ಬೆಕ್ಕು ನೋಡಿದ್ರೆ ಅಪ ಶಕುನ, ಬೆಳ್ಳಂ ಬೆಳಗ್ಗೆ ನವಿಲು ನೋಡಿದ್ರೆ ಶುಭವೋ, ಅಶುಭವೋ?
ಕೆಲವೊಮ್ಮೆ ನಾವು ಬೆಳಗ್ಗೆ ಎದ್ದು ಹೊರಗಡೆ ಹೋದಾಗ, ನವಿಲುಗಳು ಓಡಾಡೋದನ್ನು ನೋಡಿರಬಹುದು. ಹೀಗೆ ಬೆಳಗ್ಗೆ ನವಿಲು ನೋಡೋದರಿಂದ ಏನು ಪ್ರಯೋಜನ ಅನ್ನೋದನ್ನು ನೋಡೋಣ.
ಹಿಂದೂ ಧರ್ಮದಲ್ಲಿ (Hindu Dharma) ನವಿಲನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ನವಿಲನ್ನು ನೋಡುವುದು ನಮಗೆ ಅನೇಕ ರೀತಿಯ ಸೂಚನೆಗಳನ್ನ ನೀಡುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಬೆಳಿಗ್ಗೆ ನವಿಲನ್ನು ನೋಡಿದ್ದರೆ ಅದರ ಅರ್ಥ ಏನು? ಅದರಿಂದ ನಿಮ್ಮ ಬಾಳಲ್ಲಿ ಏನಾಗಬಹುದು ಅನ್ನೋದನ್ನು ಸಹ ತಿಳಿಯೋಣ.
ಶುಭ ಸಂಕೇತ
ಒಬ್ಬ ವ್ಯಕ್ತಿಯು ಬೆಳಿಗ್ಗೆ ಅಚಾನಕ್ ಆಗಿ ನವಿಲನ್ನು ನೋಡಿದರೆ, ಅದನ್ನು ಬಹಳ ಶುಭ ಸಂಕೇತವೆಂದು (good luck) ಹೇಳಲಾಗುತ್ತೆ. ಆ ದಿನ ನಿಮಗೆ ಎಲ್ಲವೂ ಒಳ್ಳೆಯದೇ ನಡೆಯುತ್ತೆ.
ಕಾರ್ಯಕ್ಷೇತ್ರದಲ್ಲೂ ಪ್ರಯೋಜನಗಳು
ಮುಂಜಾನೆ ನವಿಲುಗಳನ್ನು ನೋಡುವುದು ಎಂದರೆ ನಿಮ್ಮ ಇಡೀ ದಿನವು ತುಂಬಾ ಮಂಗಳಕರವಾಗಿರುತ್ತದೆ ಎಂದರ್ಥ. ಅಲ್ಲದೆ, ನೀವು ಕೆಲಸದ ಸ್ಥಳದಲ್ಲಿಯೂ ಪ್ರಯೋಜನಗಳನ್ನು ಪಡೆಯುತ್ತೀರಿ.
ನವಿಲು ಹಾರುವುದ ನೋಡುವುದು
ಬೆಳಿಗ್ಗೆ ನವಿಲು ಹಾರುತ್ತಿರುವುದನ್ನು (flying peacock) ನೋಡಿದರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
ನೃತ್ಯ ಮಾಡೋದನ್ನು ನೋಡಿದ್ರೆ
ಒಂದು ವೇಳೆ ನೀವು ನವಿಲು ನೃತ್ಯ (dancing peacock) ಮಾಡುವುದನ್ನು ನೋಡಿದರೆ, ಅದು ಒಳ್ಳೆಯ ಮತ್ತು ಕೆಟ್ಟ ಎರಡೂ ಚಿಹ್ನೆಗಳನ್ನು ನೀಡುತ್ತೆ. ನೃತ್ಯ ಮಾಡುವ ನವಿಲು ಮುಂಬರುವ ಸಮಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಅನ್ನೋದನ್ನು ಸೂಚಿಸುತ್ತೆ.
ಜೀವನದಲ್ಲಿ ಹೊಸದನ್ನು ಸೂಚಿಸುವ ಸಂಕೇತ
ಮುಂಜಾನೆ ನೃತ್ಯ ಮಾಡುವ ನವಿಲನ್ನು ನೋಡುವುದು ನಿಮ್ಮ ಜೀವನದಲ್ಲಿ ಹೊಸದೇನಾದರೂ ಸಂಭವಿಸಲಿದೆ ಎಂಬುದರ ಸಂಕೇತ. ಅಲ್ಲದೆ, ನೀವು ಎಲ್ಲವನ್ನೂ ಎಚ್ಚರಿಕೆಯಿಂದ ಮಾಡಬೇಕು ಅನ್ನೋದನ್ನು ಇದು ಹೇಳುತ್ತೆ.
ಮನೆಗೆ ಬರುತ್ತಿರುವ ನವಿಲು
ಬೆಳಿಗ್ಗೆ ನವಿಲು ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಬಂದರೆ, ಅದನ್ನು ಬಹಳ ಒಳ್ಳೆಯದು ಪರಿಗಣಿಸಲಾಗುತ್ತದೆ. ಇದರರ್ಥ ನಿಮಗೆ ಸದ್ಯದಲ್ಲೇ ಅದೃಷ್ಟದ ಬಾಗಿಲು ತೆರೆಯಲಿದೆ.
ಮಂಗಳ ಕಾರ್ಯ ನಡೆಯಲಿದೆ
ಮುಂಜಾನೆ ನೀವು ನಿಮ್ಮ ಮನೆಯಲ್ಲಿ ನವಿಲನ್ನು ನೋಡಿದ್ದೀರಿ ಅಂದ್ರೆ, ಶೀಘ್ರದಲ್ಲೇ ಕೆಲವು ಶುಭ ಕಾರ್ಯಗಳು ನಿಮ್ಮ ಜೀವನದಲ್ಲಿ ನಡೆಯಲಿವೆ ಎಂಬುದರ ಸಂಕೇತವಾಗಿದೆ.