ಮಾರ್ಕೆಟಿಗೆ ಬಂದಿದೆ ನಿಮ್ಮನ್ನ ಸಾವಿನ ದವಡೆಗೆ ನೂಕುವ ನಕಲಿ ಪನೀರ್, ಫೇಕೋ, ರಿಯಲ್ಲೋ?
ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ನಕಲಿ ಪನೀರ್ ಮಾರುವ ಜಾಲ ತುಂಬಾನೆ ದೊಡ್ಡದಾಗಿದೆ. ನಕಲಿ ಪದಾರ್ಥಗಳನ್ನ ಮಾರಾಟ ಮಾಡೋ ಮೂಲಕ ಎಫ್ಎಸ್ಎಸ್ಎಐ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ, ಇಲ್ಲಿ ನಕಲಿ ಪನೀರ್ ಅನ್ನು ಹೇಗೆ ಗುರುತಿಸಬಹುದು ಅನ್ನೊದನ್ನ ಹೇಳ್ತೀವಿ.
ಆಹಾರ ಪದಾರ್ಥಗಳ ಕಲಬೆರಕೆ ಮತ್ತು ನಕಲಿ ಆಹಾರಗಳ ಮಾರಾಟ ಈಗ ಭಾರತದಲ್ಲಿ ಸಾಮಾನ್ಯವಾಗಿದೆ. ಹೆಚ್ಚಿನ ಲಾಭ ಗಳಿಸೋದಕ್ಕಾಗಿ, ವ್ಯಾಪಾರಿಗಳು ಆಹಾರ ಪದಾರ್ಥಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವ ದೇಶದ ಅತಿದೊಡ್ಡ ಸಂಸ್ಥೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತಾರೆ.
ಇತ್ತೀಚಿಗೆ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿಗಳು ದಾಳಿ ನಡೆಸಿ ಸುಮಾರು 800 ಕೆಜಿ ನಕಲಿ ಪನೀರ್ ವಶಪಡಿಸಿಕೊಂಡಿದ್ದಾರೆ. ಇದು ಹೊಸ ವಿಷಯವೇನಲ್ಲ.ಇದಕ್ಕೂ ಮಂಚೆಯೂ ಎಫ್ಎಸ್ಎಸ್ಎಐ ತಂಡವು ಉತ್ತರಾಖಂಡದಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 500 ಕೆಜಿ ನಕಲಿ ಪನೀರ್ (Paneer) ವಶಪಡಿಸಿಕೊಂಡಿದ್ದರು. ಕಲಬೆರಕೆ ಅಥವಾ ನಕಲಿ ಆಹಾರ ಸೇವನೆಯು ಆರೋಗ್ಯಕ್ಕೆ ಅನೇಕ ಗಂಭೀರ ಹಾನಿಯನ್ನುಂಟು ಮಾಡುತ್ತದೆ.
ನಕಲಿ ಅಥವಾ ಕಲಬೆರಕೆ ಪನೀರ್ ತಿನ್ನೋದ್ರಿಂದ ಹೊಟ್ಟೆ ಸಮಸ್ಯೆಗಳು, ಫುಡ್ ಪಾಯ್ಸನ್ (food poison), ಅಲರ್ಜಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು ಮತ್ತು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನುಂಟು ಮಾಡುತ್ತದೆ. ಮೊದಲಿಗೆ ನಕಲಿ ಪನೀರ್ ಹೇಗೆ ತಯಾರಿಸುತ್ತಾರೆ? ಅದನ್ನು ತಿನ್ನೋದ್ರಿಂದ ಏನೆಲ್ಲಾ ಸಮಸ್ಯೆ ಆಗಬಹುದು ಮತ್ತು ನಕಲಿ ಪನೀರ್ ಗುರುತಿಸೋದು ಹೇಗೆ ಅನ್ನೋದನ್ನ ತಿಳಿಯೋಣ.
ಕಲಬೆರಕೆ ಪನೀರ್ ಹೇಗೆ ತಯಾರಿಸಲಾಗುತ್ತದೆ?
ನಿಜವಾದ ಪನೀರ್ ಬದಲಿಗೆ, ಕಲಬೆರಕೆ ಪನೀರ್ ಸಹ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ. ಇದನ್ನು ಸಿಂಥೆಟಿಕ್ ಚೀಸ್ ಎಂದೂ ಕರೆಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದನ್ನು ತಯಾರಿಸಲು ಯೂರಿಯಾ, ಬಿಟುಮೆನ್ ಬಣ್ಣ, ಡಿಟರ್ಜೆಂಟ್, ಸುಸೆಲೆರಿಕ್ ಆಮ್ಲದಂತಹ ರಾಸಾಯನಿಕಗಳನ್ನು ಬಳಸ್ತಾರೆ. ಇದರಲ್ಲಿ, ನಿಜವಾದ ಹಾಲಿನ ಬದಲು ಸಂಸ್ಕರಿಸಿದ ಗೋಧಿ ಹಿಟ್ಟನ್ನು (ಮೈದಾ) ಸೇರಿಸ್ತಾರೆ. ಅಷ್ಟೇ ಅಲ್ಲ, ಸೋಡಿಯಂ ಬೈಕಾರ್ಬೊನೇಟ್ ಅಂದರೆ ಅಡಿಗೆ ಸೋಡಾವನ್ನು ಹಾಲಿಗೆ ಸೇರಿಸಲಾಗುತ್ತದೆ. ನಂತರ ಈ ಮಿಶ್ರಣಕ್ಕೆ ತಾಳೆ ಎಣ್ಣೆ ಅಥವಾ ಸಸ್ಯಜನ್ಯ ಎಣ್ಣೆಯನ್ನು ಸೇರಿಸಲಾಗುತ್ತದೆ. ಕೊನೆಗೆ, ಈ ಮಿಶ್ರಣಕ್ಕೆ ಬೇಕಿಂಗ್ ಪೌಡರ್ (Baking poweder) ಸೇರಿಸಲಾಗುತ್ತದೆ ಮತ್ತು ಪಾತ್ರೆಯಲ್ಲಿ ಹಾಕಿ ಫ್ರೀಜ್ ಮಾಡಲು ಬಿಡಲಾಗುತ್ತದೆ. ಇದನ್ನು ಗಟ್ಡಿಯಾದ ನಂತರವೇ ಪನೀರ್ ನಂತೆ ಮಾರುತ್ತಾರೆ.
ನಕಲಿ ಪನೀರ್ ತಿನ್ನೋದ್ರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತೆ?
ಪನೀರ್ ಪ್ರಪಂಚದಾದ್ಯಂತ ಜನಪ್ರಿಯ ಡೈರಿ ಉತ್ಪನ್ನ (diary product), ಆದರೆ ಅನೇಕ ಬಾರಿ ಕಲಬೆರಕೆ ಮಾಡುವವರು ಲಾಭ ಗಳಿಸಲು ಹಾನಿಕಾರಕ ವಸ್ತುಗಳನ್ನು ಸೇರಿಸುತ್ತಾರೆ. ಈ ಕಲಬೆರಕೆ ಪನೀರ್ ತೂಕವನ್ನು ಹೆಚ್ಚಿಸಲು ಅಥವಾ ಚೆನ್ನಾಗಿ ಕಾಣುವಂತೆ ಮಾಡಲು ಬಳಸಲಾಗುತ್ತದೆ. ಕಲಬೆರಕೆ ಪನೀರ್ ತಿನ್ನೋದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಜೀರ್ಣಕಾರಿ ಸಮಸ್ಯೆಗಳು
ಕಲಬೆರಕೆ ಪನೀರ್ ಹೆಚ್ಚಾಗಿ ಪಿಷ್ಟ ಅಥವಾ ಸಿಂಥೆಟಿಕ್ ಹಾಲನ್ನು ಹೊಂದಿರುತ್ತದೆ, ಇದು ಜೀರ್ಣಕಾರಿ ಸಮಸ್ಯೆಗಳಿಗೆ (digestion problem) ಕಾರಣವಾಗಬಹುದು. ಕಲಬೆರಕೆ ಪನೀರ್‌ಗೆ ಸೇರಿಸಲಾದ ಹಾನಿಕಾರಕ ವಸ್ತುಗಳು ಹೊಟ್ಟೆ ಸಮಸ್ಯೆಯನ್ನುಂಟು ಮಾಡುತ್ತದೆ. ಅಶುದ್ಧ ಪನೀರ್ ತಿನ್ನುವುದು ಅತಿಸಾರಕ್ಕೆ ಕಾರಣವಾಗಬಹುದು. ಕಲಬೆರಕೆ ಪನೀರ್ ತಿನ್ನೋದ್ರಿಂದ ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆಗಳು ಉಂಟಾಗಬಹುದು.
ಅಲರ್ಜಿಯಾಗುತ್ತೆ
ಡಿಟರ್ಜೆಂಟ್ ಗಳು ಮತ್ತು ರಾಸಾಯನಿಕಗಳಂತಹ ವಸ್ತುಗಳನ್ನು ಪನೀರ್ ಗೆ ಸೇರಿಸೋದರಿಂದ ಚರ್ಮದ ದದ್ದು (skin allergy), ಉಸಿರಾಟದ ತೊಂದರೆ, ತುಟಿಗಳು, ನಾಲಿಗೆ ಮತ್ತು ಗಂಟಲಿನಲ್ಲಿ ಊತ ಸೇರಿದಂತೆ ಹಲವು ಅಲರ್ಜಿ ಸಮಸ್ಯೆಗಳು ಉಂಟಾಗುತ್ತೆ.
ಮೂತ್ರಪಿಂಡಕ್ಕೆ ಹಾನಿ
ಕಲಬೆರಕೆ ಪನೀರ್ ಗೆ ಯೂರಿಯಾ ಅಥವಾ ಸಂಶ್ಲೇಷಿತ ಹಾಲಿನಂತಹ ವಸ್ತುಗಳನ್ನು ಸೇರಿಸೋದ್ರಿಂದ ಅವು ಮೂತ್ರಪಿಂಡಗಳನ್ನು (kidney problem) ಹಾನಿಗೊಳಿಸಬಹುದು ಮತ್ತು ದೀರ್ಘಾ ಕಾಲದವರೆಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು - ಮೂತ್ರಪಿಂಡದ ನೋವು, ಮೂತ್ರವಿಸರ್ಜನೆ ಕಡಿಮೆಯಾಗುವುದು ಮತ್ತು ದೇಹದಲ್ಲಿ ದ್ರವ ಶೇಖರಣೆ ಊತಕ್ಕೆ ಕಾರಣವಾಗುತ್ತದೆ.
ಕ್ಯಾನ್ಸರ್ ಅಪಾಯ
ಕಲಬೆರಕೆ ವಸ್ತುಗಳನ್ನು ನಿಯಮಿತವಾಗಿ ತಿನ್ನೋದ್ರಿಂದ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತೆ ಮತ್ತು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಕಲಬೆರಕೆ ಪನೀರ್ ಗೆ ಕ್ಯಾನ್ಸರ್ ಕಾರಕವಾಗಿರುವ ಫಾರ್ಮಾಲ್ಡಿಹೈಡ್ ನಂತಹ ರಾಸಾಯನಿಕಗಳನ್ನು ಸೇರಿಸ್ತಾರೆ. ದೀರ್ಘಕಾಲದವರೆಗೆ ಇಂತಹ ವಸ್ತುಗಳ ಸೇವನೆಯು ದೇಹದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಕಲಬೆರಕೆ ಪನೀರ್ ಹೇಗೆ ಗುರುತಿಸುವುದು?
ಇದಕ್ಕಾಗಿ ಎಫ್ಎಸ್ಎಸ್ಎಐ ಕೆಲವು ಸುಲಭ ಮಾರ್ಗಗಳನ್ನು ನೀಡಿದೆ. ಮೊದಲ ವಿಧಾನದ ಪ್ರಕಾರ, ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಪನೀರ್ ಅನ್ನು ಕುದಿಸಿ. ಬೇಯಿಸಿದ ಪನೀರ್ ಗೆ ಕೆಲವು ಹನಿ ಅಯೋಡಿನ್ ಲಿಕ್ವಿಡ್ ಸೇರಿಸಿ. ಪನೀರ್ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ, ಅದು ಕಲಬೆರಕೆಯಾಗಿದೆ. ಪನೀರ್ ಬಣ್ಣವು ಹಾಗೇ ಉಳಿದರೆ, ಅದು ನಿಜವೆಂದು ಅರ್ಥಮಾಡಿಕೊಳ್ಳಿ. ಸೂಚನೆ: ಸ್ಟಾರ್ಚ್ ಕಲಬೆರಕೆಯನ್ನು ಪತ್ತೆ ಹಚ್ಚುವಲ್ಲಿ ಮಾತ್ರ ಈ ಪರೀಕ್ಷೆ ಪರಿಣಾಮಕಾರಿ.
ಎರಡನೇ ವಿಧಾನದ ಪ್ರಕಾರ, ಬೇಯಿಸಿದ ಪನೀರನ್ನು ನೀರಿನಲ್ಲಿ ತಣ್ಣಗಾಗಲು ಬಿಡಿ. ಈ ನೀರಿಗೆ ಸ್ವಲ್ಪ ತೊಗರಿ ಬೇಳೆಯನ್ನು ಸೇರಿಸಿ ಮತ್ತು 10 ನಿಮಿಷಗಳ ಕಾಲ ಇರಿಸಿ. ನೀರಿನ ಬಣ್ಣವು ತಿಳಿ ಕೆಂಪು ಬಣ್ಣಕ್ಕೆ ತಿರುಗಿದರೆ, ಪನೀರ್ ಕಲಬೆರಕೆಯಾಗಿರಬಹುದು. ನೀರಿನ ಬಣ್ಣ ಬದಲಾಗದಿದ್ದರೆ, ನೀವು ತಂದ ಪನೀರ್ ತಿನ್ನಲು ಯೋಗ್ಯವಾಗಿದೆ. ಈ ಪರೀಕ್ಷೆಯು ಬಣ್ಣದ ಕಲಬೆರಕೆಯನ್ನು ಪತ್ತೆ ಹಚ್ಚುವಲ್ಲಿ ಮಾತ್ರ ಪರಿಣಾಮಕಾರಿ.
ಮೂರನೆಯ ವಿಧಾನದ ಪ್ರಕಾರ, ನೀವು ಪನೀರ್ ಖರೀದಿಸಿದಾಗ, ನೀವು ಚೆಕ್ ಮಾಡಬೇಕಾದ್ದು ಏನಂದ್ರೆ ಅದರ ವಾಸನೆ, ಅದು ಹುಳಿಯಾಗಿರಬಾರದು. ಪನೀರ್ ಓಪನ್ ಮಾಡಿದ ಕೂಡ್ಲೇ ಅದನ್ನ ಪರೀಕ್ಷಿಸಿ ನೋಡಿ, ಪನೀರ್ ಅಗೆಯಲು ತುಂಬಾ ಗಟ್ಟಿ ಅಥವಾ ರಬ್ಬರ್ ನಂತಿದ್ರೆ ಅದು ನಕಲಿ ಪನೀರ್ ಅನ್ನೋದು ತಿಳ್ಕೊಳಿ.