ಬೆಂಗಳೂರಿನಲ್ಲಿ ಸಿಗೋ ಈ ಎರಡು ಫುಡ್ ವಿರಾಟ್ ಕೊಹ್ಲಿಗೆ ಸಿಕ್ಕಾಪಟ್ಟೆ ಇಷ್ಟವಂತೆ!
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ನಮ್ಮ ಬೆಂಗಳೂರಿನ ಜತೆಗೆ ಅವಿನಾಭಾವ ಸಂಬಂಧವಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಹಾಗೆಯೇ ಕೊಹ್ಲಿಗೆ ಬೆಂಗಳೂರಿನಲ್ಲಿ ಸಿಗೋ ಎರಡು ಫುಡ್ ಸಿಕ್ಕಾಪಟ್ಟೆ ಇಷ್ಟವಂತೆ.
ಸಿಲಿಕಾನ್ ಸಿಟಿ ಬೆಂಗಳೂರು, ಹಲವರಿಗೆ ಅಚ್ಚುಮೆಚ್ಚು. ದೇಶದ ವಿವಿಧ ಮೂಲೆಗಳಿಂದ ಜನರು ಎಜುಕೇಶನ್, ಉದ್ಯೋಗ, ಬಿಸಿನೆಸ್ ಎಂದು ಈ ನಗರಕ್ಕೆ ಬರುತ್ತಾರೆ. ಇಲ್ಲಿನ ಕೂಲ್ ಕೂಲ್ ವೆದರ್‌ಗೆ ಮಾರು ಹೋಗಿ ಇಲ್ಲಿಯೇ ಸೆಟಲ್ ಆದವರೂ ಇದ್ದಾರೆ. ಬೆಂಗಳೂರು ಇಲ್ಲಿನ ಸ್ವಾದಿಷ್ಟಕರ ಫುಡ್‌ನಿಂದಾಗಿಯೂ ಎಲ್ಲೆಡೆ ಫೇಮಸ್ ಆಗಿದೆ.
ಹಲವಾರು ವರ್ಷಗಳಿಂದ ನಡೆಸಲ್ಪಡುತ್ತಿರುವ ಐಕೋನಿಕ್ ಹೊಟೇಲ್‌ಗಳು ಬೆಂಗಳೂರಿನಲ್ಲಿವೆ. ತಮ್ಮದೇ ಆದ ಸ್ವಾದಿಷ್ಟಕರ ರುಚಿಯಿಂದಾಗಿ ಫೇಮಸ್ ಆಗಿವೆ. ಇದಲ್ಲದೆ ಬೆಂಗಳೂರಿನದ್ದೇ ಆದ ಕೆಲವೊಂದು ಆದ ಸ್ಪೆಷಲ್ ತಿನಿಸುಗಳಿವೆ. ಇವನ್ನು ಬೇರೆಡೆ ತಯಾರಿಸುತ್ತಾರದೂ ಸಿಲಿಕಾನ್ ಸಿಟಿಯಲ್ಲಿ ಅದನ್ನು ಸವಿಯೋದು ಒಂದು ಸ್ಪೆಷಲ್ ಫೀಲ್.
ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ದೇಶ-ವಿದೇಶದ ರಾಜಕಾರಣಿಗಳು ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಹೀಗೆ ಈ ನಗರಕ್ಕೆ ಭೇಟಿ ನೀಡುವವರು ಇಲ್ಲಿನ ರುಚಿಕರವಾದ ಆಹಾರವನ್ನು ಸವಿಯೋದನ್ನು ಮರೆಯೋದಿಲ್ಲ. ಅಂಥವರಲ್ಲಿ ಒಬ್ಬರು ಕ್ರಿಕೆಟರ್ ವಿರಾಟ್ ಕೊಹ್ಲಿ.
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ನಮ್ಮ ಬೆಂಗಳೂರಿನ ಜತೆಗೆ ಅವಿನಾಭಾವ ಸಂಬಂಧವಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಒಡೆತನದ ಪ್ರಖ್ಯಾತ ರೆಸ್ಟೋರೆಂಟ್ 'ಒನ್8 ಕಮ್ಯೂನ್' ಓಪನ್ ಆಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಜತೆಗಿನ ಒಡನಾಟವನ್ನು ವಿರಾಟ್ ಕೊಹ್ಲಿ ಮೆಲುಕು ಹಾಕಿದ್ದಾರೆ.
ಮಾತ್ರವಲ್ಲ ಕೊಹ್ಲಿ, ಬೆಂಗಳೂರಿನಲ್ಲಿ ತಮ್ಮ ನೆಚ್ಚಿನ ಆಹಾರ ಯಾವುದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಖ್ಯಾತ ಕಾಮಿಡಿಯನ್ ಹಾಗೂ ಯೂಟ್ಯೂಬರ್ ರಾಹುಲ್ ಸುಬ್ರಮಣಿಯನ್ ಜತೆಗಿನ ಮಾತುಕತೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನನ್ನ ನೆಚ್ಚಿನ ಫುಡ್ ಕ್ರಿಸ್ಪೀ ದೋಸೆ ಹಾಗೂ ಚಿಕನ್ 65 ಎಂದು ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಿಗೋ ದೋಸೆಯ ರುಚಿಗೆ ಮತ್ಯಾವುದೂ ಸಾಟಿಯಾಗುವುದಿಲ್ಲ ಎಂದಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಒಡೆತನದ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಅನ್ನು ಬೆಂಗಳೂರಿಗೆ ವಿಸ್ತರಿಸಿದ್ದಾರೆ.
ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯೇ ಈ ರೆಸ್ಟೋರೆಂಟ್ ಓಪನ್ ಆಗಿದೆ. ಈ ಮೊದಲು ಮುಂಬೈ, ಪುಣೆ ಹಾಗೂ ಕೋಲ್ಕತಾದಲ್ಲಿ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಐಪಿಎಲ್ ಟೂರ್ನಿಯಲ್ಲಿ 2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ, ಬೆಂಗಳೂರಿನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಈಗ ಕೊಹ್ಲಿ ಬೆಂಗಳೂರಿನಲ್ಲೂ ತಮ್ಮ ರೆಸ್ಟೋರೆಂಟ್ ಆರಂಭಿಸಿದ್ದಾರೆ.