ಅಬ್ಬಾ, ಟೊಮ್ಯಾಟೋ ಸೂಪಿನಿಂದ ಇಷ್ಟೆಲ್ಲಾ ಆರೋಗ್ಯ ಸುಧಾರಿಸುತ್ತಾ?
First Published Nov 26, 2020, 4:40 PM IST
ಚಳಿಗಾಲ ಬಂದಾಗ ಬೆಚ್ಚಗಿನ ಸೂಪ್ ಕುಡೀಬೇಕು ಅನ್ನೋ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಚುಮು ಚುಮು ಚಳಿಗೆ ಸೂಪ್ ಆರಾಮ ಮತ್ತು ಸಾಂತ್ವನ ನೀಡುತ್ತದೆ. ಸೂಪ್ ರುಚಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಇದು ಕೇವಲ ಬಾಯಿಗೆ ರುಚಿ ನೀಡುವುದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಎನ್ನುವ ವಿಷಯ ನಿಮಗೆ ಗೊತ್ತೇ? ಹೌದು. ಶೀತ ಮತ್ತು ಜ್ವರದಿಂದ ದೂರವಿರಲು ಸೂಪ್ ನಿಮಗೆ ಸಹಾಯ ಮಾಡುತ್ತವೆ ಮತ್ತು ಅವುಗಳಲ್ಲಿ ಹೆಚ್ಚಿನವು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.

ಸೂಪ್ ನ ಅತ್ಯಂತ ಜನಪ್ರಿಯ ಡಿಶ್ ಎಂದರೆ ಟೊಮೆಟೊ ಸೂಪ್. ಕೆನೆ ವಿನ್ಯಾಸದೊಂದಿಗೆ ಇದರ ಸಿಹಿ ಮತ್ತು ಕಟುವಾದ ಪರಿಮಳವು ಒಂದು ಸಂಪೂರ್ಣ ಆನಂದ ನೀಡುತ್ತದೆ. ಇದಲ್ಲದೆ, ಸೂಪ್ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ
ಟೊಮೆಟೊ ಸೂಪ್ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ, ಇದರಲ್ಲಿ ಲೈಕೋಪೀನ್, ಫ್ಲೇವೊನೈಡ್ ಗಳು ಮತ್ತು ವಿಟಮಿನ್ ಸಿ ಮತ್ತು ಇ ಸೇರಿದಂತೆ ಅನೇಕ ವಿಟಾಮಿನ್ ಸೇರಿವೆ. ಉತ್ಕರ್ಷಣ ನಿರೋಧಕಗಳನ್ನು ಸೇವಿಸುವುದರಿಂದ ಬೊಜ್ಜು ಮತ್ತು ಹೃದಯ ಕಾಯಿಲೆಯಂತಹ, ಕ್ಯಾನ್ಸರ್ ಮತ್ತು ಉರಿಯೂತ-ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?