ಸುಖ ನಿದ್ರೆಗೆ ಬಿಸಿ ಹಾಲು: ಈ ಸಿಂಪಲ್ ಮಿಲ್ಕ್ ರೆಸಿಪಿ ಟ್ರೈ ಮಾಡಿ
ಬರೀ ಹಾಲಲ್ಲ, ಹಾಲಿನ ಕೆಲವು ಸರಳ ರೆಸಿಪಿಗಳು ಮಲಗು ಮುನ್ನ ಸೇವಿಸಲು ಬೆಸ್ಟ್. ಸುಖನಿದ್ರೆಗಾಗಿ ನೀವು ಈ ಕೆಳಗಿನ ಹಾಲಿನ ರೆಸಿಪಿಗಳನ್ನು ಟ್ರೈ ಮಾಡಬಹುದು.
ಮಲಗಿದ ಕೂಡಲೇ ನೆಮ್ಮದಿಯಾಗಿ ಮಗುವಿನಂತೆ ನಿದ್ರಿಸಬೇಕೆಂದು ಯಾರು ಬಯಸುವುದಿಲ್ಲ ಹೇಳಿ..? ಮಲಗೋ ಮುನ್ನ ಹಾಲು ಕುಡಿಯೋದ್ರಿಂದ ಚೆನ್ನಾಗಿ ನಿದ್ರಿಸಬಹುದು. ನಿದ್ರಿಸೋ ಮುನ್ನ ಹಾಲು ಕುಡಿಯೋದರ ಪ್ರಯೋಜನಗಳಿವು.
ಗುಡ್‌ನೈಟ್ ಅಂದರೆ ಸಾಲದು, ಚೆನ್ನಾಗಿ ನಿದ್ರಿಸಬೇಕು: ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿದರೆ ನೀವು ಸುಖವಾಗಿ ನಿದ್ರಿಸಬಹುದು.
ಇದು ನಿಮ್ಮ ಆತಂಕಗಳನ್ನು ದೂರ ಮಾಡಲು ಸಹಕಾರಿ. ಬರೀ ಹಾಲಲ್ಲ, ಹಾಲಿನ ಕೆಲವು ಸರಳ ರೆಸಿಪಿಗಳು ಮಲಗು ಮುನ್ನ ಸೇವಿಸಲು ಬೆಸ್ಟ್. ಸುಖನಿದ್ರೆಗಾಗಿ ನೀವು ಈ ಕೆಳಗಿನ ಹಾಲಿನ ರೆಸಿಪಿಗಳನ್ನು ಟ್ರೈ ಮಾಡಬಹುದು.
ಬಾಳೆ ಹಣ್ಣಿನ ರಸಾಯನ ಅಥವಾ ಬನಾನಾ ಮಿಲ್ಕ್: ನೋಯುತ್ತಿರುವ ಸ್ನಾಯುಗಳು ನಿಮ್ಮನ್ನು ಸುಖವಾಗಿ ಮಲಗಲು ಬಿಡವು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ಸ್ನಾಯುವಿನ ಆರೋಗ್ಯಕ್ಕೆ ಪರಿಣಾಮಕಾರಿ. ಮೆಗ್ನೀಸಿಯಮ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಬಾಳೆಹಣ್ಣಿನಲ್ಲಿರುವ ಅಮಿನೋ ಆಮ್ಲ ನಿದ್ದೆಯನ್ನು ನಿಯಂತ್ರಸಿಉತ್ತದೆ. ಇದು ನಿದ್ರಾಹೀನತೆ ಮತ್ತು ನಿದ್ರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ತಯಾರಿಸುವ ವಿಧಾನ: 1 ಹೆಪ್ಪುಗಟ್ಟಿದ ಬಾಳೆಹಣ್ಣನ್ನು 1 ಕಪ್ ಹಾಲಿನೊಂದಿಗೆ ಮಿಶ್ರಣ ಮಾಡಿ. ಹೆಚ್ಚು ಸಿಹಿಗಾಗಿ ನೀವು 1 ಟೀ ಸ್ಪೂನ್ ಜೇನುತುಪ್ಪ ಸೇರಿಸಬಹುದು. ತಕ್ಷಣ ಸೇವಿಸಿ.
ಲಾವೆಂಡರ್ ಮಿಲ್ಕ್: ಡೆಸರ್ಟ್‌ಗಳಲ್ಲಿ ಬಳಸಲಾಗೋ ಲಾವೆಂಡರ್ ಹಾಲಿಗೂ ಬೆರೆಸಬಹುದು. ಇದರಲ್ಲಿರುವ ಅಂಶ ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತೆ.
ತಯಾರಿಸುವ ವಿಧಾನ: 1 ಗ್ಲಾಸ್ ಹಾಲನ್ನು ಪಾತ್ರೆಗೆ ಹಾಕಿ 1 ಟೀಸ್ಪೂನ್ ಜೇನುತುಪ್ಪ ಮತ್ತು 2 ಹನಿ ವೆನಿಲ್ಲಾ ಎಸೆನ್ಸ್ ಹಾಕಿ. ಲ್ಯಾವೆಂಡರ್ ಟೀ ಬ್ಯಾಗ್ ಸೇರಿಸಿ ಕುದಿಸಿ ತೆಗೆಯಿರಿ. ಸ್ವಲ್ಪ ತಣ್ಣಗಾಗಲು ಬಿಟ್ಟು ಕುಡಿಯಿರಿ.
Milk recipes
ತಯಾರಿಸುವ ವಿಧಾನ: ಹಾಲನ್ನು ಬಿಸಿ ಮಾಡಿ ಮತ್ತು ಅದಕ್ಕೆ ½ ಚೆರ್ರಿ ರಸವನ್ನು ಸೇರಿಸಿ. ನಂತರ 1 ಟೀಸ್ಪೂನ್ ಜೇನುತುಪ್ಪ ಬೆರೆಸಿ. ½ ಟೀಸ್ಪೂನ್ ಒಣಗಿದ ಗುಲಾಬಿ ದಳಗಳು ಹಾಕಿ ಕುಡಿಯಬಹುದು.
ಅರಶಿನ ಹಾಲು: ನಿದ್ರಾ ಹೀನತೆಯಿಂದ ಬಳಲುತ್ತಿದ್ದರೆ ಈ ರೆಸಿಪಿ ಸಹಕಾರಿ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇದು ನಿಮ್ಮ ಒತ್ತಡ ಕಡಿಮೆ ಮಾಡಿ ಸುಖ ನಿದ್ರೆ ಕೊಡುತ್ತದೆ.
ಮಾಡುವ ವಿಧಾನ: ಒಂದು ಗ್ಲಾಸ್ ಹಾಲು ಬಿಸಿ ಮಾಡಿ, ಟೀ ಚಿಟಿಕೆ ಅರಶಿನ ಸೇರಿಸಿ. ಏಲಕ್ಕಿ, ಶುಂಠಿಯನ್ನೂ ಸ್ವಲ್ಪ ಸೇರಿಸಿ. ಒಂದು ಸ್ಪೂನ್ ಜೇನು ಇರಲಿ. ಮಿಕ್ಸ್ ಮಾಡಿ ತಣಿಸಿ ಕುಡಿಯಿರಿ.
ಗ್ರೀನ್ ಟೀ ಹಾಲು: ಮಲಗುವ ಮುನ್ನ ಟೀ ಕುಡಿಯಬಾರದು ಎಂಬ ನಂಬಿಕೆ ಇದೆ. ಆದರೆ ಗ್ರೀನ್ ಟೀಯಲ್ಲಿ ಹೆಚ್ಚು ಕೆಫೀನ್ ಇರುವುದಿಲ್ಲ. ಇದನ್ನು ಹಾಲಿನೊಂದಿಗೆ ಬೆರೆಸಿ ಮಲಗುವ ಮುನ್ನ ಕುಡಿಯಬಹುದು.
ತಯಾರಿಸುವ ವಿಧಾನ: ಬಿಸಿ ಹಾಲಿಗೆ ಸ್ವಲ್ಪ ಗ್ರೀನ್ ಟೀ ಹುಡಿ ಹಾಕಿ 1 ಚಮಚ ಜೇನು ಹಾಕಿ. ಸ್ವಲ್ಪ ಹೊತ್ತು ಬಿಟ್ಟು ಕುಡಿಯಿರಿ.
ಸ್ಟ್ರಾಬೆರಿ ಮಿಲ್ಕ್: ಸ್ಟ್ರಾಬೆರಿ ಅಂದ್ರೇನೇ ಬಹಳಷ್ಟು ಜನರಿಗೆ ಪ್ರಿಯ. ಸ್ಟ್ರಾಬೆರಿ ಹಾಲು ಇನ್ನೂ ರುಚಿ. ಇದರಲ್ಲಿ ವಿಟಮಿನ್ ಬಿ-6 ಹೇರಳವಾಗಿದೆ.
ತಯಾರಿಸುವ ವಿಧಾನ: 4 ಟೀಸ್ಪೂನ್ ಸ್ಟ್ರಾಬೆರಿ ರಸವನ್ನು 1 ಕಪ್ ಹಾಲಿಗೆ ಬೆರೆಸಿ. 1 ಟೀಸ್ಪೂನ್ ವೆನಿಲ್ಲಾ ಮತ್ತು 1 ಟೀಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಿ. 1 ಟೀಸ್ಪೂನ್ ಕತ್ತರಿಸಿದ ಸ್ಟ್ರಾಬೆರಿ ತುಣುಕು ಹಾಕಿ ಕುಡಿಯಿರಿ.