MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • ಆಲೂಗಡ್ಡೆ ಚಿಪ್ಸ್ ಮಾಡಿ ಮಾರುತ್ತಿದ್ದ ವ್ಯಕ್ತಿಯೀಗ ಭರ್ತಿ 4,000 ಕೋಟಿ ಆಸ್ತಿಯ ಮಾಲೀಕ!

ಆಲೂಗಡ್ಡೆ ಚಿಪ್ಸ್ ಮಾಡಿ ಮಾರುತ್ತಿದ್ದ ವ್ಯಕ್ತಿಯೀಗ ಭರ್ತಿ 4,000 ಕೋಟಿ ಆಸ್ತಿಯ ಮಾಲೀಕ!

ಹಲವು ಆಗರ್ಭ ಶ್ರೀಮಂತರು ಸಹ ಕಡುಬಡತನದಲ್ಲಿ ಬೆಳೆದು ಜೀವನವನ್ನು ಕಟ್ಟಿಕೊಂಡಿದ್ದಾರೆ. ಅಂಥಾ ವ್ಯಕ್ತಿಗಳಲ್ಲೊಬ್ಬರು ಚಂದುಭಾಯಿ ವಿರಾನಿ.  10ನೇ ಪಾಸ್ ಆಗಿ ವಿದ್ಯಾಭ್ಯಾಸ ಸ್ಥಗಿತಗೊಳಿಸಿದ್ದ ಚಂದುಭಾಯಿ,ಕೇವಲ 10,000 ರೂಪಾಯಿಗಳಲ್ಲಿ ಉದ್ಯಮವನ್ನು ಆರಂಭಿಸಿ ಬಿಲಿಯನೇರ್ ಆಗಿದ್ದಾರೆ.

2 Min read
Vinutha Perla
Published : Oct 28 2023, 09:19 AM IST
Share this Photo Gallery
  • FB
  • TW
  • Linkdin
  • Whatsapp
18

ಇವತ್ತಿಗೆ ಬಿಲಿಯನೇರ್‌ ಆಗಿರುವ ವ್ಯಕ್ತಿಗಳು ಯಾರೂ ದಿಢೀರ್ ಆಗಿ ಶ್ರೀಮಂತರಾದವರಲ್ಲ. ಹಲವು ಆಗರ್ಭ ಶ್ರೀಮಂತರು ಸಹ ಕಡುಬಡತನದಲ್ಲಿ ಬೆಳೆದು ಜೀವನವನ್ನು ಕಟ್ಟಿಕೊಂಡಿದ್ದಾರೆ. ಅಂಥಾ ವ್ಯಕ್ತಿಗಳಲ್ಲೊಬ್ಬರು ಚಂದುಭಾಯಿ ವಿರಾನಿ.  10ನೇ ಪಾಸ್ ಆಗಿ ವಿದ್ಯಾಭ್ಯಾಸ ಸ್ಥಗಿತಗೊಳಿಸಿದ್ದ ಚಂದುಭಾಯಿ, ಕೇವಲ 10,000 ರೂಪಾಯಿಗಳಲ್ಲಿ ಉದ್ಯಮವನ್ನು ಆರಂಭಿಸಿದರು.

28

ಚಂದುಭಾಯಿ ವಿರಾನಿ, ಹಲವು ಸಂಕಷ್ಟಗಳನ್ನು ಅನುಭವಿಸಿ ಜೀವನದಲ್ಲಿ ಸಕ್ಸಸ್ ಆದ ಉದ್ಯಮಿ. ಜೀವನದ ಆರಂಭದಲ್ಲಿ, ಚಂದುಭಾಯಿ ಆರ್ಥಿಕ ಸಂಕಷ್ಟಗಳನ್ನು ಅನುಭವಿಸಿದರು. ಜೀವನ ನಿರ್ವಹಣೆಗೆ ಹಲವಾರು ಕೆಲಸ ಮಾಡಿದರು. ಕೊನೆಗೂ ಬಿಸಿನೆಸ್ ಅವರ ಕೈ ಹಿಡಿಯಿತು. ಕೋಟ್ಯಾಂತರ ಲಾಭ ಗಳಿಸಲು ಕಾರಣವಾಯಿತು.

38

ಚಂದುಭಾಯಿ ವಿರಾನಿ ಯಾರು?
ಗುಜರಾತಿಯಾದ ಚಂದುಭಾಯಿ ಸಾಧಾರಣ ಮನೆತನದಲ್ಲಿ ಬೆಳೆದವರು. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರು ಹತ್ತನೇ ತರಗತಿಯ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು. ತಂದೆಯ ಸಣ್ಣ ಉಳಿತಾಯದ ಹಣದಿಂದ, ಕುಟುಂಬವು ಉತ್ತಮ ಭವಿಷ್ಯದ ಭರವಸೆಯಲ್ಲಿ ಧುಂಡೋರಾಜಿಗೆ ಸ್ಥಳಾಂತರಗೊಂಡಿತು.

48

ಕೇವಲ 20,000 ಹೂಡಿಕೆಯೊಂದಿಗೆ, ಚಂದುಭಾಯಿ ಮತ್ತು ಅವರ ಸಹೋದರರಾದ ಮೇಘಜಿಭಾಯ್ ಮತ್ತು ಭಿಖುಭಾಯಿ ಮೊದಲು ರಾಜ್‌ಕೋಟ್ ಕೃಷಿ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳ ಮಾರುಕಟ್ಟೆಯನ್ನು ಪ್ರವೇಶಿಸಿದರು. ಅದರೆ ಎರಡು ವರ್ಷಗಳಲ್ಲಿ ವ್ಯಾಪಾರವು ನಿಧಾನವಾಯಿತು ಮತ್ತು ವಿಫಲವಾಯಿತು.

58

ಸಹೋದರರು ಹಲವಾರು ಅರೆಕಾಲಿಕ ಉದ್ಯೋಗಗಳನ್ನು ಮಾಡಲು ಶುರು ಮಾಡಿದರು. ಸಿನಿಮಾ ಸೀಟುಗಳನ್ನು ಫಿಕ್ಸ್ ಮಾಡುವುದರಿಂದ ಹಿಡಿದು ಪೋಸ್ಟರ್ ಹಾಕುವುದು ಮತ್ತು ಸಿನಿಮಾಗಳಿಗೆ ಕ್ಯಾಂಟೀನ್ ನಡೆಸುವುದು ಎಲ್ಲವನ್ನೂ ಚಂದೂಭಾಯಿ ಮಾಡಿದರು. ಆದರೂ ಹಣಕಾಸಿನ ತೊಂದರೆಗಳು ಉಲ್ಬಣಗೊಂಡವು. ಆದರೂ ಅವರು ಕಷ್ಟಪಟ್ಟು ಸಾಲವನ್ನು ತೀರಿಸಿದರು. ಅತ್ಯುತ್ತಮ ಕ್ಯಾಂಟೀನ್ ಸೇವೆಗಾಗಿ ಶ್ಲಾಘಿಸಿದ ಸಹೋದರರಿಗೆ ತಿಂಗಳಿಗೆ 1000 ರೂ. ದೊರಕಿತ್ತು.

68

ಈ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಚಂದುಭಾಯಿ ಪ್ರೇಕ್ಷಕರು ಆಹಾರಕ್ಕಾಗಿ ಹೆಚ್ಚು ಹಣ ಖರ್ಚು ಮಾಡಲು ಹಿಂಜರಿಯುವುದನ್ನು ಗಮನಿಸಿದರು. ಹೀಗಾಗಿ ಕೇವಲ 10,000 ರೂ.ಗಳನ್ನು ಬಳಸಿಕೊಂಡು ಮನೆಯಲ್ಲಿ ಶೆಡ್‌ನಲ್ಲಿ ಚಿಪ್ಸ್‌ಗಳನ್ನು ಮಾಡಲು ಪ್ರಾರಂಭಿಸಿದರು. ಚಂದುಭಾಯಿ ಚಿಪ್ಸ್‌ನ ರುಚಿ ಮತ್ತು ಗುಣಮಟ್ಟಕ್ಕಾಗಿ ಸಾಕಷ್ಟು ಪ್ರಶಂಸೆಗಳನ್ನು ಪಡೆದ ನಂತರ ಬಿಸಿನೆಸ್‌ನ್ನು ದೊಡ್ಡ ಮಟ್ಟಕ್ಕಾಗಿ ಕೊಂಡೊಯ್ಯಲು ನಿರ್ಧರಿಸಿದರು.

78

1989ರಲ್ಲಿ ರಾಜ್‌ಕೋಟ್‌ನ ಅಜಿ ಜಿಐಡಿಸಿಯಲ್ಲಿ ರಾಜ್ಯದ ಮೊದಲ ಆಲೂಗೆಡ್ಡೆ ವೇಫರ್ ಸಂಸ್ಥೆಯನ್ನು ಸ್ಥಾಪಿಸಿದರು. 1992ರಲ್ಲಿ, ಮೂರು ವರ್ಷಗಳ ಅವಧಿಯ ನಂತರ, ವಿರಾನಿ ಸಹೋದರರು ಬಾಲಾಜಿ ವೇಫರ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಇದು ಪ್ರತಿದಿನ 10 ಮಿಲಿಯನ್ ಕೆಜಿ ನಮ್ಕೀನ್ ಮತ್ತು 6.5 ಮಿಲಿಯನ್ ಕೆಜಿ ಆಲೂಗಡ್ಡೆಗಳನ್ನು ದೇಶಾದ್ಯಂತ ತನ್ನ ನಾಲ್ಕು ವಿಸ್ತಾರವಾದ ಕಾರ್ಖಾನೆಗಳಲ್ಲಿ ತಯಾರಿಸುತ್ತದೆ.

88

ಹಲವು ವರದಿಗಳ ಪ್ರಕಾರ, ಪ್ರಸ್ತುತ ಕಂಪನಿಯ ಆದಾಯವು ಗಮನಾರ್ಹವಾದ 4,000 ಕೋಟಿ ರೂಪಾಯಿಗಳನ್ನು ತಲುಪಿದೆ. ಕಂಪನಿಯ 5,000 ಬದ್ಧತೆ ಹೊಂದಿರುವ ಕೆಲಸಗಾರರನ್ನು ಹೊಂದಿದೆ. ಅವರಲ್ಲಿ 50% ಮಹಿಳೆಯರು ಅನ್ನೋದು ವಿಶೇಷ. ಉದ್ಯಮಶೀಲತೆಯ ಉತ್ಸಾಹಕ್ಕೆ ಪ್ರೇರಕ ಉದಾಹರಣೆಯೆಂದರೆ ಚಂದುಭಾಯಿ ವಿರಾನಿ ಅವರ ಪ್ರಯಾಣ.

About the Author

VP
Vinutha Perla

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved