ಫೈವ್ ಸ್ಟಾರ್ ಶೈಲಿಯಂತೆ ಚಿಕನ್ ಗ್ರೇವಿ, ಕರ್ರಿ ಥಿಕ್ ಆಗಿಸಲು ಈ 2 ಪದಾರ್ಥಗಳನ್ನು ಸೇರಿಸಿ
ಚಿಕನ್ ಅಥವಾ ಮಟನ್ ಗ್ರೇವಿ ಗಾಢವಾಗಲು ಈ ಎರಡು ಪದಾರ್ಥಗಳನ್ನು ಸೇರಿಸುವುದು ಉತ್ತಮ ಟಿಪ್ಸ್. ಈ ಎರಡು ಪದಾರ್ಥಗಳಿಂದ ಚಿಕನ್ ಅಡುಗೆ ರುಚಿ ಹೆಚ್ಚಾಗುತ್ತದೆ.

ಎಲ್ಲಾ ಮಸಾಲೆ ಹಾಕಿದ್ರು ಚಿಕನ್ ಸಾಂಬಾರ್ ಅಥವಾ ಗ್ರೇವಿ ಗಾಢವಾಗಲ್ಲ ಅನ್ನೋದು ಹಲವರ ಮಾತು. ಆದ್ರೆ ಹೋಟೆಲ್‌ಗಳಲ್ಲಿ ಚಿಕನ್ ಗ್ರೇವಿ ನೋಡಿದರೆ ಅದು ಥಿಕ್ ಆಗಿರುತ್ತದೆ. ಚಿಕನ್ ಅಥವಾ ಮಟನ್ ಗ್ರೇವಿ ಮಾಡಲು ಎರಡು ಪ್ರಮುಖವಾದ ವಸ್ತುಗಳನ್ನು ಸೇರಿಸಿಕೊಳ್ಳಲಾಗುತ್ತದೆ.

ಚಿಕನ್ ಗ್ರೇವಿ ಗಾಢವಾಗಿದ್ರೆ ಚಪಾತಿ ಅಥವಾ ರೋಟಿಗೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಕೆಲವರು ಚಿಕನ್ ಗ್ರೇವಿ ಮಾಡಲು ಹೆಚ್ಚು ಮಸಾಲೆ ಸೇರಿಸುತ್ತಾರೆ. ಹೀಗೆ ಮಾಡೋದರಿಂದ ಅಡುಗೆಯ ರುಚಿಯೇ ಕೆಡುತ್ತದೆ.

ಯಾವುದೇ ಗ್ರೇವಿ ಅಥವಾ ಸಾಂಬಾರ್ ಇರಲಿ ನಿಮಗೆ ಅದು ಗಾಢವಾಗಿ ಬೇಕೇನಿಸಿದರೆ ಎರಡು ಪದಾರ್ಥಗಳನ್ನು ಸೇರಿಸಬೇಕಾಗುತ್ತದೆ. ಈ ಎರಡು ಪದಾರ್ಥಗಳನ್ನು ಕ್ರಮಬದ್ಧವಾಗಿ ಸೇರಿಸಿದ್ರೆ ಚಿಕನ್/ಮಟನ್ ಅಡುಗೆ ಗಾಢವಾಗಿಯೂ ಇರುತ್ತೆ ಮತ್ತು ರುಚಿಯಾಗಿಯೂ ಇರುತ್ತದೆ.

ಈರುಳ್ಳಿ ಮತ್ತು ಗೋಡಂಬಿಯನ್ನು ಸೇರಿಸೋದರಿಂದ ಚಿಕನ್ ಅಥವಾ ಮಟನ್ ಗ್ರೇವಿಯನ್ನು ಗಾಢವಾಗಿ ಮಾಡಬಹುದು. ಈ ಎರಡು ಪದಾರ್ಥಗಳನ್ನು ಹೇಗೆ ಸೇರಿಸೋದು ಅಂತ ನೋಡೋಣ ಬನ್ನಿ.

ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ತವೆ ಮೇಲೆ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಈರುಳ್ಳಿ ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಗೋಡಂಬಿಯನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿಟ್ಟುಕೊಳ್ಳಬೇಕು. ನಂತರ ಅದನ್ನು ಸಹ ಸಣ್ಣದಾಗಿ ರುಬ್ಬಿಕೊಳ್ಳಬೇಕು.

ಈರುಳ್ಳಿ ಮತ್ತು ಗೋಡಂಬಿ ಪೇಸ್ಟ್ ಸೇರಿಸೋದರಿಂದ ಮಟನ್/ಚಿಕನ್ ಗ್ರೇವಿಯ ಥಿಕ್‌ನೆಸ್ ಹೆಚ್ಚಾಗುತ್ತದೆ. ಕೆಲವರು ಗೋಡಂಬಿ ಬದಲಾಗಿ ಬಿಳಿ ಎಳ್ಳು ಸಹ ಬಳಕೆ ಮಾಡುತ್ತಾರೆ. ಪೇಸ್ಟ್ ಮಾಡದೇ ಈರುಳ್ಳಿ ಸೇರಿಸಿದ್ರೆ ಅಡುಗೆಯಲ್ಲಿ ಸ್ವೀಟ್‌ನೆಸ್ ಹೆಚ್ಚಾಗುತ್ತದೆ.