ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದರ ಹಿಂದಿನ ಕಾರಣವಿಲ್ಲಿದೆ!
ಮಕರ ಸಂಕ್ರಾಂತಿಯ ದಿನದಂದು ವಿವಿಧ ರಾಜ್ಯಗಳಲ್ಲಿ ಗಾಳಿಪಟಗಳನ್ನು ಹಾರಿಸುವುದನ್ನು ನೀವು ನೋಡಿರಬಹುದು. ಆದರೆ ಇದರ ಹಿಂದಿನ ನಂಬಿಕೆಗಳು ಯಾವುವು ಎಂದು ನೀವು ಸಹ ತಿಳಿದುಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಈ ಲೇಖನವನ್ನು ಓದಿ.
makar sankranti 001
ಮಕರ ಸಂಕ್ರಾಂತಿಯ (Makar sankranti) ಹಬ್ಬವನ್ನು ಕರ್ನಾಟಕದಲ್ಲಿ ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ, ಈ ಹಬ್ಬವನ್ನು ಭಾರತದಲ್ಲಿ ಜನವರಿ 15, 2023 ರಂದು ಆಚರಿಸಲಾಗುವುದು. ಈ ಪವಿತ್ರ ದಿನದ ಶುಭ ಸಂದರ್ಭದಲ್ಲಿ, ಸೂರ್ಯನನ್ನು ಪೂಜಿಸುವುದು ಮತ್ತು ಗಂಗೆಯಲ್ಲಿ ಸ್ನಾನ ಮಾಡುವುದು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಮಕರ ಸಂಕ್ರಾಂತಿಯಂದು ಗಾಳಿಪಟಗಳನ್ನು ಹಾರಿಸುವ ಹಿಂದಿನ ನಂಬಿಕೆ ಏನು ಎಂದು ನಿಮ್ಮನ್ನು ಕೇಳಿದರೆ, ನಿಮ್ಮ ಉತ್ತರವೇನು? ನಿಮಗೆ ಗೊತ್ತಿಲ್ಲದಿದ್ದರೆ, ಈ ಲೇಖನದಲ್ಲಿ ನಿಮಗೆ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಗಾಳಿಪಟಗಳನ್ನು (fying kites) ಹಾರಿಸುವುದರ ಹಿಂದಿನ ಕಥೆ ಏನು ಮತ್ತು ಯಾವ ರಾಜ್ಯದಲ್ಲಿ ಅದರ ಪ್ರಾಮುಖ್ಯತೆಯನ್ನು ಹೆಚ್ಚು ನೋಡಲಾಗುತ್ತದೆ ಎಂಬುದನ್ನು ತಿಳಿಸಲಿದ್ದೇವೆ. ನಿಮಗೂ ಈ ಬಗ್ಗೆ ಆಸಕ್ತಿ ಇದ್ದರೆ, ಬನ್ನಿ ತಿಳಿಯೋಣ…
ಗಾಳಿಪಟ ಹಾರಿಸುವುದರ ಹಿಂದಿನ ಧಾರ್ಮಿಕ ಮಹತ್ವವೇನು?
ಬಹುಶಃ ನಿಮಗೆ ತಿಳಿದಿರಬಹುದು, ಗೊತ್ತಿಲ್ಲದಿದ್ದರೆ, ನಿಮ್ಮ ಮಾಹಿತಿಗಾಗಿ, ಮಕರ ಸಂಕ್ರಾಂತಿಯಂದು ಗಾಳಿಪಟಗಳನ್ನು ಹಾರಿಸುವುದರ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವಿದೆ ಅನ್ನೋದನ್ನು ತಿಳಿಯಿರಿ. ಮೊದಲನೆಯದಾಗಿ, ಅದರ ಧಾರ್ಮಿಕ ಮಹತ್ವವನ್ನು (regional importance) ತಿಳಿದುಕೊಳ್ಳೋಣ.
ಪುರಾಣಗಳ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು ಗಾಳಿಪಟ ಹಾರಿಸುವ ಸಂಪ್ರದಾಯವು ಭಗವಾನ್ ರಾಮನಿಗೆ ಸಂಬಂಧಿಸಿದೆ. ಹೌದು, ಮಕರ ಸಂಕ್ರಾಂತಿಯ ದಿನದಂದು ಆಕಾಶದಲ್ಲಿ ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯವನ್ನು ಭಗವಾನ್ ರಾಮನು (Lord Rama) ಪ್ರಾರಂಭಿಸಿದನು ಎಂದು ನಂಬಲಾಗಿದೆ.
ಮತ್ತೊಂದು ದಂತಕಥೆಯ ಪ್ರಕಾರ, ಭಗವಾನ್ ರಾಮನು ಗಾಳಿಪಟವನ್ನು ಹಾರಿಸಿದಾಗ, ಆ ಗಾಳಿಪಟವು ಇಂದ್ರಲೋಕಕ್ಕೆ ಹೋಯಿತು ಎಂದು ಹೇಳಲಾಗುತ್ತದೆ. ಇದಾದ ನಂತರ, ಗಾಳಿಪಟ ಹಾರಿಸುವ ಅಭ್ಯಾಸವು ಮಕರ ಸಂಕ್ರಾಂತಿಯ ದಿನದಂದು ಬಹುತೇಕ ಎಲ್ಲೆಡೆ ಪ್ರಾರಂಭವಾಯಿತು. ಗಾಳಿಪಟ ಹಾರಾಟವು ಹೊಸ ಬೆಳೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತದೆ.
ಗಾಳಿಪಟ ಹಾರಿಸುವುದರ ಹಿಂದಿನ ವೈಜ್ಞಾನಿಕ ಮಹತ್ವವೇನು? (scientific reason behind flying kites)
ಧಾರ್ಮಿಕ ಮಹತ್ವವನ್ನು ತಿಳಿದ ನಂತರ, ಈಗ ವೈಜ್ಞಾನಿಕ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳೋಣ. ಮಕರ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಸುವುದು ಸಹ ಸೂರ್ಯನಿಂದ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಏಕೆಂದರೆ ಚಳಿಗಾಲದಲ್ಲಿ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದು ಅಥವಾ ಆಡುವುದು ಸೂಕ್ತವೆಂದು ಪರಿಗಣಿಸಲಾಗುತ್ತದೆ.
ಗಾಳಿಪಟ ಹಾರಿಸುವ ಸಮಯದಲ್ಲಿ, ಮೆದುಳು ಮತ್ತು ಕೈಯಂತಹ ದೇಹದ ಇತರ ಭಾಗಗಳ ಹೆಚ್ಚಿನ ಬಳಕೆ ಇರುತ್ತದೆ, ಇದು ಒಂದು ರೀತಿಯಲ್ಲಿ ವ್ಯಾಯಾಮ ಮಾಡಲು ಅವಕಾಶವನ್ನು ನೀಡುತ್ತದೆ. ಗಾಳಿಪಟ ಹಾರಿಸುವಿಕೆಯನ್ನು ಸಾಮಾನ್ಯವಾಗಿ ಯುವಕರು ಮಾಡುತ್ತಾರೆ. ಅದು ಅವರಿಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ.
ಗಾಳಿಪಟ ಹಾರಿಸುವುದು ಸ್ವಾತಂತ್ರ್ಯದ ಸಂಕೇತ
ಮಕರ ಸಂಕ್ರಾಂತಿಯ ಹೊರತಾಗಿ, ಗಾಳಿಪಟ ಹಾರಾಟವನ್ನು ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಅನೇಕ ದಿನಗಳಲ್ಲಿ ಕಾಣಬಹುದು. ಹೌದು, ವಿಶೇಷವಾಗಿ ಸ್ವಾತಂತ್ರ್ಯ ದಿನದಂದು, ಜನರು ಗಾಳಿಪಟಗಳನ್ನು ಹಾರಿಸುವ ಮೂಲಕ ಸ್ವಾತಂತ್ರ್ಯವನ್ನು (independance) ಆಚರಿಸುತ್ತಾರೆ. ಆದಾಗ್ಯೂ, ಮಕರ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಸುವುದು ತುಂಬಾ ವಿಶೇಷವೆಂದು ಪರಿಗಣಿಸಲಾಗಿದೆ.
ದೆಹಲಿ, ಪಂಜಾಬ್, ಹರಿಯಾಣ, ಗುಜರಾತ್, ತೆಲಂಗಾಣ ಮತ್ತು ರಾಜಸ್ಥಾನದಂತಹ ನಗರಗಳಲ್ಲಿ ಮುಖ್ಯವಾಗಿ ಮಕರ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಈ ದಿನದಂದು ಈ ನಗರಗಳಲ್ಲಿ ಗಾಳಿಪಟ ಹಾರಿಸುವ ಉತ್ಸವವನ್ನು ಸಹ ಆಯೋಜಿಸಲಾಗುತ್ತದೆ.