ಲಕ್ಷ್ಮಿಗೆ ಪ್ರಿಯವಾದ ಈ ರಾಶಿಯವರ ಹತ್ತಿರ ದುಡ್ಡು ಭರ್ತಿ ಇರುತ್ತೆ!
ಜ್ಯೋತಿಷ್ಯದ ಪ್ರಕಾರ, ಲಕ್ಷ್ಮಿ ದೇವಿ ಕೆಲವು ರಾಶಿಗಳಿಗೆ ತುಂಬಾ ದಯೆ ತೋರುತ್ತಾಳೆ. ಈ ರಾಶಿಯವರು ತಮ್ಮ ಕಠಿಣ ನಿರ್ಧಾರದಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಎಂದಿಗೂ ಹಣದ ಕೊರತೆ ಅನುಭವಿಸೋದಿಲ್ಲ. ಆ ರಾಶಿಗಳು ಯಾವುವು ನೋಡೋಣ.
ಜ್ಯೋತಿಷ್ಯದ ಪ್ರಕಾರ, ಮೇಷ, ವೃಷಭ, ಕರ್ಕಾಟಕ, ಸಿಂಹ, ಮಿಥುನ ಮತ್ತು ಇತರ ರಾಶಿಗಳು, ಗ್ರಹಗಳು ಮತ್ತು ಕೆಲವು ದೇವತೆಗಳಿಗೆ ಸಂಬಂಧಿಸಿವೆ. ತಾಯಿ ಲಕ್ಷ್ಮಿಗೆ (Goddess Lakshmi) ಸಂಬಂಧಿಸಿದ ಅಂತಹ ಕೆಲವು ರಾಶಿಗಳಿವೆ. ಈ ರಾಶಿಯವರು ಕಠಿಣ ಪರಿಶ್ರಮದ (Success for hardworking) ಸಂಪೂರ್ಣ ಫಲವನ್ನು ಪಡೆಯುತ್ತಾರೆ. ಈ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನೊಂದಿಗೆ ಎತ್ತರವನ್ನು ಮುಟ್ಟುತ್ತಾರೆ. ಇದರೊಂದಿಗೆ, ಅವರು ಸಾಕಷ್ಟು ಜನಪ್ರಿಯರಾಗುತ್ತಾರೆ. ಲಕ್ಷ್ಮಿ ದೇವಿಯ ಅನುಗ್ರಹವು ಯಾವ ರಾಶಿಗಳಲ್ಲಿದೆ ಎಂದು ತಿಳಿಯಿರಿ.
ಈ ರಾಶಿಗಳು ತಾಯಿ ಲಕ್ಷ್ಮಿಯ ಅಚ್ಚುಮೆಚ್ಚಿನವು
ವೃಷಭ ರಾಶಿ (Taurus)
ಜ್ಯೋತಿಷ್ಯದ ಪ್ರಕಾರ, ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರನನ್ನು ಸಂಪತ್ತಿನ ಅಂಶವೆಂದು ಪರಿಗಣಿಸಲಾಗುತ್ತೆ. ಹಾಗಾಗಿ, ಈ ರಾಶಿಯ ಜನರು ತಾಯಿ ಲಕ್ಷ್ಮಿಯ ಅಪಾರ ಅನುಗ್ರಹವನ್ನು ಹೊಂದಿದ್ದಾರೆ. ಈ ಜನರು ತಮ್ಮ ಕಠಿಣ ಪರಿಶ್ರಮದ (hard work) ಬಲದಿಂದ ಎಲ್ಲೆಡೆ ಯಶಸ್ಸನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಯಶಸ್ಸನ್ನು ಸಹ ಸಾಧಿಸುತ್ತಾರೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ.
ಕರ್ಕಾಟಕ ರಾಶಿ (Cancer)
ಈ ರಾಶಿಯ ಅಧಿಪತಿ ಚಂದ್ರ. ಚಂದ್ರನನ್ನು ಸಂತೋಷ ಮತ್ತು ತಾಯಿಯ ಅಂಶವೆಂದು ಪರಿಗಣಿಸಲಾಗುತ್ತೆ. ಈ ಕಾರಣಕ್ಕಾಗಿ, ಚಂದ್ರನ ರಾಶಿಯಲ್ಲಿ ತಾಯಿ ಲಕ್ಷ್ಮಿಯ ಅನುಗ್ರಹವೂ ಅತ್ಯಧಿಕವಾಗಿದೆ. ಈ ರಾಶಿಯ ಜನರು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ.
ಸಿಂಹ ರಾಶಿ (Leo)
ಸಿಂಹ ರಾಶಿಯ ಅಧಿಪತಿ ಸೂರ್ಯ. ಜ್ಯೋತಿಷ್ಯದಲ್ಲಿ, ಇದನ್ನು ಎಲ್ಲಾ ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಈ ರಾಶಿಯ ಜನರು ದೃಢನಿಶ್ಚಯ, ಉತ್ಸಾಹಿ ಮತ್ತು ತೀಕ್ಷ್ಣವಾಗಿರುತ್ತಾರೆ. ನಿಮ್ಮ ಕಠಿಣ ಪರಿಶ್ರಮದ ಬಲದಿಂದ ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತೀರಿ. ತಾಯಿ ಲಕ್ಷ್ಮಿಯ ಅಪರಿಮಿತ ಕೃಪೆಯಿಂದ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತೆ.
ತುಲಾ ರಾಶಿ (Libra)
ತುಲಾ ರಾಶಿಯ ಅಧಿಪತಿ ಶುಕ್ರ. ಶುಕ್ರನನ್ನು ಆಕರ್ಷಣೆ, ಸಂಪತ್ತು ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತೆ. ತಾಯಿ ಲಕ್ಷ್ಮಿಯ ಕೃಪೆಯಿಂದ, ಈ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ವಿಯಾಗುತ್ತಾರೆ.
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಜ್ಯೋತಿಷ್ಯದ ಪ್ರಕಾರ, ಮಂಗಳನನ್ನು ಗ್ರಹಗಳ ಕಮಾಂಡರ್ ಎಂದು ಕರೆಯಲಾಗುತ್ತೆ. ಆದ್ದರಿಂದ, ಈ ಗ್ರಹವನ್ನು ಶಕ್ತಿ, ಧೈರ್ಯ, ಶೌರ್ಯದ ಅಂಶವೆಂದು ಪರಿಗಣಿಸಲಾಗಿದೆ. ಈ ರಾಶಿಯ ಜನರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಹೊಂದಿರುತ್ತಾರೆ. ಅವರು ತಮ್ಮ ಕಠಿಣ ಪರಿಶ್ರಮದ ಬಲದಿಂದ ಎತ್ತರವನ್ನು ತಲುಪುತ್ತಾರೆ.