MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Astrology
  • Festivals
  • Lucky Zodiac Signs: ಶನಿ-ಶುಕ್ರರ ಪವರ್‌ಫುಲ್ ಕಾಂಬೋ, ಈ 4 ರಾಶಿಗಳಿಗೆ ಹರಿದು ಬರಲಿದೆ ದುಡ್ಡಿನ ಸುರಿಮಳೆ

Lucky Zodiac Signs: ಶನಿ-ಶುಕ್ರರ ಪವರ್‌ಫುಲ್ ಕಾಂಬೋ, ಈ 4 ರಾಶಿಗಳಿಗೆ ಹರಿದು ಬರಲಿದೆ ದುಡ್ಡಿನ ಸುರಿಮಳೆ

ಶನಿ ಮತ್ತು ಶುಕ್ರರ ಬಲಿಷ್ಠ ಮೈತ್ರಿಯು ಕೆಲವು ರಾಶಿಯವರ ಜೀವನದಲ್ಲಿ ಹಣದ ಮಳೆ ಸುರಿಸಲಿದೆಯಂತೆ. ಹಠಾತ್ ಹಣದ ಹರಿವು, ವೃತ್ತಿಯಲ್ಲಿ ಪ್ರಗತಿ ಹೀಗೆ ಅದೃಷ್ಟವನ್ನು ಪಡೆಯಲಿರುವ ಆ 4 ರಾಶಿಗಳು ಯಾವುವು ಗೊತ್ತಾ?

2 Min read
Author : Sushma Hegde
Published : Aug 28 2026, 12:19 PM IST
Share this Photo Gallery
  • FB
  • TW
  • Linkdin
  • Whatsapp
15
ಶನಿ ಶುಕ್ರರ ಪವರ್‌ಫುಲ್ ಕಾಂಬೋ! ಈ 4 ರಾಶಿಗಳಿಗೆ ಹರಿದು ಬರಲಿದೆ ದುಡ್ಡಿನ ಸುರಿಮಳೆ
Image Credit : Asianet News

ಶನಿ-ಶುಕ್ರರ ಪವರ್‌ಫುಲ್ ಕಾಂಬೋ! ಈ 4 ರಾಶಿಗಳಿಗೆ ಹರಿದು ಬರಲಿದೆ ದುಡ್ಡಿನ ಸುರಿಮಳೆ

ಜ್ಯೋತಿಷ್ಯದಲ್ಲಿ ಶನಿ ಮತ್ತು ಶುಕ್ರರನ್ನು ಬಹಳ ಮುಖ್ಯವಾದ ಗ್ರಹಗಳೆಂದು ಪರಿಗಣಿಸಲಾಗುತ್ತೆ. ಶನಿ ದೇವನು ಶ್ರಮ, ತಾಳ್ಮೆ, ಕರ್ಮಫಲ ಮತ್ತು ದೀರ್ಘಕಾಲೀನ ಬೆಳವಣಿಗೆಯನ್ನು ಪ್ರತಿನಿಧಿಸುತ್ತಾನೆ. ಇನ್ನೊಂದೆಡೆ, ಶುಕ್ರನು ಸಂಪತ್ತು, ಸೌಕರ್ಯ, ಐಷಾರಾಮಿ ಮತ್ತು ಸಂತೋಷದ ಕಾರಕನಾಗಿದ್ದಾನೆ. ಈ ಎರಡು ಗ್ರಹಗಳ ಶಕ್ತಿಯುತ ಸಂಯೋಗವು ಕೆಲವು ರಾಶಿಯವರ ಹಣ ಮತ್ತು ವೃತ್ತಿ ಸಂಬಂಧಿತ ವಿಷಯಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಜ್ಯೋತಿಷ್ಯ ನಂಬಿಕೆಗಳು ಹೇಳುತ್ತವೆ.

ಈ ಗ್ರಹಗಳ ಸಂಯೋಜನೆಯಿಂದಾಗಿ, ವಿಶೇಷವಾಗಿ ವೃಷಭ, ಮಿಥುನ, ತುಲಾ ಮತ್ತು ವೃಶ್ಚಿಕ ರಾಶಿಯವರಿಗೆ ಆರ್ಥಿಕ ಅವಕಾಶಗಳು ಸೃಷ್ಟಿಯಾಗಬಹುದು . ಯಾವವು ಆ ಅದೃಷ್ಟದ ರಾಶಿಗಳು? ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವೃಷಭ ರಾಶಿ
Image Credit : others

ವೃಷಭ ರಾಶಿ

ವೃಷಭ ರಾಶಿಯವರಿಗೆ ಶುಕ್ರನೇ ಅಧಿಪತಿಯಾಗಿರುವುದರಿಂದ, ಶುಕ್ರನ ಪ್ರಭಾವವು ಹೆಚ್ಚು ಮಹತ್ವ ಪಡೆಯುತ್ತದೆ. ಶನಿ-ಶುಕ್ರರ ಸಂಯೋಗದಿಂದಾಗಿ, ಬಹಳ ದಿನಗಳಿಂದ ಬಾಕಿ ಉಳಿದಿದ್ದ ಹಣ ಕೈಸೇರುವ ಸಾಧ್ಯತೆಗಳಿವೆ.

ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಸಂಪರ್ಕಗಳಿಂದ ಲಾಭ ಸಿಗಬಹುದು. ಅನಿರೀಕ್ಷಿತವಾಗಿ ಹೆಚ್ಚುವರಿ ಆದಾಯದ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಹಳೆಯ ಹೂಡಿಕೆ ಅಥವಾ ಉಳಿತಾಯದಿಂದ ಶುಭ ಸುದ್ದಿ ಕೇಳಿಬರಬಹುದು.

ಹಣಕಾಸಿನ ವಿಷಯದಲ್ಲಿ ಹಠಾತ್ ಪ್ರಗತಿಯನ್ನು ಕಾಣುವ ಸಮಯ ಇದಾಗಬಹುದು.

35
ಮಿಥುನ ರಾಶಿ
Image Credit : OTHERS

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಗ್ರಹಗಳ ಸಂಯೋಗವು ವೃತ್ತಿ ಜೀವನದಲ್ಲಿ ಹೊಸ ತಿರುವನ್ನು ನೀಡಲಿದೆ. ಬಹಳ ದಿನಗಳಿಂದ ಕಾಯುತ್ತಿದ್ದ ಉದ್ಯೋಗ ಬದಲಾವಣೆ, ಬಡ್ತಿ ಅಥವಾ ಸಂಬಳ ಹೆಚ್ಚಳದಂತಹ ಅವಕಾಶಗಳು ಸಿಗಬಹುದು.

ನೆನೆಗುದಿಗೆ ಬಿದ್ದಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳುವ ಸನ್ನಿವೇಶ ನಿರ್ಮಾಣವಾಗಬಹುದು. ವಿದೇಶ ಅಥವಾ ಬೇರೆ ರಾಜ್ಯಗಳಿಗೆ ಸಂಬಂಧಿಸಿದ ವೃತ್ತಿ ಅವಕಾಶಗಳೂ ಸಹ ಅನುಕೂಲಕರವಾಗಿರಬಹುದು.

ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಫಲ ಸಿಕ್ಕಿ, ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.

45
ತುಲಾ ರಾಶಿ
Image Credit : OTHERS

ತುಲಾ ರಾಶಿ

ತುಲಾ ರಾಶಿಯವರಿಗೂ ಶುಕ್ರನ ಪ್ರಭಾವ ಇರುವುದರಿಂದ ಈ ಸಮಯವು ಗಮನಾರ್ಹವಾಗಿರಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು.

ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಉತ್ತಮ ಪ್ರಗತಿ ಕಂಡುಬರಲಿದೆ. ಸಮಾಜದಲ್ಲಿ ಮೌಲ್ಯ, ಗೌರವ ಹೆಚ್ಚಾಗುವುದರ ಜೊತೆಗೆ, ಪ್ರಮುಖ ವ್ಯಕ್ತಿಗಳ ಬೆಂಬಲವೂ ಸಿಗುವ ಸಾಧ್ಯತೆಯಿದೆ.

ಆರ್ಥಿಕ ಸ್ಥಿತಿ ಹಂತಹಂತವಾಗಿ ಬಲಗೊಳ್ಳಬಹುದು. ಹಠಾತ್ ಖರ್ಚುಗಳು ಬಂದರೂ, ಹೊಸ ಆದಾಯದ ಮೂಲಗಳು ಅದನ್ನು ನಿಭಾಯಿಸಲು ಸಹಾಯ ಮಾಡುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ.

55
ವೃಶ್ಚಿಕ ರಾಶಿ
Image Credit : OTHERS

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಶನಿ-ಶುಕ್ರರ ಸಂಯೋಗವು ಆಸೆಗಳನ್ನು ಈಡೇರಿಸುವ ಅವಕಾಶಗಳನ್ನು ಸೃಷ್ಟಿಸಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಅಥವಾ ಬಹಳ ದಿನಗಳಿಂದ ಕಾಯುತ್ತಿದ್ದ ಮನ್ನಣೆ ಸಿಗಬಹುದು.

ವ್ಯವಹಾರದಲ್ಲಿ ಬಾಕಿ ಉಳಿದಿದ್ದ ಯೋಜನೆಗಳು ಮತ್ತೆ ವೇಗ ಪಡೆದುಕೊಳ್ಳಬಹುದು. ಹೊಸ ಒಪ್ಪಂದಗಳಿಂದ ಲಾಭ ಗಳಿಸುವ ಅವಕಾಶವೂ ಇದೆ. ಉದ್ಯೋಗದಲ್ಲಿರುವವರಿಗೆ ಸಂಬಳ ಹೆಚ್ಚಳ ಅಥವಾ ಬಡ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಬರಬಹುದು.

ಅನಿರೀಕ್ಷಿತ ಹಣದ ಹರಿವು ಮತ್ತು ಆರ್ಥಿಕ ಪ್ರಗತಿಯು ಈ ರಾಶಿಯವರಿಗೆ ಪ್ರಮುಖ ಫಲವಾಗಿರಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ರಾಶಿ
ಜ್ಯೋತಿಷ್ಯ
ಅದೃಷ್ಟ

Latest Videos
Recommended Stories
Recommended image1
ಕನ್ಯಾ ರಾಶಿಯಲ್ಲಿ ಅಮಾವಾಸ್ಯೆ: ಅಮಲ ರಾಜಯೋಗದಿಂದ ಈ 4 ರಾಶಿಗಳಿಗೆ ಜಾಕ್‌ಪಾಟ್, ಅದೃಷ್ಟ
Recommended image2
ರಕ್ಷಾ ಬಂಧನ: ಅಣ್ಣ-ತಂಗಿಯ ಶಾಶ್ವತ ಬಂಧ
Recommended image3
ನ್ಯೂಯಾರ್ಕ್‌ನ 'ಬಂಗ್ಲೋ'ಗೆ ಅಂಬಾನಿ ಕುಟುಂಬ ಭೇಟಿ, ರಾಧಿಕಾ ಮರ್ಚೆಂಟ್ ಕಟ್ಟಿದ ರಾಖಿಗೆ ಚೆಫ್ ವಿಕಾಸ್ ಖನ್ನಾ ಭಾವುಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved