ಈ ರಾಶಿಯವರು ಯಾವುದಕ್ಕೂ ಹೆದರುವುದಿಲ್ಲ, ಗಟ್ಟಿ ಗುಂಡಿಗೆಯ ಜನ
ತುಂಬಾ ಜನರಿಗೆ ಭಯವಿಲ್ಲದೆ ಇರಲು ಇಷ್ಟ. ಯಾವುದೇ ಅಪಾಯ ಎದುರಾದರೂ ನಗುತ್ತಾ ಎದುರಿಸುತ್ತಾರೆ. ಯಾವುದೇ ಗೊತ್ತಿಲ್ಲದ ಜಾಗದಲ್ಲಿ ತುಂಬಾ ನಂಬಿಕೆಯಿಂದ ಹೆಜ್ಜೆ ಹಾಕುತ್ತಾರೆ.

ಮನುಷ್ಯ ಅಂದ ಮೇಲೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಷಯದಲ್ಲಿ ಭಯ ಇರುತ್ತೆ. ಕೆಲವರಿಗೆ ಕತ್ತಲೆ ಅಂದ್ರೆ ಭಯ, ಇನ್ನು ಕೆಲವರಿಗೆ ನೀರು ಅಂದ್ರೆ ಭಯ ಇರುತ್ತೆ. ಇನ್ನೂ ಕೆಲವರು ಮನೆಯಲ್ಲಿ ದೊಡ್ಡವರಿಗೋ, ಆಫೀಸಲ್ಲಿ ಬಾಸ್ ಗೋ ಹೆದರುತ್ತಾರೆ. ಇದು ಕಾಮನ್. ಆದರೆ, ಭಯ ಅಂದ್ರೆ ಏನು ಅಂತ ಗೊತ್ತಿಲ್ಲದವರೂ ಇರ್ತಾರೆ. ಅವರು ಜೀವನದಲ್ಲಿ ಯಾರಿಗೆ ಹೆದರಲ್ಲ. ಯಾವುದಕ್ಕೂ ಹೆದರಲ್ಲ. ಹಾಗಾದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಯವಿಲ್ಲದೆ ಜೀವಿಸುವ ರಾಶಿಗಳು ಯಾವವು ನೋಡೋಣ..
1.ಮೇಷ ರಾಶಿ..
ಮೇಷ ರಾಶಿಯವರು ಭಯಕ್ಕೆ ಭಯಪಡುತ್ತಾರೆ. ಈ ರಾಶಿಯನ್ನು ಅಂಗಾರಕ ಆಳುತ್ತಾನೆ. ಅವರು ಸಹಜವಾಗಿಯೇ ಯೋಧರು. ಚಿಕ್ಕಂದಿನಿಂದಲೇ ಅವರ ಧೈರ್ಯವನ್ನು ತೋರಿಸುತ್ತಾರೆ. ಟೀಚರ್ಸ್ ಗೂ ಹೆದರಲ್ಲ. ಕ್ಲಾಸ್ ರೂಮಲ್ಲಿ ತುಂಟಾಟ ಮಾಡೋದು, ಟೀಚರ್ಸ್ ಹೇಳಿದ ಮಾತು ಕೇಳದೆ ತಿರುಗಿ ಮಾತಾಡೋದು ಇಂಥವೆಲ್ಲಾ ಮಾಡ್ತಾರೆ. ತಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುತ್ತಾರೆ ಆದರೆ ಹೆದರಲ್ಲ. ಇವರಿಗೆ ಧೈರ್ಯ ಜಾಸ್ತಿ. ಹೊಸ ಉದ್ಯೋಗಕ್ಕೆ ಸೇರಬೇಕೆಂದರೂ, ಹೊಸ ವ್ಯಾಪಾರ ಶುರು ಮಾಡಬೇಕೆಂದರೂ ಇವರಿಂದಲೇ ಸಾಧ್ಯ.
2.ವೃಶ್ಚಿಕ ರಾಶಿ..
ವೃಶ್ಚಿಕ ರಾಶಿಯವರು ಹುಟ್ಟಿನಿಂದಲೇ ನಿರ್ಭಯವಾಗಿರುತ್ತಾರೆ. ಸಾಮಾನ್ಯವಾಗಿ ಈ ರಾಶಿಯವರು ಸೈಲೆಂಟಾಗಿ ಇರ್ತಾರೆ. ಯಾರು ಎಷ್ಟೇ ಬೆದರಿಸಿದರೂ ಬೇಗ ಜಗ್ಗಲ್ಲ, ಬೆದರಲ್ಲ. ಧೈರ್ಯವಾಗಿ ಮುಂದೆ ಹೆಜ್ಜೆ ಹಾಕ್ತಾರೆ. ಯಾವ ವಿಷಯದಲ್ಲೂ ಹೆದರಲ್ಲ. ನಿಮಗೆ ಏನಾದರೂ ಕಷ್ಟ ಬಂದಾಗ ಪಕ್ಕದಲ್ಲಿ ವೃಶ್ಚಿಕ ರಾಶಿಯವರು ಇದ್ರೆ ಸಾಕು. ಸಮಸ್ಯೆಯಿಂದ ಹೊರಗೆ ಬರ್ತೀರಿ.
3.ಸಿಂಹ ರಾಶಿ..
ಸಿಂಹ ರಾಶಿಯನ್ನು ಸೂರ್ಯ ಆಳುತ್ತಾನೆ. ಈ ರಾಶಿಯವರು ಕೂಡ ಬೇಗ ಯಾವುದಕ್ಕೂ ಹೆದರಲ್ಲ. ಚಿಕ್ಕ ವಯಸ್ಸಿನಲ್ಲಿ ಕ್ಲಾಸಲ್ಲಿ ಲೀಡರ್ ಆಗಿ ಇರ್ತಾರೆ. ಟೀಚರ್ಸ್ ಗೆ ಹೆದರಲ್ಲ. ಸಿಂಹ ರಾಶಿಯವರು ನಿರ್ಭಯಿಗಳು. ಅವರು ಶ್ರದ್ಧೆಯಿಂದ ಅಭಿವೃದ್ಧಿ ಹೊಂದುತ್ತಾರೆ. ಜೀವನ ಪಯಣದಲ್ಲಿ ತೊಂದರೆ ಆದರೂ ಕೂಡ ಬೆಳಕಿಗೆ ಬರುವವರೆಗೂ ಧೈರ್ಯವಾಗಿ ಇರ್ತಾರೆ. ಇವರ ಧೈರ್ಯ ನೋಡಿ ಯಾರಾದರೂ ಶಾಕ್ ಆಗಬೇಕಷ್ಟೇ.
4.ಧನು ರಾಶಿ..
ಧನಸ್ಸು ರಾಶಿಯವರು ಕೂಡ ತುಂಬಾ ಸಾಹಸಿಯಾಗಿ ಇರ್ತಾರೆ. ಯಾವುದೇ ಅಡ್ವೆಂಚರ್ ಮಾಡಬೇಕೆಂದರೂ ಇವರೇ ಮುಂದೆ ಇರ್ತಾರೆ. ಅವರು ಮಾಡಬೇಕು ಅಂದುಕೊಂಡಿದ್ದನ್ನು ಮಾಡ್ತಾರೆ. ಯಾವುದಕ್ಕೂ ಹೆದರಲ್ಲ. ಯಾವುದೇ ರಿಸ್ಕ್ ತೆಗೆದುಕೊಳ್ಳಬೇಕೆಂದರೂ ಮುಂದೆ ಇರ್ತಾರೆ. ಫಲಿತಾಂಶಕ್ಕೆ ಹೆದರಲ್ಲ. ಅವರು ಮಾಡಬೇಕು ಅಂದುಕೊಂಡ ಕೆಲಸ ಮಾಡಲೇಬೇಕು.