ಅಮೃತಧಾರೆ ಗೌತಮ್‌ಗೆ ಕತ್ತಲ ಭಯ, ಲಕ್ಷ್ಮಿ ನಿವಾಸದ ಜಯಂತ್‌ಗೆ ಪ್ರೀತಿ ಕಳೆದು ಕೊಳ್ಳೋ ಭಯ, ಇವ್ರದ್ದು ಅದ್ಯಾವ ರಾಶಿ?
ನಮ್ಮ ರಾಶಿಚಕ್ರ ಚಿಹ್ನೆಗಳು ನಮಗೆ ಒಳನೋಟಗಳು, ಮಾರ್ಗದರ್ಶನ ಮತ್ತು ನಮ್ಮ ಬಗ್ಗೆ ಮತ್ತು ಬ್ರಹ್ಮಾಂಡದ ಬಗ್ಗೆ ಆಳವಾದ ಮಾಹಿತಿ ನೀಡಬಹುದು ಅನ್ನೋದು ಬ್ರಹ್ಮಾಂಡದ ಸತ್ಯ..ಯಾವ ರಾಶಿಯ ಜನರಿಗೆ ಯಾವ ರೀತಿಯ ಭಯ ಇದೆ ಅನ್ನೋದನ್ನು ರಾಶಿಚಕ್ರಗಳನ್ನು ನೋಡಿ ತಿಳಿದುಕೊಳ್ಳೋಣ.
ರಾಶಿಚಕ್ರಗಳ ಅನುಸಾರವಾಗಿ ಯಾವ ರಾಶಿಯವರಿಗೆ ಯಾವ ರೀತಿಯ ಭಯ ಕಾಡುತ್ತದೆ ಅನ್ನೋದನ್ನು ತಿಳಿದುಕೊಳ್ಳಲು ಬಯಸಿದರೆ, ಇಲ್ಲಿದೆ ಸಂಪೂರ್ಣ ಮಾಹಿತಿ.
ಮೇಷ ರಾಶಿ (Aries): ಗಾಮೋಫೋಬಿಯಾ (Gamophobia) : ನಿರ್ಧಾರ ತೆಗೆದುಕೊಳ್ಳುವ ಬಗ್ಗೆ, ಕಮಿಟ್‌ಮೆಂಟ್ ಬಗ್ಗೆ ಈ ರಾಶಿಯವರಿಗೆ ಭಯ ಹೆಚ್ಚಾಗಿರುತ್ತದೆ. ಒಂದು ಸಣ್ಣ ನಿರ್ಧಾರ ತೆಗದೆುಕೊಳ್ಳಲೂ ತುಂಬ ಒದ್ದಾಡುತ್ತಾರೆ. ಎಲ್ಲಿ ಫೈಲೂರ್ ಆಗುತ್ತೇನೋ ಎನ್ನುವ ಆತಂಕ ಕಾಡುತ್ತೆ ಇವರಿಗೆ.
ವೃಷಭ ರಾಶಿ ( Taurus ): ಮೆಟಾಥೆಸಿಯೋಫೋಬಿಯಾ (Matathesiophobia): ಬದಲಾವಣೆ ಅಥವಾ ಮುಂದಕ್ಕೆ ಹೋಗುವ ಭಯ ಈ ರಾಶಿಯವರನ್ನು ಕಾಡುತ್ತದೆ. ಬದಲಾವಣೆ ಜಗದ ನಿಮಯ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಈ ರಾಶಿಯರಿಗೆ ಕಷ್ಟ.
.
ಮಿಥುನ ರಾಶಿ ( Gemini ) : ಡಿಸಿಡೋಫೋಬಿಯಾ (Decidophobia): ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಇರುವ ಭಯ ಈ ರಾಶಿಯವರನ್ನು ಕಾಡುತ್ತದೆ. ಯಾವುದೇ ನಿರ್ಧಾರ ತೆಗೆದುಕೊಂಡರೆ Road not Taken ಎಂಬಂತೆ ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಅನಿಸೋದು ಸಹಜ. ಆದರೆ, ಇದನ್ನು ಒಪ್ಪಿಕೊಳ್ಳಲು ಸಿದ್ಧರಿರೋಲ್ಲ ಈ ರಾಶಿಯವರು.
.
ಕರ್ಕಾಟಕ ರಾಶಿ ( Cancer ): ಫಿಲೋಫೋಬಿಯಾ (Philophobia) : ಭಾವನಾತ್ಮಕ ಭಾಂದವ್ಯದ ಬಗ್ಗೆ ಇರುವ ಭಯ ಈ ರಾಶಿಯವರನ್ನು ಕಾಡುತ್ತದೆ. ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಜಯಂತ್ ಪಾತ್ರಧಾರಿ ಇದ್ದಾನಲ್ಲ, ಅವನಂತೆ ಕಾಡೋ ಭಯವಿದು. ಎಲ್ಲ Emotionally Detach ಆಗುತ್ತಾರೋ ಎಂಬ ಭಯ ಇರವನ್ನು ಇನ್ನಿಲ್ಲದಂತೆ ಕಾಡುತ್ತದೆ.
.
ಸಿಂಹ ರಾಶಿ ( Leo ) : ಆಟಿಸಿಫೋಬಿಯಾ (Atichiphobia): ಬೆಸ್ಟ್ ಆಗಿರದೇ ಇರೋ ಬಗ್ಗೆ ಭಯ ಈ ರಾಶಿಯವರನ್ನು ಕಾಡುತ್ತದೆ. ಇವರೊಂಧರ ಎಲ್ಲರದರಲ್ಲಿಯೂ ಡಾಮಿನೇಟ್ ಮಾಡಲು ಇಚ್ಛಿಸೋರು. ತಾವೇ ಬೆಸ್ಟ್ ಎನಿಸಿಕೊಳ್ಳಲು ಹೆಣಗಾಡುತ್ತಾರೆ. ಅದೇ ಚಿಂತೆಯಲ್ಲಿ ಎಲ್ಲಿ ಹಿನ್ನೆಡೆ ಆಗುತ್ತೋ ಎಂಬ ಭಯವೂ ಈ ರಾಶಿಯವನ್ನು ಬಿಡದೇ ಕಾಡುತ್ತೆ.
.
ಕನ್ಯಾ ರಾಶಿ ( Vergo ) : ಮೈಸೋಫೋಬಿಯಾ (mysophobia) : ಕೀಟಾಣುಗಳು ಅಥವಾ ಮಾಲಿನ್ಯದ ಬಗ್ಗೆ ಇರುವಂತಹ ಭಯ ಈ ರಾಶಿಯವರನ್ನು ಕಾಡುತ್ತದೆ. ಇವರು ಮಾಲಿನ್ಯ ಇರುವೆಡೆ ಹೊರ ಹೋಗಲೂ ಹಿಂದು ಮುಂದು ನೋಡುತ್ತಾರೆ.
ತುಲಾ ರಾಶಿ (Libra): ಡಿಶಾಬಿಲಿಯೋಫೋಬಿಯಾ (Dishabiliophobia) : ಇನ್ನೊಬ್ಬ ವ್ಯಕ್ತಿಯ ಮುಂದೆ ಬಟ್ಟೆ ಬದಲಾಯಿಸುವ ಬಗ್ಗೆ ಇರುವಂತಹ ಭಯ ಈ ರಾಶಿಯವರನ್ನು ಕಾಡುತ್ತದೆ.
ವೃಶ್ಚಿಕ ರಾಶಿ (Scorpio ) : ಪಿಸ್ತಾಂತ್ರೋಫೋಬಿಯಾ ( Pistantrophobia ) : ಇತರರನ್ನು ನಂಬಲು ಭಯವಾಗುವಂತಹ ಸ್ಥಿತಿ ಈ ರಾಶಿಯವರನ್ನು ಕಾಡುತ್ತದೆ. ಇವರಿಗೆ ಬೇರೆಯವರ ಮೇಲೆ ಅಪನಂಬಿಕೆ ಹೆಚ್ಚು. ನಂಬಿ ಮುಂದೆ ಹೋಗೋ ಜಾಯಮಾನ ಇವರದ್ದಲ್ಲ.
ಧನು ರಾಶಿ ( Sagittarius ) : ಸೆಡೆಟೋಫೋಬಿಯಾ (Sedatephobia) : ಮೌನದ ಬಗ್ಗೆ ಇರುವಂತಹ ಭಯ ಈ ರಾಶಿಯವರನ್ನು ಕಾಡುತ್ತದೆ. ವಟ ವಟ ಅಂತಿರುತ್ತಾರೆ. ಆದರೆ, ಮೌನವಾಗಿರಲು ಏನೋ ಎಲ್ಲಿಲ್ಲದ ಭಯ ಇವರಿಗೆ.
ಮಕರ ರಾಶಿ (Capricorn ) : ಕ್ರೊನೋಫೋಬಿಯಾ (Cronophobia): ಟೈಮ್ ಪಾಸ್ ಮಾಡುವ ಬಗ್ಗೆ ಇರುವಂತಹ ಭಯ ಈ ರಾಶಿಯವರನ್ನು ಕಾಡುತ್ತದೆ.
ಕುಂಭ ರಾಶಿ( Aquarius ) : ಗೆಫಿರೋಫೋಬಿಯಾ (Gephyrophobia) : ಸೇತುವೆಗಳನ್ನು ದಾಟುವಾಗ ಉಂಟಾಗುವಂತಹ ಭಯ ಈ ರಾಶಿಯವರನ್ನು ಕಾಡುತ್ತದೆ. ಸೇತುವೆ ದಾಟುವಾಗ ಕಡಿದು ಬಿದ್ದರೆ ಎನ್ನೋ ಭಯ ಇವರನ್ನು ಎಲ್ಲಿಲ್ಲದಂತೆ ಕಾಡುತ್ತದೆ.
ಮೀನ ರಾಶಿ ( Pisces ): ಆಕ್ಲುವೋಫೋಬಿಯ (Achluophobia) : ಕತ್ತಲೆಯ ಕುರಿತಾಗಿ ಇರುವಂತಹ ಭಯ ಈ ರಾಶಿಯವರನ್ನು ಕಾಡುತ್ತದೆ. ಅಬ್ಬಾ ಇವರೊಂಥರಾ ಅಮೃತಧಾರೆ ಗೌತಮ್ ರೀತಿ. ಕರೆಂಟ್ ಹೋದರೂ ಸಾಕು, ಏನೋ ಆಗಿಯೇ ಬಿಡುತ್ತೆ ಎನ್ನುವ ಭಯ ಇವರನ್ನು ಕಾಡುತ್ತಲೇ ಇರುತ್ತದೆ.
.