MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಪಿರಿಯಡ್ಸ್ ಆಗಿ ಎಷ್ಟು ದಿನದ ನಂತರ ಮಹಿಳೆಯರು ದೇವಾಲಯಕ್ಕೆ ಹೋಗಬಹುದು?

ಪಿರಿಯಡ್ಸ್ ಆಗಿ ಎಷ್ಟು ದಿನದ ನಂತರ ಮಹಿಳೆಯರು ದೇವಾಲಯಕ್ಕೆ ಹೋಗಬಹುದು?

ಧರ್ಮಗ್ರಂಥಗಳಲ್ಲಿ, ಪಿರಿಯಡ್ಸ್ ಆಗಿ ಕೆಲ ದಿನಗಳವರೆಗೆ ದೇವಾಲಯಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ. ಹಾಗಿದ್ರೆ ಪಿರಿಯಡ್ಸ್ ನಂತರ ಯಾವ ದಿನದಂದು ದೇವಾಲಯವನ್ನು ಪ್ರವೇಶಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.  

2 Min read
Suvarna News
Published : Jul 04 2023, 04:53 PM IST
Share this Photo Gallery
  • FB
  • TW
  • Linkdin
  • Whatsapp
110

ನಮ್ಮ ದೇಶದಲ್ಲಿ ಪಿರಿಯಡ್ಸ್ ಗೆ (periods) ಸಂಬಂಧಿಸಿದಂತೆ ವಿಭಿನ್ನ ಪದ್ಧತಿಗಳನ್ನು ಮಾಡಲಾಗಿದೆ. ಧರ್ಮಗ್ರಂಥಗಳನ್ನು ನಂಬುವುದಾದರೆ, ಅದರಲ್ಲಿ ಬಹಳಷ್ಟು ವಿಷಯಗಳನ್ನ ತಿಳಿಸಲಾಗಿದೆ, ಅಂದ್ರೆ ಈ ಸಮಯದಲ್ಲಿ ಯಾವುದೇ ಪೂಜೆಯಲ್ಲಿ ಭಾಗವಹಿಸಬಾರದು ಮತ್ತು ದೇವಾಲಯದಂತಹ ಪವಿತ್ರ ಸ್ಥಳಕ್ಕೆ ಹೋಗಬಾರದು ಅನ್ನೋ ವಿಷಯಗಳಿವೆ. ಇವುಗಳನ್ನು ಮನೆಯ ಹಿರಿಯರು ಹೇಳುವುದನ್ನು ಸಹ ಕೇಳಿರಬಹುದು.
 

210

ಪಿರಿಯಡ್ಸ್‌ಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ನಾವು ಶತಮಾನಗಳಿಂದ ಅನುಸರಿಸುತ್ತಿದ್ದೇವೆ ಮತ್ತು ಅವು ನಮ್ಮ ನಂಬಿಕೆಗಳ ಸಂಕೇತವೂ ಹೌದು. ಆದರೆ ಪಿರಿಯಡ್ಸ್ ಮುಗಿದ ಎಷ್ಟು ದಿನಗಳ ನಂತರ ದೇವಾಲಯವನ್ನು (temple entry) ಪ್ರವೇಶಿಸುವುದು ಸರಿ ಮತ್ತು ಇದಕ್ಕೆ ಕಾರಣಗಳು ಯಾವುವು ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲೂ ಇದೆ ಅಲ್ವಾ? ಹಾಗಿದ್ದರೆ, ಇಲ್ಲಿ ನಾವು ಅದರ ಬಗ್ಗೆ ವಿವರವಾಗಿ ಹೇಳಲಿದ್ದೇವೆ.  
 

310

ಋತುಚಕ್ರದ ಸಮಯದಲ್ಲಿ ದೇವಾಲಯಕ್ಕೆ ಪ್ರವೇಶವನ್ನು ಏಕೆ ನಿಷೇಧಿಸಲಾಗಿದೆ? 
ಪಿರಿಯಡ್ಸ್  ಸಮಯದಲ್ಲಿ ದೇವಾಲಯಕ್ಕೆ ಪ್ರವೇಶವನ್ನು ನಿಷೇಧಿಸಿರುವ ಬಗ್ಗೆ ಧರ್ಮಗ್ರಂಥಗಳಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ.  ಅವುಗಳ ಬಗ್ಗೆ ಇಲ್ಲಿ ತಿಳಿಯೋಣ

410

ವಾಸ್ತವವಾಗಿ, ಧರ್ಮಗ್ರಂಥಗಳ ಪ್ರಕಾರ ಹಿಂದಿನ ಕಾಲದಲ್ಲಿ ಮಹಿಳೆಯರು ಋತುಸ್ರಾವಕ್ಕೆ ಒಳಗಾದಾಗ, ಅವರು ದೈಹಿಕವಾಗಿ ಅಸ್ವಸ್ಥರಾಗಿರುತ್ತಿದ್ದರು ಮತ್ತು ಇದರೊಂದಿಗೆ, ಹಿಂದೆ ನೀರಿನ ಸರಿಯಾದ (water fecility) ವ್ಯವಸ್ಥೆ ಸಹ ಇರಲಿಲ್ಲ. ಆ ಕಾಲದಲ್ಲಿ ನದಿಯಲ್ಲಿ ಸ್ನಾನ ಮಾಡುವ ಅಭ್ಯಾಸವಿತ್ತು.
 

510

ಇನ್ನು ಋತುಸ್ರಾವದ ಸಮಯದಲ್ಲಿ ಮುಟ್ಟಿನ ರಕ್ತಸ್ರಾವದಿಂದಾಗಿ ನದಿ ನೀರು ಕಲುಷಿತಗೊಳ್ಳುವ ಭಯವಿತ್ತು. ಈ ಕಾರಣದಿಂದಾಗಿ, ಅವರಿಗೆ ಮನೆಯಲ್ಲಿಯೇ ಇರಲು ಸಲಹೆ ನೀಡಲಾಯಿತು. ಹೀಗಿರೋವಾಗ, ಸ್ನಾನ ಮಾಡಲು ಸಾಧ್ಯವಾಗದ ಕಾರಣ, ದೇಹವನ್ನು ಅಶುದ್ಧವೆಂದು ಪರಿಗಣಿಸಿ, ದೇವಾಲಯ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. 
 

610

ಋತುಚಕ್ರದ ಸಮಯದಲ್ಲಿ ಮಹಿಳೆಯರ ದೇಹವು ಅಶುದ್ಧವಾಗಿರುತ್ತದೆ ಮತ್ತು ಈ ಸಮಯದಲ್ಲಿ ದೇವಾಲಯವನ್ನು ಪ್ರವೇಶಿಸುವುದರಿಂದ ವಿಗ್ರಹಗಳು ಅಪವಿತ್ರವಾಗುತ್ತೆ ಎಂದು ಕೆಲವು ಹಿಂದೂ ಗ್ರಂಥಗಳು ನಂಬುತ್ತವೆ. ಅಲ್ಲದೆ, ಕೆಲವು ನೈರ್ಮಲ್ಯ ಕಾರಣಗಳಿಂದಾಗಿ, ಈ ಹಿಂದೆ, ಮಹಿಳೆಯರು ತಮ್ಮ ಋತುಚಕ್ರವನ್ನು ಆರೋಗ್ಯಕರ ರೀತಿಯಲ್ಲಿ ನಿರ್ವಹಿಸಲು ಮನೆಯಲ್ಲಿಯೇ ಇರಲು ಸೂಚಿಸಲಾಗುತ್ತಿತ್ತು.

710

ಮತ್ತೊಂದು ನಂಬಿಕೆ ಪ್ರಕಾರ ಋತುಸ್ರಾವದ ಸಮಯದಲ್ಲಿ ಮಹಿಳೆಯರ ದೇಹವು ತುಂಬಾನೆ ವೀಕ ಆಗಿರುತ್ತೆ, ಹಾಗಾಗಿ ಅವರು ಮನೆಯಿಂದ ಹೊರಬಂದರೆ, ಅವರಿಗೆ ರೋಗ ಬರಬಹುದು ಎಂದು ನಂಬಲಾಗಿತ್ತು. ಮನಸ್ಸು, ದೇಹ ದುರ್ಬಲವಾಗಿರೋವಾಗ, ಹೆಚ್ಚಿನ ಪಾಸಿಟಿವ್ ಎನರ್ಜಿ (possitive energy) ಇರುವ ದೇಗುಲಕ್ಕೆ ಪ್ರವೇಶಿಸಬಾರದು ಎಂದು ಹೇಳಲಾಗುತ್ತೆ.

810

ಧರ್ಮಗ್ರಂಥಗಳ ಪ್ರಕಾರ, ಋತುಚಕ್ರದ ಎಷ್ಟು ದಿನಗಳ ನಂತರ ದೇವಾಲಯಕ್ಕೆ ಹೋಗಬಹುದು? 
ಪ್ರತಿಯೊಬ್ಬ ಮಹಿಳೆಯೂ ವಿಭಿನ್ನ ಋತುಚಕ್ರದ ದಿನಗಳನ್ನು ಹೊಂದಿದ್ದರೂ, ಈ ಅವಧಿಯು 3 ದಿನಗಳಾಗಿದ್ದರೆ, ನೀವು ಚೆನ್ನಾಗಿ ಸ್ನಾನ ಮಾಡಿ ಕೂದಲನ್ನು ತೊಳೆದ ನಂತರ ನಾಲ್ಕನೇ ದಿನ ದೇವಾಲಯವನ್ನು ಪ್ರವೇಶಿಸಬಹುದು ಎಂದು ನಂಬಲಾಗಿದೆ.

910

ಋತುಚಕ್ರದ ಅವಧಿ 7 ದಿನಗಳಾಗಿದ್ದರೆ, ಎಂಟನೇ ದಿನದಂದು ದೇವಾಲಯವನ್ನು ಪ್ರವೇಶಿಸಬಹುದು. ಇನ್ನು, ಜ್ಯೋತಿಷ್ಯವನ್ನು ನಂಬಿದರೆ, ಸಾಮಾನ್ಯವಾಗಿ ಪಿರಿಯಡ್ಸ್ ಮುಗಿದ ಐದನೇ ದಿನದಂದು ದೇವಾಲಯ ಪ್ರವೇಶಿಸಬಹುದು. ಧರ್ಮಗ್ರಂಥಗಳ ಪ್ರಕಾರ, ಪಿರಿಯಡ್ಸ್ ಮುಗಿದ ನಂತರದ ಐದನೇ ದಿನವನ್ನು ಶುದ್ಧೀಕರಣಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿನದಂದು ಪೂಜಿಸಲು ಮತ್ತು ದೇವಾಲಯಕ್ಕೆ ಹೋಗುವುದು ಸೂಕ್ತ. 

1010

ವಿಜ್ಞಾನ ಏನು ಹೇಳುತ್ತದೆ?
ನಾವು ವಿಜ್ಞಾನದ ಬಗ್ಗೆ ಮಾತನಾಡುವುದಾದರೆ, ಇದಕ್ಕೆ ಒಂದೇ ಒಂದು ಕಾರಣವಿದೆ, ಅದು ನೈರ್ಮಲ್ಯ. ಅಲ್ಲದೆ, ಋತುಚಕ್ರದ ಸಮಯದಲ್ಲಿ ಅಥವಾ ನಂತರ ಯಾವ ದಿನ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬ ನಿರ್ಧಾರ ವೈಯಕ್ತಿಕವಾಗಿರುತ್ತದೆ.ಋತುಚಕ್ರದ ನಂತರ ಎಷ್ಟು ದಿನದ ನಂತರ ಜನರು ದೇವಾಲಯವನ್ನು ಪ್ರವೇಶಿಸಬಹುದು ಎನ್ನುವ ಬಗ್ಗೆ ವಿಜ್ಞಾನವು ಏನನ್ನೂ ಹೇಳೋದಿಲ್ಲ.

About the Author

SN
Suvarna News
ಜ್ಯೋತಿಷ್ಯ
ಋತುಚಕ್ರ
ದೇವಸ್ಥಾನ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved