MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಲವ್ ಮ್ಯಾರೇಜ್ ಆದ್ರೂ ಸಮಸ್ಯೆ ಹುಟ್ಟಿಕೊಳ್ಳೋದಕ್ಕೆ ಕಾರಣವೇ ಈ ನಾಲ್ಕು ಗ್ರಹಗಳು!

ಲವ್ ಮ್ಯಾರೇಜ್ ಆದ್ರೂ ಸಮಸ್ಯೆ ಹುಟ್ಟಿಕೊಳ್ಳೋದಕ್ಕೆ ಕಾರಣವೇ ಈ ನಾಲ್ಕು ಗ್ರಹಗಳು!

ಪ್ರೇಮ ವಿವಾಹ ವಿಫಲಗೊಳ್ಳಲು ಕೇವಲ ಗಂಡು ಹೆಣ್ಣು ಮಾತ್ರ ಕಾರಣವಲ್ಲ, ಇದಕ್ಕೆ ಗ್ರಹಗಳು ದುರ್ಬಲಗೊಳ್ಳೋದು ಸಹ ಕಾರಣ ಅನ್ನೋದು ಗೊತ್ತ?  ದುರ್ಬಲ ಗ್ರಹಗಳು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಅಷ್ಟೇ ಅಲ್ಲ ಇದರಿಂದ ಚೆನ್ನಾಗಿರೋ ಸಂಬಂಧಗಳು ಸಹ ದುರ್ಬಲಗೊಳ್ಳುತ್ತೆ. ಇಂತಹ ಸಮಯದಲ್ಲಿ ವೈವಾಹಿಕ ಜೀವನ ಚೆನ್ನಾಗಿರಬೇಕು ಅಂದ್ರೆ ಏನು ಮಾಡಬೇಕು ನೋಡೊಣ. 

2 Min read
Suvarna News
Published : May 07 2024, 05:45 PM IST
Share this Photo Gallery
  • FB
  • TW
  • Linkdin
  • Whatsapp
18

ಪ್ರೀತಿ ಮಾಡೊ ಜೋಡಿಗಳ ಮದುವೆಯಾದ್ರೆ (Love Marriage), ಅವರು ತಾವು ಅಂದುಕೊಂಡ ಕನಸು ನನಸಾಗೋ ಸಂಭ್ರಮದಲ್ಲಿರುತ್ತಾರೆ. ಆದರೆ ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತೆ, ದಿನಕಳೆದಂತೆ ಸಮಸ್ಯೆಗಳು ನಿಧಾನವಾಗಿ ಆರಂಭವಾಗುತ್ತೆ, ಕೊನೆಗೆ ಸಂಬಂಧವು ವಿಚ್ಛೇದನದವರೆಗೆ ಹೋಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶುಕ್ರ, ಗುರು, ಬುಧ ಮತ್ತು ರಾಹು ಎಂಬ ನಾಲ್ಕು ಗ್ರಹಗಳು ಪ್ರೇಮ ವಿವಾಹ ವಿಫಲವಾಗಲು ಕಾರಣವಾಗಿವೆ. ಜಾತಕದಲ್ಲಿ ಈ ಗ್ರಹಗಳ ಸ್ಥಾನವು ಅನುಕೂಲಕರವಾಗಿಲ್ಲದಿದ್ದಾಗ, ಪ್ರೇಮ ವಿವಾಹದಲ್ಲಿ ಸಮಸ್ಯೆಗಳು (problem in marriage) ಕ್ರಮೇಣ ಪ್ರಾರಂಭವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯದ ಕೆಲವು ಪರಿಹಾರಗಳನ್ನು ಪಾಲಿಸೋದರಿಂದ, ಪ್ರೇಮ ವಿವಾಹ ಚೆನ್ನಾಗಿರೋದಕ್ಕೆ ಸಾಧ್ಯವಾಗುತ್ತದೆ. 
 

28

ಪ್ರೇಮ ವಿವಾಹ ವಿಫಲವಾಗೋದಕ್ಕೆ ಕಾರಣಗಳೇನು? 
ನಾಲ್ಕು ಗ್ರಹಗಳ ದುರ್ಬಲ ಸ್ಥಾನವು ಪ್ರೇಮ ವಿವಾಹದ ವೈಫಲ್ಯಕ್ಕೆ ಕಾರಣವಾಗಿದೆ. ಈ ನಾಲ್ಕು ಗ್ರಹಗಳೆಂದರೆ ಶುಕ್ರ, ಗುರು (Jupitor), ಬುಧ ಮತ್ತು ರಾಹು. ಶುಕ್ರ (Venus) ದುರ್ಬಲಗೊಳ್ಳುವುದರಿಂದ ಆಕರ್ಷಣೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಜೊತೆಗೆ ಆ ವ್ಯಕ್ತಿಯು ಸೌಂದರ್ಯದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ಗುರು ದುರ್ಬಲನಾಗಿದ್ದರೆ ಆಗ ವ್ಯಕ್ತಿಯಲ್ಲಿ ಆನಂದದ ಬಯಕೆ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರೊಮ್ಯಾನ್ಸ್ (romance) ಅನ್ನೋದು ಅರ್ಥ ಕಳೆದುಕೊಳ್ಳುತ್ತದೆ. 

38

ಬುಧ ದುರ್ಬಲನಾದರೆ, ಸ್ವಭಾವ ಬದಲಾಗುತ್ತದೆ. ಮದುವೆಯಲ್ಲಿ ವಂಚನೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದರೆ, ರಾಹು ದುರ್ಬಲನಾಗಿದ್ದರೆ, ವೈವಾಹಿಕ ಜೀವನದಲ್ಲಿ ಸಂಶಯ, ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚು.  ಅನುಮಾನವು ಜಗಳಕ್ಕೆ ಕಾರಣವಾಗುತ್ತದೆ, ಇಂತಹ ಪ್ರೀತಿ ಅಥವಾ ಮದುವೆ ಹೆಚ್ಚು ಸಮಯ ಉಳಿಯೋದಿಲ್ಲ. ಇದರೊಂದಿಗೆ, ಜಾತಕದಲ್ಲಿ ಐದನೇ ಮತ್ತು ಏಳನೇ ಮನೆಗಳು ದುರ್ಬಲವಾಗಿದ್ದರೂ, ಪ್ರೇಮ ವಿವಾಹ ವಿಫಲವಾಗುವ ಅಪಾಯವಿದೆ.

48

ವೈವಾಹಿಕ ಜೀವನವನ್ನು ಚೆನ್ನಾಗಿರಿಸುವ ಮಾರ್ಗಗಳು
ಜ್ಯೋತಿಷಿಗಳ ಪ್ರಕಾರ, ಪ್ರೇಮ ವಿವಾಹದಲ್ಲಿ ಸಮಸ್ಯೆಗಳು ಸಾಮಾನ್ಯ, ಹಾಗಾಗಿ ಮೂರು ತಿಂಗಳವರೆಗೆ ಪ್ರತಿ ಗುರುವಾರ ಗುರು ದೇವರು ಅಥವಾ ಶಿವನ ದೇವಾಲಯದಲ್ಲಿ (Shiva Temple) ಹಳದಿ ವಸ್ತು, ಕಡಲೆ ಬೇಳೆ, ಹಳದಿ ಹಾಲಿನ ಪೇಡಾ, ಬೆಲ್ಲವನ್ನು ಅರ್ಪಿಸಿ. ಅಲ್ಲದೆ, ದೇವಾಲಯಕ್ಕೆ ಹೋಗುವಾಗ ಯಾವಾಗಲೂ ಹಳದಿ ಬಟ್ಟೆಗಳನ್ನು ಧರಿಸಿ. ಇದನ್ನು ಮಾಡೋದರಿಂದ, ಜಾತಕದಲ್ಲಿ ಗುರುವಿನ ಸ್ಥಾನ ಬಲಗೊಳ್ಳುತ್ತದೆ ಮತ್ತು ವೈವಾಹಿಕ ಜೀವನವು (married life) ಅನುಕೂಲಕರವಾಗಿರುತ್ತದೆ.
 

58

ಪ್ರೀತಿಯನ್ನು ಹೆಚ್ಚಿಸುವ ಪರಿಹಾರಗಳು
ಪ್ರೇಮ ವಿವಾಹ ಆಗಿರುವವರು ಪ್ರತಿ ಗುರುವಾರ ಉಪವಾಸ ಮಾಡಬೇಕು ಮತ್ತು ಪ್ರತಿ ಗುರುವಾರ ಬಾಳೆ ಮರದ (banana tree root) ಬೇರನ್ನು ಪೂಜಿಸಬೇಕು. ಜೊತೆಗೆ ಬೃಹಸ್ಪತಿಯ ಕಥೆ ಕೇಳಿ, ಇದರ ನಂತರ, ಅರಿಶಿನ ಅಥವಾ ಕೇಸರಿ ತಿಲಕವನ್ನು ಹಚ್ಚಿಕೊಂಡರೆ ಪ್ರೇಮ ವಿವಾಹದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕ್ರಮೇಣ ದೂರವಾಗುತ್ತವೆ. ಗಂಡ ಮತ್ತು ಹೆಂಡತಿಯ ನಡುವೆ ಪರಸ್ಪರ ಪ್ರೀತಿ ಉಳಿಯುತ್ತದೆ.

68

ಈ ಕ್ರಮವು ಯಶಸ್ಸಿಗೆ ಕಾರಣವಾಗುತ್ತದೆ
ರಾಹು, ಶುಕ್ರ, ಚಂದ್ರ, ಸಪ್ತಮೇಶ್ ಅಥವಾ ಲಗ್ನೇಶ್ ಗ್ರಹವನ್ನು ಪೀಡಿಸುತ್ತಿದ್ದರೆ, ರಾಹುವಿನ (Raahu)ಶಾಂತಿಗಾಗಿ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಬುಧವಾರ, ಬೆಳ್ಳಿಯಲ್ಲಿ  ಸಿಲೋನಿ ಗೋಮೇಧ ಹರಳನ್ನು ಹಾಕಿ ಜ್ಯೋತಿಷಿಗಳ ಸಲಹೆಯಂತೆ ಅದನ್ನು ಧರಿಸಿದರೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು  ಪ್ರೇಮ ವಿವಾಹದಲ್ಲಿ ಪ್ರೀತಿ ಉಳಿಯುತ್ತದೆ.

78

ಪ್ರೇಮ ವಿವಾಹದ ಸಮಸ್ಯೆಗಳನ್ನು ನಿವಾರಿಸಲು ಏನ್ ಮಾಡಬೇಕು?
ನಿಮ್ಮ ಪ್ರೇಮ ವಿವಾಹದಲ್ಲಿ (love marriage) ಏನಾದರೂ ಸಮಸ್ಯೆ ಇದ್ದರೆ, ಜಾತಕದಲ್ಲಿ ಐದನೇ ಮನೆ ಮತ್ತು ಪಂಚಮೇಶ್ ಮತ್ತು ಏಳನೇ ಮನೆ ಮತ್ತು ಸಪ್ತಮೆಯನ್ನು ಬಲಪಡಿಸಿ. ಅಲ್ಲದೆ, ಜ್ಯೋತಿಷಿ ಸಲಹೆಯಂತೆ ಶುಕ್ರ, ಗುರು, ಬುಧ ಮತ್ತು ರಾಹುವಿನ ಶಾಂತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳಿ. ಇದನ್ನು ಮಾಡೋದರಿಂದ, ಪ್ರೇಮ ವಿವಾಹದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ತೊಡೆದು ಹಾಕುವುದು ಮಾತ್ರವಲ್ಲದೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಯೋಜನ ಪಡೆಯುತ್ತೀರಿ.

88

ಈ ಪರಿಹಾರವು ಪ್ರೇಮ ವಿವಾಹದಲ್ಲಿ ನಂಬಿಕೆ ಹೆಚ್ಚಿಸುತ್ತೆ
ಪ್ರೇಮ ವಿವಾಹದಲ್ಲಿ ಜೀವನದುದ್ದಕ್ಕೂ ಪರಸ್ಪರ ಪ್ರೀತಿಯನ್ನು ಕಾಪಾಡಿಕೊಳ್ಳಲು, ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯ ಅರ್ಪಿಸಿ. ಗಾಯತ್ರಿ ಮಂತ್ರವನ್ನು ಪಠಿಸಿ. ಅಲ್ಲದೆ, ಗುರುವಾರ ಮತ್ತು ಹುಣ್ಣಿಮೆಯಂದು ಉಪವಾಸ ಮಾಡಿ ಮತ್ತು ಶುಕ್ರವಾರ ಕನ್ಯೆಯರಿಗೆ ಖೀರ್ ಅರ್ಪಿಸುವ ಮೂಲಕ ಆಶೀರ್ವಾದ ಪಡೆಯಿರಿ. ಹೀಗೆ ಮಾಡೋದರಿಂದ, ಪ್ರೇಮ ವಿವಾಹದಲ್ಲಿ ಪರಸ್ಪರ ನಂಬಿಕೆ ಉಳಿಯುತ್ತದೆ ಮತ್ತು ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ.
 

About the Author

SN
Suvarna News
ಪ್ರೀತಿ
ಮದುವೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved