- Home
- Astrology
- Festivals
- ಗಂಡಸರು ಕಿವಿಯೋಲೆ ಹಾಕಿದ್ರೆ ಅದೃಷ್ಟ! ಅದಕ್ಕಾಗಿಯೇ ಈ ಸ್ಟಾರ್ಸ್ ಕಿವಿ ಚುಚ್ಚಿಸಿಕೊಂಡಿರೋದು?
ಗಂಡಸರು ಕಿವಿಯೋಲೆ ಹಾಕಿದ್ರೆ ಅದೃಷ್ಟ! ಅದಕ್ಕಾಗಿಯೇ ಈ ಸ್ಟಾರ್ಸ್ ಕಿವಿ ಚುಚ್ಚಿಸಿಕೊಂಡಿರೋದು?
ಹೆಣ್ಣುಮಕ್ಕಳು ಮಾತ್ರವಲ್ಲ, ಗಂಡು ಮಕ್ಕಳು ಸಹ ಕಿವಿ ಚುಚ್ಚಿಸೋದು ತುಂಬಾನೆ ಉತ್ತಮ, ಇದರಿಂದ ಏನೆಲ್ಲಾ ಲಾಭ ಇದೆ ಅನ್ನೋದನ್ನು ತಿಳಿಯೋಣ.

ಕಿವಿಯೋಲೆಗಳನ್ನು (earings) ಧರಿಸುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವಂತಹ ಪದ್ಧತಿ, ಆದರೂ ನಮ್ಮಲ್ಲಿ ಹೆಚ್ಚಿನವರು ಇದು ಕೇವಲ ಫ್ಯಾಷನ್ ಎಂದುಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಇದು ದೇಹದ ಶಕ್ತಿಯನ್ನು ಸಮತೋಲನಗೊಳಿಸುವುದಲ್ಲದೆ, ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದು ಕೇವಲ ಫ್ಯಾಷನ್ ಸ್ಟೇಟ್ಮೆಂಟ್ ಅಲ್ಲ
ಇಲ್ಲಿ ಹೆಣ್ಣುಮಕ್ಕಳ ಕುರಿತು ಮಾತನಾಡುತ್ತಿಲ್ಲ. ಬದಲಾಗಿ ಗಂಡು ಮಕ್ಕಳ ಕುರಿತು ಹೇಳ್ತಿರೋದು. ಭಾರತದಲ್ಲಿ ಪುರುಷರು ಕಿವಿಯೋಲೆಗಳನ್ನು ಧರಿಸುವುದು ಹೊಸ ಟ್ರೆಂಡ್ ಅಲ್ಲ, ಬದಲಿಗೆ ಈ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಅದು ಧಾರ್ಮಿಕ ಆಚರಣೆಯಾಗಿರಲಿ, ಆಯುರ್ವೇದ ಪ್ರಯೋಜನಗಳಾಗಿರಲಿ ಅಥವಾ ಸ್ಟೈಲ್ ಸ್ಟೇಟ್ ಮೆಂಟ್ (style statement) ಆಗಿರಲಿ, ಮೊದಲಿನಿಂದಲೇ ಇವು ನಡೆದುಕೊಂಡು ಬಂದಿವೆ.
ಅದೃಷ್ಟದ ಬಾಗಿಲು ತೆರೆಯುತ್ತದೆ
ಜ್ಯೋತಿಷ್ಯದ ಪ್ರಕಾರ, ಕಿವಿಯೋಲೆಗಳನ್ನು ಧರಿಸುವುದರಿಂದ ರಾಹು-ಕೇತು ಮತ್ತು ಶನಿಯಂತಹ ಗ್ರಹಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಇದು ಜೀವನದಲ್ಲಿ ಹಠಾತ್ ಬಿಕ್ಕಟ್ಟುಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಅದೃಷ್ಟದ ಬಾಗಿಲುಗಳನ್ನು (luck) ತೆರೆಯುತ್ತದೆ.
ಆರ್ಥಿಕ ಸ್ಥಿರತೆ
ವಿಶೇಷವಾಗಿ ಚಿನ್ನ ಅಥವಾ ಬೆಳ್ಳಿಯ ಕಿವಿಯೋಲೆಗಳನ್ನು ಧರಿಸುವುದರಿಂದ ಆರ್ಥಿಕ ಸ್ಥಿರತೆ (financial stability) ಮತ್ತು ಯಶಸ್ಸು ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಮಾನಸಿಕ ಸ್ಥಿತಿಯಲ್ಲಿ ಸುಧಾರಣೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಡ ಕಿವಿಯಲ್ಲಿ ಕಿವಿಯೋಲೆಗಳನ್ನು ಧರಿಸುವುದರಿಂದ ವ್ಯಕ್ತಿಯ ಅಂತಃಪ್ರಜ್ಞೆ ಮತ್ತು ಜ್ಞಾನ ಹೆಚ್ಚಾಗುತ್ತದೆ. ಎಡ ಕಿವಿ ಚಂದ್ರನೊಂದಿಗೆ ಸಂಬಂಧ ಹೊಂದಿದೆ, ಇದು ನಮ್ಮ ಮಾನಸಿಕ ಸ್ಥಿತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಗ್ರಹಗಳ ಸ್ಥಿತಿಯಲ್ಲಿ ಸುಧಾರಣೆ
ಎಡ ಕಿವಿಯಲ್ಲಿ ಕಿವಿಯೋಲೆ ಧರಿಸುವುದರಿಂದ ವ್ಯಕ್ತಿಯ ವಿವೇಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ಅದೃಷ್ಟದ ಬಾಗಿಲುಗಳನ್ನು ತೆರೆಯಲು ಸಹಾಯ ಮಾಡುತ್ತದೆ, ವಿಶೇಷವಾಗಿ ಗ್ರಹಗಳ ಸ್ಥಾನಗಳು ಪ್ರತಿಕೂಲವಾಗಿದ್ದಾಗ ಇದು ಖಂಡಿತಾ ಸಾಧ್ಯ.
ಗ್ರಹ ದೋಷಗಳಿಂದ ಮುಕ್ತಿ
ಜನ್ಮ ಕುಂಡಲಿಯಲ್ಲಿ ಅಥವಾ ಜಾತಕದಲ್ಲಿ ಯಾವುದೇ ಗ್ರಹ ದೋಷವಿದ್ದರೆ, ಬೆಳ್ಳಿ ಅಥವಾ ಚಿನ್ನದ ಕಿವಿಯೋಲೆಗಳನ್ನು ಧರಿಸುವುದರಿಂದ ಅದರ ಪರಿಣಾಮ ಕಡಿಮೆಯಾಗುತ್ತದೆ.
ಲಕ್ಷ್ಮಿಯ ಕೃಪೆ
ಚಿನ್ನ ಅಥವಾ ಬೆಳ್ಳಿಯ ಕಿವಿಯೋಲೆಗಳನ್ನು ಧರಿಸುವುದರಿಂದ ಲಕ್ಷ್ಮಿ ದೇವಿಯ(Goddess Lakshmi) ಆಶೀರ್ವಾದ ಸಿಗುತ್ತದೆ. ವ್ಯವಹಾರ ಅಥವಾ ವೃತ್ತಿಜೀವನದಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು, ಕೆಲವು ರಾಶಿಯ ಜನರು ಕಿವಿಯೋಲೆಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ.