ಬೆಂಗಳೂರು ಶೈಲಿಯ Authentic ಚಿತ್ರಾನ್ನ ಮಾಡೋ ವಿಧಾನ! ಬಾಯಲಿಟ್ರೆ ಕರಗೋ ಹಾಗೆ ತಯಾರಿಸುವ ರೆಸಿಪಿ
Lemon Rice: ಮನೆಯಲ್ಲೇ ಮಾಡಿ ಪಕ್ಕಾ ಬೆಂಗಳೂರು ಶೈಲಿಯ ಚಿತ್ರಾನ್ನ. ಈ ಲೇಖನದಲ್ಲಿ ಸುಲಭವಾಗಿ ಮತ್ತು ತ್ವರಿತವಾಗಿ ತಯಾರಿಸಬಹುದಾದ ಚಿತ್ರಾನ್ನದ ರೆಸಿಪಿಯನ್ನು ನೀಡಲಾಗಿದೆ.

ಮೂಲ ಬೆಂಗಳೂರಿನ ನಿವಾಸಿಗಳಲ್ಲಿ ಮಾಡುವ ಚಿತ್ರಾನ್ನ ರುಚಿ ನಿಮಗೆ ಯಾವುದೇ ಹೋಟೆಲ್‌ಗಳು ಸಿಗಲ್ಲ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಪೌಡರ್ ಬಳಸಿದ್ರೂ ಪಕ್ಕಾ ಬೆಂಗಳೂರು ಶೈಲಿಯ ಚಿತ್ರಾನ್ನದ ರುಚಿ ಸಿಗಲ್ಲ.
ಈ ಲೇಖನದಲ್ಲಿ ಪಕ್ಕಾ ಬೆಂಗಳೂರಿಗರ ಶೈಲಿಯಲ್ಲಿ ತಯಾರಿಸಲಾಗುವ ಚಿತ್ರಾನ್ನ ರೆಸಿಪಿ ಇಲ್ಲಿದೆ. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಆಹಾರ ಎವರ್‌ಗ್ರೀನ್ ತಿಂಡಿಗಳಲ್ಲಿ ಒಂದಾಗಿದೆ. ಅನ್ನಕ್ಕೆ ವಿಶೇಷ ಒಗ್ಗರಣೆ ಹಾಕಿದ್ರೆ ರುಚಿಯಾದ ಚಿತ್ರಾನ್ನ ಸಿದ್ಧವಾಗುತ್ತದೆ.
Image: Freepik
ಬೇಕಾಗುವ ಸಾಮಾಗ್ರಿಗಳು
ಅನ್ನ: 2 ಕಪ್, ಸಾಸವೆ ಮತ್ತು ಜೀರಿಗೆ: 1 ಟೀ ಸ್ಪೂನ್, ಕಡ್ಲೆಬೇಳೆ: 1/2 ಟೀ ಸ್ಪೂನ್, ಉದ್ದಿನಬೇಳೆ: 1/2 ಟೀ ಸ್ಪೂನ್, ಕಡಲೆಬೀಜ: 2 ಟೀ ಸ್ಪೂನ್, ಇಂಗು: 1/2 ಟೀ ಸ್ಪೂನ್, ಈರುಳ್ಳಿ: 1, ಹಸಿಮೆಣಸಿನಕಾಯಿ: 2, ಒಣ ಬ್ಯಾಡಗಿ ಮೆಣಸಿನಕಾಯಿ: 2, ನಿಂಬೆಹಣ್ಣಿನ ರಸ: 2 ಟೀ ಸ್ಪೂನ್, ಅರಿಶಿನ ಪುಡಿ: 1/2 ಟೀ ಸ್ಪೂನ್, ಎಣ್ಣೆ: 4 ಟೀ ಸ್ಪೂನ್, ಕರಿಬೇವು: 6 ರಿಂದ 8 ಎಲೆ, ತೆಂಗಿನಕಾಯಿ ತುರಿ: 4 ಟೀ ಸ್ಪೂನ್, ಕೋತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು
ಚಿತ್ರಾನ್ನ ಮಾಡುವ ವಿಧಾನ
ಮೊದಲಿಗೆ ಈರುಳ್ಳಿ, ಹಸಿಮೆಣನಕಾಯಿ ಉದ್ದವಾಗಿ ಕತ್ತರಿಸಿಕೊಳ್ಳಬೇಕು. ಹಾಗೆ ಕೋತ್ತಂಬರಿ ಸೊಪ್ಪುನ್ನು ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ಹಾಗೆ ಎರಡು ಕಪ್ ಆಗುವಷ್ಟು ಅನ್ನವನ್ನು ಮಾಡಿಕೊಂಡು ಅದನ್ನು ತಟ್ಟೆಗೆ ಹಾಕಿ ಆರಿಸಿಕೊಳ್ಳಿ. ಒಂದು ಬ್ಯಾಡಗಿ ಮೆಣಸಿನಕಾಯಿಯನ್ನು ನಾಲ್ಕರಿಂದ ಐದು ತುಂಡುಗಳನ್ನಾಗಿ ಮಾಡಿಕೊಳ್ಳಬೇಕು.
ಈಗ ಒಲೆ ಆನ್ ಮಾಡ್ಕೊಂಡು ಅಗಲವಾದ ಪಾತ್ರೆಯನ್ನು ಇರಿಸಿಕೊಳ್ಳಿ. ಪಾತ್ರೆಗೆ ಮೊದಲು ಎಣ್ಣೆ ಹಾಕಿಕೊಂಡು ಬಿಸಿಯಾದ ನಂತರ ಮೊದಲು ಸಾಸಿವೆ ಹಾಕಿಕೊಳ್ಳಿ. ಸಾಸಿವೆ ಸಿಡಿಯಲು ಆರಂಭಿಸುತ್ತಿದ್ದಂತೆ ಕಡಲೆ ಬೀಜ, ಉದ್ದಿನ ಬೇಳೆ ಮತ್ತು ಕಡಲೆ ಬೀಜ ಸೇರಿಸಿ ಕಂದು ಬಣ್ಣ ಬರೋವರೆಗೂ ಫ್ರೈ ಮಾಡಿಕೊಳ್ಳಬೇಕು.
ತದನಂತರ ಬ್ಯಾಡಗಿ ಮೆಣಸಿನಕಾಯಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಆ ಬಳಿಕ ಈರುಳ್ಳಿ ಮತ್ತು ಕರೀಬೇವು ಸೇರಿಸಬೇಕು. ಈರುಳ್ಳಿಯ ಹಸಿ ವಾಸನೆ ಹೋದನಂತರ ಇಂಗು, ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಈಗ ಈ ಒಗ್ಗರಣೆಗೆ ಮಾಡಿಕೊಂಡಿರುವ ಅನ್ನ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳು. ಕೊನೆಗೆ ನಿಂಬೆ ರಸ, ಕೋತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ತುರಿ ಸೇರಿಸಿದ್ರೆ ಸವಿಯಲು ರುಚಿಯಾದ ಬೆಂಗಳೂರು ಶೈಲಿಯ ಅಥೆಂಟಿಕ್ ಚಿತ್ರಾನ್ನ ಸಿದ್ಧವಾಗುತ್ತದೆ.