ದಾನಶೂರ ಕರ್ಣನ ಕವಚ -ಕುಂಡಲ ಇನ್ನೂ ಇದೆ ಇಲ್ಲಿ, ಸಿಕ್ಕಿದೋರು ಆಗ್ತಾರಂತೆ ಮಹಾನ್ ಶಕ್ತಿಶಾಲಿ !
ಮಹಾಭಾರತದಲ್ಲಿ, ಕರ್ಣನ ರಕ್ಷಾಕವಚ ಮತ್ತು ಕುಂಡಲ ಅವನಿಗೆ ವರದಾನವಾಗಿತ್ತು, ಈ ಎರಡರಿಂದ ಯಾರೂ ಅವನನ್ನು ಸೋಲಿಸಲು ಸಾಧ್ಯವಿಲ್ಲ ಮತ್ತು ಯಾರೂ ಅವನನ್ನು ಕೊಲ್ಲಲು ಸಾಧ್ಯವಿರಲಿಲ್ಲ. ಆದರೆ ಮೋಸದಿಂದ, ಕರ್ಣನ ರಕ್ಷಾಕವಚ ಮತ್ತು ಕುಂಡಲವನ್ನು ತೆಗೆದುಕೊಂಡು ಹೋಗಲಾಯಿತು ಅನ್ನೋದು ಗೊತ್ತಿದೆ. ಆದ್ರೆ ನಿಮಗೊಂದು ವಿಷ್ಯ ಗೊತ್ತಾ? ಈವಾಗ್ಲೂ ಕರ್ಣ ಈ ಎರಡು ವಸ್ತುಗಳು ಈ ಜಾಗದಲ್ಲಿವೆಯಂತೆ.
ಮಹಾಭಾರತದ (Mahabharat) ಬಗ್ಗೆ ಮಾತನಾಡುವಾಗಲೆಲ್ಲಾ , ದಾನಶೂರ ಕರ್ಣನ ಹೆಸರು ಖಂಡಿತವಾಗಿಯೂ ಬಂದೇ ಬರುತ್ತೆ. ಕರ್ಣನು ಮಹಾಭಾರತ ಕಾಲದ ಪ್ರಮುಖ ಪಾತ್ರಗಳಲ್ಲಿ ಒಬ್ಬನಾಗಿದ್ದು, ಅವನ ದಾನದ ಕಥೆಗಳು ಇಂದಿಗೂ ಜನರ ಬಾಯಲ್ಲಿ ಜನಜನಿತವಾಗಿದೆ. ಕರ್ಣ (Karna) ಹುಟ್ಟಿದ್ದು, ಕುಂತಿಗೆ ಆದರೂ ಕೌರವರ ಜೊತೆ ಸ್ನೇಹ ಬೆಳೆಸಿ, ದುರ್ಯೋದನನೊಂದಿಗಿನ ಸ್ನೇಹಕಾಗಿ ಏನೆಲ್ಲಾ ಮಾಡಿದ ಅನ್ನೋದು ನಿಮಗೆ ಗೊತ್ತಿದೆ. ಇದೇ ಕರ್ಣನ ಬಗ್ಗೆ ಒಂದಿಷ್ಟು ಮಾಹಿತಿ ನಿಮ್ಮ ಜ್ಞಾನಕ್ಕಾಗಿ ಅಷ್ಟೇ..
ಕರ್ಣನು ತಾಯಿ ಕುಂತಿಯ ಪ್ರಾರ್ಥನೆಯಿಂದ ಹುಟ್ಟಿದಂತಹ ಸೂರ್ಯ ದೇವನ ಅಂಶ. ಕರ್ಣ ಹುಟ್ಟುವಾಗಲೇ ವಿಶೇಷ ರಕ್ಷಾಕವಚ ಮತ್ತು ಕುಂಡಲದೊಂದಿಗೆ ಜನಿಸಿದನು, ಇವೆರಡು ಇರೋದ್ರಿಂದ ಕರ್ಣನನ್ನು ವಿಶ್ವದ ಯಾವುದೇ ಶಕ್ತಿ ಸೋಲಿಸಲು ಸಾಧ್ಯವಿಲ್ಲ. ಆದರೆ ನಂತರ ಕುಂಡಲ ಮತ್ತು ಕವಚವನ್ನು ಮೋಸದಿಂದ ಕರ್ಣನಿಂದ ದಾನವಾಗಿ ಪಡೆಯಲಾಯಿತು. ಆದರೆ ಇಂದು ಆ ಕುಂಡಲ ಮತ್ತು ಕವಚಗಳನ್ನು (Rakshakavach and Kundal) ಎಲ್ಲಿ ಇವೆ ಅನ್ನೋದು ನಿಮಗೆ ತಿಳಿದಿದೆಯೇ? ಯಾರಾದರೂ ಅದನ್ನು ಪಡೆದದ್ದೆ ಆದರೆ, ವ್ಯಕ್ತಿಯು ಸರ್ವಶಕ್ತನಾಗಬಹುದು ಅಷ್ಟೊಂದು ಶಕ್ತಿ ಇದೆ ಅದಕ್ಕೆ. ಹಾಗಿದ್ರೆ ಈ ಎರಡು ವಸ್ತುಗಳು ಎಲ್ಲಿವೆ ಅನ್ನೋದನ್ನ ತಿಳಿಯೋಣ.
ದೇವರಾಜ ಇಂದ್ರ ರಕ್ಷಾಕವಚ ಮತ್ತು ಕುಂಡಲ ಕಸಿದುಕೊಂಡಿದ್ದ
ಮಹಾಭಾರತದಲ್ಲಿನ ಕರ್ಣನ ಕಥೆ ಹೇಳೊದಾದ್ರೆ ಕುಂತಿ ಪಾಂಡುವನ್ನು ಮದುವೆಯಾದಳು, ಆದರೆ ಮದುವೆಗೆ ಮೊದಲು ಕುಂತಿಗೆ ಜನಿಸಿದ ಪುತ್ರ ಕರ್ಣ. ಕರ್ಣನ ವಿಶೇಷತೆಯೆಂದರೆ ಅವನು ಯಾರಿಗೂ ಏನನ್ನೂ ದಾನ ಮಾಡಲು ಎಂದಿಗೂ ಹಿಂಜರಿಯಲಿಲ್ಲ ಮತ್ತು ಮಹಾಭಾರತ ಯುದ್ಧದಲ್ಲಿ ಕರ್ಣನ ಈ ದಾನದ ಗುಣವೇ ಅವನ ಅವನತಿಗೆ ಕಾರಣವಾಯ್ತು.
ಪ್ರಪಂಚದ ಯಾವುದೇ ಶಕ್ತಿಯು ಅವರ ಬಳಿ ಇದ್ದ ರಕ್ಷಾಕವಚ ಮತ್ತು ಕುಂಡಲದಿಂದ ಅವರನ್ನು ಸೋಲಿಸಲು ಸಾಧ್ಯವೇ ಇರಲಿಲ್ಲ. ಆದರೆ ಮಗ ಅರ್ಜುನನನ್ನು ಬೆಂಬಲಿಸಲು, ತಂದೆ ದೇವರಾಜ ಇಂದ್ರ ಮೋಸದಿಂದ ಕರ್ಣನ ರಕ್ಷಾಕವಚ ಮತ್ತು ಕುಂಡಲವನ್ನು ದಾನ ಕೇಳುವ ನೆಪದಲ್ಲಿ ಕರ್ಣನಿಂದ ಪಡೆದುಕೊಂಡನು.
ಕರ್ಣನು ಸೂರ್ಯ ದೇವರನ್ನು ಪೂಜಿಸುತ್ತಿರುವಾಗ, ಇಂದ್ರನು (Indra Dev) ಭಿಕ್ಷುಕನ ವೇಷ ಧರಿಸಿ ಅವನ ರಕ್ಷಾಕವಚ ಮತ್ತು ಕುಂಡಲ ಬೇಕೆಂದು ಕೇಳಿದನು. ಸೂರ್ಯದೇವನು ಇಂದ್ರನ ಈ ಯೋಜನೆಯ ಬಗ್ಗೆ ಕರ್ಣನಿಗೆ ಎಚ್ಚರಿಕೆ ನೀಡಿದ್ದನೂ ಕೂಡ, ಆದರೂ ಕರ್ಣನು ತನ್ನ ಮಾತುಗಳಿಂದ ಹಿಂದೆ ಸರಿಯಲಿಲ್ಲ. ಕುಂಡಲ ಮತ್ತು ರಕ್ಷಾಕವಚ ಕೊಟ್ರೆ ತನ್ನ ಸಾವು ಖಚಿತ ಅನ್ನೋದು ಗೊತ್ತಿದ್ದರೂ ಸಹ, ಕರ್ಣ ಸಂತೋಷದಿಂದ ಅವುಗಳನ್ನ ಇಂದ್ರನಿಗೆ ದಾನವಾಗಿ ನೀಡಿದನು. ನಂತರ ಕುರುಕ್ಷೇತ್ರ ಯುದ್ದದಲ್ಲಿ ಕೃಷ್ಣನ ಆಜ್ಞೆಯ ಮೇರೆಗೆ ಅರ್ಜುನನು ಕರ್ಣನನ್ನು ಕೊಂದನು. ರಕ್ಷಣಾ ಕವಚ ಇಲ್ಲದೇ ಕರ್ಣ ಕೊನೆಯುಸಿರೆಳೆದನು.
ಸೂರ್ಯ ದೇವರು ಮತ್ತು ಸಮುದ್ರ ದೇವರಿಂದ ಕವಚ ಕುಂಡಲ ರಕ್ಷಣೆ
ಕರ್ಣನ ರಕ್ಷಾಕವಚ ಮತ್ತು ಕುಂಡಲ ಹೊಂದಿರುವ ದೇವರಾಜ ಇಂದ್ರನಿಗೆ ಸ್ವರ್ಗಕ್ಕೆ ಹೋಗಲು ಅವಕಾಶವಿರಲಿಲ್ಲ, ಏಕೆಂದರೆ ಅವನು ಈ ಎರಡೂ ವಸ್ತುಗಳನ್ನು ಸುಳ್ಳಿನಿಂದ ಪಡೆದು ಬಂದಿದ್ದನು. ಹಾಗಾಗಿ ಇಂದ್ರನು ಅದನ್ನು ಸಮುದ್ರ ತೀರದಲ್ಲಿ ಬಚ್ಚಿಟ್ಟನು. ಇಂದ್ರ ಸಮುದ್ರದ ಬಳಿ ಅದನ್ನ ಇಡೋದನ್ನ ನೋಡಿದ ಚಂದ್ರ ಕವಚ ಮತ್ತು ಕುಂಡಲವನ್ನು ತೆಗೆದುಕೊಂಡು ಓಡಿಹೋಗಲು ಪ್ರಾರಂಭಿಸಿದನು. ಇದನ್ನು ನೋಡಿದ ಸಮುದ್ರ ದೇವರು ಅವರನ್ನು ತಡೆದನು. ಅಂದಿನಿಂದ ಸಮುದ್ರ ಮತ್ತು ಸೂರ್ಯ ದೇವರು ಈ ಕವಚ ಮತ್ತು ಕುಂಡಲವನ್ನು ರಕ್ಷಿಸುತ್ತಿದ್ದಾರೆ ಎನ್ನುವ ನಂಬಿಕೆ ಇದೆ.
ಎರಡೂ ವಸ್ತುಗಳು ಈ ಸ್ಥಳದಲ್ಲಿವೆ .
ಈ ಕವಚ ಮತ್ತು ಕುಂಡಲ ಎರಡನ್ನೂ ಸಹ ಪುರಿ ಬಳಿಯ ಕೊನಾರ್ಕ್ ನಲ್ಲಿ(Konark) ಅಡಗಿಸಿಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಯಾರೂ ಈ ಪ್ರದೇಶವನ್ನ ತಲುಪೋದಕ್ಕೆ ಸಾಧ್ಯವಿಲ್ಲ. ಏಕೆಂದರೆ ಯಾರಾದರೂ ಈ ರಕ್ಷಾಕವಚ ಮತ್ತು ಕುಂಡಲವನ್ನು ಪಡೆದುಕೊಂಡಿದ್ದರೆ, ಅವರು ಅಧ್ಯಮ್ಯ ಶಕ್ತಿಯನ್ನು ಹೊಂದಬಹುದು. ಹಾಗಾಗಿ ಇದು ಅಷ್ಟು ಸುಲಭವಾಗಿ ಯಾರ ಕೈಗೂ ಸಿಗೋದಿಲ್ಲ.