MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Ramdan 2026: ಭಾರತದಲ್ಲಿ ರಂಜಾನ್ ಆರಂಭ ಯಾವಾಗ? ಈದ್-ಉಲ್-ಫಿತರ್ ಆಚರಣೆಯ ದಿನಾಂಕ

Ramdan 2026: ಭಾರತದಲ್ಲಿ ರಂಜಾನ್ ಆರಂಭ ಯಾವಾಗ? ಈದ್-ಉಲ್-ಫಿತರ್ ಆಚರಣೆಯ ದಿನಾಂಕ

ಇಸ್ಲಾಮಿಕ್ ಕ್ಯಾಲೆಂಡರ್‌ನ ಅತ್ಯಂತ ಪವಿತ್ರ ಮಾಸ ರಂಜಾನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಂಜಾನ್ ಮಾಸದ ಆಚರಣೆಗೆ ಮುಸ್ಲಿಮರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.. ಈ ಮಾಸದಲ್ಲಿ ಮುಸ್ಲಿಮರು ಉಪವಾಸ, ಪ್ರಾರ್ಥನೆ ಮತ್ತು ದಾನಗಳಲ್ಲಿ ತೊಡಗಿಕೊಳ್ಳುತ್ತಾರೆ.

1 Min read
Author : Mahmad Rafik
Published : Feb 18 2026, 08:50 AM IST
Share this Photo Gallery
  • FB
  • TW
  • Linkdin
  • Whatsapp
15
ಪವಿತ್ರ ಮಾಸ ರಂಜಾನ್ ಆರಂಭ
Image Credit : AI meta

ಪವಿತ್ರ ಮಾಸ ರಂಜಾನ್ ಆರಂಭ

ಇಸ್ಲಾಮಿಕ್ ಕ್ಯಾಲೆಂಡರ್‌ನ ಅತ್ಯಂತ ಪವಿತ್ರ ಮಾಸ ರಂಜಾನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಂಜಾನ್ ಮಾಸದ ಆಚರಣೆಗೆ ಮುಸ್ಲಿಮರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಭಾರತ ಸೇರಿದಂರೆ ಇಡೀ ವಿಶ್ವದಲ್ಲಿ ವಾಸವಾಗಿರುವ ಮುಸ್ಲಿಮರು ಈ ತಿಂಗಳು ಉಪವಾಸ, ಪಾರ್ಥನೆ, ದಾನ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

25
ರಂಜಾನ್ ಪ್ರಾರಂಭ ಮತ್ತು ಈದ್-ಉಲ್-ಫಿತರ್ ಆಚರಣೆ ದಿನಾಂಕ
Image Credit : AI meta

ರಂಜಾನ್ ಪ್ರಾರಂಭ ಮತ್ತು ಈದ್-ಉಲ್-ಫಿತರ್ ಆಚರಣೆ ದಿನಾಂಕ

ಚಂದ್ರ ದರ್ಶನದ ಆಧಾರದ ಮೇಲೆ ರಂಜಾನ್ ಆರಂಭವನ್ನು ಖಚಿತಪಡಿಸಲಾಗುತ್ತದೆ. ಈ ಕಾರಣದಿಂದ ಭಾರತ ಸೇರಿದಂತೆ ಹಲವೆಡೆ ದಿನಾಂಕಗಳು ಬದಲಾಗುತ್ತವೆ. ಪ್ರತಿವರ್ಷ ರಂಜಾನ್ ಪ್ರಾರಂಭ ಮತ್ತು ಈದ್-ಉಲ್-ಫಿತರ್ ಆಚರಣೆ ದಿನಾಂಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವ್ಯತ್ಯಾಸವಾಗುತ್ತಿರುತ್ತದೆ.

Related Articles

Related image1
Ramzan 2023: ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಸೆಲಬ್ರಿಟಿಗಳು ಏನ್ ತಿನ್ತಾರೆ?
Related image2
Ramadan 2025: ಇಫ್ತಾರ್ ಪಾರ್ಟಿಗೆ ಸ್ಪೆಷಲ್ ಚಿಕನ್ ಫಿಂಗರ್ ಮಾಡಿ, ಇಲ್ಲಿದೆ ರೆಸಿಪಿ
35
ಫೆಬ್ರವರಿ 19, 2026 ಪ್ರಾರಂಭವಾಗುವ ನಿರೀಕ್ಷೆ
Image Credit : AI meta

ಫೆಬ್ರವರಿ 19, 2026 ಪ್ರಾರಂಭವಾಗುವ ನಿರೀಕ್ಷೆ

ಭಾರತದಲ್ಲಿ ರಂಜಾನ್ ಮಾಸ ಗುರುವಾರ, ಫೆಬ್ರವರಿ 19, 2026 ಪ್ರಾರಂಭವಾಗುವ ನಿರೀಕ್ಷೆಗಳಿವೆ. ಚಂದ್ರ ದರ್ಶನದ ನಂತರವೇ ದಿನಾಂಕವನ್ನು ಖಚಿತಪಡಿಸಲಾಗುತ್ತದೆ. ಚಂದ್ರ ದರ್ಶನದ ಮರುದಿನದಿಂದಲೇ ಮುಸ್ಲಿಮರು ರೋಜಾ ಎಂದು ಕರೆಯಲ್ಪಡುವ ಉಪವಾಸ ವ್ರತ ಆಚರಣೆಯನ್ನು ಆರಂಭಿಸುತ್ತಾರೆ. ಪ್ರಾರ್ಥನೆ, ಕುರಾನ್ ಪಠಣ ಮತ್ತು ಜಕಾತ್ ಮತ್ತು ಸದಾಖಾ ಸೇರಿದಂತೆ ದಾನ ದಾನಗಳನ್ನು ಸಹ ಈ ತಿಂಗಳಲ್ಲಿ ಆಚರಿಸಲಾಗುತ್ತದೆ.

45
ರಂಜಾನ್ ಮಾಸ
Image Credit : AI meta

ರಂಜಾನ್ ಮಾಸ

ಇದಾದ ಬಳಿಕ ಮುಂದಿನ ಚಂದ್ರನ ದರ್ಶನ ಆಧಾರದ ಮೇಲೆ ರಂಜಾನ್ ತಿಂಗಳು 29 ರಿಂದ 30 ದಿನಗಳನ್ನು ಹೊಂದಿರುತ್ತದೆ. ರಂಜಾನ್ ತಿಂಗಳ ಕೊನೆಯ 10 ದಿನಗಳನ್ನು ತರಾವೀಹ್ ಮತ್ತು ಕಿಯಾಮ್ ಅಲ್-ಲೈಲ್ ಎಂಬ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ಈದ್ ಅಲ್-ಫಿತರ್ ಆಚರಿಸಿದ ನಂತ್ರ ರಂಜಾನ್ ಮಾಸ ಮಕ್ತಾಯವಾಗುತ್ತದೆ.

55
ಈದ್-ಉಲ್-ಫಿತರ್ ದಿನಾಂಕ
Image Credit : AI meta

ಈದ್-ಉಲ್-ಫಿತರ್ ದಿನಾಂಕ

ಭಾರತದಲ್ಲಿ ಈದ್-ಉಲ್-ಫಿತರ್ 2026 ಮಾರ್ಚ್ 20 ಅಥವಾ 21, 2026 ರಂದು ಬರುವ ನಿರೀಕ್ಷೆಯಿದೆ. ಈ ದಿನವೂ ಸಹ ಚಂದ್ರನ ದರ್ಶನವನ್ನು ಅವಲಂಬಿಸಿರುತ್ತದೆ. ಹಬ್ಬದ ದಿನದಂದು ಪ್ರಾರ್ಥನೆ ಸಲ್ಲಿಕೆ ಮಾಡಲಾಗುತ್ತದೆ. ಪರಸ್ಪರ ಉಡುಗೊರೆಯನ್ನು ವಿನಿಮಯ ಮಾಡಿಕೊಂಡು ಸಿಹಿ ಸೇವಿಸಲಾಗುತ್ತದೆ. ಮಕ್ಕಳಿಗೆ ಈದಿ ನೀಡಿದ್ರೆ, ಅಗತ್ಯವಿರುವವರಿಗೆ ಜಕಾತ್ ರೂಪದಲ್ಲಿ ದಾನ ನೀಡಲಾಗುತ್ತದೆ, ಇದು ಈದ್ ಪ್ರಾರ್ಥನೆಗೆ ಮೊದಲು ಪಾವತಿಸುವುದು ಅತ್ಯಗತ್ಯ.

ರಂಜಾನ್ ಆರಂಭ – ಫೆಬ್ರವರಿ 19, 2026

ಈದ್ ಅಲ್-ಫಿತರ್ ದಿನಾಂಕ: ಮಾರ್ಚ್ 20 ಅಥವಾ 21, 2026

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಹಬ್ಬ
ಮುಸ್ಲಿಂ
ಇಸ್ಲಾಮ್

Latest Videos
Recommended Stories
Recommended image1
ಫೆಬ್ರವರಿ 18 ಇಂದು ಬುಧಾದಿತ್ಯ ರಾಜಯೋಗದಿಂದ ಈ ರಾಶಿಗೆ ಬಂಪರ್‌ ಅದೃಷ್ಟ, ಲಾಟರಿ
Recommended image2
ಗಂಡನನ್ನ ತಮ್ಮ ಕಂಟ್ರೋಲ್‌ನಲ್ಲಿಡುವ ಕಲೆ ಈ ಜನ್ಮ ದಿನಾಂಕದ ಹುಡುಗಿಯರಿಗೆ ಚೆನ್ನಾಗಿ ಗೊತ್ತು
Recommended image3
ಫೆಬ್ರವರಿ 18, 2026 ಈ 3 ರಾಶಿಗೆ ಸಂಪತ್ತು ವೃದ್ಧಿ ತರುತ್ತದೆ, ಅದೃಷ್ಟ ಪಕ್ಕಾ
Related Stories
Recommended image1
Ramzan 2023: ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಸೆಲಬ್ರಿಟಿಗಳು ಏನ್ ತಿನ್ತಾರೆ?
Recommended image2
Ramadan 2025: ಇಫ್ತಾರ್ ಪಾರ್ಟಿಗೆ ಸ್ಪೆಷಲ್ ಚಿಕನ್ ಫಿಂಗರ್ ಮಾಡಿ, ಇಲ್ಲಿದೆ ರೆಸಿಪಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved