- Home
- Astrology
- Festivals
- Silver Nose Pin Benefits: ಸ್ಟೈಲ್’ಗಾಗಿ ಬೆಳ್ಳಿ ಮೂಗುತಿ ಧರಿಸೋ ಹುಡುಗೀರು ಇದನ್ನೊಮ್ಮೆ ಓದಿ…
Silver Nose Pin Benefits: ಸ್ಟೈಲ್’ಗಾಗಿ ಬೆಳ್ಳಿ ಮೂಗುತಿ ಧರಿಸೋ ಹುಡುಗೀರು ಇದನ್ನೊಮ್ಮೆ ಓದಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಮೂಗುತಿ ಧರಿಸೋದು ಸರಿಯೋ? ತಪ್ಪೋ? ಈ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತೆ? ಎನ್ನುವ ಮಾಹಿತಿ ಇಲ್ಲಿದೆ. ನೀವು ಬೆಳ್ಳಿ ಮೂಗುತ್ತಿ ಧರಿಸಿದ್ರೆ ಇದನ್ನ ಓದಿ…

ಭಾರತೀಯ ಸಂಸ್ಕೃತಿಯಲ್ಲಿ, ಆಭರಣಗಳು (jewellery) ಮಹಿಳೆಯರನ್ನು ಅಲಂಕರಿಸುವುದಲ್ಲದೆ, ಅವರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಆಭರಣಗಳು ಧರ್ಮ ಮತ್ತು ಜ್ಯೋತಿಷ್ಯದೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ.
ಸಾಮಾನ್ಯವಾಗಿ ಮಹಿಳೆಯರು ಮೂಗಿನಲ್ಲಿ ಮೂಗುತಿ ಅಥವಾ ರಿಂಗ್ ಧರಿಸುತ್ತಾರೆ, ಇದನ್ನು 16 ಶೃಂಗಾರಗಳ ಭಾಗವೆಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ಆನ್ ಲೈನ್ ನಲ್ಲಿ ಬೇರೆ ಬೇರೆ ರೀತಿಯ ಮೂಗುತಿಗಳು ಟ್ರೆಂಡಿಂಗ್ ನಲ್ಲಿವೆ.
ಹೆಚ್ಚಿನ ಮಹಿಳೆಯರು ಚಿನ್ನದ ಮೂಗುತಿಗಳನ್ನು (gold nose pin) ಧರಿಸುತ್ತಾರೆಯಾದರೂ, ಕೆಲವು ಮಹಿಳೆಯರು ಬೆಳ್ಳಿಯ ಮೂಗುತಿಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ನಿಜವಾಗಿಯೂ ಬೆಳ್ಳಿಯ ಮೂಗುತಿ ಧರಿಸುವುದು ಶುಭವೋ ಅಥವಾ ಅಶುಭವೋ ಎಂದು ನಿಮಗೆ ತಿಳಿದಿದೆಯೇ?
ಜ್ಯೋತಿಷ್ಯದ ಪ್ರಕಾರ, ಚಿನ್ನವು ಸೂರ್ಯ ಮತ್ತು ಗುರು ಗ್ರಹದೊಂದಿಗೆ ಸಂಬಂಧ ಹೊಂದಿದೆ, ಆದ್ದರಿಂದ ದೇಹದ ಮೇಲ್ಭಾಗದಲ್ಲಿ ಚಿನ್ನದ ಆಭರಣಗಳನ್ನು ಧರಿಸುವುದು ಶುಭ. ಅಂದ್ರೆ ಚಿನ್ನದ ಮೂಗುತಿ ಧರಿಸೋದು ಸಹ ಅತ್ಯಂತ ಶುಭವಾಗಿದೆ.
ಬೆಳ್ಳಿಯು ಚಂದ್ರ ಮತ್ತು ಶುಕ್ರ ಗ್ರಹಗಳಿಗೆ ಸಂಬಂಧಿಸಿದೆ, ಇದು ತಂಪನ್ನು ನೀಡುತ್ತದೆ ಮತ್ತು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ನಿಜಾ. ಆದರೆ ಬೆಳ್ಳಿಯ ಮೂಗುತಿ (silver nose pin) ಧರಿಸೋದು ಎಷ್ಟು ಸರಿ? ನೀವು ಫ್ಯಾಷನ್ ಹೆಸರಲ್ಲಿ ಇದನ್ನ ಧರಿಸುತ್ತಿರಬಹುದು. ಆದರೆ ಜ್ಯೋತಿಷ್ಯದ ಪ್ರಕಾರ ಇದು ಸರೀನಾ ನೋಡೋಣ.
ಜ್ಯೋತಿಷ್ಯದಲ್ಲಿ, ಬೆಳ್ಳಿಯ ಮೂಗುತಿಯನ್ನು ಧರಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾಕಂದ್ರೆ ಮೂಗುತಿ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಮೂಗುತಿಗೆ ಬೆಳ್ಳಿ ಮೂಗುತಿ ಧರಿಸುವುದರಿಂದ ವೈವಾಹಿಕ ಜೀವನದಲ್ಲಿ (married life) ಸಮಸ್ಯೆಗಳು ಉಂಟಾಗಬಹುದು.
ಜ್ಯೋತಿಷ್ಯದ ಪ್ರಕಾರ, ಬೆಳ್ಳಿಯು ಮನಸ್ಸನ್ನು ಪ್ರತಿನಿಧಿಸುವ ಚಂದ್ರನಿಗೂ ಸಂಬಂಧಿಸಿದೆ. ಆದ್ದರಿಂದ, ಬೆಳ್ಳಿಯ ಮೂಗುತಿಯನ್ನು ಧರಿಸುವುದು ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಇನ್ನು ಮುಂದೆ ಬೆಳ್ಳಿ ಮೂಗುತ್ತಿ ಧರಿಸುವ ಮುನ್ನ ಯೋಚನೆ ಮಾಡಿ.