಮಿಶ್ರಣವನ್ನು ಬ್ಲೆಂಡರ್ ಅಥವಾ ಮಿಕ್ಸರ್ ಜಾರ್‌ನಲ್ಲಿ ಹಾಕಿ.
3.ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ.
4.ನಯವಾದ ಮತ್ತು ದಪ್ಪವಾದ ಬ್ಯಾಟರ್ ಅಥವಾ ಹಿಟ್ಟು ರೂಪುಗೊಳ್ಳುವವರೆಗೆ ಅದನ್ನು ರುಬ್ಬಿ.
5.ರುಬ್ಬಿದ ಬ್ಯಾಟರ್ ಅನ್ನು ಮತ್ತೆ ಬಟ್ಟಲಿನಲ್ಲಿ ತೆಗೆದುಹಾಕಿಡಿ.
6.ಈಗ ಅಡುಗೆ ಸೋಡಾ ಸೇರಿಸಲು ಸರಿಯಾದ ಸಮಯ. ಇದಕ್ಕೆ ಈಗ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

66
Image Credit : Pinterest

ದೋಸೆ ಹುಯ್ಯಲು ನಾನ್-ಸ್ಟಿಕ್ ಗ್ರಿಡಲ್ ಅಥವಾ ಹಂಚನ್ನು ಬಿಸಿ ಮಾಡಿ. ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ. ಹಂಚು ಬಿಸಿಯಾದಾಗ ಒಂದು ದೊಡ್ಡ ಚಮಚದಲ್ಲಿ ಹಿಟ್ಟು ತೆಗೆದುಕೊಂಡು ಹರಡಿ. ಇದಕ್ಕೆ ದುಂಡಗಿನ ಆಕಾರವನ್ನು ನೀಡಿದ ನಂತರ, ಅಂಚುಗಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ. ಒಂದು ಬದಿಯಿಂದ ಚಿನ್ನದ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ನಂತರ ಅದನ್ನು ತಿರುಗಿಸಿ ಇನ್ನೊಂದು ಬದಿಯೂ ಬೇಯಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆಹಾರ
ಜೀವನಶೈಲಿ
ಮಹಿಳೆಯರು
Latest Videos
Recommended Stories
Recommended image1
ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ?
Recommended image2
Kitchen Tips: ಉಪ್ಪಿದ್ರೆ ಸಾಕು, ಒಂದು ಹನಿ ಎಣ್ಣೆ ಬಳಸದೆಯೂ ಹಪ್ಪಳ, ಸಂಡಿಗೆ, ಶೇಂಗಾ ಗರಿಗರಿಯಾಗಿ ಬರುತ್ತೆ
Recommended image3
ಪುದಿನಾ ಮತ್ತು ಶುಂಠಿಯ ಸಮಾಗಮದ ಆರೋಗ್ಯ ರಹಸ್ಯ ಬಯಲು; ಹೀಗೆ ಚಟ್ನಿ ಮಾಡಿ ತಿನ್ನಿ, ಇನ್ಯಾಕೆ ತಡ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved