ಅಕ್ಷಯ ತೃತೀಯದಂದು ಈ ಕೆಲಸ ಮಾಡಿದರೆ ಸಮೃದ್ಧಿ ವೃದ್ಧಿ

First Published May 14, 2021, 12:37 PM IST

ಮೇ 14ರಂದು ಅಕ್ಷಯ ತೃತೀಯ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಅಕ್ಷಯ ತೃತೀಯವು ವರ್ಷದ ಅತ್ಯಂತ ಶುಭ ದಿನಗಳಲ್ಲೊಂದು. ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಮತ್ತು ತೃತೀಯ ಎಂದರೆ ಶುಕ್ಲ ಪಕ್ಷದ ಮೂರನೇ ದಿನ ಅಥವಾ ಪೂರ್ಣಿಮೆಯ ಹಂತ. ಅಕ್ಷಯ ತೃತೀಯವನ್ನು ದೇಶದ ಕೆಲವು ಭಾಗಗಳಲ್ಲಿ ಅಖಾ ತೀಜ್ ಎಂದು ಕರೆಯಲಾಗುತ್ತದೆ. ಯಾವುದೇ ನಿರ್ದಿಷ್ಟ ಕೆಲಸ ಅಥವಾ ಪೂಜೆಗೆ ಮಹೂರ್ತ ಅಥವಾ ಶುಭ ಮಹೂರ್ತವನ್ನು ಈ ದಿನ ನೋಡುವುದಿಲ್ಲ. ಯಾಕೆಂದರೆ ಈ ದಿನ ಪೂರ್ತಿ ಶುಭವಾಗಿರುತ್ತದೆ.