- Home
- Astrology
- Festivals
- Chanakya Niti: ಕೆಟ್ಟ ಸಮಯ ಬಂದಾಗ ಗೊತ್ತಾಗುತ್ತೆ ನಿಮ್ಮ ನಿಜವಾದ ಸಂಬಂಧಿಕರು ಯಾರೆಂದು?
Chanakya Niti: ಕೆಟ್ಟ ಸಮಯ ಬಂದಾಗ ಗೊತ್ತಾಗುತ್ತೆ ನಿಮ್ಮ ನಿಜವಾದ ಸಂಬಂಧಿಕರು ಯಾರೆಂದು?
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯ ಮೂಲಕ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಉಪಯುಕ್ತವಾದ ಅನೇಕ ವಿಷಯಗಳನ್ನು ಹೇಳಿದ್ದಾರೆ. ಈ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಪ್ರಗತಿಯನ್ನು ಸಾಧಿಸಬಹುದು.
- FB
- TW
- Linkdin
Follow Us
)
ಆಚಾರ್ಯ ಚಾಣಕ್ಯ ಜನಪ್ರಿಯ ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕರಾಗಿ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಆಚಾರ್ಯ ಚಾಣಕ್ಯರ (Acharya Chanakya) ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ಜನರು ಜೀವನದಲ್ಲಿ ದೊಡ್ಡ ಸ್ಥಾನವನ್ನು ಪಡೆದಿದ್ದಾರೆ. ಚಾಣಕ್ಯ ನೀತಿಯು ಚಾಣಕ್ಯರ ನೀತಿಗಳ ಸಂಗ್ರಹವಾಗಿದ್ದು, ಅದರಲ್ಲಿ ಅವರು ತಮ್ಮ ಜೀವನ ಅನುಭವಗಳ ಸಾರವನ್ನು ಸೇರಿಸಿದ್ದಾರೆ. ಇದರ ಮೂಲಕ ಜನರು ಸರಿಯಾದ ಮಾರ್ಗ ಮತ್ತು ಯಶಸ್ಸನ್ನು ಪಡೆಯಲು ನೆರವಾಗುತ್ತಾರೆ.
ಸಂಬಂಧಗಳನ್ನು ಕೆಟ್ಟ ಕಾಲದಲ್ಲಿ ಗುರುತಿಸಲಾಗುತ್ತದೆ
ಸಂಬಂಧಗಳು ಮತ್ತು ಪ್ರೀತಿಪಾತ್ರರ ಬೆಂಬಲದಿಂದ ಯಶಸ್ಸು ದೊರೆಯುವಂತೆಯೇ, ಕೆಟ್ಟ ಕಾಲದಲ್ಲಿ ಯಾರು ನಿಜವಾಗಿಯೂ ನಮಗಾಗಿ ಮರುಗುತ್ತಾನೆ ಅನ್ನೋದನ್ನು ಗುರುತಿಸಲಾಗುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಆಚಾರ್ಯ ಚಾಣಕ್ಯರು ಚಾಣಕ್ಯ ನೀತಿಯಲ್ಲಿ (Chanakya Niti) ಒಬ್ಬ ವ್ಯಕ್ತಿಯ ಜೀವನದಲ್ಲಿ ಮೂರು ರೀತಿಯ ಸಂಬಂಧಗಳಿರುತ್ತವೆ, ಅವುಗಳ ನಿಜವಾದ ಸಂಬಂಧ ಹೌದೇ, ಅಲ್ವೇ ಅನ್ನೋದನ್ನು ಕಷ್ಟದ ಸಮಯದಲ್ಲಿ ಮಾತ್ರ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪತ್ನಿಯ ಬೆಂಬಲ
ಆಚಾರ್ಯ ಚಾಣಕ್ಯರ ಪ್ರಕಾರ, ಪತಿ ಮತ್ತು ಪತ್ನಿಯ ನಡುವಿನ ಸಂಬಂಧವು ಸುಖ ಮತ್ತು ದುಃಖದಿಂದ ಕೂಡಿದ್ದು, ಇಬ್ಬರೂ ಪ್ರತಿ ಹಂತದಲ್ಲೂ ಪರಸ್ಪರ ಬೆಂಬಲ ನೀಡುತ್ತಾರೆ. ಅಲ್ಲದೆ, ಇದು ಬಹಳ ಸೂಕ್ಷ್ಮವಾದ ಸಂಬಂಧವಾಗಿದ್ದು, ಕಷ್ಟದ ಸಮಯದಲ್ಲಿ ಮಾತ್ರ ಇದನ್ನು ಗುರುತಿಸಲಾಗುತ್ತದೆ. ಕೆಟ್ಟ ಸಮಯದಲ್ಲಿ, (bad time) ಹೆಂಡತಿ ತನ್ನ ಪತಿಯೊಂದಿಗೆ ನೆರಳಿನಂತೆ ನಡೆದು ಪ್ರತಿಯೊಂದು ಸಮಸ್ಯೆಯಿಂದ ಅವನನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಅಂತಹ ಹೆಂಡತಿ ಇದ್ದರೆ ಒಬ್ಬ ವ್ಯಕ್ತಿಯು ಕೆಟ್ಟ ಸಮಯಗಳನ್ನು ಸಹ ಸುಲಭವಾಗಿ ಜಯಿಸಬಹುದು.
ಸ್ನೇಹಿತ
ಜಗತ್ತಿನಲ್ಲಿ ಎರಡು ರೀತಿಯ ಸ್ನೇಹಿತರಿದ್ದಾರೆ, ಒಬ್ಬರು ನಿಮ್ಮ ಲಾಭಕ್ಕಾಗಿ ನಿಮ್ಮೊಂದಿಗೆ ಇರುವವರು ಮತ್ತು ಎರಡನೆಯವರು ಪ್ರತಿ ಸಂತೋಷ ಮತ್ತು ದುಃಖದಲ್ಲಿ ನಿಮ್ಮನ್ನು ಬೆಂಬಲಿಸುವವರು. ಒಳ್ಳೆಯ ಮತ್ತು ನಿಜವಾದ ಸ್ನೇಹಿತನನ್ನು ಯಾವಾಗಲೂ ಕಷ್ಟದ ಸಮಯದಲ್ಲಿ ಗುರುತಿಸಲಾಗುತ್ತದೆ. ಕೆಟ್ಟ ಸಮಯದಲ್ಲಿ ನಿಮ್ಮೊಂದಿಗೆ ನಿಲ್ಲುವ ಸ್ನೇಹಿತನೇ ನಿಮ್ಮ ನಿಜವಾದ ಸ್ನೇಹಿತ (good friend). ಕೆಟ್ಟ ಸಮಯದಲ್ಲಿ ತನ್ನನ್ನು ದೂರವಿಡುವ ಸ್ನೇಹಿತನೊಂದಿಗಿನ ಸಂಬಂಧವನ್ನು ಕೊನೆಗೊಳಿಸುವುದು ಉತ್ತಮ.
ಸೇವಕ
ಆಚಾರ್ಯ ಚಾಣಕ್ಯ ಹೇಳುವಂತೆ ಸೇವಕನ ಗುರುತು ಕೆಟ್ಟ ಸಮಯದಲ್ಲಿ ನಿಮಗೆ ಗೊತ್ತಾಗುತ್ತೆ. ನಿಮ್ಮ ಸೇವಕ ಕೆಟ್ಟ ಸಮಯದಲ್ಲೂ ನಿಮ್ಮ ಜೊತೆ ನಿಂತರೆ, ಅವನು ನಿಜವಾದ ಸೇವಕ ಮತ್ತು ಪ್ರತಿ ಹೆಜ್ಜೆಯಲ್ಲೂ ನಿಮ್ಮನ್ನು ಬೆಂಬಲಿಸುತ್ತಾನೆ. ಆದರೆ ಕೆಟ್ಟ ಕಾಲದಲ್ಲಿ (bad time) ತನ್ನ ಯಜಮಾನನನ್ನು ಬಿಟ್ಟು ಹೋಗುವ ಸೇವಕನನ್ನು ಜೀವನದಲ್ಲಿ ಮತ್ತೆ ಎಂದಿಗೂ ನಂಬಬಾರದು.