ಏಪ್ರಿಲ್ 2ರಿಂದ 5 ರಾಶಿಗಳಲ್ಲಿ ಮಂಗಳ ಗೋಚರ - ಶನಿಯುತಿ ರಚನೆಯಿಂದ ಮುಟ್ಟಿದ್ದೆಲ್ಲಾ ಚಿನ್ನ
ಏಪ್ರಿಲ್ 2 ರಂದು ಮೀನ ರಾಶಿಯಲ್ಲಿ ಶನಿ ಮತ್ತು ಮಂಗಳ ಗ್ರಹಗಳ ಸಂಯೋಗದಿಂದ ಶನಿ-ಮಂಗಳ ಯೋಗವು ರೂಪುಗೊಳ್ಳಲಿದೆ. ಈ ಯೋಗವು 5 ರಾಶಿಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಅವರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ.

ಶನಿ-ಮಂಗಳ
ಮಂಗಳವನ್ನು ಕೋಪ, ಯುದ್ಧ ಮತ್ತು ಕ್ರೋಧ ಗ್ರಹ ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 2ರಂದು ಗುರುವಿನ ಆಳ್ವಿಕೆ ಮೀನ ರಾಶಿಯನ್ನು ಮಂಗಳ ಪ್ರವೇಶಿಸಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಶನಿ ಜೊತೆ ಸೇರಿದ ನಂತರ ಶನಿ-ಮಂಗಳ ಯೋಗ ರಚನೆಯಾಗಲಿದೆ. ಈ ರಚನೆಯೂ ಐದು ರಾಶಿಚಕ್ರಗಳ ಮೇಲೆ ನೇರ ಪರಿಣಾಮ ಬೀರಲಿದೆ. ಆ ಐದು ರಾಶಿಗಳು ಯಾವವು ಎಂದು ನೋಡೋಣ ಬನ್ನಿ.
ವೃಷಭ ರಾಶಿ
ವೃಷಭ ರಾಶಿಯ 11ನೇ ಮನೆಯಲ್ಲಿ ಮಂಗಳ-ಶನಿ ಯುತಿ ಉಂಟಾಗಲಿದೆ. ಈ ಯೋಗದಿಂದ ಆರ್ಥಿಕ ಲಾಭ, ವೃತ್ತಿಜೀವನದಲ್ಲಿ ಬೆಳವಣಿಗೆ ಕಾಣಲಿದೆ. ಗೆಳೆಯರ ಜೊತೆಗಿನ ಒಡನಾಟ ಹೆಚ್ಚಾಗಲಿದ್ದು, ಸಂತೋಷ ಸಮಯ ನಿಮ್ಮದಾಗಲಿದೆ. ಏಪ್ರಿಲ್ 2ರ ನಂತರ ಬಹುದಿನಗಳ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಸಂಬಂಧಗಳಿಗೆ ಬೆಲೆ ನೀಡಬೇಕು ಮತ್ತು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ.
ಮಿಥುನ ರಾಶಿ
ಮಿಥುನ ರಾಶಿಯ 10ನೇ ಮನೆಯಲ್ಲಿ ಯೋಗ ರಚನೆಯಾಗಲಿದ್ದು, ನಿಮ್ಮೆಲ್ಲಾ ಕೆಲಸಗಳಲ್ಲಿ ಸಫಲತೆ ಸಿಗಲಿದೆ. ವ್ಯಾಪಾರಿಗಳಿಗೆ ವಿಶೇಷವಾಗಿ ಲಾಭ ಸಿಗಲಿದೆ. ಆದ್ರೆ ಧೈರ್ಯ ಮತ್ತು ಸಮಯೋಚಿತದೊಂದಿಗೆ ಹೊಸ ಕೆಲಸಗಳಿಗೆ ಮುಂದಾಗಿ. ಏಪ್ರಿಲ್ 2ರ ಬಳಿಕ ಪಾಲುದಾರಿಕೆ ಕೆಲಸದಲ್ಲಿ ಹೆಚ್ಚು ಏಳಿಗೆ ಕಾಣಬಹುದು.
ಸಿಂಹ ರಾಶಿ
ಮಂಗಳ-ಶನಿ ಯೋಗವು ಸಿಂಹ ರಾಶಿಯ 8ನೇ ಮನೆಯಲ್ಲಿ ರೂಪಗೊಳ್ಳಲಿದೆ. ಈ ರಚನೆಯಿಂದ ಹಣದ ಸಮಸ್ಯೆ, ಅನರೋಗ್ಯ ಸಮಸ್ಯೆ ಮತ್ತು ಶತ್ರು ಕಾಟ ದೂರವಾಗಲಿವೆ. ವಿರೋಧಿಗಳ ನಡುವಿನ ಹೋರಾಟದಲ್ಲಿ ಸಿಂಹ ರಾಶಿಯವರಿಗೆ ಗೆಲುವು ಸಿಗಲಿದೆ. ಆದ್ರೆ ಕೋಪದ ಮೇಲೆ ನಿಯಂತ್ರಣವಿಟ್ಟುಕೊಳ್ಳಿ. ಕೋಪದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಬೇಡಿ. ಇದು ನಿಮ್ಮ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ.
ತುಲಾ ರಾಶಿ
ತುಲಾ ರಾಶಿಯ 6ನೇ ಮನೆಯಲ್ಲಿ ಶನಿ-ಮಂಗಳ ಯುತಿ ರಚನೆಯಾಗಲಿದ್ದು, ಸಮಾಜದಲ್ಲಿ ಸನ್ಮಾನ ಗೌರವಕ್ಕೆ ಪಾತ್ರರಾಗುತ್ತೀರಿ. ಸಂಯಮದಿಂದ ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಏಪ್ರಿಲ್ 2ರ ನಂತರ ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದು, ಆಹಾರ ಸೇವನೆ ಮೇಲೆ ಗಮನವಿರಲಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿರಲಿ.
ಕುಂಭ ರಾಶಿ
ಕುಂಭ ರಾಶಿಯ 2ನೇ ಮನೆಯಲ್ಲಿ ಶನಿ-ಮಂಗಳ ಯುತಿ ರಚನೆಯಾಗಲಿದ್ದು, ಈ ಸಮಯದಲ್ಲಿ ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯಲಿದ್ದೀರಿ. ಇದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ. ಆದ್ರೆ ಈ ಸಮಯದಲ್ಲಿ ನಿಮ್ಮ ಮಾತುಗಳ ಮೇಲೆ ನಿಗಾ ಇರಲಿ. ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಎಲ್ಲರೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳುವುದು ಉತ್ತಮ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

