ಕಾಗೆ ಮನೆಯೊಳಗೆ ಬಂದರೆ ಶನಿಕಾಟವೇ? ಕಾ... ಕಾ... ಕಾ... ಕೆಡುಕಿನ ಸಂಕೇತವೇ?
ಯಾವುದೇ ಪಕ್ಷಿ ಅಥವಾ ಪ್ರಾಣಿ ಇದ್ದಕ್ಕಿದ್ದಂತೆ ಮನೆಯೊಳಗೆ ಬಂದರೆ ಅದನ್ನು ದೈವೀಶಕ್ತಿ ಎನ್ನುತ್ತಾರೆ. ಕಾಗೆ ಮನೆಯೊಳಗೆ ಬರುವುದು ಶನಿ ಮನೆಯನ್ನು ಪ್ರವೇಶಿಸುತ್ತಿದ್ದಾನೆ ಎನ್ನುತ್ತಾರೆ ಇದು ಹೌದಾ? ಕಾಗೆ ಮನೆಯೊಳಗೆ ಬಂದರೆ ಅಶುಭವೇ..?
ಹಿಂದೂ ಸಂಪ್ರದಾಯದಲ್ಲಿ ಶ್ರಾದ್ಧದ ದಿನದಂದು ಪೂರ್ವಜರನ್ನು ಪೂಜಿಸುತ್ತಾರೆ. ಈ ದಿನಗಳಲ್ಲಿ ಕಾಗೆಗಳನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಿ ಆಹಾರವನ್ನು ನೀಡಲಾಗುತ್ತದೆ. ಪವಿತ್ರವೆಂದು ಪಿತೃಪಕ್ಷದಲ್ಲಿ ಕಾಗೆಗೆ ಆಹಾರವನ್ನು ಏಕೆ ನೀಡಲಾಗುತ್ತದೆ ,ಪೂಜಿಸಲಾಗುತ್ತದೆ ಆದರು ಕಾಗೆಯನ್ನು ಅಶುಭವೆಂದು ಪರಿಗಣಿಸುತ್ತಾರೆ.
ಇನ್ನು ಕಾಗೆ ಮನೆಯೊಳಗೆ ಬರುವುದು ಶನಿ ಮನೆಯನ್ನು ಪ್ರವೇಶಿಸುತ್ತಿದ್ದಾನೆ ಎನ್ನುವುದರ ಸೂಚನೆ ಎನ್ನುತ್ತಾರೆ . ಯಾಕೆಂದರೆ ಕಾಗೆಯು ಶನಿಯ ವಾಹನ (Vehicle of Shani). ಆದರೆ ಶನಿಯು ಕೆಡುಕುಮಾಡುತ್ತಾನೆಂದಲ್ಲ. ಆದರೆ ಇದು ದೈವಭಕ್ತಿಯನ್ನು ಹೆಚ್ಚಿಸಿಕೊಳ್ಳಲು ದೇವರು ನೀಡುತ್ತಿರುವ ಸೂಚನೆಯಾಗಿರುತ್ತದೆ.
ಕಾಗೆಯ ಪ್ರತಿಯೊಂದು ಚಲನವಲನಗಳಿಗೆ ಒಂದು ಅರ್ಥವಿದೆ . ಮನೆಯ ಮುಂದೆ ಕಾಗೆ ಕುಳಿತುಕೊಂಡು ಕೆಟ್ಟ ಸ್ವರದಲ್ಲಿ ಕೂಗುತ್ತಿದೆ ಅಶುಭ. ಕಾಗೆ ಪದೇ ಪದೇ ಮನಯೊಳಗೆ ಬಂದರೆ ನೀವು ಶಾಂತಿಮಾಡಿಸ ಬೇಕಾಗುತ್ತದೆ.
ನಿಮ್ಮ ಮನೆ ಮುಂದೆ ಅಥವಾ ಅಂಗಳದಲ್ಲಿ ಬಂದು ಕಾಗೆಗಳು ಜಗಳ ಮಾಡ್ತಿದ್ದರೆ ಮನೆಯ ಯಜಮಾನನಿಗೆ ತೊಂದರೆ ಕಾದಿದೆ ಎಂಬ ಸೂಚನೆಯಾಗಿದೆ.
ಒಂದ್ವೇಳೆ ಬೆಳ್ಳಂಬೆಳಿಗ್ಗೆ ಕಾಗೆ ನಿಮ್ಮ ಮುಂದೆ ಹಾರುತ್ತ ಕೆಂಪು ಬಣ್ಣದ ವಸ್ತುವನ್ನು ಕೆಳಗೆ ಹಾಕಿದ್ರೆ ನಿಮಗೆ ಸಂಕಷ್ಟವಿದೆ ಎಂಬ ಸೂಚನೆಯಂತೆ ಇದು. ಕಾಗೆ ತನ್ನ ರೆಕ್ಕೆಗಳನ್ನು ಕೀಳ್ತಿದ್ದರೆ ಅದು ಸಾವಿನ ಸೂಚನೆಯಾಗಿದೆ. ಕಾಗೆ ತಲೆಯ ಮೇಲೆ ಎಲುಬಿನ ತುಂಡನ್ನು ಬೀಳಿಸಿದರೆ ಆ ವ್ಯಕ್ತಿಯ ಸಾವು (Death) ಹತ್ತಿರ ಬಂದಿದೆ ಎಂಬ ಸೂಚನೆಯಾಗಿದೆ.
ಎರಡು ಕಾಗೆ ಒಟ್ಟಿಗೆ ಕಾಣಿಸಿಕೊಂಡ್ರೆ ದುರದೃಷ್ಟ ಬರುತ್ತದೆ. ಹಾಗಾಗಿ ಜಾಗರೂಕರಾಗಿರಬೇಕು ಎಂದು ಯುರೋಪಿಯನ್ನರು ನಂಬುತ್ತಾರೆ. 16ನೇ ಶತಮಾನದಿಂದ ಯುರೋಪಿನ ಜನರು ಎರಡು ಕಾಗೆಯನ್ನು ಒಟ್ಟಿಗೆ ನೋಡಿದ್ರೆ ಅಪಶಕುನ ಎಂದು ನಂಬಲು ಶುರು ಮಾಡಿದ್ರು.