Makar Sankranti 2023 Date: 14ಕ್ಕೋ, 15ಕ್ಕೋ ಮಕರ ಸಂಕ್ರಾಂತಿ?
ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬ ಬಂದಾಗ ದಿನಾಂಕದ ವಿಷಯವಾಗಿ ಗೊಂದಲ ಕೇಳಿಬರುವುದು. ಅಂತೆಯೇ ಈ ವರ್ಷ ಕೂಡಾ ಹಲವರಲ್ಲಿ ಸಂಕ್ರಾಂತಿ 14ಕ್ಕೋ, 15ಕ್ಕೋ ಎಂಬ ಗೊಂದಲ ಉಂಟಾಗಿದೆ. ಈ ಕುರಿತ ಗೊಂದಲ ಪರಿಹಾರ ನಾವು ಮಾಡುತ್ತೇವೆ.
ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಮಕರ ಸಂಕ್ರಾಂತಿ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲೊಂದಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮಕರ ಸಂಕ್ರಾಂತಿ ಹಬ್ಬವನ್ನು ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಮಕರ ಸಂಕ್ರಾಂತಿಯಂದು ಗುಜರಾತ್‌ನಲ್ಲಿ ಉತ್ತರಾಯಣ, ತಮಿಳ್ನಾಡು, ಆಂಧ್ರದಲ್ಲಿ ಪೊಂಗಲ್, ಕೇರಳದಲ್ಲಿ ಓಣಂ, ಪಂಜಾಬ್, ಹರ್ಯಾಣದಲ್ಲಿ ಲೋಹ್ರಿ, ಅಸ್ಸಾಂನಲ್ಲಿ ಮಾಘ್ ಬಿಹು, ಉತ್ತರ ಪ್ರದೇಶ, ಬಿಹಾರದಲ್ಲಿ ಕಿಚಡಿ ಎಂದು ಕರೆದು ಆಚರಿಸಲಾಗುತ್ತದೆ.
ಈ ದಿನ ಸೂರ್ಯ ದೇವನು ಧನು ರಾಶಿಯಿಂದ ಹೊರಟು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದೊಂದೇ ಹಬ್ಬಕ್ಕೆ ಹಿಂದೂಗಳು ಸೂರ್ಯನ ಚಲನೆ ಆಧರಿತವಾಗಿರುವುದರಿಂದ ಈ ಒಂದು ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷವೂ ಜನವರಿ 14 ಇಲ್ಲವೇ 15 ತಾರೀಖಿನಂದೇ ಬರುತ್ತದೆ. 2023ರಲ್ಲಿ ಮಕರ ಸಂಕ್ರಾಂತಿಯ ನಿಖರವಾದ ದಿನಾಂಕದ ಬಗ್ಗೆ ಕೆಲವು ಅನುಮಾನಗಳಿವೆ. ಈ ವರ್ಷ 14ರಂದೋ, 15ಕ್ಕೋ ಎಂಬ ಹಲವರ ಅನುಮಾನವನ್ನು ಇಲ್ಲಿ ತಣಿಸಲಾಗಿದೆ.
ಮಕರ ಸಂಕ್ರಾಂತಿ 2023 ಶುಭ ಸಮಯ
ಹಿಂದೂ ಕ್ಯಾಲೆಂಡರ್ ಪ್ರಕಾರ, ಗ್ರಹಗಳ ರಾಜ ಸೂರ್ಯ ಜನವರಿ 14, 2023 ರಂದು ರಾತ್ರಿ 8.21ಕ್ಕೆ ಮಕರ ರಾಶಿಯಲ್ಲಿ ಸಾಗುತ್ತಾನೆ. ಜನವರಿ 15ರಂದು ಉದಯ ತಿಥಿಯನ್ನು ಸ್ವೀಕರಿಸಲಾಗುತ್ತಿದೆ. ಹಾಗಾಗಿ ಈ ಬಾರಿ 15 ಜನವರಿ 2023ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿ ಮುಹೂರ್ತ
ಸಂಕ್ರಾಂತಿ ಕರಣ : ಬಾಲವ
ಸಂಕ್ರಾಂತಿ ದಿನ: ಶನಿವಾರ
ವೀಕ್ಷಣೆ ದಿನಾಂಕ: ಜನವರಿ 15, 2023
ಸೂರ್ಯ ಸಾರಿಗೆ ದಿನಾಂಕ: ಜನವರಿ 14, 2023
ಸಂಕ್ರಾಂತಿ ಕ್ಷಣ: 08:57 PM, ಜನವರಿ 14
ಸಂಕ್ರಾಂತಿ ಘಾಟಿ: 36 (ರಾತ್ರಿಮಾನ)
ಸಂಕ್ರಾಂತಿ ರಾಶಿ: ಕನ್ಯಾ
ಸಂಕ್ರಾಂತಿ ನಕ್ಷತ್ರ: ಚಿತ್ರ
ಅಧಿಕ ಮಾಸದಿಂದ ಹಿಡಿದು ಗ್ರಹಣದವರೆಗೆ..2023ರ 10 Astrological Events
ಮಕರ ಸಂಕ್ರಾಂತಿ 2023 ಪೂಜಾ ವಿಧಾನ
ಮಕರ ಸಂಕ್ರಾಂತಿಯ ದಿನ ಬೆಳಗ್ಗೆ ಬೇಗ ಎದ್ದು ಪುಣ್ಯ ನದಿಗೆ ಹೋಗಿ ಸ್ನಾನ ಮಾಡಿ. ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ, ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ. ಅದರಲ್ಲಿ ಕಪ್ಪು ಎಳ್ಳು, ಬೆಲ್ಲ, ಕೆಂಪು ಚಂದನ, ಕೆಂಪು ಹೂವುಗಳು, ಅಕ್ಷತೆ ಇತ್ಯಾದಿಗಳನ್ನು ಹಾಕಿ ನಂತರ 'ಓಂ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸುತ್ತಾ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಈ ದಿನ, ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ, ಶನಿ ದೇವನಿಗೆ ನೀರನ್ನು ಸಹ ಅರ್ಪಿಸಿ. ಇದರ ನಂತರ, ಬಡವರಿಗೆ ಎಳ್ಳುಬೆಲ್ಲ ಮತ್ತು ಖಿಚಡಿ ದಾನ ಮಾಡಿ.
ಹಬ್ಬದಂದು ಈ ಕ್ರಮಗಳನ್ನು ಮಾಡಿ
ಮಕರ ಸಂಕ್ರಾಂತಿಯ ದಿನದಂದು ನೀರಿನಲ್ಲಿ ಕಪ್ಪು ಎಳ್ಳು ಮತ್ತು ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ. ಇದು ಸೂರ್ಯನನ್ನು ಅನುಗ್ರಹಿಸುತ್ತದೆ ಮತ್ತು ಜಾತಕದ ಗ್ರಹ ದೋಷಗಳನ್ನು ನಿವಾರಿಸುತ್ತದೆ. ಈ ರೀತಿ ಮಾಡುವುದರಿಂದ ಸೂರ್ಯ ಮತ್ತು ಶನಿಯ ಆಶೀರ್ವಾದವನ್ನು ಪಡೆಯುವಿರಿ. ಏಕೆಂದರೆ ಈ ದಿನ ಸೂರ್ಯನು ತನ್ನ ಮಗನಾದ ಶನಿಯ ಮನೆಯಾದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
ಆಯಸ್ಸು ದೇಹಕ್ಕೇ ಹೊರತು ಆತ್ಮಕ್ಕಲ್ಲ ಎಂಬ ಸತ್ಯ ಅರಿತಿದ್ದ ಶ್ರೀಗಳು..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.