MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಶನಿ, ಮಂಗಳ ದೋಷ ನಿವಾರಿಸಲು ಜೇನುತುಪ್ಪವನ್ನು ಹೀಗೆ ಬಳಸಿ

ಶನಿ, ಮಂಗಳ ದೋಷ ನಿವಾರಿಸಲು ಜೇನುತುಪ್ಪವನ್ನು ಹೀಗೆ ಬಳಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೇನುತುಪ್ಪವನ್ನು (Honey) ಬಳಸುವ ಮೂಲಕ, ಒಬ್ಬ ವ್ಯಕ್ತಿಯು ಮಂಗಳ ದೋಷದೊಂದಿಗೆ ಶುಕ್ರ ದೋಷದ ಸಮಸ್ಯೆಯನ್ನು ಸಹ ತೊಡೆದು ಹಾಕಬಹುದು. ಜೇನು ತುಪ್ಪವನ್ನು ಬಳಸುವುದರಿಂದ ಅನೇಕ ಗ್ರಹಗಳನ್ನು (Planets) ಶಾಂತಗೊಳಿಸಬಹುದು. ಇಷ್ಟೆಲ್ಲಾ ದೋಷಗಳನ್ನು ನಿವಾರಿಸಲು ಜೇನುತುಪ್ಪವನ್ನು ಹೇಗೆ ಬಳಸಬೇಕೆಂದು ತಿಳಿಯಿರಿ. ಇಲ್ಲಿ ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ, ಅವುಗಳ ಬಗ್ಗೆ ತಿಳಿಯಿರಿ.

2 Min read
Suvarna News
Published : Sep 06 2022, 04:24 PM IST
Share this Photo Gallery
  • FB
  • TW
  • Linkdin
  • Whatsapp
18

ಜೇನುತುಪ್ಪವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಬಳಸಲಾಗುತ್ತದೆ. ವಿವಿಧ ಭಕ್ಷ್ಯಗಳಲ್ಲಿ ಮತ್ತು ಪೂಜಾ ಪಾಠಗಳಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲಾ ಬ್ಯೂಟಿ ಪ್ರಾಡಕ್ಟ್ (beauty Product) ಆಗಿಯೂ ಇದನ್ನು ಬಳಸಲಾಗುತ್ತೆ. ಜೊತೆಗೆ ಶಿವನಿಗೆ ಜೇನುತುಪ್ಪದಿಂದ ಅಭಿಷೇಕ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಆದರೆ ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲೂ (Astrology) ಉತ್ತಮವೆಂದು ಪರಿಗಣಿಸಲಾಗಿದೆ ಅನ್ನೋದು ಗೊತ್ತಾ?

28

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೇನುತುಪ್ಪವನ್ನು ಬಳಸುವ ಮೂಲಕ, ಒಬ್ಬ ವ್ಯಕ್ತಿಯು ಮಂಗಳ ದೋಷ, ಶುಕ್ರ ದೋಷದ ಸಮಸ್ಯೆಯನ್ನು ತೊಡೆದು ಹಾಕಬಹುದು. ಇಷ್ಟೇ ಅಲ್ಲ, ಜೇನುತುಪ್ಪವನ್ನು ಬಳಸುವ ಮೂಲಕ, ಶನಿಯ ಸಾಡೇ ಸತಿ ಮತ್ತು ಶನಿ ದೋಷದ ಪರಿಣಾಮವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಅದಕ್ಕಾಗಿ ಜೇನುತುಪ್ಪವನ್ನು ಹೇಗೆ ಬಳಸಬೇಕೆಂದು ತಿಳಿಯಿರಿ.

38
ಈ ರೀತಿ ಜೇನುತುಪ್ಪವನ್ನು ಬಳಸುವ ಮೂಲಕ ಗ್ರಹಗಳ ಸ್ಥಾನವನ್ನು ಬಲಪಡಿಸಿ

ಈ ರೀತಿ ಜೇನುತುಪ್ಪವನ್ನು ಬಳಸುವ ಮೂಲಕ ಗ್ರಹಗಳ ಸ್ಥಾನವನ್ನು ಬಲಪಡಿಸಿ

ಮಂಗಳ ದೋಷಕ್ಕಾಗಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳನು ನಾಲ್ಕನೇ ಮನೆಯಲ್ಲಿ ಅಶುಭವಾಗಿದ್ದರೆ, ಜೇನುತುಪ್ಪಕ್ಕೆ ಸಂಬಂಧಿಸಿದ ವ್ಯವಹಾರವನ್ನು ಮಾಡಬಾರದು. ನಾಲ್ಕನೇ ಮನೆಯಲ್ಲಿ ಮಂಗಳನ ಸ್ಥಾನವು ದುರ್ಬಲವಾಗಿದ್ದರೆ, ಅದರ ಶುಭ ಫಲಿತಾಂಶಗಳನ್ನು ಪಡೆಯಲು, ಮಣ್ಣಿನ ಮಡಕೆಯಲ್ಲಿ ಜೇನುತುಪ್ಪವನ್ನು ತುಂಬಿ ನಿರ್ಜನ ಸ್ಥಳದಲ್ಲಿ ಅದನ್ನು ಇಡಬೇಕು.

48

ಒಂದು ವೇಳೆ ನಿಮ್ಮ ಜಾತಕದಲ್ಲಿ ಕುಜ ಏಳನೇ ಮನೆಯಲ್ಲಿ ಕುಳಿತಿದ್ದರೆ, ಮಣ್ಣಿನ ಮಡಕೆಯಲ್ಲಿ ಜೇನುತುಪ್ಪವನ್ನು ತುಂಬಿ ಮತ್ತು ಶುಭವನ್ನು ಪಡೆಯಲು ಅದನ್ನು ನಿರ್ಜನ ಸ್ಥಳದಲ್ಲಿ ನೆಲದಲ್ಲಿ ಮಣ್ಣಿನಲ್ಲಿ ಹಾಕಿ ಇಡಬೇಕು. ಇದರಿಂದ ಶುಭಫಲ ಸಿಗುತ್ತದೆ ಎಂದು ಹೇಳಲಾಗುತ್ತೆ.

58

ಜಾತಕದಲ್ಲಿ ಮಂಗಳ ಹನ್ನೆರಡನೇ ಮನೆಯಲ್ಲಿದ್ದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಜೇನುತುಪ್ಪ ಸೇವಿಸಿ. ನೀವು ಬಯಸಿದರೆ, ಅದನ್ನು ನೀರಿನೊಂದಿಗೆ ಬೆರೆಸಿ ಕುಡಿಯಬಹುದು. ಇದರಿಂದ ಲಾಭವಾಗಲಿದೆ. ಈ ಸುಲಭ ವಿಧಾನವನ್ನು ಟ್ರೈ ಮಾಡಿ ನೋಡಿ.

68

ಮಂಗಳ ಹನ್ನೆರಡನೇ ಮನೆಯಲ್ಲಿದ್ದರೆ, ಪ್ರತಿ ಮಂಗಳವಾರ ಹನುಮಂತನಿಗೆ ದೀಪ ಬೆಳಗಿಸಿ ಮತ್ತು ಅದರಲ್ಲಿ ಸ್ವಲ್ಪ ಜೇನುತುಪ್ಪ ಹಾಕಿ. ಮಂಗಳ ದೋಷವನ್ನು ತೊಡೆದು ಹಾಕಲು, ಶಿವನಿಗೆ ಜೇನುತುಪ್ಪದಿಂದ ಅಭಿಷೇಕ ಮಾಡಬೇಕು. ಭಗವಂತನ ಕೃಪೆಯಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಸಾಧಿಸಲಾಗುತ್ತದೆ.

78
ಶುಕ್ರನನ್ನು ಶಾಂತಗೊಳಿಸಲು

ಶುಕ್ರನನ್ನು ಶಾಂತಗೊಳಿಸಲು

ಜಾತಕದಲ್ಲಿ ಶುಕ್ರನು (Venus) ಎರಡನೇ ಮನೆಯಲ್ಲಿದ್ದರೆ, ಜೇನುತುಪ್ಪವನ್ನು ದಾನ ಮಾಡಿ. ಇದು ಸಂತಾನ ಸಂಬಂಧಿಸಿದ ಸಮಸ್ಯೆಗಳನ್ನು ಸಹ ತೊಡೆದುಹಾಕುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಜ್ಯೋತಿಷ್ಯರ ಬಳಿ ಸರಿಯಾದ ಮಾಹಿತಿ ತಿಳಿದುಕೊಂಡಿರುವುದು ಉತ್ತಮ.

88
ಶನಿ ದೋಷ ತೊಡೆದುಹಾಕಲು ಪರಿಹಾರಗಳು

ಶನಿ ದೋಷ ತೊಡೆದುಹಾಕಲು ಪರಿಹಾರಗಳು

ಜಾತಕದಿಂದ (Horoscope) ಶನಿದೋಷ, ಸಾಡೇ ಸತಿಯನ್ನು ತೊಡೆದುಹಾಕಲು, ಜೇನುತುಪ್ಪವನ್ನು ಮನೆಯ ಮಣ್ಣಿನ ಮಡಕೆಯಲ್ಲಿ ಇಡಬೇಕು. ಶನಿಯು ಯಾವುದೇ ರೀತಿಯ ನೋವಿನಿಂದ ತೊಂದರೆಗೀಡಾಗಿದ್ದರೆ, ಐದು ಶನಿವಾರಗಳಂದು ದೇವಾಲಯಕ್ಕೆ ಜೇನುತುಪ್ಪವನ್ನು ದಾನ ಮಾಡಿ. ಇದು ಶುಭ ಫಲಿತಾಂಶ ನೀಡುತ್ತದೆ.

About the Author

SN
Suvarna News
ಜ್ಯೋತಿಷ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved