ನಿದ್ರೆಯಲ್ಲಿ ಮಾತನಾಡೋದಕ್ಕೂ ಆಧ್ಯಾತ್ಮಿಕತೆಗೂ ಏನು ಸಂಬಂಧ?
ನಿದ್ರೆಯಲ್ಲಿ ಮಾತನಾಡುವ ಅಭ್ಯಾಸ ಆಧ್ಯಾತ್ಮಿಕತೆಗೆ ಸಂಬಂಧಿಸಿದೆ. ಈ ಅಭ್ಯಾಸ ನಿಮ್ಮ ಅನೇಕ ರಹಸ್ಯಗಳನ್ನು ತೆರೆಯುತ್ತೆ. ನಿದ್ರೆಯಲ್ಲಿ ಮಾತನಾಡೋದಕ್ಕೂ ಆಧ್ಯಾತ್ಮಿಕತೆಗೂ ಏನು ಸಂಬಂಧ ಎಂದು ತಿಳಿದುಕೊಳ್ಳೋಣ. ಅಲ್ಲದೆ, ಈ ಅಭ್ಯಾಸವನ್ನು ತೊಡೆದು ಹಾಕುವ ಮಾರ್ಗಗಳನ್ನು ತಿಳಿದುಕೊಳ್ಳಿ.
ಅನೇಕ ಜನರು ನಿದ್ರೆಯಲ್ಲಿ(Sleep) ಮಾತನಾಡುವ ಅಥವಾ ಗೊಣಗುವ ಅಭ್ಯಾಸ ಹೊಂದಿದ್ದಾರೆ. ನಿದ್ರೆಯಲ್ಲಿ ಮಾತನಾಡೋದು ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನಲ್ಲಿ ನಡೆಯುತ್ತಿರುವ ಅನೇಕ ವಿಷಯಗಳಿಗೆ ಸಂಬಂಧಿಸಿದೆ. ನಿದ್ರೆಯಲ್ಲಿ ಮಾತನಾಡುವ ಈ ಅಭ್ಯಾಸಕ್ಕೆ ಕೆಲವು ಧಾರ್ಮಿಕ ಕಾರಣಗಳಿವೆ. ಇದು ನಿಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಹೇಳುತ್ತೆ.
ನಿದ್ರೆಯು ಏನನ್ನು ಸೂಚಿಸುತ್ತೆ?
ನಿದ್ರೆಯಲ್ಲಿ ಮಾತನಾಡೋದು ನಿಮ್ಮ ವೈಯಕ್ತಿಕ ಜೀವನವನ್ನು ಪ್ರತಿಬಿಂಬಿಸುತ್ತೆ. ಇದು ಪ್ರೀತಿ, ಭಯ(Afraid) ಮತ್ತು ಭಾವನೆಗಳನ್ನು ನಿಗ್ರಹಿಸೋದರೊಂದಿಗೆ ಸಂಬಂಧಿಸಿದೆ. ಆಧ್ಯಾತ್ಮಿಕ ದೃಷ್ಟಿಕೋನದ ಪ್ರಕಾರ, ನಿದ್ರೆಯಲ್ಲಿ ಮಾತನಾಡೋದು ಜೀವನದಲ್ಲಿ ಸಿಲುಕಿಕೊಂಡಿರುವ ಸ್ಥಳದಿಂದ ಮುಂದುವರಿಯುವ ಸಮಯ ಎಂದು ಸೂಚಿಸುತ್ತೆ.
ಭವಿಷ್ಯದಲ್ಲಿ(Future), ಈ ಪರಿಸ್ಥಿತಿಯಿಂದ ಹೊರಬರಲು ನೀವು ಉತ್ತಮ ಅವಕಾಶ ಪಡೆಯಲಿದ್ದೀರಿ. ನೀವು ನಿದ್ರೆಯಲ್ಲಿ ನಿಮ್ಮ ಪೂರ್ವಜರೊಂದಿಗೆ ಮಾತನಾಡಿದರೆ, ಅವರು ಸಮಸ್ಯೆಗಳಿಗೆ ಸರಿಯಾದ ಪರಿಹಾರವನ್ನು ಸಹ ನಿಮಗೆ ಹೇಳಬಹುದು ಎಂಬ ನಂಬಿಕೆಯಿದೆ.
ವೈಜ್ಞಾನಿಕ ಕಾರಣಗಳು ಯಾವುವು?
ಮನಶಾಸ್ತ್ರಜ್ಞರ ಪ್ರಕಾರ, ಈ ಅಭ್ಯಾಸವು ವ್ಯಕ್ತಿಯ ಮನಸ್ಸಿನಲ್ಲಿ ನಡೆಯುತ್ತಿರುವ ಒತ್ತಡವನ್ನು(Stress) ಪ್ರತಿಬಿಂಬಿಸುತ್ತೆ. ಈಗಾಗಲೇ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರನ್ನು ಈ ಸಮಸ್ಯೆ ಕಾಡುತ್ತದೆ.
ಈ ಅಭ್ಯಾಸ (Habit) ತೊಡೆದು ಹಾಕೋದು ಹೇಗೆ?
ನಿದ್ರೆಯಲ್ಲಿ, ಹೆಚ್ಚಿನ ಜನರು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುವ ವಿಷಯಗಳನ್ನು ಹೇಳುತ್ತಾರೆ. ಈ ಅಭ್ಯಾಸವನ್ನು ತೊಡೆದುಹಾಕಲು, ನಿಮ್ಮ ಮನಸ್ಸಿನಲ್ಲಿ ಅಡಗಿರುವ ವಿಷಯಗಳನ್ನು ಯಾರಿಗಾದರೂ ಹೇಳಲು ಪ್ರಯತ್ನಿಸಿ.
ಸಾಧ್ಯವಾದರೆ, ನಿಮ್ಮೊಳಗಿನ ಆಸೆಗಳನ್ನು ಪೂರೈಸಲು ಪ್ರಯತ್ನಿಸಿ. ಅಥವಾ ನಿಮ್ಮ ಆಪ್ತರಿಗೆ ತಿಳಿಸುವ ಮೂಲಕ ಮನಸ್ಸನ್ನು ಹಗುರವಾಗುವಂತೆ ಮಾಡಿ. ಈ ಕ್ರಮಗಳು ನಿದ್ರೆಯಲ್ಲಿ ಮಾತನಾಡುವ ಸಮಸ್ಯೆಯನ್ನು(Problem) ಕಡಿಮೆ ಮಾಡುತ್ತೆ.