ರಾತ್ರಿ ಉಗುರು ಕತ್ತರಿಸಬಾರದು ಅಂತಾರಲ್ಲ, ಏಕಿರಬಹುದು?
ಭಾರತೀಯ ಸಂಪ್ರದಾಯಗಳಲ್ಲಿ ಹಲವಾರು ನಂಬಿಕೆಗಳಿವೆ. ನಮ್ಮ ಹಿರಿಯರು ಕೆಲವು ವಿಷಯಗಳನ್ನು ನಮಗೆ ಚಿಕ್ಕಂದಿನಿಂದಲೂ ಅಭ್ಯಾಸ ಮಾಡಿಸುತ್ತಾರೆ. ಆದರೆ ಇವುಗಳನ್ನು ಕೆಲವರು ಮೂಢನಂಬಿಕೆ ಎಂದು ಭಾವಿಸುತ್ತಾರೆ. ಇನ್ನು ಕೆಲವರು ಇವುಗಳಲ್ಲಿ ವಿಜ್ಞಾನ ಅಡಗಿದೆ ಎಂದು ಹೇಳುತ್ತಾರೆ. ಅಂತಹ ಒಂದು ನಂಬಿಕೆಯ ಬಗ್ಗೆ ಈಗ ತಿಳಿದುಕೊಳ್ಳೋಣ...

ಸೂರ್ಯಾಸ್ತದ ನಂತರ ಕೆಲವು ರೀತಿಯ ಕೆಲಸಗಳನ್ನು ಮಾಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ರಾತ್ರಿ ಮನೆ ಒರೆಸಬಾರದು, ಹಣ ನೀಡಬಾರದು.
ರಾತ್ರಿ ಉಗುರು ಕತ್ತರಿಸುವುದನ್ನು ಅಶುಭವೆಂದು ಭಾವಿಸುತ್ತಾರೆ. ಅನಾರೋಗ್ಯ, ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ.
ಮೇಲೆ ಹೇಳಿದಂತೆ ರಾತ್ರಿ ಸರಿಯಾದ ಬೆಳಕಿರದ ಕಾರಣ ಕತ್ತರಿಸಿದ ಉಗುರಿನ ತುಣುಕುಗಳನ್ನು ಸಂಗ್ರಹಿಸುವುದು ಕಷ್ಟವಾಗಿತ್ತು. ಕೆಲವು ಅಲ್ಲಿಯೇ ಉಳಿದು ಹೋಗ್ತಿದ್ದವು. ಸ್ವಚ್ಛತೆಗೆ ಇದು ಅಡ್ಡಿಯಾಗ್ತಿತ್ತು. ಸಣ್ಣ ಮನೆಗಳಲ್ಲಿ ಜನರು ಅದೇ ಜಾಗದಲ್ಲಿ ಅಡುಗೆ,ಊಟ ತಯಾರಿಸುತ್ತಿದ್ದರು. ಈ ಉಗುರು ಆಹಾರಕ್ಕೆ ಸೇರಿ ಹೊಟ್ಟೆಯೊಳಗೆ ಹೋಗುವ ಅಪಾಯವಿತ್ತು. ಇದನ್ನು ಗಮನದಲ್ಲಿಟ್ಟುಕೊಂಡ ಜನರು ರಾತ್ರಿ ಉಗುರು ಕತ್ತರಿಸಬಾರದು ಎಂಬ ನಿಯಮ ಜಾರಿಗೆ ತಂದರು.
ಇದರ ಹಿಂದೆ ಧಾರ್ಮಿಕ ಕಾರಣವೂ ಇರುವಂತಿದೆ. ಸಂಜೆ ಸಮಯದಲ್ಲಿ ಲಕ್ಷ್ಮಿ ಮನೆಗೆ ಪ್ರವೇಶಿಸುತ್ತಾಳೆಂಬ ನಂಬಿಕೆಯಿದೆ. ಸಮೃದ್ಧಿ ಮತ್ತು ಸಂಪತ್ತನ್ನು ನೀಡಲು ರಾತ್ರಿ ಮನೆಯಲ್ಲಿಯೇ ಇರುತ್ತಾಳೆ ಎಂದು ನಂಬಲಾಗಿದೆ. ಉಗುರು ಕತ್ತರಿಸುವುದು ಲಕ್ಷ್ಮಿ ದೇವಿಗೆ ಅಗೌರವ ತೋರಿದಂತೆ. ಹಾಗಾಗಿ ರಾತ್ರಿ ಉಗುರನ್ನು ಕತ್ತರಿಸಬಾರದು.