MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಸೀತೆಯಿಂದ ಅಮರನಾಗುವ ವರ ಪಡೆದ ಹನುಮಂತ… ಈಗ ಭೂಮಿಯಲ್ಲಿ ಇರೋದೆಲ್ಲಿ?

ಸೀತೆಯಿಂದ ಅಮರನಾಗುವ ವರ ಪಡೆದ ಹನುಮಂತ… ಈಗ ಭೂಮಿಯಲ್ಲಿ ಇರೋದೆಲ್ಲಿ?

ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಸೀತಾ ದೇವಿಯಿಂದ ಅಮರತ್ವದ ವರವನ್ನು ಪಡೆದ ನಂತರ, ಮಹಾವೀರ್ ಭಜರಂಗಿ ಪವಿತ್ರ ಸ್ಥಳ ಒಂದರಲ್ಲಿ ತನ್ನ ವಾಸಸ್ಥಾನವನ್ನು ಆರಿಸಿಕೊಂಡನು. ಇಂದು ಭೂಮಿಯ ಮೇಲೆ ಆ ಸ್ಥಳ ಎಲ್ಲಿದೆ ಅನ್ನೋದನ್ನು ತಿಳಿಯೋಣ.   

2 Min read
Author : Pavna Das
Published : May 09 2024, 07:28 PM IST
Share this Photo Gallery
  • FB
  • TW
  • Linkdin
  • Whatsapp
17

 'ಸಂಕತ್ ಕಾಟ್ ಮಿಠಾಯಿ ಸಬ್ ಪೀರಾ, ಜೋ ಸುಮಿರೆ ಹನುಮಂತ್ ಬಲ್ಬಿರಾ'... ಹನುಮಾನ್ ಚಾಲೀಸಾದಲ್ಲಿ (Hanuman Chalisa) ಬರೆಯಲಾದ ಈ ಸಾಲುಗಳು ಹನುಮಂತನ ಧ್ಯಾನದಿಂದ ಜೀವನದ ಎಲ್ಲಾ ತೊಂದರೆಗಳನ್ನು ತೆಗೆದುಹಾಕಬಹುದು ಎಂದು ಹೇಳುತ್ತದೆ. ಹನುಮಂತನನ್ನು ಅಮರ ಅಥವಾ ಚಿರಂಜೀವಿ ಎಂದು ಹೇಳಲಾಗುತ್ತದೆ. ಕಲಿಯುಗದಲ್ಲಿ ಹನುಮಾನ್ ಜಿ ಅತ್ಯಂತ ಪರಿಪೂರ್ಣ ದೇವರು. 
 

27

ಹಿಂದೂ ಧರ್ಮದ (Hindu Dharma) ಧರ್ಮಗ್ರಂಥಗಳು ಮತ್ತು ಪುರಾಣಗಳಲ್ಲಿ, ಹನುಮಂತನನ್ನು ಚಿರಂಜೀವಿ ಎಂದು ವಿವರಿಸಲಾಗಿದೆ. ಹನುಮಂತ ಅಮರತ್ವದ ವರವನ್ನು ಪಡೆದಿದ್ದಾರೆ. ಭಗವಾನ್ ರಾಮ ಮತ್ತು ಸೀತಾ ದೇವಿಯ ಸೇವೆಯಲ್ಲಿದ್ದ ಹನುಮಂತನಿಗೆ ಸೀತಾದೇವಿ (Sita Mata),ಅಮರರಾಗುವ ವರ ನೀಡಿದರು ಎಂಬ ನಂಬಿಕೆಗಳಿವೆ. ಹನುಮಾನ್ ಇನ್ನೂ ಕೂಡ ಭೂಮಿಯ ಮೇಲೆ ದೇವತೆಯಾಗಿ ಇದ್ದಾನೆ ಎಂದು ಹೇಳಲಾಗುತ್ತದೆ  
 

37

ಭೂಮಿಯ ಮೇಲೆ ಹನುಮಾನ್ ಎಲ್ಲಿದ್ದಾನೆ? 
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಸೀತಾ ದೇವಿಯಿಂದ ಅಮರತ್ವದ ವರವನ್ನು ಪಡೆದ ನಂತರ, ಆಂಜನೇಯ ಭೂಮಿಯ ಮೇಲಿನ ಒಂದು ಪವಿತ್ರ ಸ್ಥಳವನ್ನು ತನ್ನ ವಾಸಸ್ಥಳವಾಗಿ ಆರಿಸಿಕೊಂಡನು. ಇಂದಿಗೂ ಆತ ಅಲ್ಲಿ ನೆಲೆಸಿದ್ದಾರೆ ಎನ್ನುವ ಬಲವಾದ ನಂಬಿಕೆ ಇದೆ. 

47

ಶ್ರೀಮದ್ ಭಾಗವತ ಪುರಾಣದ ಪ್ರಕಾರ, ಈ ಸ್ಥಳವು ಗಂಧಮಾದನ್ (Gandhamadan Mountain) ಪರ್ವತವಾಗಿದೆ. ಕಲಿಯುಗದಲ್ಲಿ ಧರ್ಮದ ರಕ್ಷಕನಾದ ಮಹಾವೀರ ಬಜರಂಗಬಲಿ ಈ ಸ್ಥಳದಲ್ಲಿ ವಾಸಿಸುತ್ತಾನೆ. ಧರ್ಮಗ್ರಂಥಗಳ ಪ್ರಕಾರ, ಗಂಧಮಾದನ್ ಪರ್ವತವು ಕೈಲಾಸ ಪರ್ವತದ ಉತ್ತರ ದಿಕ್ಕಿನಲ್ಲಿದೆ. ಮಹರ್ಷಿ ಕಶ್ಯಪ್ ಧ್ಯಾನ ಮಾಡಿದ ಸ್ಥಳ ಇದೇ ಆಗಿದೆ.

57

ಸದ್ಯ ಈ ಪರ್ವತ ತಮಿಳುನಾಡಿನ ರಾಮೇಶ್ವರಂ ನ ಪಂಬಮ್ ನಲ್ಲಿದೆ. ಇದನ್ನು ಹನುಮಂತ ಹಿಮಾಲಯದಿಂದ ಹೊತ್ತು ತಂದ ಎನ್ನುವ ಪ್ರತೀತಿ ಇದೆ. ಇದು ಔಷಧಗಳ ಪರ್ವತ ಎನ್ನುವ ನಂಬಿಕೆ ಕೂಡ ಇದೆ. ಇಲ್ಲಿ ಇಂದಿಗೂ ಹನುಮಂತ ನೆಲೆಸಿದ್ದಾನೆ ಎಂದು ಜನರು ನಂಬುತ್ತಾರೆ. 

67

ಹನುಮ ಜಯಂತಿಯಂದು ಹನುಮಂತನನ್ನು ಪೂಜಿಸುವುದು ಹೇಗೆ? 
ಇನ್ನು ಕೆಲವು ಜ್ಯೋತಿಷಿಗಳ ಪ್ರಕಾರ ಇಂದು ಹನುಮ ಜಯಂತಿ. ಹನುಮಾನ್ ಜಯಂತಿಯ ದಿನದಂದು, ಶ್ರೀ ರಾಮ ಮತ್ತು ಹನುಮಂತರ ಚಿತ್ರ ಅಥವಾ ಪ್ರತಿಮೆಯನ್ನು ಪೀಠದ ಮೇಲೆ ಸ್ಥಾಪಿಸಿ. ಅವರ ಮುಂದೆ ತುಪ್ಪದ ದೀಪ ಬೆಳಗಿಸಿ. ಅವರಿಗೆ ಹಣ್ಣುಗಳು, ಹೂವುಗಳು ಮತ್ತು ಸಿಹಿತಿಂಡಿಗಳು ಇತ್ಯಾದಿಗಳನ್ನು ಅರ್ಪಿಸಬೇಕು. ಮೊದಲು ಶ್ರೀರಾಮನನ್ನು (Shri Rama) ಪೂಜಿಸಿ, ನಂತರ ಹನುಮಂತನನ್ನು ಪೂಜಿಸಬೇಕು. ಪೂಜೆಯ ನಂತರ, ನೀವು ಬಯಸಿದರೆ ಹನುಮಾನ್ ಚಾಲೀಸಾವನ್ನು ಸಹ ಪಠಿಸಬಹುದು. ಅಂತಿಮವಾಗಿ, ಹನುಮಂತನಿಗೆ ಆರತಿಯನ್ನು ಮಾಡಿ, ನಿಮ್ಮ ಇಚ್ಚೆಗಳನ್ನು ಹೇಳಿದರೆ, ಸಮಸ್ಯೆ ಈಡೇರುತ್ತದೆ ಎಂದು ಅರ್ಥ.

77

ಹನುಮಂತನ ಪೂಜೆಯಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಭಗವಾನ್ ರಾಮನಿಲ್ಲದೆ ಹನುಮಂತನನ್ನು ಮಾತ್ರ ಪೂಜಿಸಬೇಡಿ. ಹನುಮಂತನನ್ನು ಪೂಜಿಸುವ ವ್ಯಕ್ತಿಯು ಸಾತ್ವಿಕನಾಗಿರಬೇಕು. ಮಹಿಳೆಯರು ಹನುಮಂತನಿಗೆ ಕುಂಕುಮವನ್ನು ಅರ್ಪಿಸಬಾರದು. ನೀವು ಅವರಿಗೆ ಕೆಂಪು ಹೂವುಗಳನ್ನು ಅರ್ಪಿಸಬಹುದು. ಇದರಿಂದಾ ಹನುಮಂತ ಸಂತಸಗೊಳ್ಳುತ್ತಾನೆ ಎನ್ನುವ ನಂಬಿಕೆ ಇದೆ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಚಿರಂಜೀವಿ

Latest Videos
Recommended Stories
Recommended image1
ಸಂಜೆ 5:14 ಕ್ಕೆ ಶುಕ್ರ ನಕ್ಷತ್ರ ಬದಲು, ಈ 5 ರಾಶಿಗೆ ದೊಡ್ಡ ಅದೃಷ್ಟ, 5 ರಾಜಯೋಗದಿಂದ ಬಂಪರ್‌ ಲಾಟರಿ
Recommended image2
ಇಂದು ಮಾರ್ಚ್‌ 4 ಮಾಲವ್ಯ ಮತ್ತು ಬುಧಾದಿತ್ಯ ರಾಜಯೋಗ, ಈ ರಾಶಿಗೆ ಹಣಕಾಸು, ರಾಜವೈಭೋಗ
Recommended image3
ನಾಳೆ ಮಾರ್ಚ್ 4 ಈ ರಾಶಿಗೆ ಮಾಲವ್ಯ ರಾಜಯೋಗ, ವೃತ್ತಿ ಮತ್ತು ಹಣಕಾಸಿನಲ್ಲಿ ಹೆಚ್ಚು ಲಾಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved