ಮಂಗಳ ದೋಷ ನಿವಾರಣೆ ಮಾಡಿದ್ರೆ ಮದ್ವೆ ಆಗುತ್ತೆ ಬೇಗ
ಜ್ಯೋತಿಷಿಗಳ ಪ್ರಕಾರ, ಜಾತಕದಲ್ಲಿ 12 ಭಾವಗಳಿವೆ. ಅವುಗಳಲ್ಲಿ, ಮಂಗಳನು ಮೊದಲ, ಎರಡನೇ , ನಾಲ್ಕನೇ, ಏಳನೇ, ಎಂಟನೇ ಮತ್ತು ಹತ್ತನೇ ಮನೆಯಲ್ಲಿದ್ದಾಗ ವ್ಯಕ್ತಿಯು ಮಂಗಳ ದೋಷದಿಂದ ಬಳಲುತ್ತಾನೆ. ಮದುವೆಯಲ್ಲಿ ಅಡೆತಡೆಗಳು ಸಹ ಉಂಟಾಗುತ್ತವೆ. ಮಂಗಳ ದೋಷವುಳ್ಳವರನ್ನು ಮದುವೆಯಾಗಲು ಜ್ಯೋತಿಷ್ಯ ಕೆಲವು ಸಲಹೆ ನೀಡುತ್ತೆ. ಇದನ್ನು ಮಾಡೋದರಿಂದ, ದೋಷವನ್ನು ತಪ್ಪಿಸಬಹುದು.
ಸನಾತನ ಧರ್ಮದಲ್ಲಿ ಜ್ಯೋತಿಷ್ಯಕ್ಕೆ ವಿಶೇಷ ಮಹತ್ವವಿದೆ. ಜ್ಯೋತಿಷಿಗಳು ಜಾತಕವನ್ನು ವಿಶ್ಲೇಷಿಸುವ ಮೂಲಕ ಜಾತಕದ ಭವಿಷ್ಯವನ್ನು ಲೆಕ್ಕ ಹಾಕುತ್ತಾರೆ. ಇದರೊಂದಿಗೆ, ವೃತ್ತಿ, ವ್ಯವಹಾರ, ಪ್ರೀತಿ, ಮದುವೆ(Marriage) ಸೇರಿ ಎಲ್ಲಾ ರೀತಿಯ ಮಾಹಿತಿ ಪಡೆಯಲಾಗುತ್ತೆ.
ಮಂಗಳ ದೋಷಗಳನ್ನು(Mangal Dosh) ತಡೆಗಟ್ಟಲು ಅದಕ್ಕೆ ಬೇಕಾದ ಪರಿಹಾರಗಳನ್ನು ಕಂಡು ಕೊಳ್ಳೋದು ತುಂಬಾ ಮುಖ್ಯ. ಇದಕ್ಕಾಗಿ, ಎಕ್ಕ ಮತ್ತು ಕುಂಭ (ಕಳಶ) ವಿವಾಹ ಮಾಡಲಾಗುತ್ತೆ. ಅಲ್ಲದೆ, ಮಂಗಳನಾಥ ದೇವಾಲಯದಲ್ಲಿ ಭಾತ್ ಪೂಜೆಯನ್ನು ನಡೆಸಲಾಗುತ್ತೆ.
ನಿಮಗೂ ಮಂಗಳ ದೋಷವಿದ್ದರೆ, ಪಂಡಿತರಿಂದ ಸಲಹೆ ಪಡೆಯಿರಿ ಮತ್ತು ಮಂಗಳ ದೋಷವನ್ನು ಪರಿಹರಿಸಿಕೊಳ್ಳಿ. ಪ್ರತಿ ಮಂಗಳವಾರ ಈ ಕೆಳಗಿನ ಕ್ರಮಗಳನ್ನು ಮಾಡಿ. ಹೀಗೆ ಮಾಡೋದರಿಂದ ಮಂಗಳ ದೋಷ ಪರಿಹಾರವಾಗುತ್ತೆ. ಆ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ-
ಮಂಗಳ ದೋಷಕ್ಕೆ ಪರಿಹಾರಗಳು
ಮಂಗಳ ದೋಷದಿಂದಾಗಿ ಮದುವೆಗೆ ಅಡ್ಡಿಯಾಗುತ್ತಿದ್ದರೆ, ಮಂಗಳವಾರ ಕೆಂಪು ಮೆಣಸಿನಕಾಯಿ(Red Chilli), ಬೇಳೆಕಾಳು ಮತ್ತು ಕೆಂಪು ಬಣ್ಣದ ಬಟ್ಟೆ ದಾನ ಮಾಡಿ. ಈ ಪರಿಹಾರವ ಮಾಡುವುದರಿಂದ, ಮಂಗಳ ದೋಷದ ಪರಿಣಾಮ ಕ್ರಮೇಣ ಕೊನೆಗೊಳ್ಳುತ್ತೆ.
ನೀವು ಮಂಗಳ ದೋಷದಿಂದ ಬಳಲುತ್ತಿದ್ದರೆ, ಪ್ರತಿ ಮಂಗಳವಾರ ಸ್ನಾನ ಮತ್ತು ಧ್ಯಾನದ ನಂತರ ಹನುಮಂತನನ್ನು(Hanuman) ಪೂಜಿಸಿ. ಈ ಸಮಯದಲ್ಲಿ ಹನುಮಾನ್ ಚಾಲೀಸ್ ಮತ್ತು ಸುಂದರಕಾಂಡ ಪಠಿಸಿ. ನೀವು ದೈಹಿಕವಾಗಿ ಸಮರ್ಥರಾಗಿದ್ದರೆ, ಖಂಡಿತವಾಗಿಯೂ ಮಂಗಳವಾರ ಉಪವಾಸ ಮಾಡಿ. ಈ ಪರಿಹಾರ ಮಾಡೋದರಿಂದ, ಮಂಗಳ ದೋಷದ ಪರಿಣಾಮವನ್ನು ತೆಗೆದುಹಾಕಲಾಗುತ್ತೆ ಅಥವಾ ಕಡಿಮೆ ಮಾಡಲಾಗುತ್ತೆ.
ಮಂಗಳವಾರ, ಸ್ನಾನ ಮತ್ತು ಧ್ಯಾನದ ನಂತರ, ಹತ್ತಿರದ ಹನುಮಂತನ ದೇವಸ್ಥಾನಕ್ಕೆ ಹೋಗಿ. ಹನುಮಂತನಿಗೆ ಬೂಂದಿ ಲಡ್ಡು, ಕುಂಕುಮ ಅರ್ಪಿಸಿ. ಈ ಸಮಯದಲ್ಲಿ ಹನುಮಾನ್ ಚಾಲೀಸಾವನ್ನು(Hanuman chalisa) ಕನಿಷ್ಠ ಏಳು ಬಾರಿ ಪಠಿಸಿ. ಈ ಪರಿಹಾರವನ್ನು ಮಾಡೋದರಿಂದ, ನೀವು ಕೆಲವೇ ತಿಂಗಳುಗಳಲ್ಲಿ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಆಸೆ ಈಡೇರುತ್ತೆ.
ಮಂಗಳ ದೋಷವನ್ನು ತೆಗೆದುಹಾಕಲು ಮತ್ತು ಜಾತಕದಲ್ಲಿ ಮಂಗಳನನ್ನು ಬಲಪಡಿಸಲು, ಮಂಗಳವಾರ ಪೂಜೆಯ ಸಮಯದಲ್ಲಿ 'ಓಂ ಅಂಗರಾಯ ನಮಃ' ಮತ್ತು 'ಓಂ ಭೌಮಾಯ ನಮಃ' ಮಂತ್ರವನ್ನು(Mantra) ಪಠಿಸಿ. ಈ ಮಂತ್ರವನ್ನು ಪಠಿಸುವ ಮೂಲಕ, ಮಂಗಳ ದೋಷದಿಂದಾಗಿ ಮದುವೆಯಲ್ಲಿ ಬರುವ ಅಡೆತಡೆಗಳನ್ನು ತೆಗೆದುಹಾಕಲಾಗುತ್ತೆ .