ನಮಾಜ್‌ಗೂ ಮುನ್ನ ಮುಸ್ಲಿಮರು ವಜು ಮಾಡಿಕೊಳ್ಳೋದು ಏಕೆ? ಏನಿದರ ಮಹತ್ವ?
ವಜು ಎನ್ನುವುದು ಇಸ್ಲಾಂನಲ್ಲಿ ನಮಾಜ್‌ಗೆ ಮುಂಚೆ ಮಾಡುವ ಶುದ್ಧೀಕರಣ ಆಚರಣೆಯಾಗಿದೆ. ಇದು ಕೈ, ಕಾಲು, ಮುಖ ಸೇರಿದಂತೆ ದೇಹದ ವಿವಿಧ ಭಾಗಗಳನ್ನು ತೊಳೆಯುವುದನ್ನು ಒಳಗೊಂಡಿರುತ್ತದೆ. ವಜು ಮಾಡುವುದರಿಂದ ವ್ಯಕ್ತಿಯು ನಮಾಜ್‌ಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧನಾಗುತ್ತಾನೆ.

ಪ್ರತಿಯೊಬ್ಬ ಮುಸ್ಲಿಮರಿಗೂ ವಜು ಪ್ರಕ್ರಿಯೆ ತಿಳಿದಿರುತ್ತವೆ. ನಮಜ್‌ಗೂ ಮುನ್ನ ವಜು ಮಾಡಿಕೊಳ್ಳಲಾಗುತ್ತದೆ. ಇದನ್ನು ವಡು ಅಂತಾನೂ ಕರೆಯಲಾಗುತ್ತದೆ. ವಜು ಮಾಡಿಕೊಳ್ಳುವುದನ್ನು ಮುಸ್ಲಿಮೇತರರು ಕೆಲವೊಮ್ಮೆ ತುಂಬಾನೇ ಕುತೂಹಲದಿಂದ ಗಮನಿಸುತ್ತಿರುತ್ತಾರೆ. ಈ ವಜು ಅಂದ್ರೆ ಏನು ಎಂಬುದರ ಮಾಹಿತಿ ಇಲ್ಲಿದೆ.
ಸರಳ ಭಾಷೆಯಲ್ಲಿ ವಜು/ವಡು ಅಂದ್ರೆ ಕೈ-ಕಾಲು ತೊಳೆದುಕೊಳ್ಳುವ ಪ್ರಕ್ರಿಯೆಯಾಗಿರುತ್ತದೆ. ಇಸ್ಲಾಂನಲ್ಲಿ ವಜು ಮಾಡಿಕೊಳ್ಳುವ ವಿಧಾನದ ಬಗ್ಗೆ ಸವಿವರವಾಗಿ ಹೇಳಲಾಗಿದೆ. ಈ ಲೇಖನದಲ್ಲಿ ವಜು ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ಬನ್ನಿ.
ಪ್ರತಿಯೊಬ್ಬ ಮುಸ್ಲಿಮರು ದಿನಕ್ಕೆ 5 ಬಾರಿ ಕಡ್ಡಾಯವಾಗಿ ನಮಾಜ್ ಮಾಡಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ನಮಾಝ್ ಮಾಡುವ ಮೊದಲು, ಒಬ್ಬ ವ್ಯಕ್ತಿಯು ಆಧ್ಯಾತ್ಮಿಕವಾಗಿ ಶುದ್ಧರಾಗಿರಬೇಕು. ಆಧ್ಯಾತ್ಮಿಕವಾಗಿ ಶುದ್ಧವಾಗಲು ಮುಸ್ಲಿಮರು ವಜು ಮಾಡಿಕೊಳ್ಳುತ್ತಾರೆ. ಇದೊಂದು ಶುದ್ಧೀಕರಣ ಆಚರಣೆ ಎಂದು ಕರೆಯಬಹುದು.
ಇಸ್ಲಾಂನಲ್ಲಿ ವಜು ಮಾಡಿಕೊಳ್ಳುವುದನ್ನು ಶುದ್ಧತೆ ಮತ್ತು ಶುಚಿತ್ವದ ಪ್ರಮುಖ ಭಾಗ ಎಂದು ಪರಿಗಣಿಸಲಾಗುತ್ತದೆ. ನಮಾಜ್‌ಗೂ ಮೊದಲು ಕೈ, ಕಿವಿ, ಮುಖ, ಬಾಯಿ, ಕೂದಲು ಮತ್ತು ಪಾದಗಳನ್ನು ಶುಚಿಯಾಗಿ ತೊಳೆದುಕೊಳ್ಳಬೇಕು. ಈ ವಜು ಪ್ರಕ್ರಿಯೆ ನಮಾಜ್‌ಗೂ ಮೊದಲು ವ್ಯಕ್ತಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಶುದ್ಧಗೊಳಿಸುತ್ತದೆ. ನಮಾಜ್ ಮಾಡಲು ಸಿದ್ಧವಾಗುವ ಪ್ರಕ್ರಿಯೆಯಾಗಿದೆ.
ವಜು ಮಾಡಿಕೊಳ್ಳೋದು ಹೇಗೆ?
ಮೂಗು ಮತ್ತು ಬಾಯಿ ಸೇರಿದಂತೆ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು. ನಂತರ ಮೊಣಕೈ ಮತ್ತು ಎರಡೂ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ತಲೆ ಒರೆಸಿಕೊಳ್ಳಬೇಕು. ಆ ಬಳಿಕ ಕಣಕಾಲುಗಳು ಸೇರಿದಂತೆ ಎರಡೂ ಪಾದಗಳನ್ನು ತೊಳೆಯಬೇಕು. ವಜು ಮಾಡಲು ಕನಿಷ್ಠ 3 ನಿಮಿಷ ಬೇಕಾಗುತ್ತದೆ. ಮಸೀದಿಗಳಲ್ಲಿ ವಜು ಮಾಡಿಕೊಳ್ಳಲುವ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.