ಈ ಒಂದು ಗುರುತು ನಿಮ್ಮ ಅಂಗೈಯಲ್ಲಿದ್ದರೆ ‘ರಾಜಯೋಗ’ ಖಂಡಿತಾ
ಪ್ರತಿಯೊಬ್ಬರೂ ತಮ್ಮ ಅದೃಷ್ಟದಲ್ಲಿ ಸಂಪತ್ತು ಇದ್ಯಾ ಅಥವಾ ಇಲ್ವಾ ಎಂದು ತಿಳಿಯಲು ಬಯಸುತ್ತಾರೆ. ಇದನ್ನು ಕಂಡುಹಿಡಿಯುವ ರಹಸ್ಯಗಳು ನಿಮ್ಮ ಅಂಗೈಯಲ್ಲಿ ಅಡಗಿವೆ ಗೊತ್ತಾ. ಹೌದು, ಅಂಗೈ ರೇಖೆಗಳ ಮೂಲಕ ಸಂಪತ್ತು ಸಿಗಬಹುದೇ ಅನ್ನೋದನ್ನು ತಿಳಿಯಬಹುದು. ಅದರ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ.
ನಮ್ಮ ಭವಿಷ್ಯದ ಜೀವನದಲ್ಲಿ ಏನಾಗಲಿದೆ, ಇದನ್ನು ತಿಳಿಯುವ ಉತ್ಸುಕತೆ ಎಲ್ಲರಿಗೂ ಇದ್ದೇ ಇರುತ್ತೆ. ಆದರೆ ನೀವು ನಿಜವಾಗಿಯೂ ಈ ಸತ್ಯವನ್ನು ತಿಳಿದುಕೊಳ್ಳಲು ಬಯಸೋದಾದ್ರೆ ನಿಮ್ಮ ಕೈಗಳ ರೇಖೆ (Palmistry) ಮತ್ತು ಚಿಹ್ನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅಂಗೈಯಲ್ಲಿರುವ ಕೆಲವು ಚಿಹ್ನೆಗಳು ನಿಮ್ಮ ಜೀವನದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಖ್ಯಾತಿಯ ಬಗ್ಗೆ ಹೇಳುತ್ತೆ.
ನಿಮ್ಮ ಅದೃಷ್ಟದಲ್ಲಿ ಸಂಪತ್ತು ಇದ್ಯಾ ಅಥವಾ ಇಲ್ವಾ ಎಂದು ಹೇಗೆ ತಿಳಿಯಬಹುದೇ?
ಅಂಗೈಯನ್ನು ಹತ್ತಿರದಿಂದ ನೋಡುವ ಮೂಲಕ, ಸಮೃದ್ಧಿಗೆ ಸಂಬಂಧಿಸಿದ ಕುತೂಹಲ ಶಾಂತಗೊಳಿಸುವ ಅಂತಹ ಚಿಹ್ನೆಗಳನ್ನು ನೀವು ಕಾಣಬಹುದು. ಅಂಗೈಯಲ್ಲಿ ಸಂಪತ್ತಿನ(Wealth) ಬಗ್ಗೆ ಸುಳಿವು ನೀಡುವ ಗುರುತುಗಳಿದ್ದರೆ, ನೀವು ಅವುಗಳನ್ನು ಗುರುತಿಸಲು ಪ್ರಯತ್ನಿಸಿ.
ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಈ ಚಿಹ್ನೆಯನ್ನು ಹೊಂದಿದ್ದರೆ, ಅವನನ್ನು ತುಂಬಾ ಅದೃಷ್ಟಶಾಲಿ(Lucky) ಎಂದು ಪರಿಗಣಿಸಲಾಗುತ್ತೆ. ಅವು ಜೀವನದಲ್ಲಿ ಸಂತೋಷ, ಸಮೃದ್ಧಿ, ಸಂಪತ್ತು ಇತ್ಯಾದಿಗಳನ್ನು ಪಡೆಯುತ್ತಾನೆ. ಕೆಳಗೆ ಹೇಳಿರುವ ಕೆಲವು ಚಿಹ್ನೆಗಳು ರಾಜಯೋಗ ಮತ್ತು ನಿಮ್ಮ ಹಣೆಬರಹದಲ್ಲಿನ ಸಂಪತ್ತಿನ ಬಗ್ಗೆ ಮಾಹಿತಿಯನ್ನು ನೀಡುತ್ತವೆ.
ಈ ನಾಲ್ಕು ಚಿಹ್ನೆಗಳನ್ನು ಗುರುತಿಸಿ.
1- ಭಗವಾನ್ ವಿಷ್ಣು(God Vishnu) ಮತ್ತು ತಾಯಿ ಲಕ್ಷ್ಮಿಯ ಪ್ರೀತಿಯ ಶಂಖವು ಅಂತಹ ಒಂದು ಚಿಹ್ನೆ. ಶಂಖವನ್ನು ವಿಜಯದ ಸಂಕೇತವೆಂದು ಸಹ ಪರಿಗಣಿಸಲಾಗುತ್ತೆ . ಹಸ್ತಸಾಮುದ್ರಿಕಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಕೈಯಲ್ಲಿ ಶಂಖ ಚಿಹ್ನೆ ಇದ್ದರೆ, ಅವನು ಜೀವನದಲ್ಲಿ ಎಂದಿಗೂ ವೈಫಲ್ಯ ಎದುರಿಸಬೇಕಾಗಿಲ್ಲ. ಸಂಪತ್ತು ಮತ್ತು ಖ್ಯಾತಿಯ ಕೊರತೆ ಅವನ ಜೀವನದಲ್ಲಿ ಎಂದಿಗೂ ಇರೋದಿಲ್ಲ.
2- ಕೈಯಲ್ಲಿ ಚಕ್ರದ ಗುರುತು ಇದ್ದರೆ, ನೀವು ಉತ್ತಮ ಗುಣಮಟ್ಟದ ಸಂತರಾಗುತ್ತೀರಿ, ಅಥವಾ ನೀವು ರಾಜನಂತೆಯೇ(King) ಅದೇ ಸ್ಥಾನ ಮತ್ತು ಪ್ರತಿಷ್ಠೆಯಿಂದ ಗೌರವಿಸಲ್ಪಡುವಿರಿ. ಎರಡರಲ್ಲಿ ಒಂದು ಆಗುವುದಂತೂ ಖಂಡಿತಾ. ರಾಜನಾಗುವಿರಾ? ಸಂತರಾಗುವಿರಾ ಅನ್ನೋದನ್ನು ಹಣೆಬರಹ ನಿರ್ಧರಿಸುತ್ತೆ.
3- ಸ್ವಸ್ತಿಕ್ (Swasthik)ಪೂಜೆ ಪಠಣಕ್ಕೆ ಬಹಳ ಪವಿತ್ರ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತೆ. ಇದು ನಿಮ್ಮ ಅಂಗೈಗೆ ತುಂಬಾ ಮಂಗಳಕರ. ಈ ಗುರುತು ನಿಮ್ಮ ಕೈಯಲ್ಲಿದ್ದರೆ, ನೀವು ಧಾರ್ಮಿಕ ವ್ಯಕ್ತಿ ಮತ್ತು ಸದ್ಗುಣಶೀಲ ವ್ಯಕ್ತಿಯಾಗುವುದು ಮಾತ್ರವಲ್ಲ, ನೀವು ಜೀವನದಲ್ಲಿ ಪ್ರಗತಿ ಸಾಧಿಸುವಿರಿ.
4- ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ(Goddess Lakshmi) ಸಂಬಂಧಿಸಿದ ಗುರುತು ಅಂಗೈಯಲ್ಲಿದ್ದರೆ ಹಣದ ಕೊರತೆಯ ಪ್ರಶ್ನೆಯೇ ಇಲ್ಲ. ನಾವು ಮಾತೆ ಲಕ್ಷ್ಮಿಯ ಕಮಲ ಆಸನದ ಬಗ್ಗೆ ಮಾತನಾಡುತ್ತಿದ್ದೇವೆ. ಕೈಯಲ್ಲಿ ಕಮಲದ ಗುರುತುಗಳನ್ನು ಹೊಂದಿರುವವರು ಐಷಾರಾಮಿ ಮತ್ತು ಭವ್ಯವಾದ ಜೀವನವನ್ನು ನಡೆಸುತ್ತಾರೆ.