- Home
- Astrology
- Festivals
- Chanakya Niti: ನೀವು ಶ್ರೀಮಂತರಾಗಬೇಕೇ? ಹಾಗಿದ್ರೆ ಈ ನಾಲ್ಕು ಅಭ್ಯಾಸ ಇವತ್ತಿಂದಲೇ ಆರಂಭಿಸಿ
Chanakya Niti: ನೀವು ಶ್ರೀಮಂತರಾಗಬೇಕೇ? ಹಾಗಿದ್ರೆ ಈ ನಾಲ್ಕು ಅಭ್ಯಾಸ ಇವತ್ತಿಂದಲೇ ಆರಂಭಿಸಿ
ನೀವು ಶ್ರೀಮಂತರಾಗಲು ಬಯಸಿದರೆ, ಇವತ್ತಿನಿಂದಲೇ ಈ ನಾಲ್ಕು ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ, ನೀವು ಜೀವನಪರ್ಯಂತ ಹಣ ಗಳಿಸುತ್ತಲೇ ಇರುತ್ತೀರಿ.
- FB
- TW
- Linkdin
Follow Us
)
ತಮ್ಮ ಕನಸುಗಳನ್ನು ನನಸಾಗಿಸಲು, ಪ್ರತಿಯೊಬ್ಬರೂ ತಮ್ಮ ಅಭ್ಯಾಸಗಳಲ್ಲಿ ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ, ಆಚಾರ್ಯ ಚಾಣಕ್ಯ (Acharya Chanakya) ನಾಲ್ಕು ಅಭ್ಯಾಸಗಳನ್ನು ಹೇಳಿದ್ದಾರೆ, ಅದನ್ನ ಪಾಲಿಸಿದ್ರೆ ನೀವು ಶ್ರೀಮಂತರಾಗೋದು ಖಂಡಿತಾ. .
ಈ ಜಗತ್ತಿನಲ್ಲಿ ಶ್ರೀಮಂತರಾಗಲು ಬಯಸದ ವ್ಯಕ್ತಿ ಅಪರೂಪ. ಪ್ರತಿಯೊಬ್ಬರಿಗೂ ತಾವು ಶ್ರೀಮಂತರಾಗಬೇಕು. ಕೈ ತುಂಬಾ ಹಣ ಸಂಪಾದನೆ ಮಾಡಬೇಕು ಎನ್ನುವ ಕನಸು ಇರುತ್ತೆ. ಆದರೆ ತಮ್ಮ ಕನಸುಗಳನ್ನು ನನಸಾಗಿಸಲು, ಪ್ರತಿಯೊಬ್ಬರೂ ತಮ್ಮ ಅಭ್ಯಾಸಗಳಲ್ಲಿ ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳಬೇಕು.
ಆಚಾರ್ಯ ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಶ್ರೀಮಂತನಾಗುವ ಪ್ರತಿಯೊಬ್ಬ ವ್ಯಕ್ತಿಯು ಹೊಂದಿರಲೇಬೇಕಾದಂತಹ ನಾಲ್ಕು ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನೀವು ಶ್ರೀಮಂತರಾಗಲು (want to be rich) ಬಯಸಿದ್ರೆ ಇವತ್ತಿನಿಂದಲೇ ಈ ಅಭ್ಯಾಸಗಳನ್ನು ನಿಮ್ಮ ಜೀವನದಲ್ಲಿ ರೂಢಿ ಮಾಡಿ.
ಮೊದಲನೇಯದಾಗಿ ಕಠಿಣ ಪರಿಶ್ರಮ (hard work). ಪ್ರತಿಯೊಬ್ಬ ವ್ಯಕ್ತಿಯು ತನ್ನ ಗುರಿಯನ್ನು ಸಾಧಿಸಲು ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಾಗಿರಬೇಕು. ನೀವು ಅಡ್ಡ ದಾರಿ ಹಿಡಿದರೆ ಅದರಿಂದ ನಿಮಗೆ ಸಂಪೂರ್ಣ ಯಶಸ್ಸು ಸಿಗೋದಕ್ಕೆ ಸಾಧ್ಯ ಇಲ್ಲ. ಬದಲಾಗಿ ನೀವು ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನ ಸಾಧಿಸಬೇಕು.
ಕಠಿಣ ಪರಿಶ್ರಮದಿಂದ ಗಳಿಸಿದ ಹಣವನ್ನು ಹೂಡಿಕೆ ಮಾಡುವುದು (invest money) ಕೂಡ ತುಂಬಾನೆ ಮುಖ್ಯ. ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಹಣವನ್ನು ಬುದ್ಧಿವಂತಿಕೆಯಿಂದ ಲಾಭ ಗಳಿಸಬಹುದಾದ ಸ್ಥಳದಲ್ಲಿ ಹೂಡಿಕೆ ಮಾಡಬೇಕು. ಅದೇ ಸಮಯದಲ್ಲಿ, ನೀವು ಮಾಡಿರುವ ಹುಡಿಕೆ ಎಂದಿಗೂ ಕುಸಿಯದಂತೆ ನೋಡಿಕೊಳ್ಳಬೇಕು.
ಉಳಿತಾಯ (savings). ಚಾಣಕ್ಯನ ಪ್ರಕಾರ, ವ್ಯಕ್ತಿಯ ಜೀವನದಲ್ಲಿ ಯಾವುದೇ ಸಮಯದಲ್ಲಿ ಕಷ್ಟಗಳು ಬರಬಹುದು, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಆದಾಯದ ಹಣದ ಸ್ವಲ್ಪ ಭಾಗವನ್ನು ಉಳಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ದುಂದು ವೆಚ್ಚವನ್ನು ತಕ್ಷಣವೇ ನಿಲ್ಲಿಸಬೇಕು. ಚಾಣಕ್ಯನ ಪ್ರಕಾರ, ಸಣ್ಣ ಅನಗತ್ಯ ವೆಚ್ಚಗಳು ನಿಧಾನವಾಗಿ ನಿಮ್ಮ ಹಣವನ್ನು ಕಡಿಮೆ ಮಾಡುತ್ತಾ ಬರುತ್ತೆ. ಆದ್ದರಿಂದ ಸಾಧ್ಯವಾದಷ್ಟು ದುಂದು ವೆಚ್ಚ ಮಾಡೋದನ್ನು ತಪ್ಪಿಸಿ.