- Home
- Life
- Food
- ವೀಕೆಂಡ್‌ಗೆ ಪ್ಲ್ಯಾನ್ ಮಾಡ್ತೀರಾ? ದೇಶದ 30 ಶ್ರೇಷ್ಠ ಬಾರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ ಐದು ಬಾರ್‌ಗಳು!
ವೀಕೆಂಡ್‌ಗೆ ಪ್ಲ್ಯಾನ್ ಮಾಡ್ತೀರಾ? ದೇಶದ 30 ಶ್ರೇಷ್ಠ ಬಾರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ ಐದು ಬಾರ್‌ಗಳು!
30BestBarsIndia ಸಂಸ್ಥೆ ಬೆಂಗಳೂರಿನ ಐದು ಬಾರ್‌ಗಳನ್ನು 2024ರ ಭಾರತದ 30 ಅತ್ಯುತ್ತಮ ಬಾರ್‌ಗಳ ಪಟ್ಟಿಯಲ್ಲಿ ಸೇರಿಸಿದೆ. ಮುರೋ, ಕೋಪಿಟಾಸ್, ಜಡ್‌ಎಲ್‌ಬಿ 23, ಸೋಕ ಮತ್ತು ಬಾರ್ ಸ್ಪಿರಿಟ್ ಫಾರ್ವರ್ಡ್ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ ಬಾರ್‌ಗಳಾಗಿವೆ.

30BestBarsIndia ಶ್ರೇಯಾಂಕ ನೀಡುವ ದೇಶೀಯ ಸಂಸ್ಥೆ ಇತ್ತೀಚೆಗೆ ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿದೆ. ಈ ವೇಳೆ 2024ರ ದೇಶದ 30 ಅತ್ಯುತ್ತಮ ಬಾರ್‌ಗಳನ್ನು ಪಟ್ಟಿ ಮಾಡಿದೆ.
ಇತ್ತೀಚೆಗೆ ಅಂದರೆ, ಜನವರಿ 13 ರಂದು 30BestBarsIndia ಸಂಸ್ಥೆ 2024ರ ದೇಶದ 30 ಅತ್ಯುತ್ತಮ ಬಾರ್‌ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ದೇಶದ 30 ಶ್ರೇಷ್ಠ ಬಾರ್‌ಗಳ ಪಟ್ಟಿಯನ್ನು ತನ್ನ ಇನ್ಸ್‌ಟಾಗ್ರಾಮ್ ಪೋಸ್ಟ್‌ನಲ್ಲಿ ರಿಲೀಸ್ ಮಾಡಿದೆ. ದೇಶದ 270 ಶ್ರೇಷ್ಠ ಬಾರ್ ಉತ್ಸಾಹಿಗಳು, ಕಾಕ್‌ಟೇಲ್ ತಜ್ಞರು ಹಾಗೂ ಇಂಡಸ್ಟ್ರಿಯ ಒಳಗಿರುವವರು ಇದ್ದ ಜ್ಯೂರಿ ಈ ಪಟ್ಟಿಯನ್ನು ಸಿದ್ದ ಮಾಡಿದ್ದಾಗಿ ತಿಳಿಸಿದೆ.
ಇನ್ನೂ ವಿಶೇಷ ಏನೆಂದರೆ, 30 ಶ್ರೇಷ್ಠ ಬಾರ್‌ಗಳ ಪಟ್ಟಿಯಲ್ಲಿ ಬೆಂಗಳೂರಿನ ಐದು ಬಾರ್‌ಗಳು ಸ್ಥಾನ ಪಡೆದಿವೆ. ಅದರಲ್ಲೂ ಮೂರು ಬಾರ್‌ಗಳು ಇದೇ ಮೊದಲ ಬಾರಿಗೆ ಇದರಲ್ಲಿ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ. ಈ ಐದು ಬಾರ್‌ಗಳ ವಿವರ ಇಲ್ಲಿದೆ.
ಮುರೋ (MURO): ಬೆಂಗಳೂರಿನ ಚರ್ಚ್‌ಸ್ಟ್ರೀಟ್ ರಸ್ತೆಯಲ್ಲಿರುವ ಮುರೋ 16ನೇ ಸ್ಥಾನ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಮುರೋ ಈ ಶ್ರೇಯಾಂಕದಲ್ಲಿ ಎಂಟ್ರಿಯಾಗಿದೆ. ಸಾಮಾನ್ಯವಾಗಿ ಇಬ್ಬರಿಗೆ ಇಲ್ಲಿ 2800 ರೂಪಾಯಿ ಖರ್ಚಾಗುತ್ತದೆ.
ಕೋಪಿಟಾಸ್, ಫೋರ್ ಸೀಸನ್ಸ್ ಹೋಟೆಲ್ (Copitas, Four Seasons Hotel): ಬೆಂಗಳೂರಿನ ಆರ್‌ಟಿ ನಗರದಲ್ಲಿ ಈ ಬಾರ್ ಇದೆ. ಬಾರ್ ಫುಡ್, ಕಾಂಟಿನೆಂಟಲ್ ಹಾಗೂ ಐಷಾರಾಮಿ ಮದ್ಯಗಳಿಗೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಇಬ್ಬರಿಗೆ ಇಲ್ಲಿ 3 ಸಾವಿರ ರೂಪಾಯಿ ಖರ್ಚಾಗುತ್ತದೆ. 30 ಶ್ರೇಷ್ಠ ಬಾರ್‌ಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ.
ಜಡ್‌ಎಲ್‌ಬಿ 23, ದಿ ಲೀಲಾ ಪ್ಯಾಲೇಸ್ (ZLB23, The Leela Palace): ಎಚ್‌ಎಎಲ್ 2ನೇ ಹಂತದ ಕೋಡಿಹಳ್ಳಿ ಅಥವಾ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಲೀಲಾ ಪ್ಯಾಲೇಸ್‌ನಲ್ಲಿ ಜಡ್‌ಎಲ್‌ಬಿ 23 ಬಾರ್ ಇದೆ. ಕಳೆದ ವರ್ಷ ಕೂಡ ಈ ಬಾರ್‌ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು.30 ಶ್ರೇಷ್ಠ ಬಾರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಸೋಕ (SOKA): ಇಂದಿರಾನಗರದಲ್ಲಿರುವ ಬಾರ್ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದ್ದು, ದೇಶದ ಮೂರನೇ ಅತ್ಯುತ್ತಮ ಬಾರ್ ಎನಿಸಿದೆ. ಬಾರ್ ಫುಡ್ ಹಾಗೂ ಕಾಂಟಿನೆಂಟಲ್‌ಗೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಇಬ್ಬರಿಗೆ ಇಲ್ಲಿ 1 ಸಾವಿರ ರೂಪಾಯಿ ಖರ್ಚಾಗುತ್ತದೆ.
ಬಾರ್ ಸ್ಪಿರಿಟ್ ಫಾರ್ವರ್ಡ್ (Bar Spirit Forward): ಲ್ಯಾವೆಲ್ಲೆ ರಸ್ತೆಯಲ್ಲಿರುವ ಹೋಟೆಲ್ ಸದರ್ನ್ ಸ್ಟಾರ್‌ನಲ್ಲಿ ಈ ಬಾರ್ ಇದ್ದು, ಕಾಂಟಿನೆಂಟಲ್, ಏಷ್ಯನ್ ಸೇರಿದಂತೆ ವಿವಿಧ ಮಾದರಿಯ ಫುಡ್ ನೀಡುತ್ತದೆ. 30 ಶ್ರೇಷ್ಠ ಬಾರ್‌ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದ್ದು, ಅತ್ಯುತ್ತಮ ಎನಿಸುವಂತೆ 2ನೇ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಇಬ್ಬರಿಗೆ ಇಲ್ಲಿ 2600 ರೂಪಾಯಿ ಖರ್ಚಾಗುತ್ತದೆ.
ಒರಿಜಿನಲ್ ಚಾಯ್ಸ್ ವಿಸ್ಕಿ ಮಾಲೀಕರಿಂದ ಕರ್ನಾಟಕದಲ್ಲಿ 600 ಕೋಟಿ ವೆಚ್ಚದ ಹೊಸ ಪ್ಲ್ಯಾಂಟ್!
ಮೊದಲ ಸ್ಥಾನದಲ್ಲಿ ಲಯರ್ ಬಾರ್ ಸ್ಥಾನ ಪಡೆದುಕೊಂಡಿದೆ. ನವದೆಹಲಿಯಲ್ಲಿ ಇರುವ ಬಾರ್ ಇದಾಗಿದೆ. ವಸಂತ್ ವಿಹಾರದಲ್ಲಿ ಈ ಬಾರ್ ಇದೆ. ಅದರೊಂದಿಗೆ ದೇಶದ ಉಳಿದ ಶ್ರೇಷ್ಠ ಬಾರ್‌ಗಳ ಲಿಸ್ಟ್ ಇಲ್ಲಿದೆ.
ಹುಲಿ ಬಳಿಕ ಮಾರುಕಟ್ಟೆಗೆ ಬಂದ 'ಬೆಲ್ಲ' ರಮ್, ಭಾರತ-ಅಮೆರಿಕದಲ್ಲಿ ಬಿಡುಗಡೆ ಮಾಡಿದ ಅಮೃತ್ ಡಿಸ್ಟಲರಿ!