MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಗುರು ಪೂರ್ಣಿಮಾ ಕುರಿತಾದ ಈ ವಿಶೇಷ ಕತೆಯನ್ನು ನೀವು ಕೇಳಲೇಬೇಕು!

ಗುರು ಪೂರ್ಣಿಮಾ ಕುರಿತಾದ ಈ ವಿಶೇಷ ಕತೆಯನ್ನು ನೀವು ಕೇಳಲೇಬೇಕು!

ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಗುರುವಿಲ್ಲದೆ ದೇವರು ಸಿಗುವುದಿಲ್ಲ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಸಹ ಹೇಳಲಾಗಿದೆ. ಈ ಕಥೆಯ ಮೂಲಕ ನೀವು ಅದರ ಪ್ರಾಮುಖ್ಯತೆಯ ಜ್ಞಾನವನ್ನು ಪಡೆಯುತ್ತೀರಿ. 

2 Min read
Suvarna News
Published : Jun 25 2023, 02:56 PM IST
Share this Photo Gallery
  • FB
  • TW
  • Linkdin
  • Whatsapp
17

ನಮ್ಮೆಲ್ಲರ ಜೀವನದಲ್ಲಿ ಗುರುವಿನ ಸ್ಥಾನವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ. ಅವರು ನೀಡುವ ಶಿಕ್ಷಣದಿಂದ ಮಾತ್ರ ನಾವು ಉತ್ತಮ ಕೆಲಸ ಮಾಡಲು ಮತ್ತು ಜನರ ಮುಂದೆ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಗುರುವಿಲ್ಲದೆ ನೀವು ದೇವರನ್ನು ಸಹ ಕಾಣಲು ಸಾಧ್ಯವಿಲ್ಲ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸನಾತನ ಧರ್ಮದಲ್ಲಿ ಗುರುವಿನ ಮಹಿಮೆಯನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಲಾಗಿದೆ.
 

27

ಗುರುವಿಗೆ ವಿಶೇಷ ನಮನ ಸಲ್ಲಿಸಲು ಗುರು ಪೂರ್ಣಿಮಾ ಹಬ್ಬವನ್ನು(Guru Pournami) ಆಷಾಢ ಶುಕ್ಲ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ. ಈ ದಿನ, ಎಲ್ಲರೂ ತಮ್ಮ ಗುರುವನ್ನು ವಿಧೇಷ ರೀತಿಯಲ್ಲಿ ಪೂಜಿಸುತ್ತಾರೆ. ಆದರೆ ಈ ಹಬ್ಬವನ್ನು ಮಹರ್ಷಿ ವೇದವ್ಯಾಸರ ಜನನದ ವಿಶೇಷ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಇದರ ಕಥೆಯೂ ಬಹಳ ವಿಶೇಷ ಮಹತ್ವವನ್ನು ಹೊಂದಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
 

37

ಗುರು ಪೌರ್ಣಮಿಯ ಕಥೆ: ಗುರು ಪೂರ್ಣಿಮ ಹಬ್ಬವನ್ನು ಆಚರಿಸುವ ಹಿಂದಿನ ಮುಖ್ಯ ಕಾರಣವೆಂದರೆ ಮಹರ್ಷಿ ವೇದವ್ಯಾಸರ (Vedavyas) ಜನನ. ಮಹರ್ಷಿ ವೇದ ವ್ಯಾಸರು ಭಗವಾನ್ ವಿಷ್ಣುವಿನ ಭಾಗವಾಗಿ ಭೂಮಿಗೆ ಬಂದರು. ಅವರ ತಂದೆಯ ಹೆಸರು ರಿಷಿ ಪರಾಶರ್ ಮತ್ತು ತಾಯಿ ಸತ್ಯವತಿ. ಅವರು ಬಾಲ್ಯದಿಂದಲೂ ಆಧ್ಯಾತ್ಮಿಕತೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ದೇವರನ್ನು ಒಲಿಸಿಕೊಳ್ಳುವ ಸಲುವಾಗಿ ವ್ಯಾಸರು ಕಾಡಿಗೆ ಹೋಗಿ ತಪಸ್ಸು ಮಾಡುವ ಆಸೆಯನ್ನು ಪೋಷಕರಲ್ಲಿ ವ್ಯಕ್ತಪಡಿಸಿದ್ದರು. 

47

ಬಾಲಕನಾಗಿದ್ದ ವ್ಯಾಸರು, ಕಾಡಿಗೆ ಹೋಗಿ ತಪಸ್ಸು ಮಾಡೋದನ್ನು ಅವರ ತಾಯಿ ತಿರಸ್ಕರಿಸಿದಳು. ಆದರೆ ಮಹರ್ಷಿ ವೇದವ್ಯಾಸರು ಈ ಕುರಿತಂತೆ, ತಮ್ಮ ತಾಯಿಯ ಮನ ಒಲಿಸಲು ಪ್ರಯತ್ನಿಸಿದರು. ಕೊನೆಗೆ ಮಗನ ಮಾತನ್ನು ತಾಯಿ ಒಪ್ಪಿಕೊಂಡರು. ಆದರೆ ಯಾವಗಲಾದರೂ ಮನೆ ನೆನಪು ಬಂದ ತಕ್ಷಣ ಮತ್ತೆ ಮನೆಗೆ ಹಿಂದಿರುಗುವಂತೆ ಶರತ್ತು ವಿಧಿಸಿದರು. 

57

ಶರತ್ತನ್ನು ಒಪ್ಪಿ ವೇದವ್ಯಾಸರು ತಪಸ್ಸಿಗಾಗಿ ಕಾಡಿಗೆ ಹೋದರು ಮತ್ತು ಅಲ್ಲಿಗೆ ಹೋಗಿ ಕಠಿಣ ತಪಸ್ಸು ಮಾಡಿದರು. ಈ ತಪಸ್ಸಿನ ಫಲವಾಗಿ, ಅವರು ಸಂಸ್ಕೃತ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದರು. ಅದರ ನಂತರ ಅವರು ಮಹಾಭಾರತ, ನಾಲ್ಕು ವೇದಗಳನ್ನು ಸಹ ರಚಿಸಿದರು, ಜೊತೆಗೆ ಹದಿನೆಂಟು ಮಹಾಪುರಾಣಗಳು ಮತ್ತು ಬ್ರಹ್ಮಾಸ್ತ್ರವನ್ನು ಸಂಯೋಜಿಸಿದರು. 

67

ಒಂದಲ್ಲ ಒಂದು ರೂಪದಲ್ಲಿ, ಮಹರ್ಷಿ ವೇದವ್ಯಾಸರು ಇನ್ನೂ ನಮ್ಮ ನಡುವೆ ಇದ್ದಾರೆ ಎಂದು ಹೇಳಲಾಗುತ್ತದೆ. ಮಹಾ ಕೃತಿಗಳ ಕರ್ತೃವಾಗಿರೋದರಿಂದ, ಹಿಂದೂ ಧರ್ಮದಲ್ಲಿ, ವೇದ ವ್ಯಾಸನನ್ನು ದೇವರೆಂದು ಪೂಜಿಸಲಾಗುತ್ತದೆ. ಇಂದಿಗೂ, ವೇದಗಳ ಜ್ಞಾನವನ್ನು ಪಡೆಯುವ ಮೊದಲು, ಮಹರ್ಷಿ ವೇದವ್ಯಾಸರ ಹೆಸರನ್ನು ಮೊದಲು ಹೇಳಲಾಗುತ್ತೆ..
 

77

ವ್ಯಾಸರು ಮಹಾ ಗುರುಗಳಾಗಿರುವುದರಿಂದ ಗುರು ಪೌರ್ಣಮಿಯ ವಿಶೇಷ ಸಂದರ್ಭದಲ್ಲಿ, ಮಹರ್ಷಿ ವೇದ ವ್ಯಾಸರನ್ನು ಪೂಜಿಸಬೇಕು ಮತ್ತು ಅವರು ಹೇಳಿದ, ಬರೆದ ಕೆಲವು ವಿಷಯಗಳನ್ನು ನಾವು ಸಹ ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಹೇಳಲಾಗುತ್ತದೆ.. ಇದರ ಪರಿಣಾಮವು ನಮ್ಮ ಭವಿಷ್ಯವನ್ನು ಉತ್ತಮಗೊಳಿಸುತ್ತದೆ.
 

About the Author

SN
Suvarna News
ಗುರು ಪೂರ್ಣಿಮಾ
ಹಬ್ಬ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved