Asianet Suvarna News Asianet Suvarna News

Ramzan 2023: ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಸೆಲಬ್ರಿಟಿಗಳು ಏನ್ ತಿನ್ತಾರೆ?

ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ವಿಶೇಷ ತಿಂಗಳುಗಳಲ್ಲಿ ಒಂದಾದ ರಂಜಾನ್, ಮುಸ್ಲಿಮರಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿ ದಿನ ಸಹ್ರಿ ಎಂದು ಕರೆಯಲ್ಪಡುವ ಮುಂಜಾನೆಯ ಊಟದಿಂದ ಉಪವಾಸ ಪ್ರಾರಂಭವಾಗುತ್ತದೆ ಮತ್ತು ಪ್ರತಿ ಸಂಜೆ, ಇಫ್ತಾರ್ ಎಂಬ ಸಂಜೆಯ ಊಟದೊಂದಿಗೆ ಉಪವಾಸವನ್ನು ಮುರಿಯಲಾಗುತ್ತದೆ.  ಸೆಲಬ್ರಿಟಿಗಳು ಹೇಗೆ ಉಪವಾಸ ಮಾಡುತ್ತಿದ್ದಾರೆ, ಏನನ್ನು ಸೇವಿಸುತ್ತಿದ್ದಾರೆ ತಿಳಿಯೋಣ.

Ramazan 2023,Whos eating what during Sehri and Iftar Vin
Author
First Published Apr 5, 2023, 2:45 PM IST

ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ವಿಶೇಷ ತಿಂಗಳುಗಳಲ್ಲಿ ಒಂದಾದ ರಂಜಾನ್, ಮುಸ್ಲಿಮರಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ, ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯದಲ್ಲಿ ತಿನ್ನುವುದಿಲ್ಲ. ಈ ಅವಧಿಯು ಜನರು ತಮ್ಮ ಧಾರ್ಮಿಕ ಬಂಧಗಳನ್ನು ಬಲಪಡಿಸಲು ಮತ್ತು ಅವರ ಸುತ್ತಲಿರುವವರಿಗೆ ದಾನವನ್ನು ನೀಡಲು ಅವಕಾಶವನ್ನು ನೀಡುತ್ತದೆ. ಪ್ರತಿ ದಿನ ಸಹ್ರಿ ಎಂದು ಕರೆಯಲ್ಪಡುವ ಮುಂಜಾನೆಯ ಊಟದಿಂದ ಉಪವಾಸ ಪ್ರಾರಂಭವಾಗುತ್ತದೆ ಮತ್ತು ಪ್ರತಿ ಸಂಜೆ, ಇಫ್ತಾರ್ ಎಂಬ ಸಂಜೆಯ ಊಟದೊಂದಿಗೆ ಉಪವಾಸವನ್ನು ಮುರಿಯಲಾಗುತ್ತದೆ.  ಸೆಲಬ್ರಿಟಿಗಳು ಹೇಗೆ ಉಪವಾಸ ಮಾಡುತ್ತಿದ್ದಾರೆ, ಏನನ್ನು ಸೇವಿಸುತ್ತಿದ್ದಾರೆ ತಿಳಿಯೋಣ

ಇತ್ತೀಚೆಗೆ ಮೆಕ್ಕಾ ಮದೀನಾದ ಮಜಿದ್ ಅಲ್ ಹರಾಮ್‌ನಲ್ಲಿ ಉಮ್ರಾ ಮಾಡಿದ ಸಾನಿಯಾ ಮಿರ್ಜಾ, 'ನನ್ನ ಪ್ರೀತಿ ಪಾತ್ರರೊಂದಿಗೆ ಇಫ್ತಾರ್‌' ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಅವರು ಇಫ್ತಾರ್‌ನಲ್ಲಿ (ಮುಸ್ಸಂಜೆಯ ಊಟದ ನಂತರ) ಉಪವಾಸವನ್ನು (Fasting) ಕೊನೆಗೊಳಿಸುವುದು ಹೇಗೆ ಎಂದು ತನ್ನ ಮಗನಿಗೆ ಕಲಿಸುವುದನ್ನು ಕಾಣಬಹುದು. ಈ ವೀಡಿಯೊ 1.2M ವೀಕ್ಷಣೆಗಳು, 176k ಇಷ್ಟಗಳು ಮತ್ತು 1k ಕಾಮೆಂಟ್‌ಗಳನ್ನು ಹೊಂದಿದೆ.

Ramadan 2023: ತಿಂಗಳ ಕಾಲ ಉಪವಾಸ ಮಾಡುವುದರ ಪ್ರಾಮುಖ್ಯತೆ ಏನು?

 
 
 
 
 
 
 
 
 
 
 
 
 
 
 

A post shared by Sania Mirza (@mirzasaniar)

ಪ್ರಸ್ತುತ ನಡೆಯುತ್ತಿರುವ IPL ಸೀಸನ್ 15 ರಲ್ಲಿ ಗುಜರಾತ್ ಟೈಟಾನ್ಸ್‌ಗಾಗಿ ಆಡುತ್ತಿರುವ ಜನಪ್ರಿಯ ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್, ಸೆಹ್ರಿ (ಬೆಳಗ್ಗೆಯ ಪೂರ್ವ ಊಟ)ಯನ್ನು ಆಯೋಜಿಸಿದರು, ಅಲ್ಲಿ ಅವರು ಸಹ ಆಟಗಾರ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸಹ ಆಟಗಾರ ನೂರ್ ಅಹ್ಮದ್ ಸಹ ಅತಿಥಿಯಾಗಿದ್ದರು. ಚಿತ್ರದಲ್ಲಿ ತೋರಿಸಿರುವಂತೆ ತಟ್ಟೆಯನ್ನು ಹೋಟೆಲ್ ಕೋಣೆಯ ಕಾರ್ಪೆಟ್ ನೆಲದ ಮೇಲೆ ಇಡಲಾಗಿದೆ. ಎರೆಟೆಡ್ ಡ್ರಿಂಕ್ಸ್‌ನಿಂದ ಹಣ್ಣುಗಳು (Fruits) ಮತ್ತು ಮಾಂಸಾಹಾರಿ ಮೇಲೋಗರ ಸಿದ್ಧಪಡಿಸಲಾಗಿತ್ತು. ರಶೀದ್ ಖಾನ್ ಅವರು ಚಿತ್ರಕ್ಕೆ 'Sehri with skipper So nice of you to join us'ಎಂದು ಶೀರ್ಷಿಕೆ ನೀಡಿದ್ದಾರೆ. ಚಿತ್ರವು 473 ಸಾವಿರಕ್ಕೂ ಹೆಚ್ಚು ಇಷ್ಟಗಳು ಮತ್ತು 3.5 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.

 
 
 
 
 
 
 
 
 
 
 
 
 
 
 

A post shared by Rashid Khan (@rashid.khan19)

ಜನಪ್ರಿಯ ಇತಿಹಾಸಕಾರ ಲೇಖಕ ಸೂಫಿ ರಾಣಾ ಸಫ್ವಿ ಕೊಲ್ಕತ್ತಾದಿಂದ ಅವರ ಸ್ನೇಹಿತೆ ಬೇಯಿಸಿದ ಹಲೀಮ್ ಅನ್ನು ಕಳುಹಿಸಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಾಣಾ ತನ್ನ ಸ್ನೇಹಿತೆ ಮಂಜಿಲತ್ ಫಾತಿಮಾ ಅವರ ವಿಶೇಷ ರಂಜಾನ್ ಹಲೀಮ್ ಅನ್ನು ಸವಿಯುವ ಬಯಕೆಯನ್ನು ವ್ಯಕ್ತಪಡಿಸಿದಾಗ ಅವರು ಕೊಟ್ಟು ಕಳುಹಿಸಿದ್ದಾರೆ. ಮಂಜಿಲತ್ ಕೊಲ್ಕತ್ತಾದಿಂದ ದೆಹಲಿಗೆ ಅದೇ ಅಡುಗೆ ಮಾಡಿ ಕೊರಿಯರ್ ಮಾಡಿದರು.

ರಂಜಾನ್ ಉಪವಾಸ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

ರಾಣಾ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದು ಹೀಗೆ, " @manzilats ನಲ್ಲಿ ರಂಜಾನ್ ಸಮಯದಲ್ಲಿ ಮಾಡುವ ಹಲೀಮ್ ಅನ್ನು ನಾನು ರುಚಿ ನೋಡಬೇಕೆಂದು ಅವರ ಪೋಸ್ಟ್‌ನಲ್ಲಿ ನನ್ನ ಕಾಮೆಂಟ್ ಮಾಡಿದೆ. ಅದನ್ನು ಓದಿದ ಮಂಜಿಲತ್‌ ಕಳುಹಿಸಿಕೊಟ್ಟಿದ್ದಾರೆ. ಅವರಂತಹ ಸ್ನೇಹಿತನನ್ನು ಹೊಂದಿರುವ ನಾನು ಧನ್ಯ. ನಿನ್ನೆ ಅವರು ಕೊಲ್ಕೊತ್ತಾದಿಂದ ಕಳುಹಿಸಿದ ಆಹಾರವನ್ನು (Food) ನಾನಿವತ್ತು ನೋಯ್ಡಾದಲ್ಲಿ ತಿನ್ನುತ್ತಿದ್ದೇನೆ' ಎಂದು ರಾಣಾ ಹೇಳಿದರು. 

 
 
 
 
 
 
 
 
 
 
 
 
 
 
 

A post shared by Rana Safvi (@ranasafvi)

ರಂಜಾನ್ ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಬರುತ್ತದೆ. ಮುಸ್ಲಿಂ ಬಾಂಧವರು ಇದನ್ನು ಅತ್ಯಂತ ಖುಷಿಯಿಂದ ಆಚರಿಸುತ್ತಾರೆ. ಈ ಮಂಗಳಕರ ಸಮಯದಲ್ಲಿ ಕುರಾನ್ ಅನಾವರಣಗೊಂಡ ಕಾರಣ ಈ ಪವಿತ್ರ ತಿಂಗಳು ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ. ರಂಜಾನ್‌ನ ಕೊನೆಯಲ್ಲಿ ಈದ್ ಅಲ್-ಫಿತರ್ ಅಥವಾ ಉಪವಾಸ ಮುರಿಯುವ ಹಬ್ಬ (Festival) ಎಂಬ ಮೂರು ದಿನಗಳ ದೊಡ್ಡ ಆಚರಣೆ ಇರುತ್ತದೆ.

Follow Us:
Download App:
  • android
  • ios