ಬ್ಲ್ಯಾಕ್ ಟೀ ಮತ್ತು ಬ್ಲ್ಯಾಕ್ ಕಾಫಿ: ಯಾವುದೊಳ್ಳೆಯದು?
First Published Dec 24, 2020, 1:45 PM IST
ವರ್ಷದ ನಮ್ಮ ನೆಚ್ಚಿನ ಸಮಯ, ಚಳಿಗಾಲ ಈಗಾಗಲೇ ಆರಂಭವಾಗಿದೆ. ಹಲವೆಡೆ ತೀವ್ರ ಚಳಿಯಿಂದ ಜನರು ನಡುಗುತ್ತಿದ್ದಾರೆ. ಈ ಚಳಿಯ ವಾತಾವರಣದಲ್ಲಿ ಬಿಸಿ ಬಿಸಿ ಕಾಫಿ ಅಥವಾ ಟೀ ಕುಡಿಯುವಷ್ಟು ನೆಮ್ಮದಿ ಮತ್ತೊಂದಿಲ್ಲ. ಈ ಪಾನೀಯಗಳು ನಿಮ್ಮ ಬೆಚ್ಚಗಿನ ಆರೋಗ್ಯವನ್ನು ಕಾಪಾಡುತ್ತವೆ ಮಾತ್ರವಲ್ಲ, ನಿಮ್ಮ ದಿನವನ್ನು ಆರಂಭಿಸಲು ಅಗತ್ಯವಾದ ಎನರ್ಜಿ ಬೂಸ್ಟ್ ಅನ್ನು ಸಹ ನಿಮಗೆ ಒದಗಿಸುತ್ತದೆ.

ಚಹಾ, ಕಾಫಿಯನ್ನು ಪ್ರತಿದಿನ ನಾವು ತಪ್ಪದೆ ಸೇವನೆ ಮಾಡುತ್ತೇವೆ. ಈ ಪಾನೀಯಗಳನ್ನು ಆರೋಗ್ಯಕರವಾಗಿಸಲು, ಸಕ್ಕರೆ ಮತ್ತು ಹಾಲನ್ನು ತ್ಯಜಿಸುವುದು ಅತ್ಯುತ್ತಮ ಮಾರ್ಗವಾಗಿದ್ದು, ಇದು ನಿಮಗೆ ಬ್ಲ್ಯಾಕ್ ಕಾಫಿ ಮತ್ತು ಬ್ಲ್ಯಾಕ್ ಟೀಯಾಗಿ ಮಾರ್ಪಡುತ್ತದೆ. ಪಾನೀಯಗಳಲ್ಲಿ ಯಾವ ಪಾನೀಯಗಳು ಒಂದಕ್ಕಿಂತ ಒಂದು ವಿಭಿನ್ನ ರುಚಿಯನ್ನು ಹೊಂದಿದೆಯಾದರೂ ಇವೆರಡರಲ್ಲಿ ಯಾವುದು ಆರೋಗ್ಯಕರವಾಗಿದೆ ಎಂಬುದನ್ನು ನೋಡೋಣ?

ಬ್ಲ್ಯಾಕ್ ಕಾಫಿ
ಎಲ್ಲಾ ಫಿಟ್ ನೆಸ್ ಉತ್ಸಾಹಿಗಳು ಬ್ಲ್ಯಾಕ್ ಕಾಫಿಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಜಿಮ್ಗೆ ಹೋಗುವ ಮುನ್ನ ಒಂದು ಕಪ್ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಗೆ ಉತ್ತೇಜನ ನೀಡಬಹುದು ಎಂದು ಹೇಳಲಾಗುತ್ತದೆ. ಕಾಫಿಯಲ್ಲಿ ಕೆಫಿನ್ ಅಂಶ ಅಧಿಕವಾಗಿರುವ ಕಾರಣ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯ ಪ್ರಮಾಣವು ನಿಮಗೆ ದೊರೆಯುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?