ಕೋಪ ಕಂಟ್ರೋಲ್ ಮಾಡಿಕೊಳ್ಳಲು ಆಗೋಲ್ಲ ಅನ್ನೋರು ಕೃಷ್ಣನ ಈ ಕಥೆ ಓದಿ!
ಈಗಿನ ಕಾಲದಲ್ಲಿ ಕೋಪ ಎಲ್ಲರಿಗೂ ಹೆಚ್ಚು.ಕೋಪ ಕಂಟ್ರೋಲ್ ಮಾಡೋದು ಹೇಗೆ ಅನ್ನೋದೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಹಾಗಾಗಿ ಇಲ್ಲಿ ನಾವು ಕೃಷ್ಣ-ಬಲರಾಮನಿಗೆ ಸಂಬಂಧಿಸಿದ ಒಂದು ಕಥೆ ನೋಡೋಣ. ಈ ಕಥೆಯಿಂದ ನಾವು ಹೇಗೆ ಕೋಪ ನಿಯಂತ್ರಿಸಬಹುದು ಎಂದು ತಿಳಿಬಹುದು.
ಈ ಬ್ಯುಸಿ ಲೈಫನಲ್ಲಿ ಹೆಚ್ಚಿನ ಜನರಿಗೆ ಕೋಪ ಬರೋದು ಸಾಮಾನ್ಯ. ಅದರಲ್ಲೂ ಹೆಚ್ಚು ಕೋಪ (Anger) ಬರೋದು ಇತ್ತೀಚೆಗೆ ಹೆಚ್ಚಾಗಿದೆ. ಇದಕ್ಕೆ ಸ್ಟ್ರೆಸ್, ವರ್ಕ್ ಪ್ರೆಷರ್ ಹೀಗೆ ಹಲವಾರು ಕಾರಣಗಳಿರಬಹುದು. ಈ ಕೋಪ ಹೆಚ್ಚಾದಂತೆ ನಮ್ಮನ್ನು ನಿಯಂತ್ರಣ ಮಾಡೋದು ಕಷ್ಟವಾಗುತ್ತೆ. ಹಾಗಾಗಿ ಕೋಪವನ್ನು ಕಡಿಮೆ ಮಾಡಲು ಈಗ ಎಲ್ಲರೂ ಬೇರೆ ಬೇರೆ ವಿಧಾನ ಟ್ರೈ ಮಾಡ್ತಿದ್ದಾರೆ. ನೀವು ಕೂಡ ಕೋಪ ನಿಯಂತ್ರಿಸಲು ಬಯಸ್ತಿರಾದ್ರೆ ಈ ಕೃಷ್ಣ-ಬಲರಾಮ ಕಥೆಯನೊಮ್ಮೆ ಕೇಳಿ ನೋಡಿ.
ಈ ಕಥೆ ತುಂಬಾ ಹಳೆಯದು. ಅದು ಮಹಾಭಾರತದ ಕಾಲದಲ್ಲಿ. ಒಮ್ಮೆ ಶ್ರೀ ಕೃಷ್ಣ(Sri Krishna), ಬಲರಾಮ ಮತ್ತು ಸತ್ಯಕಿ ಎಲ್ಲೋ ಹೋಗುತ್ತಿದ್ದರು. ಗಮ್ಯ ಸ್ಥಾನವನ್ನು ತಲುಪುವ ಮೊದಲು ಸಂಜೆಯಾಗಿತ್ತು. ರಾತ್ರಿಯಲ್ಲಿ ಪ್ರಯಾಣಿಸೋದು ಸರಿಯಲ್ಲ ಎಂದು ಈ ರಾತ್ರಿಯನ್ನು ಈ ಕಾಡಿನಲ್ಲಿ ಕಳೆಯಬೇಕೆಂದು ಅವರು ನಿರ್ಧರಿಸಿದರು. ಉಳಿದವರು ಆರಾಮವಾಗಿ ವಿಶ್ರಾಂತಿ ಪಡೆಯುವಾಗ ಒಬ್ಬರು ಕಾವಲು ಕಾಯಬೇಕು, ನಂತರ ಅವರು ವಿಶ್ರಾಂತಿ ಪಡೆಯುವಾಗ ಮತ್ತೊಬ್ಬರು ಕಾಯಬೇಕು ಎಂದು ನಿರ್ಧರಿಸಿದರು.
ಈ ಅನುಕ್ರಮದಲ್ಲಿ, ಶ್ರೀ ಕೃಷ್ಣ-ಬಲರಾಮರು ವಿಶ್ರಾಂತಿ ಪಡೆಯುತ್ತಿದ್ದರು ಮತ್ತು ಸತ್ಯಕಿ ಕಾವಲು ಕಾಯುತ್ತಿದ್ದರು. ಆಗ ಆ ಕಾಡಿನಲ್ಲಿ ವಾಸಿಸುವ ಒಬ್ಬ ರಾಕ್ಷಸನು ಅವರ ಮುಂದೆ ಬಂದನು. ಅವನು ಸತ್ಯಕಿಯನ್ನು ಯುದ್ಧಕ್ಕೆ(War) ಕರೆದನು. ಇಬ್ಬರ ನಡುವೆ ಯುದ್ಧ ನಡೆಯಿತು, ಆದರೆ ರಾಕ್ಷಸನ ಶಕ್ತಿಯ ಮುಂದೆ ಸತ್ಯಕಿಗೆ ಸೋಲುತ್ತೇನೆಂದು ತಿಳಿಯಿತು. ಭಯಭೀತನಾದ ಸತ್ಯಕಿ ಬಲರಾಮನ ಬಳಿಗೆ ಹೋಗಿ ಅಡಗಿಕೊಂಡು ರಾಕ್ಷಸನ ಬಗ್ಗೆ ಹೇಳಿದನು .
ಬಲರಾಮ(Balaram) ಬರುವುದನ್ನು ನೋಡಿದ ರಾಕ್ಷಸನು ಅವನನ್ನು ಯುದ್ಧಕ್ಕೆ ಸವಾಲೊಡ್ಡಲು ಪ್ರಚೋದಿಸಲು ಪ್ರಾರಂಭಿಸಿದನು. ಇದನ್ನು ನೋಡಿ, ಬಲರಾಮ ಉತ್ಸುಕರಾದನು ಮತ್ತು ಆ ರಾಕ್ಷಸನೊಂದಿಗೆ ಹೋರಾಡಲು ಪ್ರಾರಂಭಿಸಿದನು . ಆದರೆ ತಕ್ಷಣವೇ ಬಲರಾಮನೂ ರಾಕ್ಷಸನಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತುಕೊಂಡನು. ಬಲರಾಮನ ಶಕ್ತಿ ಕ್ಷೀಣಿಸತೊಡಗಿತು. ಇದನ್ನು ಅರಿತ ಬಲರಾಮ ಶ್ರೀ ಕೃಷ್ಣನನ್ನು ಎಬ್ಬಿಸಿ ಆ ರಾಕ್ಷಸನ ಬಗ್ಗೆ ಹೇಳಿದನು.
ರಾಕ್ಷಸನ ಸ್ವಭಾವದ ಪ್ರಕಾರ, ರಾಕ್ಷಸನು ಶ್ರೀ ಕೃಷ್ಣನಿಗೆ ಹೋರಾಡಲು(Fight) ಸವಾಲು ಹಾಕಿದನು ಮತ್ತು ಸಾಕಷ್ಟು ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಳಿದನು. ಆದರೆ ಕೃಷ್ಣ ಇದರಿಂದ ವಿಚಲಿತನಾಗಲಿಲ್ಲ. ನೀನು ತುಂಬಾ ಒಳ್ಳೆಯ ವ್ಯಕ್ತಿ ಎಂದು ರಾಕ್ಷಸನಿಗೆ ಹೇಳಿದನು, ನೀನು ನನ್ನ ಸ್ನೇಹಿತ. ನಿಮ್ಮ ಮಾತುಗಳಿಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ನಾವು ಜೊತೆಯಾಗಿ ರಾತ್ರಿ ವಿಶ್ರಾಂತಿ ಮಾಡುತ್ತಾ ,ಮಾತನಾಡುವ ಎಂದನು ಶ್ರೀ ಕೃಷ್ಣ. ಈಗ ರಾಕ್ಷಸನು ಆಶ್ಚರ್ಯದಿಂದ ಕೃಷ್ಣನನ್ನು ನೋಡಲು ಪ್ರಾರಂಭಿಸಿದನು.
ನಂತರ ರಾಕ್ಷಸ ಶ್ರೀ ಕೃಷ್ಣನನ್ನು ಪ್ರಚೋದಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದನು, ಆದರೆ ಅದು ಕೃಷ್ಣನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಇದರ ಪರಿಣಾಮವೆಂದರೆ ರಾಕ್ಷಸನ ಬಲ ಕಡಿಮೆಯಾಗಲು ಪ್ರಾರಂಭಿಸಿತು. ಸ್ವಲ್ಪ ಸಮಯದ ನಂತರ, ಆ ರಾಕ್ಷಸನ ಎತ್ತರ(Height) ಒಂದು ಕೀಟದ ಎತ್ತರಕ್ಕೆ ಇಳಿಯಿತು ಮತ್ತು ನಂತರ ಕೃಷ್ಣನು ಅದನ್ನು ಹಿಡಿದು ತನ್ನ ಪಿತಾಂಬರಿನಲ್ಲಿ ಕಟ್ಟಿದನು.
ಬಲರಾಮ ಮತ್ತು ಸತ್ಯಕಿ ಇಬ್ಬರೂ ಆಶ್ಚರ್ಯದಿಂದ ಕೃಷ್ಣನತ್ತ ನೋಡಿದರು. ಅವರಿಬ್ಬರನ್ನೂ ನೋಡಿದ ಕೃಷ್ಣನು ಈ ರಾಕ್ಷಸನ ಹೆಸರು 'ಕೋಪ'(Anger) ಎಂದು ಹೇಳಿದನು. ಈ ರಾಕ್ಷಸನು ಪ್ರತಿಯೊಬ್ಬ ವ್ಯಕ್ತಿಯೊಳಗೂ ಇರುತ್ತಾನೆ. ನಾವು ಅದಕ್ಕೆ ಹೆಚ್ಚು ಗಾಳಿಯನ್ನು ನೀಡಿದಷ್ಟೂ, ಅದು ಹೆಚ್ಚು ಬೆಳೆಯುತ್ತೆ ಎಂದನು.
ನಮ್ಮೊಳಗೆ ಸೇಡಿನ ಪ್ರಜ್ಞೆ ಹೆಚ್ಚಾದಷ್ಟೂ ಆ ರಾಕ್ಷಸ ಬಲಗೊಳ್ಳುತ್ತೆ. ನಾವು ಸಂಯಮ ಮತ್ತು ಸಮತೋಲನದಲ್ಲಿದ್ದಾಗ ಮಾತ್ರ ಅದರ ಶಕ್ತಿ ಕಡಿಮೆಯಾಗುತ್ತೆ. ಕೋಪದ ರಾಕ್ಷಸನನ್ನು ನಾವು ಎಷ್ಟು ಹೆಚ್ಚು ನಿರ್ಲಕ್ಷಿಸುತ್ತೇವೆಯೋ, ಅಷ್ಟು ಅದರ ಶಕ್ತಿ ಕಡಿಮೆಯಾಗುತ್ತೆ. ಮುಗುಳ್ನಗೆಯಿಂದ (Smile)ಮಾತ್ರ ಅದನ್ನು ಸೋಲಿಸಬಹುದು. ನಾನು ಅದನ್ನೇ ಮಾಡಿದ್ದೇನೆ, ಮತ್ತು ಫಲಿತಾಂಶವು ನಿಮ್ಮ ಮುಂದೆ ಇದೆ ಎಂದನು.