- Home
- Astrology
- Festivals
- Ram Mandir Dhwajarohan: ರಾಮ ಮಂದಿರದ ಧರ್ಮ ಧ್ವಜದಲ್ಲಿ ರಾರಾಜಿಸಿದ ‘ಓಂ, ಸೂರ್ಯ, ಮರ’: ಇದರ ಅರ್ಥವೇನು?
Ram Mandir Dhwajarohan: ರಾಮ ಮಂದಿರದ ಧರ್ಮ ಧ್ವಜದಲ್ಲಿ ರಾರಾಜಿಸಿದ ‘ಓಂ, ಸೂರ್ಯ, ಮರ’: ಇದರ ಅರ್ಥವೇನು?
Ram Mandir Dhwajarohan: ಅಯೋಧ್ಯೆ ರಾಮ ಮಂದಿರದಲ್ಲಿ ಧರ್ಮಧ್ವಜದ ಅನಾವರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ಮಾಡಿದ್ದಾರೆ. ಧ್ವಜದ ಮೇಲೆ ಓಂ, ಸೂರ್ಯ ದೇವರು ಮತ್ತು ಕೋವಿದಾರ್ ಮರದ ಚಿತ್ರವಿದ್ದು, ಈ ಮೂರರ ಅರ್ಥವನ್ನು ತಿಳಿಯೋಣ.

ಅಯೋಧ್ಯೆಯಲ್ಲಿ ಹಾರಿದ ಧರ್ಮ ಧ್ವಜ
ಅಯೋಧ್ಯೆಯಲ್ಲಿ ಅದ್ಧೂರಿ ಧ್ವಜಾರೋಹಣ ಸಮಾರಂಭ ನಡೆದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಗವಾನ್ ರಾಮನ ಭವ್ಯ ದೇವಾಲಯದಲ್ಲಿ ಧರ್ಮ ಧ್ವಜಾರೋಹಣ ಮಾಡಿದ್ದಾರೆ. ಈ ಧ್ವಜವು ಓಂ, ಸೂರ್ಯ ದೇವರು ಮತ್ತು ಕೋವಿದಾರ್ ಮರದ ಚಿತ್ರವನ್ನು ಹೊಂದಿರುವುದು ಬಹಳ ವಿಶೇಷವಾಗಿದೆ. ಈ ಮೂರು ಚಿಹ್ನೆಗಳು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿವೆ. ಈ ಮೂರು ಚಿಹ್ನೆಗಳ ಅರ್ಥವನ್ನು ತಿಳಿಯೋಣ,
ಧ್ವಜ ಹೇಗಿದೆ?
ರಾಮ ಮಂದಿರದ ಮೇಲೆ ಹಾರಿಸಲಾಗುವ ಧ್ವಜವು ಕೇಸರಿ ಬಣ್ಣದ್ದಾಗಿದ್ದು, 22 ಅಡಿ ಉದ್ದ ಮತ್ತು 11 ಅಡಿ ಅಗಲವಿದೆ. ರಾಮ ಮಂದಿರವು ಒಂದೇ ಧ್ವಜವನ್ನು ಹೊಂದಿದೆ. ಈ ಧ್ವಜಗಳನ್ನು ಅಹಮದಾಬಾದ್‌ನಲ್ಲಿ ತಯಾರಿಸಲಾಗಿದೆ.
ಧ್ವಜದಲ್ಲಿರುವ ಓಂ ಅಕ್ಷರದ ಅರ್ಥವೇನು?
ಅಯೋಧ್ಯೆಯ ರಾಮ ಮಂದಿರದಲ್ಲಿ ಹಾರಿಸಲಾದ ಧ್ವಜವು ಓಂ ಚಿಹ್ನೆಯನ್ನು ಹೊಂದಿದೆ. ಸನಾತನ ಧರ್ಮದಲ್ಲಿ ಓಂ ಅನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಹಿಂದೂ ಧರ್ಮದ ಶುಭ ಸಂಕೇತಗಳಲ್ಲಿ ಒಂದಾಗಿದೆ. ಓಂ ಶಬ್ಧಕ್ಕೆ ವಿಶಿಷ್ಟ ಪವರ್ ಕೂಡ ಇದೆ. ಇದರ ಪ್ರಭಾವವು ವಿಶೇಷ ಸಕಾರಾತ್ಮಕ ಶಕ್ತಿಯನ್ನು ಕಾಯ್ದುಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ. ಸನಾತನ ಧರ್ಮದಲ್ಲಿ ಮಂತ್ರಗಳಲ್ಲಿಯೂ ಓಂ ಅನ್ನು ಪಠಿಸಲಾಗುತ್ತದೆ
ಧ್ವಜದ ಮೇಲಿನ ಸೂರ್ಯ ಚಿಹ್ನೆಯ ಅರ್ಥವೇನು?
ರಾಮ ದೇವಾಲಯದ ಈ ಧ್ವಜದ ಮೇಲೆ ಸೂರ್ಯನ ಚಿಹ್ನೆಯನ್ನು ಚಿತ್ರಿಸಲಾಗಿದೆ. ನಂಬಿಕೆಗಳ ಪ್ರಕಾರ, ಭಗವಾನ್ ರಾಮನು ಸೂರ್ಯವಂಶಿ ರಾಜವಂಶಕ್ಕೆ ಸೇರಿದವನು. ಈ ಸೂರ್ಯವಂಶಿ ರಾಜವಂಶವು ಸೂರ್ಯ ದೇವರ ಮಗನಾದ ವೈವಸ್ವತ ಮನುವಿನಿಂದ ಹುಟ್ಟಿಕೊಂಡಿತು. ರಾವಣನ ಮೇಲೆ ಜಯ ಸಾಧಿಸಲು, ರಾಮನು ಮಹರ್ಷಿ ಅಗಸ್ತ್ಯರ ಆಜ್ಞೆಯ ಮೇರೆಗೆ ಸೂರ್ಯ ದೇವರ ವಿಶೇಷ ಪೂಜೆಯನ್ನು ಮಾಡಿದ್ದನು. ಹಾಗಾಗಿ ರಾಮನ ವಂಶದ ಗುರುತಾಗಿ ಸೂರ್ಯನ ಚಿತ್ರವನ್ನು ಧ್ವಜದಲ್ಲಿ ಇರಿಸಲಾಗಿದೆ. .
ಕೋವಿದರ್ ಮರದ ಮಹತ್ವ
ಪೌರಾಣಿಕ ಗ್ರಂಥಗಳಲ್ಲಿ ಕೋವಿದರ್ ಮರಕ್ಕೆ ವಿಶೇಷ ಮಹತ್ವವಿದೆ. ಋಷಿ ಕಶ್ಯಪ್ ರಚಿಸಿದ ಮಂದಾರ ಮತ್ತು ಪಾರಿಜಾತದ ಮಿಶ್ರತಳಿ ಎಂದು ನಂಬಲಾದ ಕೋವಿದಾರ ಮರವು ಪ್ರಾಚೀನ ಜ್ಞಾನ ಮತ್ತು ಪವಿತ್ರ ಸಂಪ್ರದಾಯಗಳ ನಿರಂತರತೆಯನ್ನು ಸಂಕೇತಿಸುತ್ತದೆ. ಇದು ಅಯೋಧ್ಯೆಯಲ್ಲಿ ಪವಿತ್ರ ಮರವಾಗಿತ್ತು. ಆ ಸಮಯದಲ್ಲಿ ಈ ಮರದ ಚಿತ್ರವನ್ನು ಅಯೋಧ್ಯೆಯ ಧ್ವಜದ ಮೇಲೆ ಚಿತ್ರಿಸಲಾಗಿತ್ತು ಎನ್ನುವ ನಂಬಿಕೆ ಇದೆ. ಆದ್ದರಿಂದ, ಈ ಮೂರು ಚಿಹ್ನೆಗಳನ್ನು ಧ್ವಜದ ಮೇಲೆ ಚಿತ್ರಿಸಲಾಗಿದೆ.

