ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡೋದು ಅಶುಭ!
ಬೆಳಿಗ್ಗೆ ಎದ್ದ ತಕ್ಷಣ ಕೆಲವು ವಸ್ತುಗಳನ್ನು ನೋಡೋದು ಅಶುಭ ಎನ್ನುತ್ತೆ ನಮ್ಮ ಶಾಸ್ತ್ರಗಳು. ಅವುಗಳನ್ನು ನೋಡಿದ್ರೆ ನಿಮ್ಮ ದಿನವೇ ಹಾಳಾಗುತ್ತೆ.

ಬೆಳಿಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡೋದು ಅಶುಭ ಎನ್ನಲಾಗುತ್ತೆ. ಇದು ಇಡೀ ದಿನದ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ (negative effect) ಬೀರುತ್ತದೆ ಎಂದು ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಬೆಳಿಗ್ಗೆ ಎದ್ದ ತಕ್ಷಣ ನಿಂತ ಅಥವಾ ಹಾಳಾದ ಗಡಿಯಾರವನ್ನು (clock) ನೋಡಬಾರದು. ನಿಂತುಹೋದ ಗಡಿಯಾರವು ಶಕ್ತಿಯ ಹರಿವನ್ನು ನಿಲ್ಲಿಸುತ್ತದೆ, ಆದ್ದರಿಂದ ಮನೆಯಲ್ಲಿ ಅಂತಹ ಗಡಿಯಾರವನ್ನು ಇಡಬೇಡಿ.
ಬೆಳಿಗ್ಗೆ ಎದ್ದ ನಂತರ ನೀವು ಪೊರಕೆ ಅಥವಾ ಕಸದ ಬುಟ್ಟಿಯನ್ನು (dustbin) ಸಹ ನೋಡಬಾರದು. ಅದಕ್ಕಾಗಿಯೇ ಮಲಗುವ ಕೋಣೆಯಲ್ಲಿ ಪೊರಕೆ ಅಥವಾ ಕಸದ ಬುಟ್ಟಿಯನ್ನು ಇಡಬಾರದು. ಇವುಗಳನ್ನು ನೋಡೋದ್ರಿಂದ ನಿಮ್ಮ ಇಡೀ ದಿನ ಹಾಳಾಗುತ್ತದೆ. ಯಾವುದಾದರು ತೊಂದರೆಗಳು ಉಂಟಾಗುತ್ತವೆ ಎನ್ನಲಾಗುತ್ತದೆ.
ರಾತ್ರಿ ಊಟ ಮಾಡಿ, ಪಾತ್ರೆ ತೊಳೆಯದೆ ಹಾಗೇ ಇಟ್ಟಿದ್ದರೆ, ಬೆಳಿಗ್ಗೆ ಮೊದಲು ಎದ್ದ ತಕ್ಷಣ ಅದನ್ನ ನೋಡಬೇಡಿ. ಇದು ಸಹ ನಿಮ್ಮ ದಿನವನ್ನು ಹಾಳು ಮಾಡುತ್ತೆ. ಸಾಧ್ಯವಾದಷ್ಟು ರಾತ್ರಿಯೇ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಮನೆಗೆ ಲಕ್ಷ್ಮೀ ದೇವಿಯ (Goddess Lakshmi) ಆಗಮನವೂ ಆಗುತ್ತದೆ.
ಮತ್ತೊಂದು ಮುಖ್ಯವಾದ ವಿಷ್ಯ ಅಂದ್ರೆ, ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬಾರದು. ಮಲಗುವ ಕೋಣೆಯ (Bedroom) ಮುಂದೆ ಕನ್ನಡಿಯನ್ನು ಇಡಬಾರದು. ಅದರಲ್ಲೂ ನಿಮ್ಮ ಬೆಡ್ ಎದುರು ಕನ್ನಡಿ ಇಡಲೇಬಾರದು, ಇದರಿಂದ ತುಂಬಾನೆ ನೆಗೆಟಿವ್ ಎನರ್ಜಿ ನಿಮ್ಮನ್ನು ಆವರಿಸುತ್ತೆ. ಹಾಗಾಗಿ ಈ ವಿಷ್ಯ ನೆನಪಿರಲಿ.