MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಸಾವಿನ ನಂತರ ಆತ್ಮದ 13 ದಿನಗಳ ನಿಗೂಢ ಪಯಣ ಹೇಗಿರುತ್ತೆ; ಗರುಡ ಪುರಾಣ ಏನು ಹೇಳುತ್ತೆ?

ಸಾವಿನ ನಂತರ ಆತ್ಮದ 13 ದಿನಗಳ ನಿಗೂಢ ಪಯಣ ಹೇಗಿರುತ್ತೆ; ಗರುಡ ಪುರಾಣ ಏನು ಹೇಳುತ್ತೆ?

ಗರುಡ ಪುರಾಣದ ಪ್ರಕಾರ, ವ್ಯಕ್ತಿಯ ಮರಣದ ನಂತರ ಆತ್ಮವು ತಕ್ಷಣವೇ ಭೂಲೋಕವನ್ನು ತೊರೆಯುವುದಿಲ್ಲ. ಮೊದಲ 13 ದಿನಗಳ ಕಾಲ ತನ್ನ ಮನೆಯ ಸುತ್ತಲೇ ಇದ್ದು, ಪಿಂಡದಾನ ಮತ್ತು ಇತರ ವಿಧಿಗಳಿಂದ ಶಕ್ತಿ ಪಡೆದು, ನಂತರ ಯಮಲೋಕದತ್ತ ತನ್ನ ಅಂತಿಮ ಪ್ರಯಾಣವನ್ನು ಆರಂಭಿಸುತ್ತದೆ.

2 Min read
Author : Mahmad Rafik
Published : Jul 02 2026, 05:09 PM IST
Share this Photo Gallery
  • FB
  • TW
  • Linkdin
  • Whatsapp
18
ಗರುಡು ಪುರಾಣ
Image Credit : AI Generated

ಗರುಡು ಪುರಾಣ

ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು ಎಂಬುದು ಪ್ರಕೃತಿ ನಿಯಮ. ಸಾವು ಎಂಬ ಮಾತು ಕೇಳಿದ ಕೂಡಲೇ ಎದೆ ಝಲ್ ಎನ್ನುತ್ತದೆ. ಸಾವಿನ ನಂತರ ನಡೆಯುವ ಪ್ರತಿಯೊಂದು ಘಟನೆಯೂ ದೈವಕ್ಕೆ ಸಂಬಂಧಿಸಿದ್ದು. ವ್ಯಕ್ತಿಯ ಮರಣದ ನಂತರ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಒಂದು ಜೀವ ಸತ್ತ ನಂತರ, ಆ ಆತ್ಮದ ಪ್ರಯಾಣ ಶುರುವಾಗುತ್ತದೆ. ಈ ಬಗ್ಗೆ ಗರುಡ ಪುರಾಣವು ಹಲವು ಮಾಹಿತಿಗಳನ್ನು ನೀಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
18 ಮಹಾಪುರಾಣ
Image Credit : AI Generated

18 ಮಹಾಪುರಾಣ

ಹಿಂದೂ ಧರ್ಮದಲ್ಲಿರುವ 18 ಮಹಾಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದರಲ್ಲಿ ವ್ಯಕ್ತಿಯ ಮರಣದ ನಂತರ ಏನಾಗುತ್ತದೆ? ಆತ್ಮದ ಪ್ರಯಾಣ ಮತ್ತು ಅದರ ಚಲನವಲನಗಳ ಬಗ್ಗೆ ಹಲವು ಮಾಹಿತಿಗಳನ್ನು ವಿವರಿಸಲಾಗಿದೆ. ಗರುಡ ಪುರಾಣದ ಪ್ರಕಾರ, ವ್ಯಕ್ತಿಯ ಮರಣದ ನಂತರ ಅವನ ಆತ್ಮವು ತಕ್ಷಣವೇ ಮನೆಯನ್ನು ಶಾಶ್ವತವಾಗಿ ಬಿಟ್ಟು ಹೋಗುವುದಿಲ್ಲ. ದೇಹ ನಾಶವಾದರೂ, ಕುಟುಂಬ ಮತ್ತು ಮನೆಯ ಮೇಲಿನ ವ್ಯಾಮೋಹದಿಂದಾಗಿ ಆತ್ಮವು ಕೆಲವು ದಿನಗಳ ಕಾಲ ಅಲ್ಲಿಯೇ ಸುತ್ತಾಡುತ್ತಿರುತ್ತದೆ

Related Articles

Related image1
ಮೃತ ವ್ಯಕ್ತಿಯ ಮಂಚ, ಹಾಸಿಗೆ, ಬಟ್ಟೆ ಇಟ್ಟುಕೊಳ್ಳುವ ಮುನ್ನ ಗರುಡ ಪುರಾಣ ಏನು ಹೇಳುತ್ತೆ ನೋಡಿ
Related image2
ಗರುಡ ಪುರಾಣ: ಪಾಪಿಗಳ ಆತ್ಮ ನಿಮ್ಮ ಗರ್ಭ ಸೇರಬಾರದು ಅಂತಿದ್ದರೆ ಹೀಗೆ ಮಾಡಬೇಡಿ!
38
ಮೊದಲ 24 ಗಂಟೆ
Image Credit : AI Generated

ಮೊದಲ 24 ಗಂಟೆ

ಒಬ್ಬ ವ್ಯಕ್ತಿ ಸತ್ತ ತಕ್ಷಣ, ಯಮದೂತರು ಅವನ ಆತ್ಮವನ್ನು ಹಿಡಿದು ಯಮಲೋಕಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಚಿತ್ರಗುಪ್ತನು ಆತ್ಮದ ಪಾಪ-ಪುಣ್ಯಗಳ ಲೆಕ್ಕವನ್ನು ಪರಿಶೀಲಿಸುತ್ತಾನೆ. ಈ ಮೊದಲ ಪ್ರಯಾಣವು ಬಹಳ ಕಡಿಮೆ ಸಮಯ ಇರುತ್ತದೆ. ಲೆಕ್ಕಾಚಾರಗಳನ್ನು ನೋಡಿದ ನಂತರ, ಯಮದೂತರು ಆತ್ಮವನ್ನು ಮತ್ತೆ ಅದರ ಸ್ವಂತ ಮನೆಗೆ ತಂದು ಬಿಡುತ್ತಾರೆ. ಈ ಘಟನೆಯು ವ್ಯಕ್ತಿ ಸತ್ತ ಮೊದಲ 24 ಗಂಟೆಗಳ ಒಳಗೆ ನಡೆದುಹೋಗುತ್ತದೆ.

48
ಮೊದಲ 10 ದಿನಗಳು
Image Credit : AI Generated

ಮೊದಲ 10 ದಿನಗಳು

ಮನೆಗೆ ಮರಳಿದ ಆತ್ಮವು ತನ್ನ ದೇಹವನ್ನು ಸುಟ್ಟ ಬೂದಿ ಅಥವಾ ಹೂಳಿದ ಸ್ಥಳದ ಬಳಿ ಮತ್ತು ತಾನು ವಾಸಿಸುತ್ತಿದ್ದ ಮನೆಯ ಸುತ್ತಲೂ ಸುಳಿದಾಡುತ್ತದೆ. ಈ ದಿನಗಳಲ್ಲಿ, ಆತ್ಮಕ್ಕೆ ಕೇವಲ ಸೂಕ್ಷ್ಮ ಶರೀರ ಮಾತ್ರ ಇರುತ್ತದೆ. ಕುಟುಂಬದವರು ಮಾಡುವ ಪಿಂಡದಾನ ಮತ್ತು ಇತರ ಕ್ರಿಯೆಗಳು ಆ ಆತ್ಮಕ್ಕೆ ಆಹಾರವಾಗುತ್ತದೆ ಮತ್ತು ಮುಂದಿನ ಪ್ರಯಾಣಕ್ಕೆ ಶಕ್ತಿಯಾಗಿ ಬದಲಾಗುತ್ತದೆ. ಈ ಪ್ರಕ್ರಿಯೆಯು ವ್ಯಕ್ತಿ ಸತ್ತ 10 ದಿನಗಳವರೆಗೆ ನಡೆಯುತ್ತದೆ.

58
11 ಮತ್ತು 12ನೇ ದಿನ
Image Credit : Gemini Generate Image

11 ಮತ್ತು 12ನೇ ದಿನ

ವ್ಯಕ್ತಿ ಸತ್ತ 11 ಮತ್ತು 12ನೇ ದಿನಗಳಲ್ಲಿ ಮಾಡುವ ವಿಶೇಷ ವಿಧಿವಿಧಾನಗಳು, ದಾನಗಳು ಮತ್ತು ಇತರ ಕಾರ್ಯಗಳಿಂದ ಆತ್ಮವು ತನ್ನ ಹಸಿವನ್ನು ನೀಗಿಸಿಕೊಂಡು, ಭೂಲೋಕದ ಮೇಲಿನ ವ್ಯಾಮೋಹವನ್ನು ನಿಧಾನವಾಗಿ ಬಿಡಲು ಪ್ರಾರಂಭಿಸುತ್ತದೆ. ಇದು ಆತ್ಮವು ಯಮಲೋಕದ ಪ್ರಯಾಣಕ್ಕೆ ಸಿದ್ಧವಾಗುತ್ತಿರುವುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ನಾವು ಮಾಡುವ ಪೂಜೆಗಳು ಮತ್ತು ಸಂಜೆ ಹೊತ್ತಿಸುವ ದೀಪದ ಬೆಳಕಿನ ಸಹಾಯದಿಂದ ಆತ್ಮವು ಯಮಲೋಕದ ಪ್ರಯಾಣಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತದೆ.

68
13ನೇ ದಿನ
Image Credit : Gemini Generate Image

13ನೇ ದಿನ

ಗರುಡ ಪುರಾಣದ ಪ್ರಕಾರ, ಮರಣದ ನಂತರ 13ನೇ ದಿನದಂದು ಆತ್ಮವು ಮನೆಯನ್ನು ಶಾಶ್ವತವಾಗಿ ತೊರೆಯುತ್ತದೆ. ಕೇವಲ ಮನೆಯನ್ನಷ್ಟೇ ಅಲ್ಲ, ಈ ಭೂಲೋಕವನ್ನೇ ಶಾಶ್ವತವಾಗಿ ಬಿಟ್ಟು ಹೋಗುತ್ತದೆ. 13ನೇ ದಿನದ ವಿಧಿವಿಧಾನಗಳ ನಂತರ, ಯಮದೂತರು ಆತ್ಮವನ್ನು ಯಮಲೋಕದ ಕಡೆಗೆ ಕರೆದೊಯ್ಯಲು ಪ್ರಾರಂಭಿಸುತ್ತಾರೆ. ಈ ಪ್ರಯಾಣವು ಸುಮಾರು 47 ದಿನಗಳವರೆಗೆ ಅಥವಾ ಕೆಲವು ಧಾರ್ಮಿಕ ಗ್ರಂಥಗಳ ಪ್ರಕಾರ ಒಂದು ವರ್ಷದವರೆಗೆ ಮುಂದುವರಿದು, ಆತ್ಮವು ತನ್ನ ಮುಂದಿನ ಹಂತವನ್ನು ತಲುಪುತ್ತದೆ.

78
13 ದಿನಗಳ ಕಾಲ ಸೂತಕ
Image Credit : Asianet News

13 ದಿನಗಳ ಕಾಲ ಸೂತಕ

ಸಂಕ್ಷಿಪ್ತವಾಗಿ ಹೇಳುವುದಾದರೆ, ಸತ್ತ ಮೊದಲ ದಿನ ಯಮಲೋಕಕ್ಕೆ ಹೋಗಿಬರುವ ಆತ್ಮ, 13 ದಿನಗಳ ಕಾಲ ತನ್ನ ಮನೆಯಲ್ಲೇ ಇರುತ್ತದೆ. 13ನೇ ದಿನದ ವಿಧಿವಿಧಾನಗಳು ಮುಗಿದ ನಂತರ, ಅದು ಮನೆಯನ್ನು ಸಂಪೂರ್ಣವಾಗಿ ತೊರೆದು ತನ್ನ ಅಂತಿಮ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಇದಕ್ಕಾಗಿಯೇ 13 ದಿನಗಳ ಕಾಲ ಸೂತಕವನ್ನು ಆಚರಿಸಿ, ವಿಧಿವಿಧಾನಗಳನ್ನು ಸಂಪೂರ್ಣವಾಗಿ ಮಾಡಲಾಗುತ್ತದೆ. ಸಾವು ಸಂಭವಿಸಿದ ಮನೆಯಲ್ಲಿ 13 ದಿನಗಳ ಕಾಲ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಮುಂಜಾನೆ ಎದ್ದು ಸ್ನಾನ ಮಾಡಬೇಕು. ರಾತ್ರಿ ಅಳುವುದನ್ನು ತಪ್ಪಿಸಬೇಕು. ಸತ್ತವರನ್ನು ಪದೇ ಪದೇ ಕರೆಯಬಾರದು. ಹಾಗೆ ಮಾಡುವುದು ಮೃತರ ಆತ್ಮಕ್ಕೆ ನೋವನ್ನು ಉಂಟುಮಾಡಬಹುದು.

88
ಆತ್ಮದ ಮುಕ್ತಿಗಾಗಿ ಶ್ರದ್ಧೆಯಿಂದ ಮಾಡಿ ಪೂಜೆ
Image Credit : Getty

ಆತ್ಮದ ಮುಕ್ತಿಗಾಗಿ ಶ್ರದ್ಧೆಯಿಂದ ಮಾಡಿ ಪೂಜೆ

13 ದಿನಗಳ ಕಾಲ ಸತ್ತವರನ್ನು ಮನಃಪೂರ್ವಕವಾಗಿ ನೆನೆದು ಅವರ ಆತ್ಮಕ್ಕೆ ಮುಕ್ತಿ ಸಿಗಲೆಂದು ಶ್ರದ್ಧೆಯಿಂದ ಪೂಜೆಗಳನ್ನು ಮಾಡಬೇಕು. ಮದ್ಯಪಾನ, ಧೂಮಪಾನ, ಮಾಂಸಾಹಾರ ಸೇವನೆ ಮಾಡಬಾರದು. ಸತ್ತವರಿಗೆ ಇಷ್ಟವಾದ ಆಹಾರ, ತಿಂಡಿಗಳನ್ನು ನೈವೇದ್ಯ ಮಾಡಿ ದೀಪ ಹಚ್ಚಿ ಪೂಜಿಸಬೇಕು. ಸತ್ತವರನ್ನು ನೆನೆದು ಅಳುವುದು ಅಥವಾ ಅವರನ್ನು ಮತ್ತೆ ಬರುವಂತೆ ಕರೆಯುವುದು ಆ ಆತ್ಮಕ್ಕೆ ನೋವನ್ನುಂಟು ಮಾಡುತ್ತದೆ. ಇದು ಭೂಲೋಕದ ಮೇಲಿನ ಅವರ ವ್ಯಾಮೋಹವನ್ನು ಕಡಿಮೆ ಮಾಡದೆ, ಆತ್ಮಕ್ಕೆ ಶಾಂತಿ ಸಿಗುವ ಬದಲು ದುಃಖವನ್ನು ಹೆಚ್ಚಿಸಬಹುದು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಗರುಡ ಪುರಾಣ
ಜ್ಯೋತಿಷ್ಯ

Latest Videos
Recommended Stories
Recommended image1
Mahalakshmi Yoga: ಕುಬೇರನ ಕೃಪೆಯಿಂದ ಮಹಾಲಕ್ಷ್ಮಿ ಯೋಗ, ಈ 4 ರಾಶಿಗಳಿಗೆ ದುಡ್ಡಿನ ಸುರಿಮಳೆ!
Recommended image2
ಸಮಸಪ್ತಕ ಯೋಗದಿಂದ ಮುಟ್ಟಿದ್ದೆಲ್ಲಾ ಚಿನ್ನ, ಈ 3 ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
Recommended image3
ದೆವ್ವ ದಾಳಿ ಮಾಡುವಂತೆ ಕನಸು ಬಿದ್ದು ಬೆಚ್ಚಿ ಬಿದ್ದಿದ್ದೀರಾ? ಇದರ ಅರ್ಥ ಏನು?
Related Stories
Recommended image1
ಮೃತ ವ್ಯಕ್ತಿಯ ಮಂಚ, ಹಾಸಿಗೆ, ಬಟ್ಟೆ ಇಟ್ಟುಕೊಳ್ಳುವ ಮುನ್ನ ಗರುಡ ಪುರಾಣ ಏನು ಹೇಳುತ್ತೆ ನೋಡಿ
Recommended image2
ಗರುಡ ಪುರಾಣ: ಪಾಪಿಗಳ ಆತ್ಮ ನಿಮ್ಮ ಗರ್ಭ ಸೇರಬಾರದು ಅಂತಿದ್ದರೆ ಹೀಗೆ ಮಾಡಬೇಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved