ತೆಂಗಿನಕಾಯಿ ದುಬಾರಿಯಾದ ಚಿಂತೆ ಬಿಡಿ, ರುಚಿಕರ ಕಡಲೆಕಾಯಿ ಚಟ್ನಿ ಮಾಡಿ; ಇಲ್ಲಿದೆ ಸರಳ ಪಾಕ ವಿಧಾನ..
ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ 50 ರೂ.ಗಿಂತ ಹೆಚ್ಚಾಗಿದೆ. ಹಾಗಾಗಿ, ನೀವು ಚಿಂತೆಯನ್ನು ಮಾಡುವುದು ಬಿಟ್ಟು ಅತ್ಯಂತ ಸುಲಭ ಮತ್ತು ಸರಳವಾಗಿರುವ ರುಚಿಕರ ಕಡ್ಲೆಕಾಯಿ (ಶೇಂಗಾ) ಚಟ್ನಿ ಮಾಡಿ. ಇಡ್ಲಿ, ದೋಸೆ ಸೇರಿ ಅನ್ನಕ್ಕೂ ಕೂಡ ಬಡಿಸಿಕೊಂಡು ತಿನ್ನಬಹುದು...

ಕಡಲೆಕಾಯಿ(ಶೇಂಗಾ)ಯನ್ನು ಬಡವರ ಬಾದಾಮಿ ಎನ್ನುತ್ತಾರೆ. ಏಕೆಂದರೆ ಕಡಲೆಕಾಯಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು ಕೂಡ ಹೇಳುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ದಿಢೀರನೇ ಹೆಚ್ಚಾಗಿದ್ದು, ಚಟ್ನಿ ಪ್ರಿಯರು ಕೈ-ಕೈ ಹಿಸುಕಿಕೊಳ್ಳುವಂತಾಗಿದೆ. ಇದೀಗ ಅಂಥವರು ಚಿಂತೆ ಬಿಟ್ಟು ಅತ್ಯಂತ ಸುಲಭ ಮತ್ತು ರುಚಿಕರವಾದ ಕಡ್ಲೆಕಾಯಿ ಚಟ್ನಿ ತಯಾರಿಸಿಕೊಂಡು ತಿನ್ನಬಹುದು.
ಮನೆಯಲ್ಲಿ ಕಾಯಿ ಚಟ್ನಿ ಬಳಸುವ ತಿಂಡಿಗಳಾದ ಇಡ್ಲಿ, ದೋಸೆಗೆ ಕಡ್ಲೆಕಾಯಿ ಚಟ್ನಿ ಸೂಪರ್ ಕಾಂಬಿನೇಷನ್ ಆಗುತ್ತದೆ. ಆದರೆ, ಎಲ್ಲರಿಗೂ ಚಟ್ನಿ ಮಾಡೋಕೆ ಬರಲ್ಲ. ಇಲ್ಲಿದೆ ನೋಡಿ ಸುಲಭವಾಗಿ ಶೇಂಗಾ ಚಟ್ನಿ ಮಾಡುವ ವಿಧಾನ..
ಶೇಂಗಾ ಚಟ್ನಿ ಹೇಗೆ ಮಾಡೋದು?
ಕಡಲೆಕಾಯಿ ಜೊತೆಗೆ 8-10 ಗೋಡಂಬಿ ಹಾಕಿದ್ರೆ ಚಟ್ನಿ ರುಚಿ ಡಬಲ್ ಆಗುತ್ತದೆ.
ಬೇಕಾಗುವ ಸಾಮಗ್ರಿಗಳು
4 ಟೀಸ್ಪೂನ್ ಎಣ್ಣೆ
3-4 ಹಸಿಮೆಣಸಿನಕಾಯಿ
2-3 ಬೆಳ್ಳುಳ್ಳಿ ಎಸಳು
8-10 ಗೋಡಂಬಿ
10-12 ಕರಿಬೇವು
1 ಕಪ್ ಕಡಲೆಕಾಯಿ
1 ಟೀ ಸ್ಪೂನ್ ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು
ಒಂದು ಚಿಟಿಕೆ ಸಾಸಿವೆ..
ಕಡಲೆಕಾಳು ಹುರಿಯುವ ವಿಧಾನ: ಕಡಲೆಕಾಳುಗಳನ್ನು ಸಣ್ಣ ಉರಿಯಲ್ಲಿ ಹುರಿಯಬೇಕು. ಇಲ್ಲವೆಂದರೆ ಕಾಳುಗಳೆಲ್ಲವೂ ಕರಕಲು ಆಗಿಬಿಡುತ್ತವೆ. ಚಟ್ನಿ ರುಚಿ ಹಾಳಾಗುತ್ತದೆ. ಇನ್ನು ಚಟ್ನಿಯನ್ನು ಹೆಚ್ಚು ಹೊತ್ತು ಇಡಲು ಆಗೊಲ್ಲ. 2-3 ಗಂಟೆಗಳ ನಂತರ ಚಟ್ನಿ ರುಚಿ ಬದಲಾಗುತ್ತದೆ. ಹಾಗಾಗಿ ತಣ್ಣೀರು ಬಳಸಿ ಚಟ್ನಿಯನ್ನು ಮಾಡಬೇಕು. ಚಟ್ನಿ ರುಚಿ ಡಬಲ್ ಮಾಡೋಕೆ ಹುರಿದ ಕಡಲೆಕಾಳುಗಳ ಸಿಪ್ಪೆ ತೆಗೆದರೆ ಒಳ್ಳೆಯದು.
ಮಾಡುವ ವಿಧಾನ
ಮೊದಲು ಕಡಲೆಕಾಳು, ಗೋಡಂಬಿ ಹುರಿದುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ, ಹಸಿಮೆಣಸಿನಕಾಯಿ ಹುರಿಯಿರಿ. ಆರಿದ ಮೇಲೆ ಉಪ್ಪು, ಹುಣಸೆಹಣ್ಣು, ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿ. ನೀರು ಹಾಕಿ ರುಬ್ಬಿಕೊಳ್ಳಿ. ಬಾಣಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಅದಕ್ಕಕೆ ರಿಬೇವು, ಸಾಸಿವೆ, ತಾಳಿಸಿ ಒಗ್ಗರಣೆ ಹಾಕಿ.
ನಂತರ ಇದನ್ನು ಇಡ್ಲಿ, ದೋಸೆ ಮತ್ತು ಇತರೆ ತಿಂಡಿಗಳೊಂದಿಗೆ ತಿನ್ನಬಹುದು.